ಸಮುದ್ರದಿಂದ 5 ಸಾವಿರ ಕೆ ಜಿ ಪ್ಲಾಸ್ಟಿಕ್‌ ತ್ಯಾಜ್ಯ ಹೊರತೆಗೆದ ವೈಜಾಗ್‌ ನ ಸ್ಕುಬಾ ಡೈವರ್‌ ಗಳು

ವೈಜಾಗ್‌ನ ಡೈವರ್‌ಗಳ ತಂಡವು ಒಂದು ದಿನದಲ್ಲಿ ಸುಮಾರು 600 ಕೆಜಿ ತ್ಯಾಜ್ಯವನ್ನು ಮಾಸ್ಕ್‌ನಂತಹ ಕನಿಷ್ಠ ಡೈವಿಂಗ್ ಗೇರ್‌ಗಳನ್ನು ಬಳಸಿ ಸಂಗ್ರಹಿಸುತ್ತದೆ ಮತ್ತು ಸಮುದ್ರದಿಂದ ಕಸವನ್ನು ಸಂಗ್ರಹಿಸಲು ನೆಟ್ ಬ್ಯಾಗ್‌ಗಳನ್ನು ಬಳಸುತ್ತದೆ.

ಸಮುದ್ರದಿಂದ 5 ಸಾವಿರ ಕೆ ಜಿ ಪ್ಲಾಸ್ಟಿಕ್‌ ತ್ಯಾಜ್ಯ ಹೊರತೆಗೆದ ವೈಜಾಗ್‌ ನ ಸ್ಕುಬಾ ಡೈವರ್‌ ಗಳು

Sunday November 17, 2019,

2 min Read

ನೀರಿನ ಮಾಲಿನ್ಯವು ಪರಿಸರದ ಮೇಲೆ ಪರಿಣಾಮ ಬೀರುವ ದೊಡ್ಡ ಸಮಸ್ಯೆಯಾಗಿದೆ. ನಮ್ಮ ನದಿಗಳು, ಸರೋವರಗಳು, ಸಮುದ್ರಗಳು, ಸಾಗರಗಳು ಮತ್ತು ಹೆಚ್ಚಿನ ಜಲಮೂಲಗಳು ತ್ಯಾಜ್ಯದಿಂದ ಅಥವಾ ಟನ್ಗಟ್ಟಲೆ ಇತರ ಕಸದಿಂದ ತುಂಬಿರುತ್ತವೆ, ವಿಶೇಷವಾಗಿ ಪ್ಲಾಸ್ಟಿಪ್ಲಾಸ್ಟಿಕ್ ‌ನಿಂದ ಕೂಡಿರುತ್ತದೆ. ಇವು ಮನುಷ್ಯರಿಗೆ ಮತ್ತು ಸಮುದ್ರದಲ್ಲಿನ ಜೀವಿಗಳಿಗೆ ಅತಿ ಹೆಚ್ಚು ಹಾನಿಮಾಡುತ್ತವೆ.


ಪ್ಲಾಸ್ಟಿಕ್ ಭೀತಿಯನ್ನು ನಿಗ್ರಹಿಸಲು ಜಗತ್ತಿನ ಅನೇಕ ಪರಿಸರವಾದಿಗಳು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ. ವಿಶಾಖಪಟ್ಟಣಂನ ಈ ಐದು ಡೈವರ್‌ಗಳಂತಹ ಪರಿಸರ ಪ್ರಜ್ಞೆಯ ಕೆಲವು ವ್ಯಕ್ತಿಗಳು ಸಹ ತಮ್ಮ ನಗರದಲ್ಲಿನ ನೀರಿನ ಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿ, ಸ್ವಚ್ಚಗೊಳಿಸಲು ನಿರ್ಧರಿಸಿದ್ದಾರೆ.


ಸ್ಕೂಬಾ ಡೈವರ್ಸ್ (ಚಿತ್ರಕೃಪೆ: ದಿ ನ್ಯೂಸ್ ಮಿನಿಟ್)


ಈ ಗುಂಪಿನಲ್ಲಿ ಡೈವಿಂಗ್ ಬೋಧಕ ಹಾಗೂ ಪ್ಲ್ಯಾಟಿಪಸ್ ಎಸ್ಕೇಪ್ಸ್ನ ಸ್ಥಾಪಕ ಸುಭಾಷ್ ಚಂದ್ರನ್, ಪದ್ಮಾವತಿ ಮಡಿಪಲ್ಲಿ, ಸಚಿನ್ ಶರ್ಮಾ, ಸರಗಡ ಅಪ್ಪಣ್ಣ ಮತ್ತು ದಿವ್ಯಾ ತೇಜ ಇದ್ದಾರೆ.


ಒಟ್ಟಿನಲ್ಲಿ, ಈ ಗುಂಪು 13 ದಿನಗಳಲ್ಲಿ 5,000 ಕೆಜಿ ಮೌಲ್ಯದ ತ್ಯಾಜ್ಯವನ್ನು ಸಮುದ್ರದಿಂದ ಹೊರತೆಗೆದಿದೆ.


ಸ್ವಯಂಸೇವಕರ ತಂಡದ ಬೆಂಬಲದೊಂದಿಗೆ, ಅಕ್ಟೋಬರ್‌ನಿಂದ ಸಮುದ್ರವನ್ನು ಸ್ವಚ್ಛಗೊಳಿಸುವಲ್ಲಿ ಇದು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.


ದಿ ಲಾಜಿಕಲ್ ಇಂಡಿಯನ್ ಜೊತೆ ಮಾತನಾಡಿದ ಸುಭಾಷ್,


"ಕಳೆದ ತಿಂಗಳು, ನಾನು ಮತ್ತು ನನ್ನ ಸ್ನೇಹಿತ ರುಶಿಕೊಂಡಾದ ಕಡಲತೀರದಲ್ಲಿ ಈಜುತ್ತಿದ್ದೆವು, ನಮ್ಮ ಕಾಲುಗಳಲ್ಲಿ ನೆಟ್ ಮತ್ತು ಪ್ಲಾಸ್ಟಿಕ್ ಸುತ್ತಿಕೊಂಡಿತು. ನಾವು ಮನೆಗೆ ಹಿಂತಿರುಗಿ, ನಮ್ಮ ಮಾಸ್ಕ್‌ಗಳನ್ನು ಪಡೆದುಕೊಂಡು ಸಮುದ್ರದಲ್ಲಿ ಪ್ಲಾಸ್ಟಿಕ್ ಹುಡುಕಲು ಪ್ರಾರಂಭಿಸಿದೆವು. ಅದು ಹೃದಯ ವಿದ್ರಾವಕ ದೃಶ್ಯವಾಗಿತ್ತು - ನಾವು ಸಾಕಷ್ಟು ಪ್ಲಾಸ್ಟಿಕ್ ಅನ್ನು ಕಂಡೆವು. ಆ ದಿನದಿಂದ, ನಾವು ಸ್ವಚ್ಛಗೊಳಿಸಲು ಪ್ರಾರಂಭಿಸಿದೆವು," ಎಂದರು.


ಮೊದಲ ದಿನವೇ ಇವರಿಬ್ಬರು ಸಮುದ್ರದಿಂದ ಸುಮಾರು 400 ಕೆಜಿ ತ್ಯಾಜ್ಯವನ್ನು ತೆಗೆದರು, ಈಗ ತಂಡವು ಒಂದು ದಿನದಲ್ಲಿ ಸುಮಾರು 600 ಕೆಜಿ ತ್ಯಾಜ್ಯವನ್ನು ಸಂಗ್ರಹಿಸುತ್ತದೆ. ಎಲ್ಲಾ ಸದಸ್ಯರು ಮುಖವಾಡಗಳಂತಹ ಕನಿಷ್ಠ ಡೈವಿಂಗ್ ಗೇರ್ ಅನ್ನು ಮಾತ್ರ ಬಳಸುತ್ತಾರೆ, ಏಕೆಂದರೆ ಪೂರ್ಣ ಪ್ರಮಾಣದ ಸ್ಕೂಬಾ ಡೈವಿಂಗ್ ಉಪಕರಣಗಳು ದುಬಾರಿಯಾಗುತ್ತವೆ. ಅವರು ಕಸವನ್ನು ಸಂಗ್ರಹಿಸಲು ನೆಟ್ ಚೀಲಗಳನ್ನು ಒಯ್ಯುತ್ತಾರೆ.


ಸಮುದ್ರದ ತಳದಲ್ಲಿ ಕಂಡ ಪ್ಲಾಸ್ಟಿಕ್ (ಚಿತ್ರಕೃಪೆ: ದಿ ನ್ಯೂಸ್ ಮಿನಿಟ್)


ಸಂಗ್ರಹಿಸಿದ ಕಸವನ್ನು ನಂತರ ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್ (ಜಿವಿಎಂಸಿ) ಡಸ್ಟ್‌ಬಿನ್‌ಗಳಲ್ಲಿ ಎಸೆಯಲಾಗುತ್ತದೆ, ಮತ್ತು ಹಲವು ಬಾರಿ ಕಸವು ಬಟ್ಟೆ, ಹಿಟ್ಟಿನ ಪ್ಯಾಕೆಟ್ ಮತ್ತು ಆಹಾರ ಧಾನ್ಯಗಳಿಂದ ಕೂಡಿರುತ್ತದೆ.


ಈ ಡೈವರ್‌ಗಳಿಗೆ ದಿನ ಆರಂಭಗೊಳ್ಳುವುದೇ ಬೆಳಿಗ್ಗೆ 6: 30 ಕ್ಕೆ ಮತ್ತು ಅವರು ತಮ್ಮ ದೈನಂದಿನ ಉದ್ಯೋಗಗಳಿಗೆ ಹೊರಡುವ ಮೊದಲು ಕನಿಷ್ಠ ನಾಲ್ಕು ಗಂಟೆಗಳ ಕಾಲ ಕಸ ಆರಿಸುತ್ತಾರೆ. ದಿ ನ್ಯೂಸ್ ಮಿನಿಟ್ ಜೊತೆ ಮಾತನಾಡಿದ ಸುಭಾಷ್,


"ಕಳೆದ ಮೂರು ವಾರಗಳಿಂದ ನಾವು ಇದನ್ನು ನಿರಂತರ ಕಾರ್ಯಾಚರಣೆಯಾಗಿ ಮಾಡಲು ಪ್ರಾರಂಭಿಸಿದ್ದೇವೆ. ನಾವು ತೀರದಿಂದ ಸುಮಾರು 100 ಮೀಟರ್ ದೂರದಲ್ಲಿ ಧುಮುಕುತ್ತೇವೆ ಮತ್ತು ಎರಡು-ಮೂರು ಮೀಟರ್ ಆಳಕ್ಕೆ ಹೋಗುತ್ತೇವೆ. ಸ್ಥಳೀಯ ಮೀನುಗಾರರು ಸಹ ತಂಡಕ್ಕೆ ತಮ್ಮ ಬೆಂಬಲವನ್ನು ನೀಡುತ್ತಾರೆ” ಎಂದರು.


(ಚಿತ್ರಕೃಪೆ: ದಿ ನ್ಯೂಸ್ ಮಿನಿಟ್)


ಸುಬಾಶ್ ಮಾತನಾಡುತ್ತಾ “ಕೆಲವೊಮ್ಮೆ ಮಂಗಮರಿಪೆಟಾದ ಮೀನುಗಾರರು ನಮ್ಮನ್ನು ತಮ್ಮ ದೋಣಿಗಳಲ್ಲಿ ಸಮುದ್ರಕ್ಕೆ ಕರೆದೊಯ್ಯುವ ಮೂಲಕ ಸಹಾಯ ಮಾಡುತ್ತಾರೆ. ನಾವು ಅವರಿಗೆ ಮೂಲ ಮೊತ್ತವನ್ನು ಪಾವತಿಸುತ್ತೇವೆ. ಇದು ಸ್ವಯಂಪ್ರೇರಿತ ಉದ್ಯಮವಾಗಿರುವುದರಿಂದ, ನಾವು ವೆಚ್ಚವನ್ನು ನಮ್ಮಿಂದಲೇ ನಿರ್ವಹಿಸಬೇಕು ಮತ್ತು ನಮ್ಮ ಉದ್ಯೋಗಗಳೊಂದಿಗೆ ಈ ಉಪಕ್ರಮವನ್ನು ಕಣ್ಕಟ್ಟು ಮಾಡಬೇಕು” ವರದಿ ದಿ ನ್ಯೂಸ್ ಮಿನಿಟ್.


ಗುಂಪಿನ ಪ್ರಕಾರ, ರುಶಿಕೊಂಡಾ ಬೀಚ್ ಅನ್ನು ಸ್ವಚ್ಛಗೊಳಿಸಲು ಸಮುದ್ರದ ಕೆಳಗೆ ಇರುವ ಕಸದ ಪ್ರಮಾಣವನ್ನು ಪರಿಗಣಿಸಿ ಸುಮಾರು ಮೂರು ತಿಂಗಳು ತೆಗೆದುಕೊಳ್ಳುತ್ತದೆ. ನಂತರ, ಆರ್‌ಕೆ ಬೀಚ್ ಕಡೆಯ ಕರಾವಳಿಯನ್ನು ಸ್ವಚ್ಛಗೊಳಿಸಲು ಗುಂಪು ಉದ್ದೇಶಿಸಿದೆ.


ಮುಂದುವರೆದು, ಸುಭಾಷ್,


"ನಾವು ಕನಿಷ್ಟ ಮೂರು ಅಥವಾ ನಾಲ್ಕು ಜನರ ವಿಶೇಷ ತಂಡವನ್ನು ಮಾಡುತ್ತೇವೆ, ಅವರು ದಿನಕ್ಕೆ ಕನಿಷ್ಠ ಎರಡು ಗಂಟೆಗಳಾದರೂ ಸ್ವಚ್ಛಗೊಳಿಸಲು ಮೀಸಲಿಡಬಹುದು. ಇದಕ್ಕಾಗಿ ಸ್ಥಳೀಯ ಮೀನುಗಾರರಿಗೆ ತರಬೇತಿ ನೀಡಲು ನಾವು ಬಯಸುತ್ತೇವೆ” ಎಂದು ಹೇಳಿದರು, ವರದಿ ದಿ ಲಾಜಿಕಲ್ ಇಂಡಿಯನ್.