ಹಳೆ ಬಾವಿಗಳನ್ನು ಪುನಶ್ಚೇತನಗೊಳಿಸಿ, ಬತ್ತಿರುವ ಸೆಲೆಗಳಿಗೆ ಮರುಜೀವ ನೀಡುವ ಮೂಲಕ ನಗರವನ್ನು ನೀರಿನ ಬಿಕ್ಕಟ್ಟಿನಿಂದ ಪಾರು ಮಾಡುತ್ತಿದ್ದಾರೆ ಬೆಂಗಳೂರಿನ ಈ ಚಳುವಳಿಗಾರ.

ವಿಶ್ವನಾಥ ಶ್ರೀಕಾಂತಯ್ಯನವರು ಕಬ್ಬನ್ ಪಾರ್ಕ್ ನಲ್ಲಿರುವ ಹಳೆ ಬಾವಿಗಳನ್ನು ಪುನಶ್ಚೇತನಗೊಳಿಸಿದ್ದಾರೆ. ಅವೀಗ ದಿನಕ್ಕೆ 65 ಸಾವಿರದಿಂದ ದಿಂದ 1 ಲಕ್ಷ ಲೀಟರ್ ನಷ್ಟು ನೀರನ್ನು ನೀಡುತ್ತಿವೆ.

ಹಳೆ ಬಾವಿಗಳನ್ನು ಪುನಶ್ಚೇತನಗೊಳಿಸಿ, ಬತ್ತಿರುವ ಸೆಲೆಗಳಿಗೆ ಮರುಜೀವ ನೀಡುವ ಮೂಲಕ ನಗರವನ್ನು ನೀರಿನ ಬಿಕ್ಕಟ್ಟಿನಿಂದ ಪಾರು ಮಾಡುತ್ತಿದ್ದಾರೆ ಬೆಂಗಳೂರಿನ ಈ ಚಳುವಳಿಗಾರ.

Saturday July 13, 2019,

2 min Read

ನೀತಿ ಆಯೋಗದ ವರದಿಯ ಪ್ರಕಾರ, 2020 ರ ಹೊತ್ತಿಗೆ ನೀರಿನ ಅಭಾವವಿರುವ ಮೆಟ್ರೊ ಸಿಟಿಗಳಲ್ಲಿ ಬೆಂಗಳೂರು ಒಂದಾಗಿರುತ್ತದೆ.


ಈ ವರದಿ ಮಾನವನ ಮೀತಿಮಿರಿದ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆಗೆ ಹಿಡಿದ ಕನ್ನಡಿಯಾಗಿದೆ. ಇಷ್ಟಾದರೂ ರಾಜ್ಯ ಸರ್ಕಾರವಾಗಲಿ ನಗರದ ನಾಗರೀಕರಾಗಲಿ ಉಳಿದಿರುವ ಜಲ ಮೂಲಗಳನ್ನು ಉಳಿಸಿಕೊಳ್ಳುವತ್ತ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲದಿರುವುದು ವಿಪರ್ಯಾಸವೇ ಸರಿ.


ಇಂತಹ ಪರಿಸ್ಥಿತಿಯಲ್ಲಿ, ಬೆಂಗಳೂರಿನ ಈ ಜಲ ಚಳುವಳಿಗಾರ ಮತ್ತು ನಗರ ಯೋಜಕ ವಿಶ್ವನಾಥ ಶ್ರೀಕಾಂತಯ್ಯ, ನಗರಕ್ಕೆ ಬರಲಿರುವ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಹೊಸ ಉಪಾಯವನ್ನು ಕಂಡುಕೊಂಡಿದ್ದಾರೆ.


Vishwanth

ಜಲ ಚಳುವಳಿಗಾರ ಮತ್ತು ನಗರ ಯೋಜಕ ವಿಶ್ವನಾಥ ಶ್ರೀಕಾಂತಯ್ಯ (ಚಿತ್ರ ಕೃಪೆ: ದಿ ಸ್ಟ್ರೇಟ್ ಟೈಮ್ಸ್)


ಸ್ಥಳಿಯ ಸಂಘಟನೆಗಳೊಂದಿಗೆ ಕೈಜೋಡಿಸಿ, 55 ವರ್ಷ ವಯಸ್ಸಿನ ವಿಶ್ವನಾಥ, ಬಾವಿ ತೋಡುವವರ ಸಹಾಯದಿಂದ ಈಗಾಗಲೇ ನಗರದ 10 ಸಾವಿರ ಬಾವಿಗಳನ್ನು ಸಕ್ರೀಯಗೊಳಿಸಿದ್ದಾರೆ. ಅದಲ್ಲದೆ ನಗರ ಮಟ್ಟದ ಸುಮಾರು 1 ಲಕ್ಷ ಬಾವಿಗಳನ್ನು ಅಭಿವೃದ್ಧಿಗೊಳಿಸಿದ್ದಾರೆ ಮತ್ತು ಅತೀ ಶೀಘ್ರದಲ್ಲಿ 10 ಲಕ್ಷ ಬಾವಿಗಳನ್ನು ಅಭಿವೃದ್ಧಿಗೊಳಿಸುವ ಗುರಿ ಇಟ್ಟುಕೊಂಡಿದ್ದಾರೆ.

                                                                                               

ದಿ ಲಾಜಿಕಲ್ ಇಂಡಿಯನ್ ನೊಂದಿಗೆ ಮಾತನಾಡುತ್ತ, ಹೀಗೆ ಹೇಳಿದರು,

“ಈ ಇಂಗುಗುಂಡಿಗಳು ಛಾವಣಿ ಮಳೆನೀರನ್ನು ಶೇಖರಿಸಿ ಜಲಮೂಲಗಳಿಗೆ ಸಾಗಿಸಿ, ಅಂತರ್ಜಲದ ಕ್ಷಮತೆಯನ್ನು ಹೆಚ್ಚಿಸುತ್ತವೆ. ಅಷ್ಟಲ್ಲದೇ ಈ ಯೋಜನೆಯಿಂದ ಪಾರಂಪರಿಕವಾಗಿ ಬಾವಿ ತೋಡುತ್ತ ಬಂದಿರುವವರಿಗೂ ಒಳ್ಳೆಯ  ಜೀವನ ನಡೆಸಲು ಅವಕಾಶ ಕಲ್ಪಿಸಿದಂತಾಗುತ್ತದೆ.”

ಕರ್ನಾಟಕದೆಲ್ಲೆಡೆ ಹಲವಾರು ಮನೆ ಮತ್ತು ಕೈಗಾರಿಕೆಗಳಿಗೆ ಛಾವಣಿ ಮಳೆನೀರು ಕೊಯ್ಲನ್ನು ವಿನ್ಯಾಸಗೊಳಿಸಿದ ಕೀರ್ತಿ ವಿಶ್ವನಾಥರಿಗೆ ಸಲ್ಲುತ್ತದೆ. ಅದಲ್ಲದೆ 1995 ರಿಂದ ಇವರು ರೈನ್ ವಾಟರ್ ಕ್ಲಬ್ ನ ಸಕ್ರೀಯ ಸದಸ್ಯರಾಗಿರುತ್ತಾರೆ.


ಜಲ ಸಂರಕ್ಷಣೆಯ ಬಗ್ಗೆ ಕೇಳಿದಾಗ, ಅವರು


“ಪ್ರತಿ ಚದರ ಮೀಟರನ ಛಾವಣಿಯ ಜಾಗಕ್ಕೆ, 20 ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯವಿರುವ ಇಂಗುಗುಂಡಿಗಳಿರಬೇಕು. ಮತ್ತು ಪ್ರತಿ ಚದರ ಮೀಟರ್ ಕಟ್ಟಡದ ಸುತ್ತಲಿನ ಸುಸಜ್ಜಿತ ಜಾಗಕ್ಕೆ 10 ಲೀಟರ್ ನೀರು ಸಂಗ್ರಹಣ ಸಾಮರ್ಥ್ಯವಿರುವ ಇಂಗುಗುಂಡಿಗಳನ್ನು ನಿರ್ಮಿಸಬೇಕು. ಇವುಗಳ ಆಳ ಕನಿಷ್ಟ 10 ಅಡಿಯಾಗಿರಬೇಕು.”


ಮೇಲೆ ಸಂಬಂಧ ಪಟ್ಟಂತೆ, ಅವರು ಮಳೆನೀರನ್ನು ಶುದ್ಧಗೊಳಿಸುವ ವರುನ ಎನ್ನುವ ಪಿಲ್ಟರ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ವಿಶ್ವನಾಥ ಅವರು ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿರುವ ಕೆಲವು ಬಾವಿಗಳನ್ನು ಪುನಶ್ಚೆತನಗೊಳಿಸಿದ್ದಾರೆ. ಇದರ ಬಗ್ಗೆ ಮಾತನಾಡುವಾಗ ಅವರು ಹೀಗೆ ಹೇಳುತ್ತಾರೆ,


“ನಾವು ಕರಗದಬಾವಿಗಳೆಂದು ಕರೆಯುವ 7 ಬಾವಿಗಳನ್ನು ಗುರುತಿಸಿದೆವು .ಇವು ನಗರದ ಅತೀ ಹಳೆಯ ಬಾವಿಗಳು, ಇಲ್ಲಿಂದಲೆ ಊರ ಹಬ್ಬ ಕರಗ ಶುರುವಾಗುತ್ತದೆ. ಪಾರಂಪರಿಕ ಬಾವಿ ತೋಡುವವರ ಸಹಾಯದಿಂದ ನಾವು ಇವುಗಳಿಗೆ ಪುನರ್ಜೀವ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಈ ಬಾವಿಗಳು ಈಗ ಉದ್ಯಾನ ವನಕ್ಕೆ ದಿನಕ್ಕೆ 65,000 ದಿಂದ 1,00,000 ಲೀಟರ್ ನೀರು ನೀಡುತ್ತಿವೆ. ಈ ಕೆಲಸದಲ್ಲಿ ನಾಗರೀಕರು ಸಹ ಪಾಲ್ಗೊಂಡಿದ್ದಾರೆ. ಇದಕ್ಕಾಗಿ ಇಂಡಿಯಾ ಕೆರಸ್ ಸಂಸ್ಥೆಯು ಪ್ರೆಂಡ್ಸ್ ಆಪ್ ಲೆಕ್ ಗುಂಪಿನೊಂದಿಗೆ ಸೇರಿ ಹಣವನ್ನು ನೀಡಿದೆ.” ದಿ ಸ್ಟ್ರೆಟ್ಸ್ ಟೈಮ್ಸ್ ನ ವರದಿ.


ನೀರಿನ ಬಿಕ್ಕಟ್ಟಿನಲ್ಲಿರುವ ಬೆಂಗಳೂರಿಗೆ, ಜಲ ಸಂರಕ್ಷಣೆಗೆ ಬೇಕಾದ ಅಗತ್ಯ ಕ್ರಮಗಳನ್ನು ಬಹು ಬೇಗನೆ ಚಾಲ್ತಿಗೆ ತರಬೇಕಾದ ಅವಶ್ಯಕತೆ ಒದಗಿಬಂದಿದೆ.

“ಪ್ರಸ್ತುತ ನೀರಿನ ಬಿಕ್ಕಟ್ಟನಲ್ಲಿ, ಜಲಮೂಲಗಳನ್ನು ಪುನಶ್ಚೇತನಗೊಳಿಸುವುದು, ಕಡಿಮೆ ನೀರು ಕುಡಿಯುವ ಬೆಳೆಗಳನ್ನು ಬೆಳೆಯುವುದು ಮತ್ತು ಬಳಸಿದ ನೀರನ್ನು ಮರುಬಳಕೆ ಮಾಡುವುದು, ಈ ಮಾರ್ಗಗಳಿಂದ ಮುಂಬರುವ ಸಮಸ್ಯೆಗಳನ್ನು ಪುನರಾವರ್ತನೆಯಾಗದಂತೆ ತಡೆಯಬಹುದು” ಎಂದು ಡಾ. ವಿಶ್ವನಾಥರು ದಿ ಲಾಜಿಕಲ್ ಇಂಡಿಯನ್ ಗೆ ಹೀಗೆ ಹೇಳಿದರು.