ಕರ್ನಾಟಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲಿರುವ ಟೆಸ್ಲಾ

By Press Trust of India|15th Feb 2021
ಅಮೇರಿಕದ ಕಾರು ಉತ್ಪಾದನಾ ಸಂಸ್ಥೆ ರಾಜ್ಯದಲ್ಲಿ ತನ್ನ ಉತ್ಪಾದನಾ ಘಟಕ ತೆರೆಯಲಿದೆ ಎಂದು ಮುಖ್ಯಮಂತ್ರಿಗಳಾದ ಬಿ ಎಸ್‌ ಯಡಿಯೂರಪ್ಪನವರು ತಿಳಿಸಿದ್ದಾರೆ.
Clap Icon0 claps
 • +0
  Clap Icon
Share on
close
Clap Icon0 claps
 • +0
  Clap Icon
Share on
close
Share on
close

ಅಮೇರಿಕದ ಎಲೆಕ್ಟ್ರಿಕ್‌ ಕಾರು ಉತ್ಪಾದನಾ ಸಂಸ್ಥೆ ಟೆಸ್ಲಾ ಕರ್ನಾಟಕದಲ್ಲಿ ತನ್ನ ಉತ್ಪಾದನಾ ಘಟಕವನ್ನು ತೆರೆಯಲಿದೆ ಎಂದು ಶನಿವಾರ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪನವರು ಹೇಳಿದ್ದಾರೆ.


“ಎಲಾ ಮಸ್ಕ್‌ ಅವರ ಅಮೇರಿಕದ ಸಂಸ್ಥೆ ಟೆಸ್ಲಾ ಕರ್ನಾಟಕದಲ್ಲಿ ಕಾರು ಉತ್ಪಾದನಾ ಘಟಕವನ್ನು ತೆರೆಯಲಿದೆ,” ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.


2021-22 ರಲ್ಲಿ ರೂ. 1.16 ಕೋಟಿಯ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ರಾಜ್ಯದಲ್ಲಿ ನಡೆಯಲಿದ್ದು, ಎರಡನೇ ಹಂತದ ಮೆಟ್ರೋ ರೈಲು ಕಾರ್ಯಕ್ಕೆ 14,788 ಕೋಟಿ ರೂ. ಬಳಸಲಾಗುವುದು.


ತುಮಕೂರಿನಲ್ಲಿ ರೂ. 7,725 ಕೋಟಿ ವೆಚ್ಚದಲ್ಲಿ ಕೈಗಾರಿಕಾ ಕಾರಿಡಾರ್‌ ಅನ್ನು ಅಭಿವೃದ್ಧಿಪಡಿಸಲಾಗುವುದು ಇದು 2.8 ಲಕ್ಷ ಉದ್ಯೋಗ ಸೃಷ್ಟಿ ಮಾಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಇತ್ತೀಚೆಗೆ ನಡೆದ ಕೇಂದ್ರ ಬಜೆಟ್‌ ಐತಿಹಾಸಿಕವಾಗಿದ್ದು, ಅದು 2025 ರ ಒಳಗೆ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಹೊಂದುವ ಗುರಿಗೆ ದಾರಿ ಮಾಡಿಕೊಟ್ಟಿದೆ ಎಂದರು ಅವರು.

ವಿತ್ರಸಚಿವೆ ನಿರ್ಮಲಾ ಸೀತಾರಾಮನ್‌

ಜನೇವರಿಯಲ್ಲಿ ಟೆಸ್ಲಾ ಇಂಡಿಯಾ ಮೊಟಾರ್ಸ್‌ ಮತ್ತು ಎನರ್ಜಿ ಪ್ರೈ.ಲಿ. ಹೆಸರಿನಲ್ಲಿ ಬೆಂಗಳೂರಿನಲ್ಲಿ ಟೆಸ್ಲಾ ತನ್ನ ಅಂಗಸಂಸ್ಥೆಯೊಂದನ್ನು ತೆರೆಯಿತು. ಪ್ರಸ್ತುತ ಟೆಸ್ಲಾದ ಹಿರಿಯ ಕಾರ್ಯನಿರ್ವಾಹಕರಾಗಿರುವ ಡೇವಿಡ್‌ ಫೇನ್‌ಸ್ಟೆನ್‌ ಸೇರಿದಂತೆ ಭಾರತದ ಘಟಕಕ್ಕೆ ಮೂರು ನಿರ್ದೇಶಕರಿರಲಿದ್ದಾರೆಂದು ತಿಳಿಸಿಲಾಗಿದೆ.


ಪ್ರಥಮ ಕಾಗದ ರಹಿತ ಡಿಜಿಟಲ್‌ ಬಜೆಟ್‌ ಘೋಷಿಸುತ್ತಾ ವಿತ್ತ ಸಚಿವರು 2025ರ ಒಳಗೆ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಹೊಂದಬಯಸುವ ಗುರಿಯನ್ನು ತಲುಪಲು “ನಮ್ಮ ಉತ್ಪಾದನಾ ವಲಯ ಸುಸ್ಥಿರವಾಗಿ ಎರಡು ಅಂಕೆಗಳಲ್ಲಿ ಅಭಿವೃದ್ಧಿ ಹೊಂದಬೇಕು” ಎಂದರು. ಅದಲ್ಲದೆ ಅವರು ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯಡಿ 1.97 ಲಕ್ಷ ಕೋಟಿ ರೂ.ಗಳ ಸರ್ಕಾರದ ಹೊಸ ಕ್ರಮವನ್ನು ಘೋಷಿಸಿದರು.

Clap Icon0 Shares
 • +0
  Clap Icon
Share on
close
Clap Icon0 Shares
 • +0
  Clap Icon
Share on
close
Share on
close