Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಸೌಂದರ್ಯ ಪ್ರಪಂಚದ ಕ್ವೀನ್ "ನಂದಿತಾ"

ಟೀಮ್​ ವೈ.ಎಸ್​. ಕನ್ನಡ

ಸೌಂದರ್ಯ ಪ್ರಪಂಚದ ಕ್ವೀನ್ "ನಂದಿತಾ"

Monday June 12, 2017 , 2 min Read

ಬ್ಯೂಟಿ ಇವತ್ತು ಈಡಿ ಜಗತ್ತನ್ನು ಆಳುತ್ತಿರುವ ಕ್ಷೇತ್ರ. ಇಂದು ರಸ್ತೆಗೊಂದು ಸ್ಪಾ, ಯೂನಿ ಸೆಕ್ಸ್ ಸಲೂನ್​ಗಳು ತಲೆ ಎತ್ತಿ ನಿಂತಿವೆ. ಆದರೆ 15 ವರ್ಷದ ಹಿಂದೆ ಪರಿಸ್ಥಿತಿ ಭಿನ್ನವಾಗಿತ್ತು. ಕೇವಲ ಬ್ಯೂಟಿ ಪಾರ್ಲರ್​​ಗಳು ಕಂಡು ಬರುತ್ತಿದ್ದವು. ದೊಡ್ಡ ದೊಡ್ಡ ಸ್ಟಾರ್ ಹೊಟೇಲ್​​ಗಳಲ್ಲಿ ಮಾತ್ರ ಸ್ಪಾ, ಬ್ಯೂಟಿ ಟ್ರೀಟ್​​ಮೆಂಟ್​ಗಳು ನಡೆಯುತ್ತಿದ್ದವು. ಆದರೆ ಅವು ಕೆಮಿಕಲ್​ ಯುಕ್ತವಾಗಿದ್ದವು. ಇಂತಹ ಸಂದರ್ಭಲ್ಲಿ ಸಂಪೂರ್ಣ ಹರ್ಬಲ್ ಅದರಲ್ಲೂ ಸಾವಯವ ಪದಾರ್ಥಗಳನ್ನು ಬಳಸಿ ಬ್ಯೂಟಿ ಟ್ರೀಟ್​ಮೆಂಟ್ ನೀಡಲು ಒಬ್ಬರು ಸ್ಟ್ರಾಂಗ್ ಲೇಡಿ ನಿರ್ಧರಿಸಿದ್ರು. ದೊಡ್ಡ ದೊಡ್ಡ ಸ್ಟಾರ್ ಹೊಟೇಲ್​ಗಳನ್ನು ಅಪ್ರೋಚ್ ಮಾಡಿದ್ರು. ಕೊನೆಗೆ ಅಲ್ಲಿ ಯಶಸ್ವಿಯೂ ಆದ್ರು. ಅವರೇ ನಂದಿತಾಸ್. ಆರ್ಗಾನಿಕ್ ಬ್ಯೂಟಿಯ ನಂದಿತಾ ಶರ್ಮ.

image


ಆರಂಭದ ಹಾದಿ

ಮೈಸೂರಿನಲ್ಲಿ ನೆಲೆಸಿದ್ದ ನಂದಿತಾ ಮೂಲತಃ ಉತ್ತರ ಭಾರತದವರು. ಆದ್ರೆ ಮದುವೆಯ ನಂತರ ಮೈಸೂರಿಗೆ ಬಂದು ನೆಲೆಸಿದ್ರು. ಈ ಸಂದರ್ಭದಲ್ಲಿ ತಮಗೆ ಆಸಕ್ತಿಯುತ ಫೀಲ್​ನಲ್ಲಿ ಪ್ರಯೋಗ ಮಾಡಲು ಮುಂದಾದ್ರು. ಬಾಲ್ಯದಿಂದಲೂ ನಂದಿತಾ ಅವರ ಅಜ್ಜಿ ಸಾಕಷ್ಟು ಹರ್ಬಲ್​​ಗಳು, ಹೋಮ್ ರೆಮಿಡಿಗಳನ್ನು ಬಳಸಿ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಇದನ್ನೆಲ್ಲಾ ಕುತೂಹಲದ ಕಣ್ಣಿನಿಂದಲೇ ನೋಡುತ್ತಿದ್ದ ನಂದಿತಾ ಅವರು ಕೂಡ ಇದರಲ್ಲಿ ಆಸೆ ಬೆಳೆಸಿಕೊಂಡರು. ಬಾಲ್ಯದಿಂದಲೂ ತಮ್ಮನ್ನು ತಾವು ಹೇಗೇ ಸುಂದರವಾಗಿಟ್ಟುಕೊಳ್ಳಬೇಕು ಅನ್ನೋ ಬಗ್ಗೆ ಚಿಂತಿಸುತ್ತಿದ್ದ ನಂದಿತಾ ಅದರಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲು ಮುಂದಾದ್ರು.

ಇದನ್ನು ಓದಿ: ಡಿಸೈನರ್ "ಬೋಟಿಕ್ " ! ಮಹಿತಾ ಪ್ರಸಾದ್ ಡಿಸೈನ್ಸ್

ಮೈಸೂರು ಟೂ ಬೆಂಗಳೂರು

ಮೈಸೂರಿನ ಹೊಟೇಲ್​ಗಳಲ್ಲಿ ಆರಂಭವಾದ ಈ ಜರ್ನಿ, ಸಾಕಷ್ಟು ಯಶಸ್ವಿಯಾಯಿತು. ಮೈಸೂರಿನಲ್ಲಿ 13 ವರ್ಷಗಳ ಹಿಂದೆ ಯೂನಿಸೆಕ್ಸ್ ಸಲೂನ್​ಗಳ ಕೊರತೆ ಇತ್ತು. ಅದನ್ನು ನಿವಾರಿಸಲು ನಂದಿತಾ ಸಾಕಷ್ಟು ಕೆಲಸಗಳನ್ನು ಮಾಡಿದ್ರು. ಇಲ್ಲಿಂದ ಗ್ರಾಹಕರ ಸಂಖ್ಯೆ ಹೆಚ್ಚಾಯಿತು. ಕೆಲವರು ಬೆಂಗಳೂರಿನಲ್ಲಿ ಬ್ರಾಂಚ್ ಮಾಡಲು ಕೇಳಿದ್ರು. ಇದೇ ಸಂದರ್ಭ ನಂದಿತಾ ಬೆಂಗಳೂರಿನಲ್ಲಿ ಒಂದು ಶಾಖೆ ತೆರೆಯಲು ನಿರ್ಧರಿಸಿದ್ರು. ಅಲ್ಲಿಂದ ಇವತ್ತು ಬೆಂಗಳೂರಿನಲ್ಲಿ ಹಲವಾರು ಬ್ರಾಂಚ್​​ಗಳನ್ನು ಹೊಂದಿದ್ದಾರೆ.

image


ಹೊಸತನವಿರಲಿ

ಆರಂಭದಲ್ಲಿ ಸಾಕಷ್ಟು ಜನರನ್ನು ಕನ್ವಿನ್ಸ್ ಮಾಡಬೇಕಿತ್ತು. ತಮ್ಮದೇ ಯೂನಿಕ್ ಸ್ಟೈಲ್ ಮೆಂಟೇನ್ ಮಾಡಬೇಕಿತ್ತು. ಇದಕ್ಕಾಗಿ ತಮ್ಮ ಕಾಲೇಜು ಶಿಕ್ಷಣದ ಸಮಯದಲ್ಲಿ ಲಂಡನ್​ನಲ್ಲಿ ಹರ್ಬಲ್ ಬ್ಯೂಟಿಗೆ ಸಂಬಂಧಿಸಿದ ಪದವಿ ಕೂಡ ಪಡೆದುಕೊಂಡು ಬಂದಿದ್ದರು. ನಂತರ ಹಿಮಾಲಯದಿಂದ ಮೂಲಿಕೆಗಳನ್ನು ತರಿಸಿಕೊಂಡು ಅದರಿಂದ ಸಾಕಷ್ಟು ಬ್ಯೂಟಿ ಟ್ರೀಟ್​ಮೆಂಟ್​​ಗಳನ್ನು ನೀಡುವುದಕ್ಕೆ ಆರಂಭಿಸಿದ್ರು. ಇದು ಕಂಪ್ಲೀಟ್ ಹರ್ಬಲ್​ನಿಂದ ಕೂಡಿತ್ತು. ಜೊತೆಗ ಸಾವಯವ ಪದಾರ್ಥಗಳು ಆಗಿತ್ತು. ಇದು ಹೆಚ್ಚು ಕಸ್ಟಮರ್ಸ್ ಬರಲು ಕಾರಣವಾಯ್ತು.

image


ಸನ್ಮಾನ

ಹರ್ಬಲ್ ಸ್ಪಾಗೆ ಸಂಬಂಧಿಸಿದಂತೆ ಒಂದೊಳ್ಳೆ ಸ್ಪಾ ಸೆಂಟರ್ ಕೂಡ ಡಿಸೈನ್ ಮಾಡಿದ್ರು, ಇಲ್ಲಿ ನೀಡುವ ಬ್ಯೂಟಿ ಟ್ರೀಟ್​ಮೆಂಟ್, ಮಸಾಜ್​ಗಳು ವೈಜ್ಞಾನಿಕವಾಗಿ ಕೂಡಿದ್ದು, ಕಸ್ಟಮರ್ಸ್ ಸ್ಯಾಟಿಸ್​ಫ್ಯಾಕ್ಷನ್​ಗೆ ಪಾತ್ರವಾಯಿತು. ಇದನ್ನು ಗುರುತಿಸಿ ಹಲವಾರು ಅವಾರ್ಡ್ ಹುಡುಕಿ ಬಂತು. ಎನ್​ಡಿಟಿವಿಯಿಂದ ಬೆಸ್ಟ್ ಸಲೂನ್ ಅವಾರ್ಡ್ ಇನ್ ಬೆಂಗಳೂರು, 2011-12, ದೆಹಲಿಯಲ್ಲಿ ಬೆಸ್ಟ್ ಕಸ್ಟಮರ್ಸ್ ಸ್ಯಾಟಿಸ್​ಫ್ಯಾಕ್ಷನ್​​ ಆವಾರ್ಡ್, ಯೂನಿಕ್ ಕಾನ್ಸೆಪ್ಟ್ ಅವಾರ್ಡ್ ಗಳನ್ನು ಬಾಚಿಕೊಂಡಿದ್ದಾರೆ.

image


ಲಾಸ್ಟ್ ಟಚ್

ಯಾವಗಲೂ ಹೊಸದಾಗಿ ಏನಾದ್ರೂ ಆರಂಭಿಸಿದ್ರೆ ಸ್ಥಿರವಾಗಿರಬೇಕು. ಕುಟುಂಬವನ್ನು ಜೊತೆಗೆ ನಿಭಾಯಿಸಬೇಕು. ಏನೇ ಸಮಸ್ಯೆ ಬಂದ್ರು ಪಾಸಿಟಿವ್ ಆಗಿರಬೇಕು, ಸ್ಟ್ರಾಂಗ್ ಆಗಿರಬೇಕು, ಡೆಟರ್ಮಿನೇಷನ್ ಇರಬೇಕು. ಆಗ ಸಕ್ಸಸ್ ಸಾಧ್ಯ ಅಂತಾರೆ ನಂದಿತಾ. ಸೋ ನಂದಿತಾ ಅಂದಿನಿಂಧ ಇಂದಿನ ತನಕ ಕಸ್ಟಮರ್ಸ್ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಪ್ರಯೋಗ ಮಾಡುತ್ತಲೇ ಯಶಸ್ಸು ಕಂಡಿದ್ದಾರೆ. ಆ ಮೂಲಕ ಎಷ್ಟೊ ಜನರಿಗೆ ಸ್ಪೂರ್ತಿಯೂ ಆಗಿದ್ದಾರೆ.

ಇದನ್ನು ಓದಿ:

1. ವೃತ್ತಿಯಲ್ಲಿ ಆಟೋ ಚಾಲಕ- ಆದ್ರೆ 5000 ಸಸಿಗಳನ್ನು ನೆಟ್ಟ ಅಪ್ಪಟ ಪರಿಸರ ಪ್ರೇಮಿ

2. ಭಾರತೀಯ ಮಹಿಳಾ ಉದ್ಯಮಿಗಳಿಗೆ ಇಸ್ರೇಲ್ ನೀಡುತ್ತೆ ಸುವರ್ಣಾವಕಾಶ- ಗಮನ ಸೆಳೆಯುತ್ತಿದೆ ಸ್ಟಾರ್ಟ್ ಟಿಎಲ್​​ವಿ ಬೂಸ್ಟ್ ಕ್ಯಾಂಪ್

3. ಮಳೆಯಲಿ ಹೊಸ ಪರಿಚಿತರ ಜೊತೆಯಲ್ಲಿ..!