ಸಿರಿಧಾನ್ಯಗಳ ಬೇಕರಿ ಈ"ಹನಿ ಕೆಫೆ"..!
ಟೀಮ್ ವೈ.ಎಸ್. ಕನ್ನಡ
ಸಿರಿಧಾನ್ಯಗಳ ಬಗ್ಗೆ ಒಂದು ಕಾಲದಲ್ಲಿ ಎಲ್ಲರಿಗೂ ಪರಿಚಯವಿತ್ತು. ಸಿರಿಧಾನ್ಯ ಇಲ್ಲದೆ ಮನೆಯಲ್ಲಿ ಮುಂಜಾನೆಯ ತಿಂಡಿ, ಸಂಜೆಯ ಸ್ನ್ಯಾಕ್ಸ್ ತಯಾರಾಗುತ್ತಿರಲಿಲ್ಲ. ಆ ಕಾಲದ ಮಾತು ಬಿಟ್ಟುಬಿಡಿ. ಯಾಕಂದ್ರೆ ಈಗ ಮತ್ತೆ ಸಿರಿಧಾನ್ಯಗಳ ಧ್ಯಾನ ಶುರುವಾಗಿದೆ. ಒಂದಷ್ಟು ವರ್ಷಗಳು ಕಳೆದ ನಂತರ ಮತ್ತದೆ ಹಳೆಯ ಸಮಯದ ನೆನಪು ಬರುತ್ತಿದೆ. ಸಿರಿಧಾನ್ಯಗಳ ಬಗ್ಗೆ ಜನರು ಜಾಗೃತರಾಗಿದ್ದಾರೆ. ನಾಲಿಗೆಗೆ ರುಚಿ ಸಿಗದೆ ಇದ್ದರೂ ಪರವಾಗಿಲ್ಲ ಆರೋಗ್ಯ ಮುಖ್ಯ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಸಿರಿಧಾನ್ಯವನ್ನ ಖುದ್ದು ಸರ್ಕಾರವೇ ಪ್ರಚಾರ ಮಾಡಲು ಮುಂದಾಗಿದೆ. ಹಾಗಾದ್ರೆ ಸಿರಿಧಾನ್ಯವನ್ನ ಹೇಗೆಲ್ಲಾ ಬಳಕೆ ಮಾಡಿಕೊಳ್ಳಬಹುದು. ಅದರಲ್ಲೂ ರುಚಿ ರುಚಿ ತಿಂಡಿ ತಿನ್ನಬಹುದಾ ಅನ್ನೋರಿಗೆ ಇಲ್ಲೊಂದು ಬೆಸ್ಟ್ ಉದಾರಣೆ ಇದೆ.
ಸಿಲಿಕಾನ್ ಸಿಟಿಯಲ್ಲೊಂದು ಬೇಕರಿ ಶುರುವಾಗಿದೆ. ಅಯ್ಯೋ ಬೆಂಗಳೂರಿನಲ್ಲಿ ಸಾವಿರ ಬೇಕರಿ ಇದೆ ಅದರಲ್ಲೇನು ಸ್ಪೆಷಲ್ ಅಂತೀರಾ. ಇದು ನಿಜಕ್ಕೂ ಸ್ಪೆಷಲ್. ಯಾಕಂದ್ರೆ ಇದು ಸಿರಿಧಾನ್ಯಗಳಲ್ಲಿ ಮಾಡುವ ತಿಂಡಿ ಸಿಗುವ ಬೇಕರಿ. ಬೆಂಗಳೂರಿನ ಸಿರಿಧಾನ್ಯದ ಮೊದಲ ಬೇಕಾರಿ ಇದಾಗಿದ್ದು ಇಲ್ಲಿ ನೋ ಶೂಗರ್, ನೋ ಮೈದಾ ಬಳಕೆ ಇರಲಿದೆ. “ಹನಿ ಕೆಫೆ” ಅನ್ನೋ ಹೆಸರಿನಲ್ಲಿ ಆರಂಭವಾಗಿರುವ ಈ ಬೇಕರಿ ಚಂದ್ರಲೇಔಟ್ ನಲ್ಲಿದೆ.
"ಹನಿ ಕೆಫೆ"ಯಲ್ಲಿ ಸಿಗುವುದೆಲ್ಲವೂ ನಾಲಿಗೆಗೂ,ಆರೋಗ್ಯಕ್ಕೂ ಹಿತಕರ. ಇದನ್ನ ಆರಂಭ ಮಾಡಿದವರು ಶೋಭಾ ಸತೀಶ್. ಅಡುಗೆ ಮಾಡುವುದರಲ್ಲಿ ಆಸಕ್ತಿ ಇದ್ದ ಇವರು ಜನರ ಅಭಿರುಚಿ ಮತ್ತು ನಾಲಿಗೆ ರುಚಿಯನ್ನ ತಿಳಿದು ಈ ಬೇಕರಿ ಆರಂಭ ಮಾಡಿದ್ದಾರೆ. ಇವರಿಗೆ ಸಾಥ್ ನೀಡಿದ್ದು ಬಾಣಸಿಗ ಸುರೇಶ್ ನಾಯ್ಕ. ಕರ್ನಾಟಕದ ಸಾಂಪ್ರದಾಯಿಕ ಅಡುಗೆ ತಯಾರಿಕಾ ವಿಧಾನಗಳನ್ನು ಬಳಸಿ ಸಿರಿಧಾನ್ಯ ತಿಂಡಿಗಳನ್ನು ಇಲ್ಲಿ ಮಾಡಲಾಗುತ್ತೆ. ಶುದ್ಧ ಆಲಿವ್ ಎಣ್ಣೆಯನ್ನ ಬಳಸಿ ತಿಂಡಿ ತಯಾರು ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಇಲ್ಲಿ ಅಡುಗೆ ಮಾಡುವುದನ್ನ ಲೈವ್ ಆಗಿ ನೋಡುವ ಅವಕಾಶ ಕೂಡ ಇದೆ.
ಏನೆಲ್ಲಾ ಲಭ್ಯ..?
ನೈಸರ್ಗಿಕವಾದ ಈ ಪಿಜ್ಹಾ ತಿನ್ನಲು ಬಲು ರುಚಿ. ಆರೆಂಜ್, ಮ್ಯಾಂಗೋ, ಬಟರ್ ಸ್ಕಾಚ್, ಕಾಫಿ ಮುಂತಾದ ಹತ್ತು ಬಗೆಯ ಪೇಸ್ಟ್ರಿಗಳು, ಇಟಾಲಿಯನ್, ಸ್ಪೈಸಿ, ಸ್ವಿಸ್ ಗ್ರಿಲ್, ಮೆಕ್ಸಿಕನ್ ಇನ್ನೂ ಹತ್ತು ಬಗೆಯ ಸ್ಯಾಂಡ್ವಿಚ್ಗಳು, ಆ್ಯಪಲ್ ಸಿನಾಮನ್, ಬೀಟ್ರೂಟ್ ಬ್ರೌನಿ, ಪಿಜ್ಜಾ ಐಸ್ಕ್ರೀಮ್ನಂತಹ ಹತ್ತು ಹಲವು ಡೆಸರ್ಟ್ಗಳು, ಪರಾಟಾ ರೋಲ್ಗಳು ಇಲ್ಲಿನ ಮೆನುನಲ್ಲಿ ನಿಮ್ಮ ಆಯ್ಕೆಗೆ ಲಭ್ಯ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಆರಿಸಿದ ತಿನಿಸು ಹೇಗಿರಬೇಕೆಂದು ಬೇಡಿಕೆ ಸಲ್ಲಿಸಬಹುದು. ಅದರಂತೆಯೇ ತಯಾರಿಸಿ ಕೊಡುತ್ತಾರೆ.ಇದಷ್ಟೇ ಅಲ್ಲದೆ ತುಳಸೀ ಟೀ, ಹರ್ಬಲ್ ಟೀ, ಲೆಮನ್ ಗ್ರಾಸ್ ಟೀ ಇಲ್ಲಿ ಲಭ್ಯವಿದೆ. ಹಣ್ಣಿನ ಪೇಯಗಳಲ್ಲಿ ವೀಟಾ ಸಿ ಬ್ಲೆಂಡ್ ಜ್ಯೂಸ್, ಕ್ಯಾರೆಟ್, ಬೀಟ್ರೂಟ್, ಟೊಮೆಟೋ ಸೇರಿದಂತೆ ವೈವಿಧ್ಯಮಯ ಹಣ್ಣು-ತರಕಾರಿಗಳ ಪೇಯ ಇಲ್ಲಿ ಸಿಗುತ್ತವೆ. ಆನ್ಲೈನ್ ಡೆಲಿವರಿ ಸೌಲಭ್ಯ ಕೂಡಾ ಇರುವುದರಿಂದ ಮನೆ ಬಾಗಿಲಿಗೇ "ಹನಿ ಕೆಫೆ"ಯ ತಿನಿಸುಗಳನ್ನು ತರಿಸಿಕೊಳ್ಳಬಹುದು.
" ನಮ್ಮಲ್ಲಿ ಯಾವುದೇ ಕಾರಣಕ್ಕೂ ಮೈದಾ ಬಳಸುವುದಿಲ್ಲ. ಅದನ್ನು ಬಳಸದೇ ಬೇರೆ ಕಡೆಗಿಂತಲೂ ರುಚಿಯಾಗಿ ವೀಟ್ ಮತ್ತು ಮಿಲ್ಲೆಟ್ಗಳನ್ನು ಬಳಸಿ ತಿನಿಸುಗಳನ್ನು ತಯಾರಿಸುತ್ತೇವೆ. ನನ್ನ ಪತಿಯವರ ಸಹಕಾರ ನನಗೆ ತುಂಬಾ ಇದೆ. ಕಾಲೇಜು ಸ್ಟೂಡೆಂಟ್ಸ್ ಮತ್ತು ಗೃಹಿಣಿಯರಿಂದ ಸಾಕಷ್ಟು ಬೇಡಿಕೆಗಳು ಬರುತ್ತಿವೆ.
- ಶೋಭಾ ಸತೀಶ್, ಹನಿಕೆಫೆ ಸಂಸ್ಥಾಪಕಿ
ನಾಲಿಗೆಗೆ ರುಚಿಸುವುದು ಆರೋಗ್ಯಕ್ಕೆ ಮಾರಕ, ಯಾವುದು ನಾಲಿಗೆಗೆ ರುಚಿಸುವುದಿಲ್ಲವೋ ಅದು ಆರೋಗ್ಯಕ್ಕೆಒಳ್ಳೆಯದು ಎನ್ನುವ ನಿಯಮ ಈ ಕೆಫೆಗೆ ಅನ್ವಯವಾಗುವುದಿಲ್ಲ. ಪೇಸ್ಟ್ರಿ, ಪಿಜ್ಜಾ, ಬರ್ಗರ್, ವೆಜ್ ರೋಲ್ಸ್ ಇದನ್ನೆಲ್ಲಾ ಕೇಳಿ ನಿಮ್ಮಲ್ಲಿ ಹಲವರಿಗೆ ಬಾಯಲ್ಲಿ ನೀರು ಬಂದಿರಲೇಬೇಕು. ನಾಲಿಗೆಗೆ ರುಚಿಕರವೆನಿಸುವ ತಿಂಡಿ ತಿನಿಸುಗಳನ್ನು ತಿನ್ನುವ ಮಂದಿ ತಮಗೆ ತಾವೇ ಒಂದು ಅಲಿಖಿತ ಷರತ್ತುಗಳನ್ನು ಸಾಮಾನ್ಯವಾಗಿ ಹಾಕಿಕೊಂಡಿರುತ್ತಾರೆ. ಅದೇನಪ್ಪಾ ಅಂದರೆ ನಾಲಿಗೆಗೆ ಹಿತವೆನಿಸುವ ತಿಂಡಿಯನ್ನು ಹೇಗೆ ತಯಾರಿಸುತ್ತಾರೆ, ಏನೆಲ್ಲಾ ಸಾಮಗ್ರಿಗಳನ್ನು ಬಳಸಿ ತಯಾರಿಸುತ್ತಾರೆ, ಅದು ಆರೋಗ್ಯಕ್ಕೆ ಒಳ್ಳೆಯದೇ, ಕೆಟ್ಟದ್ದೇ? ಎಂಬಿತ್ಯಾದಿ ಚಿಂತನೆಗಳನ್ನು ಇದೊಂದು ಸಲಕ್ಕೆ ಪಕ್ಕಕ್ಕೆ ಇಡಬೇಕೆಂಬುದೇ ಆ ಷರತ್ತು. ಆಮೇಲೆಯೇ ಅವರು ನಿಶ್ಚಿಂತರಾಗಿ ಕೇಕ್, ಪಿಜ್ಜಾ, ರೋಲ್ಸ್ ಇಂತಹ ಅನೇಕ ತಿನಿಸುಗಳನ್ನು ನಿಶ್ಚಿಂತರಾಗಿ ಸವಿಯುವುದು. ಇದು ನಾಲಿಗೆಗೆ ಸೋತ ಆಹಾರಪ್ರಿಯರು ಮಾಡಿಕೊಳ್ಳುವ ಕಾಂಪ್ರಮೈಸ್. ಆ ತಿನಿಸುಗಳು ಆರೋಗ್ಯಕ್ಕೆ ಕೆಟ್ಟದ್ದೇ ಆಗಿದ್ದರೂ ಒಂದು ಸಲ ತಾನೇ ಎಂದು ತಮ್ಮನ್ನು ತಾವುಸಂತೈಸಿಕೊಳ್ಳುವರು.
"ಹನಿಕೆಫೆ"ಯ ಕೌಂಟರ್ ಬಳಿ ನಿಂತರೆ ಚಿಮಣಿ ಒಲೆಯೊಂದು ಕಾಣುತ್ತದೆ. ಗ್ರಾಹಕರು ಕೆಫೆಯ ವಿಶೇಷ ತಿನಿಸುಗಳಲ್ಲೊಂದಾದ ಮಿಲ್ಲೆಟ್(ನವಣೆ)ಪಿಜ್ಜಾ ತಯಾರಿಕೆಯನ್ನು ಲೈವ್ ಆಗಿ ನೋಡಬಹುದು. ನೈಸರ್ಗಿಕವಾದ ಈ ಪಿಜ್ಜಾ ತಿನ್ನಲು ಬಲು ರುಚಿ. ಒಟ್ಟಿನಲ್ಲಿ ಒಂದು ಸಾರಿ ಸಿರಿಧಾನ್ಯಗಳ ಆಹಾರಗಳನ್ನು ಸೇವಿಸಿದರೆ ಮತ್ತೊಮ್ಮೆ ಅದನ್ನೇ ಬಳಸಿಕೊಳ್ಳೋಣ ಅನ್ನುವ ಯೋಚನೆ ಬರುವುದು ಸುಳ್ಳಲ್ಲ.
1. ಸೌಂದರ್ಯ ಪ್ರಪಂಚದ ಕ್ವೀನ್ "ನಂದಿತಾ"
2. ವೃತ್ತಿಯಲ್ಲಿ ಆಟೋ ಚಾಲಕ- ಆದ್ರೆ 5000 ಸಸಿಗಳನ್ನು ನೆಟ್ಟ ಅಪ್ಪಟ ಪರಿಸರ ಪ್ರೇಮಿ