ಸ್ಟಾರ್ಟಪ್‌ ಇಂಡಿಯಾದಲ್ಲಿ ಭಾಗವಹಿಸುವಂತೆ ಯುವಜನತೆಗೆ ಮೋದಿ ಮನವಿ

ಸ್ಟಾರ್ಟಪ್‌ ಇಂಡಿಯಾ ಉಪಕ್ರಮವು ಭಾರತವನ್ನು ಜಾಗತಿಕ ಮಟ್ಟದ ಸ್ಟಾರ್ಟಪ್‌ ಪರಿಸರದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದೆ ಎಂದರು ಮೋದಿ.

ಸ್ಟಾರ್ಟಪ್‌ ಇಂಡಿಯಾದಲ್ಲಿ ಭಾಗವಹಿಸುವಂತೆ ಯುವಜನತೆಗೆ ಮೋದಿ ಮನವಿ

Monday January 11, 2021,

1 min Read

ಜನೇವರಿ 15 ಮತ್ತು 16 ರಂದು ನಡೆಯಲಿರುವ ಪ್ರಾರಂಭ - ಸ್ಟಾರ್ಟಪ್‌ ಇಂಡಿಯಾ ಅಂತರಾಷ್ಟ್ರೀಯ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಯುವಜನತೆಯನ್ನು ಕೋರಿದ್ದಾರೆ.


ಕೋವಿಡ್‌-19 ಕಾಲದಲ್ಲಿ ವರ್ಚುವಲ್‌ ಸಭೆಗಳು ಸಾಮಾನ್ಯವಾಗಿದ್ದು, ಮನೆಯಲ್ಲಿದ್ದುಕೊಂಡೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದಾಗಿರುವುದು ವರ್ಚುವಲ್‌ನ ದೊಡ್ಡ ಉಪಯೋಗ ಎನ್ನುವ ಲಿಂಕಡ್‌ಇನ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ.


“ಬಹುತೇಕ ಸಭೆಗಳು ವರ್ಚುವಲ್‌ ಆಗಿ ನಡೆಯುತ್ತಿರುವುದು ಯುವಜನತೆಗೆ ದೊಡ್ಡ ಅವಕಾಶವನ್ನು ಒದಗಿಸಿದೆ. ಅಂತಹದೆ ಒಂದು ಅವಕಾಶ ಜನೇವರಿ 15 16 ರಂದು ಪ್ರಾರಂಭ ಎಂಬ ಹೆಸರಿನಲ್ಲಿ ಬರುತ್ತದೆ,” ಎಂದು ಮೋದಿ ಟ್ವೀಟಿಸಿದ್ದಾರೆ.


2020ರಲ್ಲಿ ಬಹುತೇಕ ಮನೆಯೊಳಗಡೆ ಇದ್ದುಕೊಂಡೆ ಕೆಲಸ ಮಾಡಿಬೇಕಿತ್ತು.

“ತುಂಬಾ ಉಪಯೋಗವಾದ ಸಭೆಗಳು ಆನ್‌ಲೈನ್‌ನಲ್ಲಿದ್ದವು. ವಿಜ್ಞಾನಿಗಳು, ವೈದ್ಯಕೀಯ ವೃತ್ತಿಪರರು, ಕೋವಿಡ್‌ ವಾರಿಯರ್‌ಗಳು, ಉದ್ಯಮ ನಾಯಕರು, ಯುವ ನವೀನಕಾರರು, ಆಧ್ಯಾತ್ಮಿಕ ನಾಯಕರು ಮತ್ತು ಇತರರೊಂದಿಗೆ ಸಂವಹನಗಳು ನಡೆದಿವೆ,” ಎಂದರು ಮೋದಿ.


ಜಾಗತಿಕ ನಾಯಕರೊಂದಿಗೆ ಹಲವು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವರ್ಚುವಲ್‌ ಸಭೆಗಳು ನಡೆದವು. ವಿಶಿಷ್ಟವಾದ ಅಭಿವೃದ್ಧಿ ಯೋಜನೆಗಳನ್ನು ಡಿಜಿಟಲ್‌ ಆಗಿ ಆಯೋಜಿಸಲಾಯಿತು.


“ಅಸ್ತಿತ್ವದಲ್ಲಿರುವ ಸರ್ಕಾರಿ ಯೋಜನೆಗಳ ಲಕ್ಷಾಂತರ ಫಲಾನುಭವಿಗಳೊಂದಿಗೆ ನಾನು ಸಂವಹನ ನಡೆಸಿದ್ದೇನೆ” ಎಂದರು ಅವರು.


ಸಭೆಯ ಬಗ್ಗೆ ಮಾತನಾಡುತ್ತಾ ಅವರು ಸ್ಟಾರ್ಟಪ್‌ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸಿ ಐದು ವರ್ಷವಾಗಲಿದೆ. ಈ ಉಪಕ್ರಮವು ಭಾರತವನ್ನು ಜಾಗತಿಕ ಮಟ್ಟದ ಸ್ಟಾರ್ಟಪ್‌ ಪರಿಸರದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದೆ ಎಂದರು.


ಭಾರತದ ಯುವ ಜನತೆಯ ಚೈತನ್ಯವನ್ನು ಪದಗಳಲ್ಲಿ ವಿವರಿಸಲಾಗದು. ಹೊಸದನ್ನು ಅರಸಿ ಹೊರಟ ಅವರ ಪಯಣ ಅದ್ಭುತ ಫಲಿತಾಂಶ ನೀಡಿದೆ. ನಮ್ಮ ಸ್ಟಾರ್ಟಪ್‌ ನಾಯಕರು ಕೇವಲ ದೊಡ್ಡ ನಗರಗಳಿಂದ ಬರದೆ ಸಣ್ಣ ಹಳ್ಳಿಗಳಿಂದಲೂ ಬರುತ್ತಿದ್ದಾರೆ. ಇದೊಂದು ಉತ್ತಮವಾದ ಬೆಳವಣಿಗೆ,” ಎಂದರು ಅವರು.

Share on
close