ಒಡಿಸ್ಸಾದ ಈ ನಿವೃತ್ತ ಶಿಕ್ಷಕ ಸಾವಯವ ಭವಿಷ್ಯಕ್ಕಾಗಿ ಬೀಜಗಳನ್ನು ಬಿತ್ತುತ್ತಿದ್ದಾನೆ

1988ರಿಂದ ನಟಬಾರ್ ಸಾರಂಗಿರವರು ಭಾರತದಾದ್ಯಂತ ಸಂಚರಿಸಿ‌ 700ಕ್ಕೂ ಹೆಚ್ಚು ಭತ್ತದ ಬೀಜಗಳನ್ನು ಸಂಗ್ರಹಿಸಿದ್ದಾರೆ. ರೈತರಿಗೆ ಸಾವಯವ ಕೃಷಿಯ ಕುರಿತು ತರಬೇತಿ ನೀಡಲು ರಾಜೇಂದ್ರ ದೇಸಿ ಚಾಸ ಗಬೇಶನ ಕೇಂದ್ರ ಎಂಬ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

ಒಡಿಸ್ಸಾದ ಈ ನಿವೃತ್ತ ಶಿಕ್ಷಕ ಸಾವಯವ ಭವಿಷ್ಯಕ್ಕಾಗಿ ಬೀಜಗಳನ್ನು ಬಿತ್ತುತ್ತಿದ್ದಾನೆ

Friday July 26, 2019,

2 min Read

ಹೆಚ್ಚುತ್ತಿರುವ ಜನಸಂಖ್ಯೆಯನ್ನು ಪೋಷಿಸಲು ಅನೇಕ‌ ದೇಶಗಳು ಸುಸ್ಥಿರ ಬೆಳೆ ಉತ್ಪಾದನೆಯನ್ನು‌‌ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ರೈತರು ತ್ವರಿತ ಬೆಳವಣಿಗೆ ಸಾಧಿಸಲು ಎಲ್ಲಾ‌ ಋತುಮಾನದಲ್ಲಿ ದೊರಕುವ ಬೆಳೆಗಳಿಗಾಗಿ, ಹಣ್ಣು- ತರಕಾರಿಗಳಿಗಾಗಿ ರಸಗೊಬ್ಬರಗಳು, ತಳೀಯವಾಗಿ ಮಾರ್ಪಡಿಸಿದ ಬೀಜಗಳು ಮತ್ತು ಇತರೆ ರಾಸಾಯನಿಕಗಳನ್ನು ಬಳಸುತ್ತಿದ್ದಾರೆ.


ಇವು ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಮತ್ತು ಸಾವಯವ ಕೃಷಿ ಪದ್ಧತಿಯ ಮೇಲೆ‌ ಪರಿಣಾಮ ಬೀರುತ್ತಿದೆ. ರಾಸಾಯಿನಿಕಗಳು ಸಾವಯವ ಬೀಜಗಳನ್ನು ಹಂತ-ಹಂತವಾಗಿ ಹೊರ ಹಾಕಿದೆ. ಆದರೆ ಇದು ಯಾವುದೇ ಹವಾಮಾನ ಸ್ಥಿತಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.


ಸಾವಯವ ಪದ್ಧತಿಗಳ ಮೂಲಕ ಜೀವವೈವಿಧ್ಯತೆಯನ್ನು ಇನ್ನೂ ಸಂರಕ್ಷಿಸಲಾಗಿದೆ ಮತ್ತು ನಿರ್ವಹಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು 86 ವಯಸ್ಸಿನ ನಟಬಾರ್ ಸಾರಂಗಿರವರು ಶಿಕ್ಷಕ ವೃತ್ತಿಯಿಂದ ಸಾವಯವ ಕೃಷಿಕರಾಗಿ ಒಡಿಸ್ಸಾ, ಪಶ್ಚಿಮ ಬಂಗಾಳ, ಛತ್ತಿಸಗಡ್ ನಂತಹ ರಾಜ್ಯಗಳಿಂದ ಭತ್ತದ ಬೀಜಗಳನ್ನು ಸಂಗ್ರಹಿಸುತ್ತಿದ್ದಾರೆ‌. 1988 ರಿಂದ ನಟಬಾರ್ ಅವರು ಇಲ್ಲಿಯವರೆಗೆ 700 ಕ್ಕೂ ಹೆಚ್ಚು ಭತ್ತದ ಬೀಜಗಳನ್ನು ತಮ್ಮ ಸಂಗ್ರಹದಲ್ಲಿ ಸೇರಿಸಿದ್ದಾರೆ.


ಕ

ನಟಬಾರ್ ಸಾರಂಗಿ (ಚಿತ್ರಕೃಪೆ: ಅಲ್ಜಜೀರಾ)

ಈ ವಯಸ್ಸಿನಲ್ಲಿ‌ ದೇಶಾದ್ಯಾಂತ‌ ಪ್ರಯಾಣ ಮಾಡುವುದು ನಟಬಾರ್ ಅವರಿಗೆ ಸುಲಭವಾಗಿರಲಿಲ್ಲ. ಅದಕ್ಕಾಗಿ 2010ರಲ್ಲಿ ಅವರು 'ಗ್ಲೋಬಲ್ ಗ್ರೀನ್‌ಗ್ರಾಂಟ್ಸ್ ಫಂಡ್‌'ನಿಂದ ದೊರೆತ ಒಂದು ಸಣ್ಣ ಅನುದಾನವನ್ನು ಭಾರತದಾದ್ಯಂತ ಇರುವ ಸಾಕಣೆ ಕೇಂದ್ರಗಳ ಮೂಲಕ ಬೀಜಗಳನ್ನು ಸಂಗ್ರಹಿಸಲು ಬಳಸಿದರು ಮತ್ತು ಈ ಉದ್ದೇಶಕ್ಕಾಗಿ ಪ್ರಯಾಣಿಸಲು ಅನೇಕ ಜನರನ್ನು ನೇಮಿಸಿಕೊಂಡರು.


ಅದರ ಮುಂದಿನ ವರ್ಷ ಬೀಜಗಳನ್ನು ಸ್ವಚ್ಛಗೊಳಿಸಿ ಸೀಡ್(ಬೀಜ) ಬ್ಯಾಂಕ್ ನಲ್ಲಿ ಶೇಖರಿಸಿಡಲು ನಟಬಾರ್ ಅವರು 100 ಮಹಿಳೆಯರನ್ನು ನೇಮಿಸಿಕೊಂಡರು ವರದಿ ಗ್ರೀನ್ ಗ್ರಾಂಟ್ಸ್



q

(ಚಿತ್ರ:ಸ್ವಿಪ್ಟ್ ಫೌಂಡೇಶನ್)

ಸಾವಯವ ಭತ್ತದ ಬೀಜಗಳ ಸಂರಕ್ಷಣೆಯ ಮಹತ್ವದ ಕುರಿತು ದಿ ಹಿಂದೂ ಬಿಸಿನೆಸ್ ಲೈನ್ ಜೊತೆ ಮಾತನಾಡಿದ ಅವರು, 


"1960ರ ದಶಕದಲ್ಲಿ, ದೇಶವು ಯಾವಾಗಲೂ ಬರಗಾಲವನ್ನು ಎದುರಿಸುತ್ತಿದ್ದರಿಂದ ಬೆಳೆಯ ಇಳುವರಿ ಹೆಚ್ಚಳ‌ ಮಾಡುವುದು ಹೆಚ್ಚು ಅಗತ್ಯವಾಗಿತ್ತು. ಅದಾಗ್ಯೂ ಜಾರಿಗೆ ಬಂದ ಹೊಸ ಕೃಷಿ ಪದ್ಧತಿಗಳು, ರಾಸಾಯಿನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ಮತ್ತು ಶುಷ್ಕ ಋತುವಿನಲ್ಲೊ ಸಹ ಬೆಳೆಗಳನ್ನು ಬೆಳೆಯಲು ನೀರಾವರಿ ತಂತ್ರಗಳನ್ನು ಬಳಸುವುದು ಇವೆಲ್ಲವೂ ಸಣ್ಣ ರೈತರ ಮೇಲೆ ಮತ್ತು ಬೆಳೆಗಳ ಜೀವವೈವಿಧ್ಯತೆಯ ಮೇಲೆ ತೀವ್ರ ಪರಿಣಾಮ ಬೀರಿತು."


ಒಡಿಸ್ಸಾದ ನಿಯಾಲಿ ಗ್ರಾಮದಿಂದ ಬಂದ ನಟಬಾರ್ ತನ್ನ ಸಾವಯವ ಕೃಷಿ ಪದ್ಧತಿಗಳಿಗಾಗಿ ಭಾರತದಾದ್ಯಂತ ಕೃಷಿ ಸಮುದಾಯಕ್ಕೆ ಪ್ರತಿಮೆಯಾಗಿ ಹೊರಹೊಮ್ಮಿದ್ದಾರೆ. ಒಡಿಸ್ಸಾದ ನಿಯಾಲಿಯಲ್ಲಿ ಸ್ಥಾಪಿಸಲಾದ ರಾಜೇಂದ್ರ ದೇಸಿ ಚಾಸ ಗಬೇಶನ ಕೇಂದ್ರ ಎಂಬ ಸಂಶೋಧನಾ ಸಂಸ್ಥೆಯಲ್ಲಿ ಈವರೆಗೆ ಒಂದು ಸಾವಿರಕ್ಕೂ ಹೆಚ್ಚು ರೈತರಿಗೆ ತರಬೇತಿ ನೀಡಿದ್ದಾರೆ.


ಈ ಸಂಸ್ಥೆಯಲ್ಲಿ ನಟಬಾರ್ ತನ್ನ ಸ್ನೇಹಿತರೊಂದಿಗೆ ಸಾವಯವ ಪೋಷಕಾಂಶಗಳು, ಜೈವಿಕ ಕೀಟನಾಶಕಗಳ ಮತ್ತು ಸಾವಯವ ಬೀಜಗಳ ಕುರಿತು ತರಬೇತಿ ನೀಡಿದರು. ಜೊತೆಗೆ ಇಲ್ಲಿ ರಾಸಾಯಿನಿಕಗಳ ಬಳಕೆಯಿಲ್ಲದೆ ಬೆಳೆದ ಸಸ್ಯಗಳ‌ ಬೀಜಗಳನ್ನು ತೆಗೆದುಕೊಳ್ಳಲಾಗುತ್ತದೆ.


ರೈತರಲ್ಲಿ ಸಾವಯವ ಬೀಜಗಳ ಬಳಕೆಯನ್ನು ಉತ್ತೇಜಿಸಲು ನಟಬಾರ್ ಅವರು ಸಾವಯವ ಬೀಜಗಳನ್ನು ವಿತರಿಸುತ್ತಾರೆ, ಅದಕ್ಕೆ ಪ್ರತಿಯಾಗಿ ರೈತರು ನಟಬಾರ್ ಅವರಿಗೆ ನಾಲ್ಕು ಕಿಲೋಗ್ರಾಂಗಳಷ್ಟು ಬೀಜಗಳನ್ನು ನೀಡುತ್ತಾರೆ.


ಕ

(ಚಿತ್ರ: ಯೂಟ್ಯೂಬ್)

ನಟವಾರ್ ಅವರು ಹೇಳುವಂತೆ ಆರಂಭದಲ್ಲಿ ರೈತರಿಗೆ ಮನವರಿಕೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ.


"ಆರಂಭದಲ್ಲಿ ರೈತರು ಹಿಂಜರಿಯುತ್ತಿದ್ದರು. ಆದರೆ ಸಾಂಪ್ರದಾಯಿಕ ಬೀಜಗಳು ರಾಸಾಯಿನಿಕಗಳಿಗಿಂತ ಅಗ್ಗವಾಗಿದೆ ಹಾಗೂ ಇಳುವರಿ ಒಂದೇ ಎಂದು ತಿಳಿದಾಗ ಅವರಿಗೆ ಅರ್ಥೈಸಲು ಸುಲಭವಾಯಿತು. ಈಗ ನಮ್ಮ ಹತ್ತಿರ ನಮ್ಮ ಹಳ್ಳಿಯಿಂದ ಮಾತ್ರವಲ್ಲದೆ ಸುತ್ತ-ಮುತ್ತಲಿನ ಪ್ರದೇಶಗಳಿಂದಲು ರೈತರು ಬರುತ್ತಾರೆ. ಸಾಂಪ್ರದಾಯಿಕ ಬೀಜಗಳನ್ನು ಸಂಗ್ರಹಿಸಲು ಮಹಾರಾಷ್ಟ್ರದಂತಹ ದೂರದ ರಾಜ್ಯಗಳಿಂದಲೂ ಜನರು ನಮ್ಮ ಬಳಿಗೆ ಬರುತ್ತಾರೆ."


ರೈತರಲ್ಲದೆ, ಒಡಿಶಾ ರಾಜ್ಯ ಸರ್ಕಾರವು ನಟಬಾರ್‌ಗೆ ತನ್ನ ಸಂಶೋಧನಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಸರ್ಕಾರದ ಪರಂಪರಾಗತ ಕೃಷಿ ವಿಕಾಸ್ ಯೋಜನೆಯನ್ನು ಜಾರಿಗೆ ತಂದಿದೆ. ಇದು ಸಾವಯವ ಕೃಷಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ತರಬೇತಿ ಕಾರ್ಯಕ್ರಮವಾಗಿದೆ.


ಪ್ರಸ್ತುತ ನಟಬಾರ್ ಅವರು ತಾರಸಿಯ ಮೇಲೆ ಸಾವಯವ ತರಕಾರಿ ಕೃಷಿಯನ್ನು ಉತ್ತೇಜಿಸಲು ನೋಡುತ್ತಿದ್ದಾರೆ. ಇದರ ಕುರಿತು ಮಾತನಾಡಿದ ಅವರು,

"ನಾವು ನಮ್ಮ‌ ಪ್ರದೇಶದಲ್ಲಿಯೆ ಸುಮಾರು ಎರಡು ಲಕ್ಷ ಕ್ವಿಂಟಾಲ್ ಸಾವಯವ ಭತ್ತವನ್ನು ಉತ್ಪಾದಿಸುತ್ತಿದ್ದೇವೆ. ಮತ್ತು ಮಾರ್ಕೆಟಿಂಗ್ ಸಹಾಯದಿಂದ ನಮ್ಮ ರೈತರ ಗಳಿಕೆಯನ್ನು ಹೆಚ್ಚಿಸುವಲ್ಲಿ ಬಹಳ ದೂರ ಸಾಗಬಹುದು" ವರದಿ ದಿ ಹಿಂದೂ ಬಿಸನೆಸ್ ಲೈನ್ .