ಪ್ಲಾಸ್ಟಿಕ್ ತ್ಯಾಜ್ಯವನ್ನು ಶಾಲಾ ಶುಲ್ಕವಾಗಿ ಪಡೆದು ಪರಿಸರ ಜಾಗೃತಿ ಮೂಡಿಸುತ್ತಿರುವ ಈ ಶಾಲೆ

ಇಲ್ಲೊಂದು‌ ವಿಶಿಷ್ಟ ಶಾಲೆಯಿದೆ. ಆ ಶಾಲೆಯಲ್ಲಿ ವಿದ್ಯಾರ್ಥಿಗಳು ಒಣ ಪ್ಲಾಸ್ಟಿಕ್ ತ್ಯಾಜ್ಯವನ್ನು ಶುಲ್ಕವಾಗಿ ಪಾವತಿಸುತ್ತಾರೆ. ನಂತರ ಕಸೂತಿ, ಸೌರ ತಂತ್ರಜ್ಞಾನ, ಮರಗೆಲಸದಲ್ಲಿ ವೃತ್ತಿಪರ ಕೌಶಲ್ಯ ತರಬೇತಿಯನ್ನು ಪಡೆಯುತ್ತಾರೆ.

ಪ್ಲಾಸ್ಟಿಕ್ ತ್ಯಾಜ್ಯವನ್ನು ಶಾಲಾ ಶುಲ್ಕವಾಗಿ ಪಡೆದು ಪರಿಸರ ಜಾಗೃತಿ ಮೂಡಿಸುತ್ತಿರುವ ಈ ಶಾಲೆ

Saturday July 27, 2019,

2 min Read

ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ದಂಪತಿಗಳಿಬ್ಬರು ನಡೆಸುತ್ತಿರುವ ಈ ಶಾಲೆಯು ದೀನ-ದಲಿತ ಮಕ್ಕಳ ಜೀವನವನ್ನು ಉನ್ನತಿಗೇರಿಸುತ್ತಿದೆ ಮತ್ತು ಪರಿಸರ ಸ್ನೇಹಿ ಎಂಬ ಪ್ರಜ್ಞೆಯನ್ನು ಎಲ್ಲರಲ್ಲಿಯೂ ಮೂಡಿಸುತ್ತಿದೆ.


ಒಣ ಪ್ಲಾಸ್ಟಿಕ್ ತ್ಯಾಜ್ಯವನ್ನು ಶುಲ್ಕವಾಗಿ ವಿಧಿಸುವದರಿಂದ ಈ ಶಾಲೆಯು ವಿದ್ಯಾರ್ಥಿಗಳಿಗೆ ವಾರಕ್ಕೆ ಕನಿಷ್ಟ‌10-20 ಪ್ಲಾಸ್ಟಿಕ್ ವಸ್ತುಗಳನ್ನು ಠೇವಣಿ ಇಡುವಂತೆ ಸೂಚಿಸುತ್ತದೆ ಮತ್ತು ಪ್ಲಾಸ್ಟಿಕ್ ಸುಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸುತ್ತದೆ. ಈ ಕ್ರಮವು ಪ್ಲಾಸ್ಟಿಕ್ ಮಾಲಿನ್ಯವನ್ನು ನಿಗ್ರಹಿಸುವ ಮತ್ತು ಅದನ್ನು ಸುಡುವುದರಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ.


2016 ರ ಜೂನ್ ಮಾಸದಲ್ಲಿ ಪರ್ಮಿತಾ ಶರ್ಮಾ ಹಾಗೂ‌ ಮಜೀನ್ ಮುಖ್ತಾರ್ ಅವರು ಸ್ಥಾಪಿಸಿದ ಈ 'ಅಕ್ಷರ್ ಶಾಲೆ'ಯಲ್ಲಿಗ ಈಗ ನಾಲ್ಕರಿಂದ ಹದಿನೈದು ವಯಸ್ಸಿನ ಸುಮಾರು‌ 100 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಇದಕ್ಕೆ ಇಂಡಿಯನ್ ಆಯಿಲ್ ಕಂಪನಿಯು ಧನಸಹಾಯ ಮಾಡುತ್ತಿದೆ.


q

ಅಕ್ಷರ್ ಶಾಲೆಯಲ್ಲಿರುವ ಒಂದು ತರಗತಿಯಲ್ಲಿ‌ ಕಾರ್ಯಾಗಾರ ನಡೆಸುತ್ತಿರುವುದು (ಚಿತ್ರಕೃಪೆ : ಎಫರ್ಟ್ಸ್ ಫಾರ್ ಗುಡ್ )


'ಎಫರ್ಟ್ಸ್ ಫಾರ್ ಗುಡ್' ಜೊತೆಗೆ ಶಾಲೆಯ ಕುರಿತು‌ ಮಾತನಾಡಿದ ಮಜೀನ್,


ಸ್ಥಳೀಯ ಗ್ರಾಮಸ್ಥರು ಪ್ರತಿ ಕೆಲವು ದಿನಗಳಿಗೊಮ್ಮೆ ತಮ್ಮಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಡುತ್ತಿದ್ದರು. ಅದರಿಂದ ಹೊರಹೊಮ್ಮುವ ವಿಷಕಾರಿ ಹೊಗೆ ನಮ್ಮ ತರಗತಿಯ ಕೋಣೆಗಳಿಗೆ‌ ನುಗ್ಗಿ ಆಕ್ರಮಣ ಮಾಡುತ್ತಿತ್ತು. ಆದ್ದರಿಂದ,‌ ಕೆಲವು ತಿಂಗಳ ಹಿಂದೆ, ನಮ್ಮ ಮರುಬಳಕೆಯ ಯೋಜನೆಗಳ ಪಟ್ಟಿಯಲ್ಲಿ 'ಪ್ಲಾಸ್ಟಿಕ್ ಶಾಲಾ ಶುಲ್ಕ'ವನ್ನು ಸೇರಿಸಿದೆವು. ಆದ್ದರಿಂದ ತಮ್ಮ ಮನೆಗಳಿಂದ ಎಲ್ಲಾ‌ ಒಣ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ನಮಗೆ ಸಲ್ಲಿಸುವಂತೆ ಕೇಳಿಕೊಳ್ಳಲಾಯಿತು.


ಈ ಪ್ಲಾಸ್ಟಿಕ್ ಅನ್ನು ಬಳಕೆಗೆ ತರಲು, ಪರಿಸರ ಇಟ್ಟಿಗೆ ಹಾಗೂ ಸಸ್ಯ ಕಾವಲುಗಾರನಂತಹ ಸಣ್ಣ ನಿರ್ಮಾಣ ಯೋಜನೆಗಳಿಗೆ ಅದನ್ನು‌ ಮರುಬಳಕೆ‌‌ ಮಾಡುವಂತೆ ಅದನ್ನು ವಿದ್ಯಾರ್ಥಿಳಿಗೆ ಹೇಳಿ ಕೊಡಲಾಗುತ್ತದೆ. ಕಂಪೌಂಡ್, ಶೌಚಾಲಯಗಳನ್ನು ಈ‌ ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಿಸಲು ಅವರು ಯೋಜಿಸಿದ್ದಾರೆ. ಇದರಿಂದ ಮಳೆಗಾಲದ ಸಮಯದಲ್ಲಿ ಶಾಲಾ‌ ಆವರಣದಲ್ಲಿ ತಿರುಗಾಡಲು ಸಹಾಯ ಮಾಡುತ್ತದೆ. ಇದು ರಾಜ್ಯಾದ್ಯಂತ ಪಸರಿಸಿದೆ.


q

ಪ್ಲ್ಯಾಸ್ಟಿಕ್ ಬಾಟಲಿಗಳಿಂದ ನಿರ್ಮಿಸಿದ ಗೋಡೆ (ಚಿತ್ರಕೃಪೆ : ಎಫರ್ಟ್ಸ್ ಫಾರ್ ಗುಡ್ )


ಒಂದು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಶಾಲೆಯಲ್ಲಿ ಇಬ್ಬರು ಹಿರಿಯ ಹಾಗೂ ನಾಲ್ಕು ಕಿರಿಯ ಶಿಕ್ಷಕರು ಇದ್ದಾರೆ. ಇಲ್ಲಿ ವಿಜ್ಞಾನ, ಭೂಗೋಳಶಾಸ್ರ್ತ, ಗಣಿತದಂತಹ ವಿಷಯಗಳನ್ನು ಕಲಿಸಲಾಗುತ್ತದೆ. ವಿದ್ಯಾರ್ಥಿಗಳ ಹಿನ್ನೆಲೆಯನ್ನು ಗಮನಿಸಿ, ಶಾಲೆಯು ಮರಗೆಲಸ, ಕಸೂತಿ,‌ ಸೌರ ತಂತ್ರಜ್ಞಾನಗಳಲ್ಲಿ ವೃತ್ತಿಪರ ಕೌಶಲ್ಯ ತರಬೇತಿಯನ್ನು ನೀಡಿತ್ತದೆ. ಇದರಿಂದ ವಿದ್ಯಾರ್ಥಿಗಳು ಪದವೀಧರರಾದ ನಂತರ ಉದ್ಯೋಗವನ್ನು‌ ಸುಲಭವಾಗಿ ಪಡೆಯಬಹುದಾಗಿದೆ.


ಶಾಲೆಯ ಕುರಿತು 'ಯುವರ್‌ಸ್ಟೋರಿ' ಯೊಂದಿಗೆ ಮಾತಾನಾಡಿದ ಮಜೀನ್ ಹೀಗೆ ಹೇಳುತ್ತಾರೆ,


"ನಮ್ಮ ಶಾಲೆಯಲ್ಲಿ ಸಿಬಿಎಸ್ಇ ಅಥವಾ ಐಸಿಎಸ್ಇ ಮಂಡಳಿಗಳಿಲ್ಲ. ನಮ್ಮ‌ ವಿದ್ಯಾರ್ಥಿಗಳನ್ನು ಎನ್ಐಒಎಸ್ (National Institute Of Open Schooling)ಗೆ ದಾಖಲಿಸಲಾಗಿದೆ. ಇದರ ಅನುಕೂಲವೆಂದರೆ ವಿದ್ಯಾರ್ಥಿಗಳು ನಮ್ಯತೆಯ ಜೊತೆಗೆ ಭವಿಷ್ಯದಲ್ಲಿ‌ ಉದ್ಯೋಗವನ್ನು ಖಚಿತಪಡಿಸಿಕೊಳ್ಳಲು ಜೀವನ ಕೌಶಲ್ಯಗಳ ವಿಷಯದಲ್ಲಿ‌ ಇನ್ನಷ್ಟು ಕಲಿಯಬಹುದು".


q

ಸೌರ ಫಲಕಗಳ ಕುರಿತು ವಿದ್ಯಾರ್ಥಿಗಳು ಪ್ರಾಯೋಗಿಕ ಅನುಭವ ಪಡೆಯುತ್ತಿರುವುದು (ಚಿತ್ರಕೃಪೆ : ಎಫರ್ಟ್ಸ್ ಫಾರ್ ಗುಡ್ )



ಅಕ್ಷರ್‌ನಲ್ಲಿ ವಿದ್ಯಾರ್ಥಿಗಳು ವಯಸ್ಸಿನ ಪ್ರಕಾರ ತರಗತಿಗಳ ಹಾಜರಾಗುವುದಿಲ್ಲ ತಮ್ಮ ಜ್ಞಾನ ಹಾಗೂ ಕೌಶಲ್ಯದ ಆಧಾರದ ಮೇಲೆ ಹಾಜರಾಗುವುದು. ಇದರ ಬಗ್ಗೆ ಪರ್ಮಿತಾ ಲಾಜಿಕಲ್ ಇಂಡಿಯನ್ ಗೆ ಹೀಗೆ ಹೇಳುತ್ತಾರೆ.


ಪ್ರವೇಶದ ಸಮಯದಲ್ಲಿ‌ ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ಪರೀಕ್ಷಿಸಲಾಗುತ್ತದೆ ಹಾಗೂ ಪ್ರತಿ ಶುಕ್ರವಾರಕ್ಕೊಮ್ಮೆ ಅವರ ಜ್ಞಾನದ ಮಟ್ಟವನ್ನು ಅಳೆಯಲಾಗುತ್ತದೆ. ನಂತರ ವಿದ್ಯಾರ್ಥಿಗಳು ಮಟ್ಟವನ್ನು ಏರಲು ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಇದರಿಂದ ಶಿಕ್ಷಣದ ಗುಣಮಟ್ಟ ನಿರಂತರವಾಗಿ ಸುಧಾರಿಸುತ್ತಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.


ಇಲ್ಲಿ 'ಪೀರ್-ಟು-ಪೀರ್' ಎಂಬ ಕಾರ್ಯಕ್ರಮದಡಿಯಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ಕಲಿಸುವ ಪರಿಪಾಠವೊಂದಿದೆ. ಇದಕ್ಕೆ ಪ್ರತಿಯಾಗಿ ಕಿರಿಯ ವಿದ್ಯಾರ್ಥಿಗಳು ಆಟಿಕೆ ಕರೆನ್ಸಿಯನ್ನು ನೀಡುತ್ತಾರೆ. ಇದನ್ನು ಹತ್ತಿರದ ಅಂಗಡಿಗಳಲ್ಲಿಯೂ ಸಹ ಸ್ವೀಕರಿಸಲಾಗುತ್ತದೆ. ಅಲ್ಲಿ ಅವರು ತಿಂಡಿ, ಆಟಿಕೆಗಳು, ಬೂಟು ಮತ್ತು ಬಟ್ಟೆಗಳನ್ನು ಖರೀದಿಸಬಹುದು.


ಕ

ವೃತ್ತಿಪರ ತರಬೇತಿಯಲ್ಲಿ‌ ನಿರತರಾದ ವಿದ್ಯಾರ್ಥಿಗಳು (ಚಿತ್ರಕೃಪೆ : ಎಫರ್ಟ್ಸ್ ಫಾರ್ ಗುಡ್ )


ಅಕ್ಷರ್ ಶಾಲೆಯು ವಿದ್ಯಾರ್ಥಿಗಳ ಜೀವನವನ್ನು ಉನ್ನತೀಕರಿಸುವುದರ ಜೊತೆಗೆ ಪರಿಸರವನ್ನು ಉಳಿಸುವಲ್ಲಿ ಗ್ರಾಮಸ್ಥರ ಮೇಲೆಯೂ ಪ್ರಭಾವ ಬೀರಿದೆ. ಅಲ್ಲಿರುವ ಜನರಿಗ ಪ್ಲಾಸ್ಟಿಕ್ ಅನ್ನು ಸುಡುವ ಬದಲು‌ ಅದನ್ನು ಮರುಬಳಕೆ ಮಾಡುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.