Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಅಣ್ಣಾವ್ರ ‘ಯೋಗಾ’ಯೋಗ..!

ಟೀಮ್​ ವೈ.ಎಸ್​. ಕನ್ನಡ

ಅಣ್ಣಾವ್ರ ‘ಯೋಗಾ’ಯೋಗ..!

Thursday February 09, 2017 , 2 min Read

ಅಭಿಮಾನಿಗಳನ್ನೇ ದೇವರು ಅಂತ ಕರೆದ ಕಲಾ ಹೃದಯ ಸಾಮ್ರಾಟ ಡಾ. ರಾಜ್ ಕುಮಾರ್ ಎಂದೆದಿಗೂ ಅಭಿಮಾನಿಗಳ ಹೃದಯದಲ್ಲಿ ಸದಾ ಅಮರ. ಇವರನ್ನ ಯಾರು ಮರೆಯುವಂತಿಲ್ಲ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಅದು ಹಾವೇರಿಯ ಬಳಿ ಇರೋ ಉತ್ಸವ್ ರಾಕ್ ಗಾರ್ಡನ್. 

image


ಎಲ್ಲಿದೆ ಉತ್ಸವ ರಾಕ್ ಗಾರ್ಡನ್..?

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿರೋ ಉದ್ಯಾನವನ ಇದು. ಇಲ್ಲಿಯ ವಿಶೇಷ ಅಂದ್ರೆ ಇಲ್ಲಿ ಬಂದ್ರೆ ನೀವು ಅಣ್ಣಾವ್ರನ್ನ ನೋಡಬಹುದು. ಅಷ್ಟೇ ಅಲ್ಲ ಅಣ್ಣಾವ್ರ ಯೋಗಾಭ್ಯಾಸವನ್ನೂ ನೋಡಬಹುದು. ಎಲ್ಲರಿಗೂ ತಿಳಿದಿರುವಂತೆ ಅಣ್ಣಾವ್ರು ನಟನೆ ಮಾತ್ರವಲ್ಲದೆ ಎಲ್ಲಾ ಕಲೆಯಲ್ಲೂ ಪರಣಿತರು. ಡಾ. ರಾಜ್ ಸಕಲಕಲಾವಲ್ಲಭ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಹಾಗೇಯೇ ಅಪ್ಪಾಜಿ ಯೋಗಾಭ್ಯಾಸದಲ್ಲೂ ಪರಣಿತರಾಗಿದ್ದರು. ಅಣ್ಣಾವ್ರ ಬಗ್ಗೆ ಸಿನಿಮಾಗಳ ಬಗ್ಗೆ ಪರಿಸರ ,ಪ್ರಾಣಿ ಪ್ರೀತಿ ಬಗ್ಗೆ ಎಲ್ಲಾ ಕಡೆ ಕರುಹುಗಳಿವೆ. ಆದ್ರೆ ಅವರ ಯೋಗಾಭ್ಯಾಸದ ಬಗ್ಗೆ ಎಲ್ಲೂ ಕಾಣ ಸಿಗಲ್ಲ ಅನ್ನುವ ಕಾರಣಕ್ಕೆ ರಾಕ್ ಗಾರ್ಡನ್​ನಲ್ಲಿ ಇಂತಹ ಶಿಲ್ಪಗಳನ್ನು ಮಾಡಲಾಗಿದೆ.

ಇದನ್ನು ಓದಿ: ಅಜ್ಜಿಯರ ಶಿಕ್ಷಣಕ್ಕೆ ಹುಟ್ಟಿಕೊಂಡಿದೆ ಶಾಲೆ- 90 ವರ್ಷದ ವಿದ್ಯಾರ್ಥಿನಿಯೇ ಇಲ್ಲಿನ ಆಕರ್ಷಣೆ

ಪ್ರೊ. ಟಿ.ಬಿ. ಸೊಲಬಕ್ಕನವರ್ ಕೈಯಲ್ಲಿ ಅರಳಿತು ಅಣ್ಣಾವ್ರ ಕಲಾಕೃತಿಗಳು

ಡಾ.ರಾಜ್ ಆಗಿನ ಕಾಲದಲ್ಲೇ ತಮ್ಮ ದೇಹವನ್ನ ದಂಡಿಸಿ ಫಿಟ್ ಅಂಡ್ ಫೈನ್ ಆಗಿ ಇಟ್ಟುಕೊಂಡಿದ್ರು. ಅದರ ಬಗ್ಗೆ ತಿಳಿದಿದ್ದ ಟಿ.ಬಿ. ಸೊಲಬಕ್ಕನವರ್​​ ತಮ್ಮದೇ ಗಾರ್ಡನ್​​ನಲ್ಲಿ ಅಣ್ಣಾವ್ರ ಈ ಶಿಲ್ಪಾಕೃತಿಗಳನ್ನ ನಿರ್ಮಾಣ ಮಾಡಲು ಮುಂದಾದ್ರು. ಈಗಾಗಲೇ ಅಣ್ಣಾವ್ರ ವಿವಿಧ ರೀತಿಯ ಪುತ್ಥಳಿಗಳು ರಾಜ್ಯದ ತುಂಬೆಲ್ಲ ಸಿಗುತ್ತದೆ. ಅಣ್ಣಾವ್ರನ್ನ ಕೇವಲ ಒಬ್ಬಕಲಾವಿದನಾಗಿ ಮಾತ್ರವಲ್ಲದೆ ದೇವರ ರೂಪದಲ್ಲಿಯೂ ನೋಡಿ ಆಗಿದೆ. ಇವೆಲ್ಲದಕ್ಕಿಂತಲೂ ವಿಭಿನ್ನವಾಗಿ ಅಣ್ಣಾವ್ರನ್ನ ಜನರಿಗೆ ತೋರಿಸಬೇಕು ಅನ್ನುವ ಪ್ಲಾನ್ ಮಾಡಿದ ಟಿ.ಬಿ. ಸೊಲಬಕ್ಕನವರ್ ಆಯ್ದುಕೊಂಡಿದ್ದು ಡಾ.ರಾಜ್ ಅವರ ಯೋಗಾಭ್ಯಾಸ. ಅರೆ, ಹೌದಲ್ಲ ಕೆಲ ಫೋಟೋಸ್ ಬಿಟ್ಟರೆ ಅಣ್ಣಾವ್ರ ಯೋಗಾಭ್ಯಾಸ ಮಾಡಿದ್ದು ಯಾರು ನೋಡಿದ್ದೆ ಇಲ್ಲ ಅಂತ ನಿಮಗೂ ಕೂಡ ಅನಿಸಿರುತ್ತದೆ. ಅದಕ್ಕಾಗಿಯೇ ಟಿ.ಬಿ. ಸೊಲಬಕ್ಕನವರ್​ ಈ ನಿರ್ಧಾರ ಮಾಡಿ ತಮ್ಮ ಉದ್ಯಾನವನದಲ್ಲಿ ಇಂಥಹ ಕಲಾಕೃತಿಗಳನ್ನ ಮಾಡಿದ್ದಾರೆ. ಸೊಲಬಕ್ಕನವರ್ ಸಾಕಷ್ಟು ವರ್ಷದಿಂದ ಡಾ. ರಾಜ್ ಅವರ ಅಭಿಮಾನಿ. ಈ ಹಿಂದೆ ತಮ್ಮ ಗಾರ್ಡನ್​ನಲ್ಲಿ ರಾಜ್ ಸರ್ಕಲ್ ನಿರ್ಮಿಸಿದ್ದರು. ಅಲ್ಲದೆ, ಅಣ್ಣಾವ್ರ ಅಭಿನಯದ ವಿವಿಧ ಚಲನಚಿತ್ರಗಳ ದೃಶ್ಯಗಳನ್ನ ನೆನಪಿಸೋ ಶಿಲ್ಪಗಳನ್ನೂ ಕೂಡ ಸಿಮೆಂಟ್​​ನಲ್ಲಿ ನಿರ್ಮಿಸಿದ್ದಾರೆ.

image


ನೀವು ನೋಡಬಹುದು ರಾಜ್​ಕುಮಾರ್​ ಅವರ ಯೋಗಾಭ್ಯಾಸ

ಸದ್ಯ ಅಣ್ಣಾವ್ರ ಕಲಾಕೃತಿಗಳು ನಿರ್ಮಾಣ ಇನ್ನು ನಡೆಯುತ್ತಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಅಣ್ಣಾವ್ರು ಯೋಗ ಮಾಡೋದನ್ನ ನೀವು ನೋಡಬಹುದು. ಇದಷ್ಟೇ ಅಲ್ಲದೆ ಪ್ರೊ. ಟಿ.ಬಿ. ಸೊಲಬಕ್ಕನವರ್ ಎಲ್ಲಾ ಕಲಾಕೃತಿಗಳಿಗೆ ಗ್ಲಾಸ್ ಹೊದಿಕೆಯನ್ನ ಹಾಕುವ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಅಣ್ಣಾವ್ರ ಕಲಾಕೃತಿಗಳು ಜೋಪಾನವಾಗಿರಬೇಕು, ಅಣ್ಣಾವ್ರು ಹೇಗೆ ಇದ್ರು, ಅವ್ರು ಎಂದಿಗೂ ಜೀವಂತ ಅನ್ನೋದು ಈ ಅಪ್ಪಟ ಅಭಿಮಾನಿಯ ಮನದಾಳದ ಮಾತು. 

ಇದನ್ನು ಓದಿ:

1. ಮಕ್ಕಳಿಗಾಗಿ ಬಂತು ಬ್ಯೂಟಿ ಪಾರ್ಲರ್​- ಮೇಕ್​ಓವರ್​ ಜೊತೆಗೆ ಮಸ್ತಿ ಗ್ಯಾರೆಂಟಿ..!

2. ಎಂಟರ ನಂಟು ಬಿಡಲಿಲ್ಲ ಬಣ್ಣದ ನಂಟು 

3. ಸಾಮಾಜಿಕ ಜಾಲತಾಣಗಳ ಸೂಪರ್ ಸ್ಟಾರ್ ಈ “ಫಿಟ್ನೆಸ್ ಕೌರ್”