Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ವಯಸ್ಸಾದ ಮೇಲೂ ಅದ್ಭುತ ಕನಸು ಕಾಣಬಹುದು..!

ಟೀಮ್​​ ವೈ.ಎಸ್​​. ಕನ್ನಡ

ವಯಸ್ಸಾದ ಮೇಲೂ ಅದ್ಭುತ ಕನಸು ಕಾಣಬಹುದು..!

Friday February 24, 2017 , 3 min Read

ಇಡೀ ವಿಶ್ವದಲ್ಲೇ ಭಾರತ ಅತೀ ಹೆಚ್ಚು ವಯೋವೃದ್ಧರನ್ನ ಹೊಂದಿರುವ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ದೇಶದ ಒಟ್ಟಾರೆ ಅಭಿವೃದ್ಧಿ ಮಟ್ಟಕ್ಕಿಂತ ಓಲ್ಡ್ ಏಜ್ ಪ್ರಮಾಣವೇ ಹೆಚ್ಚಾಗುತ್ತಿದೆ. ಅದೆಷ್ಟೋ ಕಂಪೆನಿಗಳು ಸಾಧ್ಯವಾದಷ್ಟು ಯುವಕರನ್ನೇ ಹೆಚ್ಚಾಗಿ ಕೆಲಸಕ್ಕೆ ಆಯ್ದುಕೊಳ್ಳುತ್ತವೆ. ಇದು ವ್ಯವಹಾರಗಳಲ್ಲಿ ನಡೆಯೋದು ಸಹಜ ಕೂಡ. ಇನ್ನು ಯುವಕರಿಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದಂತೆ ವೃದ್ಧರು ನಿರ್ಲಕ್ಷ್ಯಕ್ಕೆ ಒಳಪಡುತ್ತಾರೆ. ನ್ಯೂಸ್ ಸ್ಟೋರಿಗಳಲ್ಲಾಗಲಿ, ಲೀಡರ್ ಶಿಪ್ ಸಮ್ಮಿಟ್ಟ್​​ ಗಳಲ್ಲಾಗಲಿ, ಪ್ರತಿಭೆಗಳ ಹುಡುಕಾಟದಲ್ಲಾಗಲಿ ಅಲ್ಲಿ ವಯಸ್ಸಾದವರಿಗೆ ಅವಕಾಶಗಳು ಕಡಿಮೆ. ಅಲ್ಲೇನಿದ್ದರೂ ಯುವ ಉದ್ದಿಮೆದಾರರು, ಯುವ ನಾಯಕರಿಗಷ್ಟೇ ವೇದಿಕೆ. ಸೇಫ್ಟಿ, ಅನಾರೋಗ್ಯ ಸೇರಿದಂತೆ ಇನ್ನಿತರ ಕಾರಣಗಳಿಂದ ಅನುಭವ ತುಂಬಿದ ವಯಸ್ಸಾದ ಕೈಗಳು ಕೆಲಸವಿಲ್ಲದೆ ಖಾಲಿ ಇರುವ ಸಂದರ್ಭಗಳೇ ಹೆಚ್ಚಾಗುತ್ತಿವೆ. ಹೀಗಾಗಿ ಯುವಕರ ಉತ್ಪಾದನೆಗಿಂತ ಸೀನಿಯರ್ ಸಿಟಿಜನ್ ಗಳ ಬೆಳವಣಿಗೆಯೇ ದುಪ್ಪಾಟಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದ್ರೆ 2050ರ ಹೊತ್ತಿಗೆ ದೇಶದ ಒಟ್ಟು ಜನಸಂಖ್ಯೆಯಲ್ಲಿ 1/5 ಭಾಗ ಸೀನಿಯರ್ ಗಳೇ ತುಂಬಿಕೊಂಡ್ರೂ ಅಚ್ಚರಿಯಿಲ್ಲ.

image


ಆದ್ರೆ ಈ ರೀತಿಯ ಬದಲಾವಣೆಯನ್ನ ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟನೇ. ಎಲ್ಲಾ ಸಂಕಷ್ಟಗಳಿಗೆ, ಉತ್ಪಾದನೆ ಹಿಂದೆ ಬೀಳುವುದಕ್ಕೂ ಅವರೇ ಕಾರಣವಲ್ಲ. ಒಂದೊಮ್ಮೆ ಅವರು ಸ್ಪರ್ಧಾತ್ಮಕ ಉದ್ಯೋಗಗಳಿಂದ ಹೊರಬಿದ್ರೂ, ಅವರಿಗಿರುವ ಮುಂದಿನ ಅವಕಾಶಗಳೇನು ಅಂತ ಸ್ವಲ್ಪ ಯೋಚಿಸಿದ್ರೆ, ಕಾಣುವ ದಾರಿ ನೂರಾರು. ರಿಟೈರ್ಡ್ ನಂತರವೂ ಅವರಿಗೆ ಮತ್ತೆ ರಿ ಫೈಯರ್ ಆಗಲು ಹಲವು ಅವಕಾಶಗಳಿವೆ. ಅದೆಷ್ಟೋ ಜನ ತಮ್ಮ ವೃದ್ದಾಪ್ಯದಲ್ಲೂ ನೂರಾರು ಸ್ಟಾರ್ಟ್ ಅಪ್ ಗಳಲ್ಲಿ ತೊಡಗಿಸಿಕೊಂಡು ಸಕ್ಸಸ್ ಎನಿಸಿಕೊಂಡಿದ್ದಾರೆ. ಅವುಗಳಲ್ಲಿ ಕೆಲವು ಉದಾಹರಣೆ ಇಲ್ಲಿವೆ..

• 84 ವರ್ಷದ ಗೃಹಿಣಿ ಯಾಮಿನಿ ಮಜೂಮ್ ದಾರ್ ತಮ್ಮ ಸ್ವಂತ ಡ್ರೈ ಕ್ಲೀನಿಂಗ್ ಸೆಂಟರನ್ನ ಹೊಂದಿದ್ದಾರೆ. ವಿಶೇಷ ಅಂದ್ರೆ ನಿವೃತ್ತಿ ವಯಸ್ಸಾಗಿ ಪರಿಗಣಿಸುವ ತಮ್ಮ 68ನೇ ವಯಸ್ಸಿನಲ್ಲಿ ಈ ಡೈ ಕ್ಲಿನಿಂಗ್ ಕೇಂದ್ರವನ್ನ ಶುರುಮಾಡಿದ್ದಾರೆ. ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ರೂ ಯಾವತ್ತೂ ಉತ್ಸಾಹ ಕಳೆದುಕೊಂಡಿಲ್ಲ.

“ ನನಗೆ ವಯಸ್ಸಾದ್ರೆ ಮಾತ್ರ ಊರುಗೋಲು ಹಿಡಿದು ನಡೆಯುತ್ತೇನೆ ” ಅಂತ ನಗುತ್ತಲೇ ಹೇಳುವ ಯಾಮಿನಿ, ತಮ್ಮ ಇಳಿ ವಯಸ್ಸಿನಲ್ಲೂ ಯಾರಿಗೂ ಹೊರೆಯಾಗಿಲ್ಲ..

• 61 ವರ್ಷ ಪ್ರಾಯದ ದೀಪಕ್ ಅಮೆಂಬಲ್ ತಾವು ಬೇಕರ್ ಆಗಿದ್ದು ಹೇಗೆಂಬುದನ್ನ ನೆನಪಿಸಿಕೊಳ್ಳುತ್ತಾರೆ. ಏರ್ ಇಂಡಿಯಾದಲ್ಲಿ ಉದ್ಯೋಗಿಯಾಗಿದ್ದ ದೀಪಕ್ 58ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಿದ್ರು. ಹಾಗಂತ ಸುಮ್ಮನೆ ಕೂರಲಿಲ್ಲ. ತಮ್ಮ ಗೆಳೆಯರೊಂದಿಗೆ 72 ದಿನಗಳ ಕಾಲ ಕ್ರಾಸ್ ಕಂಟ್ರಿ ಬೈಕ್ ಜರ್ನಿಯಲ್ಲಿ ಪಾಲ್ಗೊಂಡ್ರು. ಮುಂಬೈ-ಲಡಾಖ್-ಒರಿಸ್ಸಾ-ಮುಂಬೈ ಹಾದಿಯ ಈ ಪ್ರಯಾಣದಲ್ಲಿ ತಮ್ಮ ಡಯಾಬಿಟಿಸ್, ಹೈಪರ್ ಟೆನ್ಶನ್ ಗಳನ್ನ ಮರೆತೇ ಬಿಟ್ಟಿದ್ರು. “ ಆ 72 ದಿನಗಳ ಪ್ರಯಾಣದಲ್ಲಿ ನಾನು ಬೇರೆ ಏನನ್ನೂ ಯೋಚಿಸಲಿಲ್ಲ” ಅಂತ ದೀಪಕ್ ಖುಷಿಯಿಂದ ತಮ್ಮ ಅನುಭಗಳನ್ನ ಹೇಳಿಕೊಳ್ಳುತ್ತಾರೆ.

• ಬೆಂಗಳೂರಿನ ವೃದ್ಧಾಶ್ರಮದಲ್ಲಿರುವ ಸೀತಮ್ಮ ತಮ್ಮ 56ನೇ ವಯಸ್ಸಿನಲ್ಲಿ ವೃತ್ತಿಪರ ಕ್ರೀಡಾ ಕೂಟಗಳಲ್ಲಿ ತೊಡಗಿಸಿಕೊಂಡ್ರು. ತಮ್ಮ 66ನೇ ವರ್ಷದವರೆಗೂ ಇವರು ಟ್ರ್ಯಾಕ್ ನಲ್ಲಿ ಓಡಿದ್ದು ವಿಶೇಷ. ಕ್ರೀಡೆ ಅವಕಾಶಗಳ ಹೊಸ ಪ್ರಪಂಚವನ್ನ ಸೀತಮ್ಮ ಅವರಿಗೆ ತೋರಿಸಿಕೊಟ್ಟಿತು. ಇಲ್ಲಿ ಮಾತನಾಡುವ ಕಲೆ, ಯುವಕರಿಗೆ ಮೆಂಟರ್ ಆಗಿ ಬೆರೆಯುವ ಅವಕಾಶ ಸಿಕ್ಕಿತು. ವಿಶೇಷ ಅಂದ್ರೆ 2015ರ ಮಾರ್ಚ್ ನಲ್ಲಿ ರೋಹ್ ಟಕ್ ನಲ್ಲಿನ ನಡೆದ 35ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದು ವಿಶೇಷ..

• 79 ವರ್ಷದ ಮುಂಬೈ ನಿವಾಸಿ ಸುಶೀಲ ಮುಂಬೈ ವಿಶ್ವವಿದ್ಯಾಲಯದ ಪಿಚ್ ಡಿ ಪದವಿ ಪಡೆಯುವ ಹಾದಿಯಲ್ಲಿದ್ದಾರೆ. 1953ನೇ ವರ್ಷದಲ್ಲಿ ಕೇರಳ ವಿಶ್ವವಿದ್ಯಾಲಯಕ್ಕೇ ಟಾಪರ್ ಆಗಿದ್ದ ಸುಶೀಲ ನಂತ್ರ ಎಂಫಿಲ್ ಮಾಡಿದ್ರು. ಇದೀಗ ಹಲವು ದಶಕಗಳ ನಂತ್ರ ಮತ್ತೆ ಓದಿನತ್ತ ಗಮನಕೊಟ್ಟಿರುವ ಸುಶೀಲ ಇದೀಗ ಅತ್ಯುನ್ನತ ಪದವಿಯತ್ತ ಸಾಗಿದ್ದಾರೆ.

ಇದನ್ನು ಓದಿ: ಕಷ್ಟದ ಜೊತೆ ಗುದ್ದಾಡಿ ಗೆದ್ದ ಛಲಗಾರ – ಸಿಎ ಪಾಸ್ ಮಾಡಿ ಚಾರ್ಟಡ್ ಅಕೌಂಟೆಂಟ್ ಆದ ಚಾಯ್ ವಾಲಾ 

ಈ ಎಲ್ಲಾ ಉದಾಹರಣೆಗಳಿಂದ ನಿಧಾನಗತಿಯಲ್ಲಾದ್ರೂ ಸೀನಿಯರ್ ಸಿಟಿಜನ್ ಗಳು ಯಾರ ಮೇಲೂ ಡಿಪೆಂಡ್ ಆಗದೆ ಉತ್ಪಾದಕತ್ವದ ಕಡೆ ಗಮನ ಕೊಟ್ಟಿದ್ದಾರೆ ಅನ್ನೋದು ಸ್ಪಷ್ಟವಾಗುತ್ತದೆ. ಸರ್ವೆಯೊಂದರ ಪ್ರಕಾರ ದೇಶದ 68 ಶೇಕಡಾದಷ್ಟು ಸೀನಿಯರ್ ಸಿಟಿಜನ್ ಗಳು ತಮ್ಮ ಸ್ವಂತ ಕಾಲ ಮೇಲೆ ನಿಂತಿದ್ದಾರೆ. ತಮ್ಮ ಮಕ್ಕಳನ್ನ ಬೇರೆ ಬೇರೆ ನಗರ ಅಥವಾ ದೇಶಗಳಿಗೆ ಕಳುಹಿಸಿ ತಾವೂ ಈಗಲೂ ದುಡಿಯುತ್ತಿದ್ದಾರೆ. ತಮ್ಮ ಮುಂದಿನ ಜನರೇಶನ್ ಗಾಗಿ ಈಗಲೂ ಶ್ರಮಿಸುತ್ತಿದ್ದಾರೆ. ತಾವಂದುಕೊಂಡಿದ್ದನ್ನ ಸಾಧಿಸುವವರೆಗೂ ಹಿರಿಯ ಜೀವಗಳು ವಿಶ್ರಮಿಸಲು ಬಯಸುವುದಿಲ್ಲ. ತಮ್ಮ ಬದುಕಿನುದ್ದಕ್ಕೂ ಮನೆ ಖರೀದಿ, ಮಕ್ಕಳ ಪಾಲನೆ ಪೋಷಣೆ, ಅವರ ಮದುವೆ ಸೇರಿದಂತೆ ವಿವಿಧ ಜವಾಬ್ದಾರಿಗಳ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದ್ರೆ ವಯಸ್ಸಿನ ಒಂದು ಹಂತಕ್ಕೆ ದಾಟಿದ ಬಳಿಕ ತಮಗಾಗಿ ಗಳಿಸಲು ಯತ್ನಿಸುತ್ತಾರೆ.

ಆದ್ರೆ ಸೀನಿಯರ್ ಸಿಟಿಜನ್ ಗಳ ಪೈಕಿ ಅದೆಷ್ಟೋ ಮಂದಿ ಕಂಪ್ಯೂಟರ್ ಗಳನ್ನೇ ಬಳಸಿಲ್ಲ. ಆದ್ರೆ ಎಲ್ಲವನ್ನೂ ಗಮನಿಸಲು ಹಾಗೂ ಅದ್ರ ಅನುಭವಗಳನ್ನ ಪಡೆಯಲು ಇಚ್ಛಿಸುತ್ತಾರೆ. ಭಾರತದಲ್ಲಿ ಪ್ರತೀ ತಿಂಗಳೂ ಸುಮಾರು ಎರಡು ಮಿಲಿಯನ್ ನಷ್ಟು ಸೀನಿಯರ್ ಸಿಟಿಜನ್ ಗಳು ಫೇಸ್ ಬುಕ್ ಗೆ ಸೇರ್ಪಡೆಗೊಳ್ಳುತ್ತಿರುವುದೇ ಸಾಕ್ಷಿ. ಅಲ್ಲದೆ ವಾಟ್ಸಪ್ ಗ್ರೂಪ್ ಗಳ ಮೂಲಕವೂ ತಾವು ಕಳೆದುಕೊಂಡಿರುವ ಹಳೇ ನಂಟನ್ನ ಬೆಸೆದುಕೊಳ್ಳಲು ಬಯಸುತ್ತಲೇ ಇರುತ್ತಾರೆ. ತಾವು ಕಳೆದುಕೊಂಡ ಕಾಲೇಜು ನೆನಪುಗಳನ್ನ ಮೆಲುಕು ಹಾಕುತ್ತಲೇ ಇರುತ್ತಾರೆ. ಈ ಮೂಲಕ ತಮ್ಮನ್ನು ತಾವು ಖುಷಿಯಿಂದ ಇಟ್ಟುಕೊಳ್ಳಲು ಬಯಸುತ್ತಾರೆ. ಸೋಷಿಯಲ್ ಮೀಡಿಯಾ, ಸ್ಮಾರ್ಟ್ ಫೋನ್ ಗಳನ್ನ ಬಳಸಿಕೊಳ್ಳುವುದರ ಮೂಲಕವೂ ತಮ್ಮನ್ನು ತಾವು ಬ್ಯುಸಿಯಾಗಿ ಇಟ್ಟುಕೊಳ್ಳುವ ಜೊತೆಗೆ ಯುವಕರೊಂದಿಗೆ ಸ್ನೇಹ ಸಂಬಂಧಗಳನ್ನ ಉಳಿಸಿಕೊಳ್ಳುತ್ತಾರೆ. ಹಿರಿಯ ಜೀವಗಳು ತಮ್ಮನ್ನು ಇನ್ನಿತರು ಅರ್ಥಮಾಡಿಕೊಳ್ಳಬೇಕು ಅಂತ ಬಯಸುತ್ತಾರೆ. ಅವರ ಆರೋಗ್ಯ, ಲೈಫ್ ಸ್ಟೈಲ್, ತಂತ್ರಜ್ಞಾನ ಹಾಗೂ ಫೈನಾನ್ಸ್ ಪ್ರಾಡಕ್ಟ್ ಗಳಲ್ಲಿ ಸೀನಿಯರ್ಸ್ ಯಾವತ್ತಿಗೂ ಡಿಫರೆಂಟ್. ಒಂದು ಹಂತಕ್ಕೆ ಎಲ್ಲವೂ ಮುಗಿದೇ ಹೋಯ್ತು ಅಂತ ಅಂದುಕೊಳ್ಳುವವರ ಮಧ್ಯೆ ವಿಶೇಷ ಚೈತನ್ಯದಿಂದ, ಸ್ಫೂರ್ತಿಯಿಂದ ಬದುಕುತ್ತಿರುವರೂ ಇದ್ದಾರೆ. 

ಇದನ್ನು ಓದಿ:

1. ಕಾರು ತಯಾರಿಸುವ ಕನಸು ನನಸು ಮಾಡಿಕೊಂಡ ಬೆಂಗಳೂರಿನ ಯುವಕ..!

2. ರುಚಿ ರುಚಿಯಾಗಿದೆ 'ಹುಡ್ಲಿ'ಯ ಉಪ್ಪಿನ ಕಾಯಿ- ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡಿದ ಯುವಕರಿಗೆ ಜೈ

3. ತೆರೆ ಹಿಂದೆ ಡಾಕ್ಟರ್​...ಸಿನಿಮಾದಲ್ಲಿ ಆ್ಯಕ್ಟರ್​​..!