ಬದುಕು ಅನ್ನುವುದು ಸುಲಭವಲ್ಲ. ಬದುಕಿನ ಬಗ್ಗೆ ಎಲ್ಲರಿಗೂ ಒಂದೊಂದು ಆಸೆಗಳಿರುತ್ತದೆ. ನೂರೆಂಟು ಕನಸುಗಳಿರುತ್ತವೆ. ಹೀಗೆ ಬಾಳಬೇಕು, ಹಾಗೆ ಬಾಳಬೇಕು ಅಂತ ಕನಸು ಕಟ್ಟಿಕೊಳ್ಳುವವರಿಗೆ ಕಡಿಮೆ ಇಲ್ಲ. ಬದುಕು ಚೆನ್ನಾಗಿರಬೇಕು ಅಂದರೆ, ಜೇಬಲ್ಲಿ ದುಡ್ಡಿರಬೇಕು. ಒಂದು ಒಳ್ಳೆಯ ಕೆಲಸವಿರಬೇಕು. ಬದುಕುವುದಕ್ಕೆ ಒಂದು ಒಳ್ಳೆಯ ಮನೆ ಇರಬೇಕು. ಇಷ್ಟೆಲ್ಲಾ ಇದ್ದರೆ ಜೀವನ ಚೆನ್ನಾಗಿರುತ್ತಾ? ಖಂಡಿತಾ ಇಲ್ಲ. ಒಳ್ಳೆಯ ಬಾಳ ಸಂಗಾತಿ ಇರಲೇಬೇಕು.
ಇವತ್ತು ಜಗತ್ತು ಬೆಳೆದಿದೆ. ನಾಗರೀಕತೆ ಬೆಳೆದಂತೆ, ಜೀವನ ಶೈಲಿಯೂ ಬದಲಾಗಿದೆ. ಒಬ್ಬೊಬ್ಬರದ್ದು ಒಂದೊಂದು ಕನಸು, ಒಂದೊಂದು ಆಸೆ. ಎಲ್ಲರಿಗೂ ಎಲ್ಲ ಆಸೆ ಈಡೇರುವುದಿಲ್ಲ. ಇಂದಿನ ಯಾಂತ್ರಿಕೃತ ಬದುಕಿನಲ್ಲಿ ಕೊರಗುವವರೇ ಹೆಚ್ಚು. ಪ್ರೀತಿಸುತ್ತಾರೆ-ಪ್ರೇಮಿಸುತ್ತಾರೆ, ತಂದೆ-ತಾಯಿ, ಹಿರಿಯರು ಹುಡುಕಿದ ಸಂಗಾತಿಗಳನ್ನು ಮದುವೆಯಾಗುತ್ತಾರೆ. ಆದರೆ, ಸ್ವಲ್ಪ ವರ್ಷಗಳು ಕಳೆಯುತ್ತಿದ್ದಂತೆ ಕೊರಗುತ್ತಾರೆ.
ದೇಶದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ವಿವಾಹದ ಬಗ್ಗೆ ಹಲವು ಬಗೆಯ ಕನಸು ಕಟ್ಟಿರುತ್ತಾರೆ. ಇನ್ನು ಸಂಬಂಧಿಕರು, ತಂದೆ-ತಾಯಿ ಸಹ ತಮ್ಮ ಮಕ್ಕಳ ಮದುವೆಯನ್ನು ಹೀಗೆ ಮಾಡಬೇಕು,ಹಾಗೆ ಮಾಡಬೇಕು ಅಂತಾ ಅಂದು ಕೊಂಡಿರುತ್ತಾರೆ. ಇದು ಸಾಧ್ಯವಾಗದಿದ್ದಾಗ ಪಶ್ಚಾತ್ತಾಪ ಪಡುತ್ತಾರೆ. ಆದರೆ, ಈ ಪಶ್ಚಾತ್ತಾಪ, ನೋವು, ಕೊರಗನ್ನು ದೂರ ಮಾಡುವ ಸಲುವಾಗಿಯೇ ಇದೆ ವಿಇಎಫ್ ಸರ್ವಿಸ್.
ಈ ಸೇವೆಯನ್ನು ಬಳಸಿಕೊಂಡವರು ಇಂದು ಸುಖಕರ ಜೀವನವಾಗಿ ಸಾಗಿಸುತ್ತಿದ್ದಾರೆ. ವಿಶಿಷ್ಠ, ವಿಭಿನ್ನ ಜೀವನ ಪದ್ಧತಿಯಲ್ಲೂ ವಧು-ವರರು ವೈವಾಹಿಕ ಬದುಕಿಗೆ ಕಾಲಿಟ್ಟು ಸುಖಕರ ಹಾಗೂ ಸಂತೋಷವಾಗಿ ಬದುಕು ಸಾಗಿಸುತ್ತಿದ್ದಾರೆ.
ಜೀವನದಲ್ಲಿ ಹಿಡಿದ ಕೆಲಸ ಸಾಧಿಸಿ. ಮಾಡುವ ವ್ಯಾಪಾರದಲ್ಲಿ ಲಾಭ ಗಳಿಸುತ್ತೀರಿ. ಇತರರಿಗಿಂತ ಮುಂಚಿತವಾಗಿ ಅಂದುಕೊಂಡ ಗುರಿ ತಲುಪುತ್ತೀರಾ. ಇನ್ನೇನು ತಮ್ಮದೇ ಅಂತ ಒಂದು ಮನೆ, ಮದುವೆ, ಮಕ್ಕಳು, ಕುಟುಂಬವನ್ನು ಹೊಂದಿವ ಕನಸು, ಚಿಗುರೊಡೆಯುತ್ತದೆ.
ಮದುವೆ ಮಾಡಿಕೊಳ್ಳುವ ವಧು ವರರಿಗೆ, ಹಾಗೂ ತಮ್ಮ ಮಕ್ಕಳಿಗೆ ವಿವಾಹ ಮಾಡಬೇಕು ಅಂತಾ ಬಯಸುವ ತಂದೆ-ತಾಯಿಗಳು ಹಲವು ಕನಸು ಕಟ್ಟುತ್ತಾರೆ. ಹೀಗೆ ಮದುವೆ ಮಾಡೋಕೆ ಜನರು ಯಾವ-ಯಾವ ರೀತಿ ತಯಾರಿ ನಡೆಸ್ತಾರೆ. ಏನೆಲ್ಲಾ ಸಿದ್ಧತೆಯಲ್ಲಿ ತೊಡಗ್ತಾರೆ ಅನ್ನೋದರ ಕುರಿತು ಕುಪಿಡ್ ಮುಖ್ಯಸ್ಥೆ ಅನುರಾಧ ಗುಪ್ತಾ ಸಮಗ್ರ ಅಧ್ಯಯನ ನಡೆಸಿದ್ದಾರೆ.
ಮದುವೆಯ ಕುರಿತು ವ್ಯಾಖ್ಯಾನ:
ಜೀವನದಲ್ಲಿ ನಾವು ಹಲವು ಮಂದಿಯನ್ನು ಭೇಟಿ ಮಾಡುತ್ತೇವೆ. ಕೆಲವರು ಸದಾಕಾಲ ನಮ್ಮೊಡನೆ ಇರಬೇಕು ಅಂತಾ ಮನಸ್ಸು ಬಯಸುತ್ತೆ. ಇನ್ನು ಕೆಲವರಿಗೆ ನೀವು ಸದಾ ಅವರ ಜೊತೆಗಿರಬೇಕು ಅನ್ನಿಸುತ್ತೆ. ಅದು ಥೇಟ್ ನಿಮ್ಮ ಕುಟುಂಬದವರಂತೆ. ಇನ್ನು ಮನಸ್ಸು ನಿಮ್ಮೊಡನೆ ಇರಬೇಕು ಅಂತಾ ಬಯಸೋರನ್ನ ಮದುವೆಯಾದಲ್ಲಿ ಜೀವನ ಸುಂದರವಾಗಲಿದೆ. ಅಂಥ ವ್ಯಕ್ತಿಗಳು ಬಾಳ ಸಂಗಾತಿಯಾಗಿ, ಸ್ನೇಹಿತರಂತೆ ಸದಾ ಜೊತೆಗಿರ್ತಾರೆ.
ಅನುರಾಧ ನೀಡಿದ ಮದುವೆಯ ವಾಖ್ಯಾನ
ಒಂದೇ ರೀತಿಯ ಆಸೆ, ಆಕಾಂಕ್ಷೆ, ರುಚಿ, ಅಭಿರುಚಿ, ತತ್ವ ಸಿದ್ದಾಂತ ಉಳ್ಳವರು ಒಂದಡೆ ಸೇರಿ ಬದುಕು ಕಟ್ಟಿಕೊಳ್ಳುವುದನ್ನೇ ವಿವಾಹ ಎಂದು ವಾಖ್ಯಾನಿಸಲಾಗಿದೆ. ಈ ಬಾಳ ಬಂಧನವನ್ನು ಅರ್ಥಪೂರ್ಣವಾಗಿ ಸಾಗಿಸುವ ಸಲುವಾಗಿಯೇ ಅಸ್ತಿತ್ವಕ್ಕೆ ಬಂದದ್ದು ಈ ವಿಇಎಫ್ ಸರ್ವೀಸ್.
ವಿಇಎಫ್ ಸರ್ವಿಸ್ ಕೇವಲ ನಾಮಮಾತ್ರಕ್ಕೆ ಇರೋದಲ್ಲ. ಮದುವೆಯಾಗಬೇಕು ಎನ್ನುವ ಅಭಿಲಾಷೆ ಹೊಂದಿದವರಿಗೆ ಖಂಡಿತವಾಗಿಯೂ ಸಹಾಯಕ್ಕೆ ಬರುತ್ತದೆ. ಅವರು ಅಂದುಕೊಂಡಿದ್ದನ್ನು ಪೂರೈಸುತ್ತದೆ. ಸಾರ್ಥಕ ಬದುಕು ಕಂಡುಕೊಳ್ಳಲು ಸಹಕರಿಸುತ್ತದೆ ಅನ್ನುತ್ತಾರೆ ಕುಪಿಡ್ ಮುಖ್ಯಸ್ಥೆ ಅನುರಾಧ ಗುಪ್ತಾ.
ಈ ವಿಇಎಫ್ ಸರ್ವೀಸ್ ಸಹಾಯ ಪಡೆದವರು ಬಹಳಷ್ಟು ಮಂದಿ ಇದ್ದಾರೆ. ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ. ಬಾಳ ಸಂಗಾತಿಗಳು ಸಿಕ್ಕಿದ್ದ ಸಂತಸವನ್ನು ತೋಡಿಕೊಂಡಿದ್ದಾರೆ. 32 ವರ್ಷಗಳವರೆಗೂ ನನಗೆ ಮದುವೆ ಆಗಿರಲಿಲ್ಲ. ಕೊನೆಗೆ ನಾನು ವಿವಾಹವಾಗಲು ನಿರ್ಧರಿಸಿದೆ. ಅದಕ್ಕಾಗಿ ವಧುವಿನ ಹುಡುಕಾಟದಲ್ಲಿ ತೊಡಗಿದೆ. ಇತ್ತ ನನ್ನ ಗೆಳೆಯರು ವಿವಾಹ ಆಗಲಿಕ್ಕೆಂದು ದಲ್ಲಾಳಿಗಳ ಮೊರೆ ಹೋದ್ರು. ಸಾಂಪ್ರದಾಯಿಕ ಹಾದಿಯಲ್ಲಿ ಮನೆ ಮನೆ ತಿರುಗಿ ವಧುಗಳ ಅನ್ವೇಷಣೆ ಮಾಡೋಕೆ ಶುರುವಿಟ್ಟುಕೊಂಡರು. ಆದ್ರೆ ನಾನು ಮಾತ್ರ ಗೆಳೆಯರ ಹಾದಿ ಹಿಡಿಯಲಿಲ್ಲ. ವಧುಗಳನ್ನು ಹುಡುಕೋಡು, ನೋಡಲು ಹೋದ ವಧುಗಳ ಬಳಿ ಸಂಗೀತ ಹಾಡುವಂತೆ ಕೇಳೋದು, ಇಂಥದನ್ನು ಮಾಡಲಿಲ್ಲ. ವಧುವಿನ ಹುಡುಕಾಟದಲ್ಲಿದ್ದ ನನ್ನ ಸಹಾಯಕ್ಕೆ ಬಂದಿದ್ದೇ ವಿಇಎಫ್ ಸರ್ವಿಸ್ ಅನ್ನುತ್ತಾರೆ ಗ್ರಾಹಕರು.
ವಿಇಎಫ್ ಸೇವೆಯನ್ನು ಪಡೆಯುವುದು ಸುಲಭವೇನಲ್ಲ. ಇದಕ್ಕೆ ಕೆಲವೊಂದು ಷರತ್ತುಗಳು ಹಾಗೂ ನಿಯಮಾವಳಿಗಳಿವೆ. ಈ ಷರತ್ತುಗಳನ್ನು ಪೂರೈಕೆ ಮಾಡಿದ ನಂತರವಷ್ಟೇ ಸದಸ್ಯತ್ವ ದೊರೆಕಲಿದೆ. ವಿಇಎಫ್ ಸೇವೆಯನ್ನು ಪಡೆಯುವ ಮುನ್ನ ಕೆಲವು ಷರತ್ತುಗಳಿಗೆ ಸದಸ್ಯರಾಗ ಬಯಸುವವರು ಬದ್ಧರಾಗಬೇಕಾಗುತ್ತದೆ. ಸೇವೆಯನ್ನು ಪಡೆಯಬೇಕಾದರೆ ಮೊದಲು ಸದಸ್ಯತ್ವ ಪಡೆದುಕೊಳ್ಳಬೇಕು. ಅದಕ್ಕಾಗಿ ಕ್ರಮವಾಗಿ ನಿರ್ದಿಷ್ಟ ಅರ್ಜಿಯನ್ನು ಭರ್ತಿ ಮಾಡಬೇಕು. ಇದರಿಂದ ತಮ್ಮ ಅಭಿರುಚಿಗೆ ತಕ್ಕದಾದ ಸಂಗಾತಿಯನ್ನ ಹುಡುಕಿಕೊಳ್ಳಲು ಸಹಾಯವಾಗುತ್ತದೆ.
ಇನ್ನು ಅರ್ಜಿಯಲ್ಲಿ ನಿರ್ದಿಷ್ಟ ಸ್ವವಿವರದ ಜೊತೆಗೆ ಅರ್ಜಿಯಲ್ಲಿರುವ 100 ಪ್ರಶ್ನೆಗಳಿಗೆ ಕಡ್ಡಾಯವಾಗಿ ಉತ್ತರ ನೀಡಲೇಬೇಕಾಗುತ್ತದೆ. ಈ ಪ್ರಶ್ನೆಗಳು ವೈಯಕ್ತಿಕ, ಆಸೆ, ಆಕಾಂಕ್ಷೆ, ಸಂಗಾತಿಯಾಗಲು ಬಯಸುವವರ ಕುರಿತು ಹೊಂದಿರುವ ಅಭಿವಾಷೆಗೆ ಸಂಬಂಧಿಸಿದ್ದಾಗಿರುತ್ತದೆ. ಅಭಿರುಚಿ, ಹವ್ಯಾಸ, ಕನಸುಗಳು, ಬದುಕು, ಬಯಕೆ ಎಲ್ಲ ವಿವರಗಳನ್ನು ಅರ್ಜಿ ಒಳಗೊಂಡಿರುತ್ತದೆ.
ಹೀಗೆ ಒಮ್ಮ ಸದಸ್ಯತ್ವ ಪಡೆದವರ ಭಾವನೆಗಳಿಗೆ, ಸೂಕ್ಷ್ಮತೆಗೆ ಹೊಂದಾಣಿಕೆ ಆಗುವಂತಹ ಜೋಡಿಯನ್ನು ಹುಡುಕಿ ಕೊಡುವಲ್ಲಿ ವಿಇಎಫ್ ಸಹಾಯ ಮಾಡುತ್ತದೆ. ಅಲ್ಲದೇ ಇಬ್ಬರ ಪ್ರೋಫೈಲ್‌ಗಳನ್ನು ಸಮಗ್ರವಾಗಿ ಪರಿಶೀಲಿಸಿ, ಶಿಕ್ಷಣ, ಆರ್ಥಿಕತೆ, ಸಾಮಾಜಿಕ ಅಂತಸ್ತಿನ ಸ್ಥಿತಿಗತಿಗಳನ್ನು ಸಮಗ್ರವಾಗಿ ಪರಿಶೀಲಿಸುತ್ತದೆ. ಇವೆಲ್ಲವೂ ಸೂಕ್ತವಾದ್ದಲ್ಲಿ, ಹೊಂದಾಣಿಕೆಯಾದ್ದಲ್ಲಿ ಮಾತ್ರ ಮುಂದಿನ ಹೆಜ್ಜೆಯನ್ನು ಇಡುತ್ತದೆ.
ಎರಡು ಗುಂಪುಗಳನ್ನು ಒಟ್ಟಿಗೆ ಸೇರಿಸುತ್ತದೆ. ವಧು-ವರರಿಗೆ ಪ್ರತ್ಯೇಕವಾಗಿ ಮಾತನಾಡುವ ಅವಕಾಶ ನೀಡುತ್ತದೆ. ಗುರು ಹಿರಿಯರು, ಸಂಬಂಧಿಕರು, ಆಪ್ತರು, ವಧು-ವರರು ಇಬ್ಬರನ್ನು ಒಪ್ಪಿಸುವ ಮೂಲಕ ವಿವಾಹ ಕಾರ್ಯವನ್ನು ಈ ಜಾಲ ತಾಣ ಪೂರೈಸಲಿದೆ..