ಮಧ್ಯಾಹ್ನದ ಊಟಕ್ಕೆ ತಮ್ಮದೇ ಆದ ಸಾವಯವ ತರಕಾರಿಗಳನ್ನು ಬೆಳೆಯುತ್ತಾರೆ ಈ ನಾಗಾಲ್ಯಾಂಡ್ ಶಾಲೆಯ ಮಕ್ಕಳು

ನಾಗಾಲ್ಯಾಂಡ್‌ನ ವಿಶ್ವೇಮದಲ್ಲಿರುವ ಕೆ ಖೇಲ್ ಸರ್ಕಾರಿ ಮಧ್ಯಮ ಶಾಲೆಯಲ್ಲಿ (ಜಿಎಂಎಸ್) ಬೆಳೆದ ತರಕಾರಿಗಳು ಮತ್ತು ಹಣ್ಣುಗಳನ್ನು 60 ಕ್ಕೂ ಹೆಚ್ಚು ಮಕ್ಕಳ ಮಧ್ಯಾಹ್ನದ ಊಟಕ್ಕೆ ಬಳಸಲಾಗುತ್ತದೆ.

ಮಧ್ಯಾಹ್ನದ ಊಟಕ್ಕೆ ತಮ್ಮದೇ ಆದ ಸಾವಯವ ತರಕಾರಿಗಳನ್ನು ಬೆಳೆಯುತ್ತಾರೆ ಈ ನಾಗಾಲ್ಯಾಂಡ್ ಶಾಲೆಯ ಮಕ್ಕಳು

Sunday February 09, 2020,

1 min Read

ನಾಗಾಲ್ಯಾಂಡ್‌ನ ಕೊಹಿಮಾದ ವಿಶ್ವೇಮದಲ್ಲಿರುವ ಕೆ ಖೇಲ್ ಸರ್ಕಾರಿ ಮಧ್ಯಮ ಶಾಲೆ (ಜಿಎಂಎಸ್) ತನ್ನ ವಿದ್ಯಾರ್ಥಿಗಳನ್ನು 2011 ರಿಂದ ಶಾಲೆಯ ಆವರಣದಲ್ಲಿ ತರಕಾರಿಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸುತ್ತಿದೆ.


ಈ ತರಕಾರಿಗಳನ್ನು ಶಾಲೆಯಲ್ಲಿ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟಕ್ಕೆ ಅಡುಗೆ ಮಾಡಲು ಬಳಸಲಾಗುತ್ತದೆ.


ಸಾವಯವ ಕೃಷಿಯ ಕುರಿತು ಎನ್‌ಡಿಟಿವಿ ಯೊಂದಿಗೆ ಮಾತನಾಡಿದ ಮುಖ್ಯೋಪಾಧ್ಯಾಯ ಕೆನೆಸೆನು ವಿಟ್ಸು,


“ಕೃಷಿ ಮತ್ತು ತೋಟಗಾರಿಕೆ ನಮ್ಮ ಪಠ್ಯಕ್ರಮದ ಅವಿಭಾಜ್ಯ ಅಂಗವಾಗಿದೆ. ಕೃಷಿಯ ಕೌಶಲ್ಯ ಮತ್ತು ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ, ಸಾವಯವ ಕೃಷಿಯನ್ನು ಕಲಿಸಲು ನಾವು ನಿರ್ಧರಿಸಿದ್ದೇವೆ. ತೋಟಗಾರಿಕೆ ಮತ್ತು ಕೃಷಿಗೆ ಸಂಬಂಧಿಸಿದ ಬೋಧನಾ ಚಟುವಟಿಕೆಗಳಿಗೆ ತಿಂಗಳಲ್ಲಿ ಒಂದು ದಿನವನ್ನು ನಾವು ಮೀಸಲಿಡುತ್ತೇವೆ,” ಎಂದರು.


ಸಸ್ಯಗಳನ್ನು ಬೆಳೆಸಲು ಕೆಲಸ ಮಾಡುತ್ತಿರುವ ಮಕ್ಕಳು. (ಚಿತ್ರಕೃಪೆ : ದಿ ಬೆಟರ್ ಇಂಡಿಯಾ )



ನಿಂಬೆ, ಬೆಳ್ಳುಳ್ಳಿ, ಆಲೂಗಡ್ಡೆ, ಎಲೆಕೋಸು, ಈರುಳ್ಳಿ, ಕುಂಬಳಕಾಯಿ ಮತ್ತು ದಾಳಿಂಬೆ ತರಕಾರಿಗಳನ್ನು ಬೆಳಸಲಾಗುತ್ತಿದೆ. ಅವುಗಳಲ್ಲಿ ಕೆಲವು ಸ್ಥಳೀಯ ಸಸ್ಯಗಳಾದ ನಾಗಾ ದಳ ಮತ್ತು ರಾಜ್ಯದಲ್ಲಿ ಮಾತ್ರ ಕಂಡುಬರುವ ಇತರ ಬೆಳೆಗಳನ್ನು ಬೆಳೆಯಲಾಗುತ್ತದೆ. ಶಾಲೆಯು ಸರಾಸರಿ 300 ಕೆ.ಜಿ ಬೆಳೆಯನ್ನು ಉತ್ಪಾದಿಸುತ್ತದೆ.


ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳು ಒಂದು ಜಮೀನನ್ನು ಆರಿಸುತ್ತಾರೆ, ಅದನ್ನು ಸ್ವಚ್ಛಗೊಳಿಸಿ ಅದರ ಮೇಲೆ ತರಕಾರಿಗಳನ್ನು ಬೆಳೆಸಲು ನೆಲವನ್ನು ಸಮ ಮಾಡಲಾಗುತ್ತದೆ. ಅಲ್ಲದೆ, ಅಡುಗೆ ತ್ಯಾಜ್ಯ ಮತ್ತು ಬೇರುಸಹಿತ ಕಳೆಗಳಿಂದ ಸಾವಯವ ಗೊಬ್ಬರವನ್ನು ತಯಾರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ.


ಶಾಲೆಯ ಚಿತ್ರಣ (ಚಿತ್ರಕೃಪೆ : ದಿ ಬೆಟರ್ ಇಂಡಿಯಾ)



ಈ ಪ್ರದೇಶದಲ್ಲಿನ ಋತುಮಾನಕ್ಕೆ ಅನುಗುಣವಾಗಿ ಬೀಜಗಳನ್ನು ಬಿತ್ತಲಾಗುತ್ತದೆ. ಮತ್ತು ಬೀಜಗಳನ್ನು ಬಿತ್ತಿದ ನಂತರ ಮಕ್ಕಳು ತಮ್ಮ ತರಗತಿಗಳಾದ ಮೇಲೆ ನೀರು, ಕಳೆ ಮತ್ತು ಸಸ್ಯಗಳಿಗೆ ಹಸಿರು ಗೊಬ್ಬರವನ್ನು ಸೇರಿಸುತ್ತಾರೆ. ಪ್ರಾಣಿಗಳಿಂದ ರಕ್ಷಿಸಲು ಬಿದಿರು-ಬೇಲಿಗಳನ್ನು ನಿರ್ಮಿಸಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ.


ದಿ ಬೆಟರ್ ಇಂಡಿಯಾ ಪ್ರಕಾರ, ಶಾಲೆಯಲ್ಲಿ ಪರಿಸರ ಅಭ್ಯಾಸಗಳಿಗೆ ಅವಕಾಶವಿದೆ. ಉದಾಹರಣೆಗೆ, ಶಾಲೆಯಿಂದ ಇರಿಸಲ್ಪಟ್ಟ ಹಳ್ಳಿಯ ರಸ್ತೆಯ ಬದಿಯಲ್ಲಿ ಬಿದಿರಿನ ತೊಟ್ಟಿಗಳನ್ನು ಕಾಣಬಹುದು, ನಿವಾಸಿಗಳು ಅವುಗಳನ್ನು ಸಮರ್ಪಕವಾಗಿ ಬಳಸಲು ಪ್ರೋತ್ಸಾಹಿಸುತ್ತಾರೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.