ಜಾಗತಿಕ ತಾಪಮಾನ ಏರಿಕೆಯಿಂದ ಬದಲಾಗುತ್ತಿರುವ ಕಾಡು ಪ್ರಾಣಿಗಳ ಸಂತಾನೋತ್ಪತ್ತಿ ಪ್ರಕ್ರಿಯೆ
ಸಂಶೋಧಕರು ಜಾಗತಿಕ ತಾಪಮಾನವು ಕಾಡು ಪ್ರಾಣಿಗಳು ಅವಧಿಗೂ ಮೊದಲೇ ಜನ್ಮ ನೀಡಲು ಕಾರಣವಾಗಿದೆ ಎಂದು ಪುರಾವೆಗಳ ಸಹಿತ ಕಂಡುಹಿಡಿದಿದ್ದಾರೆ, ಇದು ವನ್ಯಜೀವಿಗಳ ಮೇಲೆ ಹವಾಮಾನ ಬಿಕ್ಕಟ್ಟಿನ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.
ಯುಕೆ ಯ ಎಡಿನ್ಬರ್ಗ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯ ಸೇರಿದಂತೆ ಸಂಶೋಧಕರು, ಸ್ಕಾಟ್ಲೆಂಡ್ನ ಐಲ್ ಆಫ್ ರಮ್ನಲ್ಲಿರುವ ಕೆಂಪು ಜಿಂಕೆಗಳ ಜನಸಂಖ್ಯೆಯು ಆನುವಂಶಿಕ ಬದಲಾವಣೆಗಳಿಗೆ ಒಳಗಾಗುತ್ತಿದೆ ಮತ್ತು ಇದು ಜನ್ಮ ದಿನಾಂಕಗಳಲ್ಲಿ ತ್ವರಿತ ಬದಲಾವಣೆಗೆ ಕಾರಣವಾಗಿದೆ ಎಂದು ಹೇಳಿದರು.
1980 ರ ದಶಕದ ಹಿಂದಿನ ಅಧ್ಯಯನಗಳ ಆಧಾರದ ಮೇಲೆ ಹೇಳುವುದಾದರೆ, ಇಂದು ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಕಾರಣದಿಂದ ಪ್ರತಿ ದಶಕಕ್ಕೆ ಸುಮಾರು ಮೂರು ದಿನಗಳ ದರದಲ್ಲಿ ಜಿಂಕೆಗಳು ಮರಿಗಳಿಗೆ ಜನ್ಮ ನೀಡುತ್ತಿವೆ.
ಪ್ರಸ್ತುತ ಅಧ್ಯಯನದಲ್ಲಿ, ಸಂಶೋಧಕರು ಈ ಆನುವಂಶಿಕ ಬದಲಾವಣೆಗಳು ಡಾರ್ವಿನ್‌ರ ನೈಸರ್ಗಿಕ ಆಯ್ಕೆಯ ಸಿದ್ಧಾಂತದಿಂದ ಉಂಟಾಗುತ್ತವೆ - ಎಂದು ಕಂಡುಕೊಂಡಿದ್ದಾರೆ. ಸಂತಾನೋತ್ಪತ್ತಿ ಮತ್ತು ಬದುಕುಳಿವಿಕೆಯಲ್ಲಿರುವ ವ್ಯತ್ಯಾಸಗಳು ಅದರ ಗುಣಲಕ್ಷಣಗಳನ್ನು ಅವಲಂಬಿಸಿದೆ.
ಪಿ ಎಲ್ ಓ ಎಸ್ ಬಯಾಲಜಿ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು, ಈ ಪ್ರಭೇದದಲ್ಲಿ ವಿಕಾಸವು ಕೆಲವೇ ದಶಕಗಳಲ್ಲಿ ಪತ್ತೆಯಾಗುವಷ್ಟು ಬೇಗನೆ ಹೇಗೆ ನಡೆಯುತ್ತಿದೆ ಎಂಬುದನ್ನು ವಿವರಿಸುತ್ತದೆ.
“ಬದಲಾಗುವ ಹವಾಮಾನಕ್ಕೆ ಸರಿಯಾಗಿ ಹೊಂದಿಕೊಳ್ಳಲು ಜೀವ ಪ್ರಭೇದಗಳು ಹೇಗೆ ಸಹಕರಿಸುತ್ತವೆ ಎಂಬುದನ್ನು ದಾಖಲಿಸಿದ ಕೆಲವೇ ಪ್ರಕರಣಗಳಲ್ಲಿ ಇದು ಒಂದು" ಎಂದು ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯದ ಅಧ್ಯಯನದ ಸಹ-ಲೇಖಕ ತಿಮೋತಿ ಬೊನೆಟ್ ಹೇಳಿದ್ದಾರೆ.
ಹೆಣ್ಣು ಕೆಂಪು ಜಿಂಕೆ - ಹಿಂಡ್ಸ್ ಎಂದು ಕರೆಯಲ್ಪಡುತ್ತದೆ - ಪ್ರತಿ ವರ್ಷ ಒಂದೇ ಮರಿಗೆ ಜನ್ಮ ನೀಡುತ್ತದೆ, ಮತ್ತು ವರ್ಷದ ಆರಂಭದಲ್ಲಿ ಸಂತಾನೋತ್ಪತ್ತಿ ಮಾಡಿದವುಗಳು ತಮ್ಮ ಜೀವಿತಾವಧಿಯಲ್ಲಿ ಹೆಚ್ಚಿನ ಸಂತತಿಯನ್ನು ಹೊಂದಿವೆ ಎಂದು ಸಂಶೋಧಕರು ಹೇಳಿದ್ದಾರೆ.
ಇದು ಭಾಗಶಃ ಹಿಂಡ್ಸ್ ಗಳು ಬೇಗನೆ ಜನ್ಮ ನೀಡುವಂತೆ ಮಾಡುವ ವಂಶವಾಹಿಗಳ ನಡುವಿನ ಒಡನಾಟದಿಂದಾಗಿ ಮತ್ತು ನಡವಳಿಕೆಯಿಂದಾದ ಒಟ್ಟಾರೆ ಸಂತಾನೋತ್ಪತ್ತಿ ಯಶಸ್ಸಸಿಂದಾಗುತ್ತದೆ ಎಂದು ಅಧ್ಯಯನವು ಗಮನಿಸಿದೆ.
ಇದರ ಪರಿಣಾಮವಾಗಿ, ರಮ್ ಜಿಂಕೆಗಳ ಜನಸಂಖ್ಯೆಯಲ್ಲಿ ಕಾಲಾನಂತರದಲ್ಲಿ ಸಂತಾನೋತ್ಪತ್ತಿ ಮಾಡುವ ವಂಶವಾಹಿಗಳು ಹೆಚ್ಚು ಸಾಮಾನ್ಯವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಹವಾಮಾನ ಬಿಕ್ಕಟ್ಟು ವನ್ಯಜೀವಿಗಳ ಮೇಲೆ ಬೀರಬಹುದಾದ ಪರಿಣಾಮದ ಒಂದು ಉದಾಹರಣೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
"ಇದು ನಮ್ಮ ಜ್ಞಾನಕ್ಕೆ, ಬದಲಾಗುತ್ತಿರುವ ವಾತಾವರಣದಲ್ಲಿ ಫಿನಾಲಜಿಯಲ್ಲಿನ ಪ್ರಗತಿಗೆ ಕೊಡುಗೆ ನೀಡುವ ವಿಕಸನ ಮತ್ತು ಫಿನೋಟೈಪಿಕ್ ಪ್ಲಾಸ್ಟಿಸಿಟಿ ಎರಡಕ್ಕೂ ಮೊದಲ ಸಾಕ್ಷ್ಯವನ್ನು ಒದಗಿಸುತ್ತದೆ" ಎಂದು ಸಂಶೋಧಕರು ಅಧ್ಯಯನದಲ್ಲಿ ನಮೂದಿಸಿದ್ದಾರೆ.