ಸರಿಯಾಗಿ ಕರ್ತವ್ಯ ನಿರ್ವಹಿಸದ ಏಳು ಪೊಲೀಸ್ ಅಧಿಕಾರಿಗಗಳಿಗೆ ಕಡ್ಡಾಯ ನಿವೃತ್ತಿ ನೀಡಿದ ಯುಪಿ ಸರ್ಕಾರ

ಭ್ರಷ್ಟಾಚಾರದ ವಿರುದ್ಧದ 'ಶೂನ್ಯ ಸಹಿಷ್ಣುತೆ' ನೀತಿಯನುಸಾರ, ಸರಿಯಾಗಿ ಕರ್ತವ್ಯ ನಿರ್ವಹಿಸಿದ ಏಳು ಪೊಲೀಸ್ ಅಧಿಕಾರಿಗಳಿಗೆ ಉತ್ತರ ಪ್ರದೇಶ ಸರ್ಕಾರ ಗುರುವಾರದಂದು ಕಡ್ಡಾಯ ನಿವೃತ್ತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

7th Nov 2019
  • +0
Share on
close
  • +0
Share on
close
Share on
close


ಪ್ರಾಂತೀಯ ಪೊಲೀಸ್ ಸೇವೆಯ (ಪಿಪಿಎಸ್) 50 ವರ್ಷ ಮೇಲ್ಪಟ್ಟ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.


"ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದೇಶವನ್ನು ಅನುಸರಿಸಿ, ಸ್ಕ್ರೀನಿಂಗ್ ಸಮಿತಿಯ ಶಿಫಾರಸುಗಳ ಮೇಲೆ ರಾಜ್ಯ ಸರ್ಕಾರವು ಏಳು ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯವಾಗಿ ನಿವೃತ್ತಿ ನೀಡಿದೆ" ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಅವಸ್ತಿ ಹೇಳಿದರು.


ನಿವೃತ್ತಿ ಪಡೆದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿರಲಿಲ್ಲ ಹಾಗೂ ಅವರ ವಿರುದ್ಧ ಹಲವಾರು ತನಿಖೆಗಳು ಬಾಕಿ ಉಳಿದಿವೆ ಎಂದು ಹೇಳಿಕೆ ತಿಳಿಸಿದೆ.


ಆಗ್ರಾದ ಸಹಾಯಕ ಕಮಾಂಡೆಂಟ್, ಎಸ್‌ಪಿ ಅರುಣ್ ಕುಮಾರ್, ಅಯೋಧ್ಯೆಯ ಉಪ ಎಸ್‌ಪಿ-ವಿನೋದ್ ಕುಮಾರ್ ರಾಣಾ, ಆಗ್ರಾದ ಉಪ ಎಸ್‌ಪಿ -ನರೇಂದ್ರ ಸಿಂಗ್ ರಾಣಾ, ಪಿಎಸಿ ಸಹಾಯಕ ಕಮಾಂಡೆಂಟ್, ಝಾನ್ಸಿಯ ಸಹಾಯಕ ಕಮಾಂಡೆಂಟ್- ರತನ್ ಕುಮಾರ್ ಯಾದವ್, ಸೀತಾಪುರದ ಪಿಎಸಿ - ತೇಜ್ವೀರ್ ಸಿಂಗ್, ಮೊರಾದಾಬಾದ್‌ನ ಅಧಿಕಾರಿ - ಸಂತೋಷ್ ಕುಮಾರ್ ಸಿಂಗ್ ಹಾಗೂ ಗೊಂಡಾದ ಸಹಾಯಕ ಕಮಾಂಡೆಂಟ್ ಹಾಗೂ ಪಿಎಸಿ - ತನ್ವೀರ್ ಅಹ್ಮದ್ ಖಾನ್ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ.


ಕಳೆದ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಸರ್ಕಾರ ಸುಮಾರು 200 ಕ್ಕೂ ಹೆಚ್ಚು ಅಧಿಕಾರಿಗಳು, ವಿವಿಧ ಇಲಾಖೆಗಳ ನೌಕರರಿಗೆ ಬಲವಂತವಾಗಿ ನಿವೃತ್ತಿ ನೀಡಿದೆ.


ಅಲ್ಲದೇ, 400 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ನೌಕರರನ್ನು ಅಮಾನತುಗೊಳಿಸುವ ಹಾಗೂ ಹುದ್ದೆಯಿಂದ ಕೆಳಗಿಳಿಸುವ ಮೂಲಕ ಸರ್ಕಾರ ಶಿಕ್ಷೆ ವಿಧಿಸಿದೆ.


ವಿದ್ಯುತ್ ಇಲಾಖೆಯ 169 ಅಧಿಕಾರಿಗಳು, ಗೃಹ ಇಲಾಖೆಯ 51, ಸಾರಿಗೆ ಇಲಾಖೆಯ 37, ಕಂದಾಯ ಇಲಾಖೆಯ 36, ಮೂಲ ಶಿಕ್ಷಣ ಇಲಾಖೆಯ 26 ಅಧಿಕಾರಿಗಳು, ಪಂಚಾಯತಿ ರಾಜ್‌ನ 25, ಪಿಡಬ್ಲ್ಯೂಡಿಯ 18, ಕಾರ್ಮಿಕ ಇಲಾಖೆಯ 16, ಹಾಗೂ 16 ಸಾಂಸ್ಥಿಕ ಹಣಕಾಸು ಇಲಾಖೆ, ಹಣಕಾಸು ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ 16, ಮನರಂಜನಾ ತೆರಿಗೆ ಇಲಾಖೆಯ 16, ಗ್ರಾಮೀಣಾಭಿವೃದ್ಧಿ 15 ಹಾಗೂ ಅರಣ್ಯ ಇಲಾಖೆಯ 11 ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

  • +0
Share on
close
  • +0
Share on
close
Share on
close
Report an issue
Authors

Related Tags

Our Partner Events

Hustle across India