ಕಾಡ್ಗಿಚ್ಚಿನಲ್ಲಿ ತನ್ನೆಲ್ಲಾ ಆಸ್ತಿ-ಪಾಸ್ತಿಯನ್ನು ಕಳೆದುಕೊಂಡಿದ್ದರೂ ತನ್ನ ವೈದ್ಯಕೀಯ ಅಂಗಡಿಯ ಮೂಲಕ ಸ್ಥಳೀಯ ಜನರ ಸಹಾಯಕ್ಕೆ ನಿಂತ ರಾಜ್ ಗುಪ್ತಾ

52 ನೇ ವಯಸ್ಸಿನ ಇವರು ತಮ್ಮ ಈ ಕಷ್ಟದ ಮಧ್ಯೆಯೂ, ಔಷಧಾಲಯವನ್ನು ಅಗತ್ಯವಿರುವವರಿಗೆ ಸೇವೆ ಸಲ್ಲಿಸಲು ತೆರೆದಿಡುತ್ತಿದ್ದಾರೆ.

ಕಾಡ್ಗಿಚ್ಚಿನಲ್ಲಿ ತನ್ನೆಲ್ಲಾ ಆಸ್ತಿ-ಪಾಸ್ತಿಯನ್ನು ಕಳೆದುಕೊಂಡಿದ್ದರೂ ತನ್ನ ವೈದ್ಯಕೀಯ ಅಂಗಡಿಯ ಮೂಲಕ ಸ್ಥಳೀಯ ಜನರ ಸಹಾಯಕ್ಕೆ ನಿಂತ ರಾಜ್ ಗುಪ್ತಾ

Friday January 17, 2020,

1 min Read

ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಸಂಭವಿಸಿದ ಕಾಡ್ಗಿಚ್ಚು ಆಸ್ಟ್ರೇಲಿಯಾದ ಹಚ್ಚ ಹಸಿರಿನ ಹೊದಿಕೆಯನ್ನು ಸರ್ವನಾಶ ಮಾಡಿರುವುದಲ್ಲದೇ ಸುಮಾರು ಒಂದು ಮಿಲಿಯನ್ ಪ್ರಾಣಿಗಳನ್ನು ಬಲಿತೆಗೆದುಕೊಂಡಿದೆ. ಈ ನೈಸರ್ಗಿಕ ವಿಕೋಪದ ಮಧ್ಯೆ, ಪ್ರಪಂಚವು ಮಾನವೀಯತೆಯನ್ನು ಮೆರೆಯುವ ಹಲವಾರು ಘಟನೆಗಳಿಗೆ ಸಾಕ್ಷಿಯಾಗಿದೆ.


ರಾಜ್ ಗುಪ್ತಾ, ಮಾಲುವಾ ಬೇ ನಲ್ಲಿರುವ ಔಷಧ ವ್ಯಾಪಾರಿ. ಇವರು ಕಾಡ್ಗಿಚ್ಚಿನಲ್ಲಿ ತಮ್ಮ ಖಾಸಗಿ ಆಸ್ತಿಯನ್ನು ಕಳೆದುಕೊಂಡಿದ್ದಾರೆ ಮತ್ತು ಪ್ರಸ್ತುತ ಬ್ಯಾಟ್‌ಮ್ಯಾನ್ಸ್ ಕೊಲ್ಲಿಯಲ್ಲಿ ತಾತ್ಕಾಲಿಕ ವಸತಿ ಸೌಕರ್ಯದಲ್ಲಿ ವಾಸಿಸುತ್ತಿದ್ದಾರೆ.


52 ನೇ ವಯಸ್ಸಿನ ಇವರು ತಮ್ಮ ಈ ಕಷ್ಟದ ಮಧ್ಯೆಯೂ, ಔಷಧಾಲಯವನ್ನು ಅಗತ್ಯವಿರುವವರಿಗೆ ಸೇವೆ ಸಲ್ಲಿಸಲು ತೆರೆದಿಡುತ್ತಿದ್ದಾರೆ. ಕಾಡ್ಗಿಚ್ಚಿನಲ್ಲಿ ತಮ್ಮ ಎಲ್ಲಾ ಔಷಧಿಗಳನ್ನು ಕಳೆದುಕೊಂಡಿದ್ದ ರಾಜ್ ಗುಪ್ತಾ ಅವರು ತಮ್ಮ ಅಂಗಡಿಯನ್ನು ಮತ್ತೆ ಪ್ರಾರಂಭಿಸಲು ನಿರ್ಧರಿಸಿದ್ದಾರೆ.


ತಮ್ಮ ಔಷಧಾಲಯದ ಎದುರು ರಾಜ್ ಗುಪ್ತಾ (ಚಿತ್ರಕೃಪೆ: ಚೆಂಜ್.ಆರ್ಗ್)




ರೋಗಿಗಳ ಬಗ್ಗೆ ಮಾತನಾಡುತ್ತಾ ಅವರು,


"ನನ್ನ ಔಷದಾಲಯಕ್ಕೆ ಮೊದಲಿನಿಂದಲೂ ಬರುತ್ತಿದ್ದ ಹಲವಾರು ರೋಗಿಗಳು ಈ ಕಾಡ್ಗಿಚ್ಚಿನಲ್ಲಿ ತಮ್ಮ ಔಷಧಿಗಳನ್ನು ಕಳೆದುಕೊಂಡಿದ್ದಾರೆ. ನಿಮ್ಮ ಮನೆಯನ್ನು ನೀವು ಕಳೆದುಕೊಂಡಾಗ, ಯಾವುದೇ ವಿದ್ಯುತ್ ಅಥವಾ ದೂರವಾಣಿ ಸಂಪರ್ಕವಿರುವುದಿಲ್ಲ ಮತ್ತು ನೀವು ವೈದ್ಯರನ್ನು ಭೇಟಿ ಮಾಡಲು ವಾರಗಟ್ಟಲೆ ಕಾಯಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಿಸ್ಕ್ರಿಪ್ಶನ್ ಇಲ್ಲದೆ ಬಂದವರಿಗೆ ಜೀವ ಉಳಿಸುವ ಔಷಧಿಗಳನ್ನು ನಿರಾಕರಿಸುವ ಅಧಿಕಾರಿವರ್ಗದ ನಿಯಮವನ್ನು ಪರಿಷ್ಕರಿಸಬೇಕಾಗಿದೆ," ಎಂದರು, ಮೀಡಿಯಾನೆಟ್ ವರದಿ.


ಅದೃಷ್ಟವಶಾತ್, ಈ ರೀತಿಯ ಸಮಯದಲ್ಲಿ, ಅಧಿಕಾರಿಗಳು ಔಷಧಿಕಾರರಿಗೆ ಪ್ರಿಸ್ಕ್ರಿಪ್ಶನ್ ಇಲ್ಲದೆ ವೈದ್ಯಕೀಯ ನೆರವು ನೀಡಲು ಅಧಿಕಾರ ನೀಡುತ್ತಾರೆ. ರೋಗಿಗೆ ಅಗತ್ಯವಾದ ಔಷಧಿಗಳ ಅವಶ್ಯಕತೆಯಿದೆ ಎಂದು ಔಷಧಿಕಾರರಿಗೆ ಮನವರಿಕೆಯಾದರೆ ಮಾತ್ರ ಈ ನಿಯಮ ಉಪಯೋಗಕಾರಿ ಆಗಲಿದೆ.


ಈ ಹಿನ್ನಲೆಯಲ್ಲಿ ಅನೇಕರಿಗೆ ಅಗತ್ಯವಾದ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಲು ರಾಜ್‌ಗೆ ಇದು ಸಹಾಯ ಮಾಡಿದೆ. ಎಲ್ಲವೂ ಸಾಮಾನ್ಯ ಸ್ಥಿತಿಗೆ ಬಂದ ನಂತರ ಗ್ರಾಹಕರು ಅದನ್ನು ಹಿಂದಿರುಗಿಸುತ್ತಾರೆ ಎಂದು ನಂಬಿದ್ದರಿಂದ ರಾಜ್ ಗ್ರಾಹಕರಿಂದ ಯಾವುದೇ ಹಣವನ್ನು ತೆಗೆದುಕೊಳ್ಳುವುದಿಲ್ಲ.


ಅವರು ಎಸ್‌ಬಿಎಸ್‌ ಜೊತೆ ಮಾತನಾಡುತ್ತಾ,

ನಾನು ಹಣವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ಈಗ ಅದು ಹೆಚ್ಚು ಕಾಳಜಿ ವಹಿಸಬೇಕಾದ ವಿಷಯವು ಅಲ್ಲಾ. ಈ ಸಮಯದಲ್ಲಿ ಕಾಳಜಿಯೆಂದರೆ, ಜನರಿಗೆ ಸಹಾಯ ಮಾಡುವುದು ಮತ್ತು ಅವರ ವಿನಂತಿಗಳನ್ನು ನಾವು ಪೂರೈಸುವುದು," ಎಂದರು.