ಭಾರತದ ಮತ್ತೊಂದು ಕೋವಿಡ್‌-19 ಲಸಿಕೆ ಝೈಕೋವ್‌-ಡಿ: ಮಾನವರ ಮೇಲೆ ಪ್ರಯೋಗಕ್ಕೆ ಅನುಮತಿ

ಇಲಿ, ಮೊಲ ಮತ್ತು ಗಿಲಿಯನಗಳಂತಹ ಪ್ರಾಣಿಗಳ ಮೇಲೆ ಕೈಗೊಂಡ ಪರೀಕ್ಷೆಯಲ್ಲಿ ಝೈಕೋವ್‌-ಡಿ ಲಸಿಕೆ ಬಲವಾದ ರೋಗನಿರೋಧಕತೆಯನ್ನು ತೋರಿಸಿದೆ.

ಭಾರತದ ಮತ್ತೊಂದು ಕೋವಿಡ್‌-19 ಲಸಿಕೆ ಝೈಕೋವ್‌-ಡಿ: ಮಾನವರ ಮೇಲೆ ಪ್ರಯೋಗಕ್ಕೆ ಅನುಮತಿ

Friday July 03, 2020,

1 min Read

ಝೈಡಸ್‌ ಕ್ಯಾಡಿಲಾ ಸಂಸ್ಥೆಯ ಅಭಿವೃದ್ಧಿಪಡಿಸಿರುವ ದೇಶಿಯ ಕೋವಿಡ್‌-19 ಲಸಿಕೆಯಾದ ಝೈಕೋವ್‌-ಡಿ ಕ್ಲಿನಿಕಲ್‌ ಟ್ರಯಲ್‌ನ ಹಿಂದಿನ ಪರೀಕ್ಷೆಗಳನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದ್ದು, ಈಗ ಮಾನವರ ಮೇಲೆ ಲಸಿಕೆ ಪ್ರಯೋಗ ಮಾಡುವುದಕ್ಕೆ ಅಧಿಕೃತ ಭಾರತೀಯ ಪ್ರಾಧಿಕಾರಗಳಿಂದ ಅನುಮತಿ ದೊರೆತಿದೆ ಎಂದು ತಿಳಿಸಿದೆ.


“ಝೈಡಸ್‌ ಆಗಲೆ ಲಸಿಕೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಮುಂದಿನ ತಿಂಗಳಿನಲ್ಲಿ (ಜುಲೈ 2020) ವಿವಿಧ ರಾಜ್ಯಗಳ ಒಟ್ಟು 1,000 ಕಡೆ ಪ್ರಯೋಗಿಸಲಿದೆ,” ಎಂದು ಕಂಪನಿ ಹೇಳಿದೆ.


ಅಹಮದಾಬಾದ್‌ನ ಲಸಿಕಾ ತಂತ್ರಜ್ಞಾನ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿರುವ ಝೈಕೋವ್‌-ಡಿ ಲಸಿಕೆಗೆ ಮಾನವರ ಮೇಲಿನ ಪ್ರಯೋಗದ 1 ಮತ್ತು ೨ನೇ ಹಂತಕ್ಕೆ ಈಗ ಡಿಸಿಜಿಐ ಮತ್ತು ಸಿಡಿಎಸ್‌ಸಿಒನಿಂದ ಅನುಮತಿ ದೊರಕಿದೆ ಎಂದು ಕಂಪನಿ ಹೇಳಿಕೊಂಡಿದೆ.


ಇಲಿ, ಮೊಲ ಮತ್ತು ಗಿಲಿಯನಗಳಂತಹ ಪ್ರಾಣಿಗಳ ಮೇಲೆ ಕೈಗೊಂಡ ಪರೀಕ್ಷೆಯಲ್ಲಿ ಲಸಿಕೆ ಬಲವಾದ ರೋಗನಿರೋಧಕತೆಯನ್ನು ತೋರಿಸಿದೆ. ಲಸಿಕೆಯಿಂದ ಉತ್ಪತ್ತಿಯಾಗುವ ಪ್ರತಿಕಾಯಗಳು ವೈರಸ್ ತಟಸ್ಥೀಕರಣ ವಿಶ್ಲೇಷಣೆಯಲ್ಲಿ ವೈರಸ್ ಅನ್ನು ಸಂಪೂರ್ಣವಾಗಿ ತಟಸ್ಥಗೊಳಿಸಲು ಸಮರ್ಥವಾಗಿವೆ, ಇದು ಲಸಿಕೆ ರಕ್ಷಣಾತ್ಮಕ ಸಾಮರ್ಥ್ಯವನ್ನು ಸೂಚಿಸುತ್ತದೆ ಎಂದು ಅದು ಹೇಳಿದೆ.


ಲಸಿಕೆಯ ಪುನಾರಾವರ್ತನೆಗೊಳಿಸಿದಾಗಲೂ ಯಾವುದೇ ತರಹದ ಸುರಕ್ಷತೆ ಸಮಸ್ಯೆ ಎದುರಾಗಿಲ್ಲ. ಮಾನವನಿಗೆ ನೀಡುವ ಲಸಿಕೆ ಪ್ರಮಾಣಕ್ಕಿಂತ ೩ ಪಟ್ಟು ಹೆಚ್ಚು ಲಸಿಕೆಯನ್ನು ಮೊಲಗಳಿಗೆ ನೀಡಿದಾಗಲೂ ಯಾವುದೇ ತರಹದ ಸಮಸ್ಯೆ ಕಂಡುಬಂದಿಲ್ಲ ಎಂದು ತಿಳಿಸಿಲಾಗಿದೆ.


ಅಲ್ಲದೆ ಝೈಕೋವ್‌-ಡಿ ಯೊಂದಿಗೆ ಝೈಡಸ್‌ ಭಾರತದಲ್ಲಿ ಡಿಎನ್‌ಎ ವ್ಯಾಕ್ಸಿನ್‌ ಪ್ಲಾಟ್‌ಫಾರ್ಮ್‌ ಅನ್ನು ಸೃಷ್ಟಿಸಿದೆ.


ಹೆಚ್ಚು ಸುಧಾರಿತ ಲಸಿಕೆ ಸ್ಥಿರತೆ ಮತ್ತು ಕಡಿಮೆ ಶೀತಲ ಸರಪಳಿ ಅವಶ್ಯಕತೆಗಳನ್ನು ಹೊಂದಿದ್ದು, ಇದರಿಂದಾಗಿ ದೇಶದ ದೂರದ ಭಾಗಗಳಿಗೆ ಸಾಗಿಸಲು ಸುಲಭವಾಗುತ್ತದೆ ಎಂದು ತಿಳಿಸಿದೆ.


"ಇದಲ್ಲದೆ, ವೈರಸ್ ರೂಪಾಂತರಗೊಂಡಾಗಲೂ ಲಸಿಕೆ ರಕ್ಷಣೆ ಒದಗಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಒಂದೆರಡು ವಾರಗಳಲ್ಲಿ ಲಸಿಕೆಯನ್ನು ಮಾರ್ಪಡಿಸಲು ವೇದಿಕೆಯನ್ನು ವೇಗವಾಗಿ ಬಳಸಬಹುದು," ಎಂದು ಅದು ಹೇಳಿದೆ.

ಭಾರತೀಯ ಮತ್ತು ಜಾಗತಿಕ ಬೇಡಿಕೆಯನ್ನು ಪೂರೈಸಲು ಅನೇಕ ತಾಣಗಳು ಮತ್ತು ಸೌಲಭ್ಯಗಳಲ್ಲಿ ಝೈಕೋವ್-ಡಿ ಉತ್ಪಾದನಾ ಸಾಮರ್ಥ್ಯವನ್ನು ವೇಗವಾಗಿ ಹೆಚ್ಚಿಸಲು ಕಂಪನಿಯು ಈಗ ಉದ್ದೇಶಿಸಿದೆ.