ಭಾರತೀಯ ಸಂಸ್ಕೃತಿಯನ್ನು ಪ್ರದರ್ಶಿಸಲು ಡಿಜಿಟಲ್ ಪೋರ್ಟಲ್‌ಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಪಟೇಲ್

ಕೇಂದ್ರ ಸರಕಾರದ ಸಂಸ್ಕೃತಿ ಸಚಿವ ಪ್ರಹ್ಲಾದ್‌ ಪಟೇಲ್‌ ಭಾರತೀಯ ಸಂಸ್ಕೃತಿಯನ್ನು ಪ್ರದರ್ಶಿಸುವ ಡಿಜಿಟಲ್‌ ಪೋರ್ಟಲ್‌ಗೆ ಮಂಗಳವಾರ ಚಾಲನೆ ನೀಡಿದ್ದು, ಇಡೀ ಭಾರತದ ಎಲ್ಲ ವಿಭಿನ್ನ ಸಾಂಸಕೃತಿಕ ಸಂಪನ್ಮೂಲಗಳನ್ನು ಒಂದೇ ವೇದಿಕೆಗೆ ತರುವುದು ಇದರ ಉದ್ದೇಶವೆಂದು ಹೇಳಿದ್ದಾರೆ.

ಭಾರತೀಯ ಸಂಸ್ಕೃತಿಯನ್ನು ಪ್ರದರ್ಶಿಸಲು ಡಿಜಿಟಲ್ ಪೋರ್ಟಲ್‌ಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಪಟೇಲ್

Wednesday December 11, 2019,

2 min Read

ಕಳೆದ ಮೂರು ವರ್ಷಗಳಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ ರಚಿಸಿದ ಪೋರ್ಟಲ್ - www.indiaculture.nic.in - ಆರ್ಕೈವ್‌ನಲ್ಲಿ ಲಭ್ಯವಿರುವ ದಾಖಲೆಗಳು, ಕಲಾಕೃತಿಗಳು, ವರ್ಣಚಿತ್ರಗಳು ಮತ್ತು ಇತರ ವಸ್ತುಗಳನ್ನು ಒಳಗೊಂಡ ಡಿಜಿಟಲ್ ಸಂಪನ್ಮೂಲವಾಗಿದೆ.


“ನಮ್ಮ ಸಂಸ್ಕೃತಿಯ ಹಲವಾರು ಕಲಾಕೃತಿಗಳನ್ನು ಸಾರ್ವಜನಿಕರಿಗೆ ಪ್ರದರ್ಸಿಸುವುದು ಅಸಾಧ್ಯವಾಗಿತ್ತು. ನಮ್ಮ ಇತಿಹಾಸ ಹಾಗೂ ಸಂಸ್ಕೃತಿ ಸಾರ್ವಜನಿಕರಿಗೆ ಸುಲಭವಾಗಿ ಸಿಗುವ ಸಂಪನ್ಮೂಲವಾಗಬೇಕು.‌ ಆಗ ಹಲವಾರು ಜನರಿಗೆ ಅದು ಸಹಾಯವಾಗುತ್ತದೆ. ಈ ಪೋರ್ಟಲ್‌ ನಮ್ಮ ಪುರಾತನ ಸಂಗ್ರಹದ ಡಿಜಿಟಲ್‌ ಸ್ವರೂಪದಲ್ಲಿರುತ್ತವೆ. ಅವು ನಮ್ಮ ವಸ್ತು ಸಂಗ್ರಹಾಲದವು, ಗ್ರಂಥಾಲಯದವೋ ಅಥವಾ ಪುರಾತತ್ವ ಇಲಾಖೆಯವಾದರೂ ಆಗಿರಬಹುದು,” ಎಂದು ಪಟೇಲ ಹೇಳಿದರು.


ಚೋಳರ ಕಾಲದ ನಾಣ್ಯ

ಈ ಯೋಜನೆಯು ದೇಶದಲ್ಲಿ ಮತ್ತು ಹೊರದೇಶಗಳಲ್ಲಿ ಸ್ಪರ್ಶ್ಯವಾಗಿರುವ ಭಾರತದ ಶ್ರೀಮಂತ ಸ್ಪಷ್ಟವಾದ ಮತ್ತು ಅಮೂರ್ತವಾದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಮಾಹಿತಿಯನ್ನು ಪ್ರದರ್ಶಿಸುವ ಪ್ರಧಾನ ಮಂತ್ರಿಯವರ ಡಿಜಿಟಲ್ ಇಂಡಿಯಾ ಉಪಕ್ರಮದ ಒಂದು ಭಾಗವಾಗಿದೆ ಎಂದು ಸಚಿವರು ಹೇಳಿದರು.


ಪೋರ್ಟಲ್ ರಾಷ್ಟ್ರದಾದ್ಯಂತದ ಸಿಕ್ಕಿರುವ ದಾಖಲೆಗಳು, ಚಿತ್ರಗಳು, ಆಡಿಯೊ-ವಿಡಿಯೋ ಫೈಲ್‌ಗಳು ಮತ್ತು ಆರ್ಕೈವ್‌ಗಳು, ವಸ್ತು ಸಂಗ್ರಹಾಲಯಗಳು, ಅಕಾಡೆಮಿಗಳು ಮತ್ತು ಗ್ರಂಥಾಲಯಗಳಿಂದ ಇತರ ಡೇಟಾವನ್ನು ಹೋಸ್ಟ್ ಮಾಡುತ್ತದೆ. ಈ ಪೋರ್ಟಲ್‌ನಲ್ಲಿ ಪ್ರಸ್ತುತ 90 ಲಕ್ಷಕ್ಕೂ ಹೆಚ್ಚು ವಸ್ತುಗಳ ಮಾಹಿತಿ ಲಭ್ಯವಿದೆ.


ಪಟೇಲ್‌, “ಸಿಂಧೂ ಕಣಿವೆಯ ನಾಗರಿಕತೆಯಿಂದ ಹಿಡಿದು ಮಹತ್ಮಾ ಗಾಂಧಿಯವರ ಚಕ್ರದವರೆಗೂ


ಭಾರತೀಯ ಸಂಸ್ಕೃತಿಯು ಶಾಸ್ತ್ರಗಳ ಮಾತುಗಳನ್ನು ಮತ್ತು ದಕ್ಕನ್‌ ಪ್ರಸ್ಥಭೂಮಿಯ ರಾಜರ ಆಸ್ಥಾನದ ವರ್ಣಚಿತ್ರಕಾರರ ಕೈಚಳಕವನ್ನು, ಬುದ್ಧನ ದರ್ಶನದ ಶಾಂತತೆಯಿಂದ ಹಿಡಿದು ಶಸ್ತ್ರಾಸ್ತ್ರಗಳ ಮೇಲಿನ ಯುದ್ಧದ ಗುರುತುಗಳವರೆಗೆ, ಸ್ಮಾರಕಗಳ ಅಪರೂಪದ ಚಿತ್ರಗಳಿಂದ ಕಚ್ಚುವ ಗಾತ್ರದ ಉಪಾಖ್ಯಾನಗಳವರೆಗೆ ಮತ್ತು ಭಾರತೀಯ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ವಿವರವಾದ ಖಾತೆಗಳ ಕುರಿತಾದ ಅಘಾದ ಮಾಹಿತಿ ಪೋರ್ಟಲ್‌ನಲ್ಲಿ ಲಭ್ಯವಿದೆ” ಎಂದರು.


ಪೋರ್ಟಲ್‌ನಲ್ಲಿ ಲಭ್ಯವಾಗುವ ಮಾಹಿತಿಯ ಸಂಗ್ರಹಣೆ ಪ್ರತಿಕ್ಷಣವೂ ನಡಯುತ್ತಲ್ಲೇ ಇರುತ್ತದೆ. ಅಲ್ಲಿ ಸಿಗುವ ಮಾಹಿತಿಯು ಗುಣಮಟ್ಟ ಮತ್ತು ಪ್ರಮಾಣದಲ್ಲಿ ವರ್ಧಿಸಿದ್ದಾಗಿವೆ, ಎಂದರು.


ಪೋರ್ಟಲ್ ಒಂದು ಭಂಡಾರಕ್ಕಿಂತ ದೊಡ್ಡದಾಗಿದೆ, ಇದು 5,000 ಕ್ಕೂ ಹೆಚ್ಚು ವರ್ಷಗಳಿಂದ ಸಹಬಾಳ್ವೆ ಮತ್ತು ಅಭಿವೃದ್ಧಿ ಹೊಂದಿದ ಭಾರತೀಯ ಸಂಸ್ಕೃತಿಗಳ ಕೂಡುವಿಕೆಯ ಹೆಮ್ಮೆಯ ಪರಾಕಾಷ್ಠೆಯಾಗಿದೆ ಎಂದು ಪಟೇಲ್ ಹೇಳಿದರು.


ಪೋರ್ಟಲ್‌ನಲ್ಲಿ ಲಭ್ಯವಿರುವ ವಿಷಯಗಳು ಮುಖ್ಯವಾಗಿ ಅಪರೂಪದ ಪುಸ್ತಕಗಳು, ಇ-ಪುಸ್ತಕಗಳು, ಹಸ್ತಪ್ರತಿಗಳು, ವಸ್ತು ಸಂಗ್ರಹಾಲಯಗಳ ಕಲಾಕೃತಿಗಳು, ವರ್ಚುವಲ್ ಗ್ಯಾಲರಿಗಳು, ಆರ್ಕೈವ್‌ಗಳು, ಫೋಟೋ ಆರ್ಕೈವ್‌ಗಳು, ಗೆಜೆಟಿಯರ್‌ಗಳು, ಭಾರತೀಯ ರಾಷ್ಟ್ರೀಯ ಗ್ರಂಥಸೂಚಿ, ವೀಡಿಯೊಗಳು, ಚಿತ್ರಗಳು, ಪಾಕಪದ್ಧತಿ, ಯುನೆಸ್ಕೋ ಮತ್ತು ಭಾರತದ ಸಂಗೀತ ವಾದ್ಯಗಳ ಬೃಹತ್‌ ವಿಷಯಗಳು ಒಳಗೊಂಡಿದೆ.


ಪೋರ್ಟಲ್‌ನಲ್ಲಿನ ವಿಷಯವು ಸಂವಾದಾತ್ಮಕ, ಬಳಕೆದಾರ ಸ್ನೇಹಿ ಸಂಪರ್ಕ ಸಾಧನವಾಗಿದ್ದು, ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ. ಸಚಿವಾಲಯವು ಹೇಳಿರುವಂತೆ, ಪೋರ್ಟಲ್ ಭವಿಷ್ಯದಲ್ಲಿ ಇತರ ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಿರುತ್ತದೆ.