Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ದೆಹಲಿಯಲ್ಲಿ ಕೋವಿಡ್‌-19 ಪರಿಹಾರ ಸಹಾಯವಾಣಿ ನಡೆಸುತ್ತಿರುವ 16 ವರ್ಷದ ಅವಳಿ ಸಹೋದರಿಯರು

ಅಶೀರ್‌ ಮತ್ತು ಅಸೀಸ್‌ ಡೆಲಿವರಿ ಸೇವೆಗಳು, ಆಹಾರ ಮಳಿಗೆಗಳು, ಕಾಲೇಜು ವಿದ್ಯಾರ್ಥಿಗಳು, ಮತ್ತು ಸ್ವಯಂಸೇವಕರೊಂದಿಗೆ ಸಹಭಾಗಿತ್ವ ಹೊಂದಿ ದೀನರು ಮತ್ತು ಸಮಾಜದ ಅಂಚಿನಲ್ಲಿರುವವರಿಗೆ ಆಹಾರ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸುವ ಕೆಲಸ ಆರಂಭಿಸಿದ್ದಾರೆ.

ದೆಹಲಿಯಲ್ಲಿ ಕೋವಿಡ್‌-19 ಪರಿಹಾರ ಸಹಾಯವಾಣಿ ನಡೆಸುತ್ತಿರುವ 16 ವರ್ಷದ ಅವಳಿ ಸಹೋದರಿಯರು

Wednesday July 15, 2020 , 2 min Read

ಕೊರೊನಾವೈರಸ್‌ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡಿದೆ. ರೈತರಿಂದ ಹಿಡಿದು, ವಲಸೆ ಕಾರ್ಮಿಕರು, ವೇತನವಿರುವ ನೌಕರರು ಮತ್ತು ಕೈಗಾರಿಕೊದ್ಯಮಿಗಳವರೆಗು ಎಲ್ಲರಿಗೂ ಬಿಕ್ಕಟ್ಟಿನ ಬಿಸಿ ಮುಟ್ಟಿದೆ.


ಈ ಮಹಾಮಾರಿಯ ನಡುವೆ ಕಷ್ಟದಲ್ಲಿರುವವವರ ಸಹಾಯಕ್ಕೆ ಹಲವು ನಾಗರಿಕರು ಮುಂದಾಗಿದ್ದಾರೆ. ಈ ಪಟ್ಟಿಯಲ್ಲಿ ದೆಹಲಿಯ ಅವಳಿ ಸಹೋದರಿಯರು ಸೇರಿದ್ದಾರೆ. ಕಷ್ಟದಲ್ಲಿರುವವರಿಗೆ ನೆರವಾಗಬೇಕೆಂಬ ಯೋಚನೆಯಿಂದ ಅಶೀರ್‌ ಮತ್ತು ಅಸೀಸ್‌ ಇತ್ತೀಚೆಗೆ ಕೋವಿಡ್‌-19 ಸಹಾಯವಾಣಿಯನ್ನು ಅಮನ್‌ ಬಂಕಾ ಮತ್ತು ಆದಿತ್ಯಾ ದುಬೆ ಎಂಬ ತಮ್ಮ ಗೆಳೆಯರ ಜತೆ ಸೇರಿ ಆರಂಭಿಸಿದ್ದಾರೆ.


16 ವರ್ಷದ ಅವಳಿ ಸಹೋದರಿಯರು (ಚಿತ್ರಕೃಪೆ: ಎನ್‌ಡಿಟಿವಿ)




ಈ ಜೋಡಿ ಡೆಲಿವರಿ ಸೇವೆಗಳು, ಆಹಾರ ಮಳಿಗೆಗಳು, ಕಾಲೇಜು ವಿದ್ಯಾರ್ಥಿಗಳು, ಮತ್ತು ಸ್ವಯಂಸೇವಕರೊಂದಿಗೆ ಸಹಭಾಗಿತ್ವ ಹೊಂದಿ ದೀನರು ಮತ್ತು ಸಮಾಜದ ಅಂಚಿನಲ್ಲಿರುವವರಿಗೆ ಆಹಾರ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸುವ ಕೆಲಸ ಆರಂಭಿಸಿದ್ದಾರೆ.


“ಕುಟುಂಬದ ಹಲವು ಸ್ನೇಹಿತರಿಗೆ ಬರ್ಕೊಸ್‌, ಬಿಗ್‌ ಜಾರ್‌ನಂತಹ ಆಹಾರ ಮಳಿಗೆಗಳ ಪರಿಚಯವಿತ್ತು. ಅವುಗಳು ಆಹಾರ ತಯಾರಿಸಿ ಕೊಟ್ಟವು. ಆಹಾರವನ್ನು ತಲುಪಿಸಲು ಸ್ವಿಗ್ಗಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ. ತಾವೇ ಮುಂದೆ ಬಂದು ಆಹಾರ ಡೆಲಿವರಿ ಮಾಡಿದ ಸ್ವಯಂಸೇವಕರ ಸಹಾಯ ದೊಡ್ಡದು,” ಎನ್ನುತ್ತಾರೆ ಅಶೀರ್‌, ವರದಿ ಎನ್‌ಡಿಟಿವಿ.


10ನೇ ತರಗತಿ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿರುವ ಈ ಸಹೋದರಿಯರು ಯಾವುದೇ ತರಹದ ದೇಣಿಗೆ ಇಲ್ಲದೆಯೆ 24x7 ಸಹಾಯವಾಣಿಯನ್ನು ಆರಂಭಿಸಿದ್ದಾರೆ. ಆಹಾರ, ಔಷಧಿ ಅಥವಾ ಇತರ ವಸ್ತುಗಳ ಅವಷ್ಯಕತೆಯಿರುವವರು +91-9529863506 ಸಂಖ್ಯೆಗೆ ವಾಯ್ಸ್‌ಮೇಲ್‌ ಕಳುಹಿಸಬಹುದು.


ದೆಹಲಿ ವಿಶ್ವವಿದ್ಯಾಲಯ, ಹಿಂದೂ ಕಾಲೇಜು ಮತ್ತು ಸೇಂಟ್ ಸ್ಟೀಫನ್ಸ್ ವಿದ್ಯಾರ್ಥಿಗಳು ಸಹ ಈ ಕೆಲಸಕ್ಕೆ ಕೈಜೋಡಿಸಿ ಸ್ವಯಂಸೇವಕರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ದೆಹಲಿ ಪೊಲೀಸರು ಸಹ ತಮ್ಮ ಬೆಂಬಲ ನೀಡಿದ್ದಾರೆ, ವರದಿ ದಿ ಲಾಜಿಕಲ್ ಇಂಡಿಯನ್.


“ಮಧ್ಯರಾತ್ರಿ 3 ಗಂಟೆಗೆ ತಾಯಿಯೊಬ್ಬಳು ತನ್ನ ಮಗಳಿಗೆ 103 ಡಿಗ್ರಿ ಜ್ವರ ಬಂದಿದೆ ಎಂದು ಸಂಪರ್ಕಿಸಿದಳು. ಆ ಸಮಯದಲ್ಲಿ ಎದ್ದು, ಪೊಲೀಸರಿಗೆ ಹೇಳಿ, ಅಗತ್ಯವಿರುವ ಔಷಧಿಯನ್ನು ಕಳಿಸಿದ್ದು ನನಗಿನ್ನು ನೆನಪಿದೆ. ಆ ಮಗು ಸುರಕ್ಷಿತವಾಗಿದೆಯೆಂದು ಕೆಲ ದಿನಗಳ ನಂತರ ಅವರು ತಿಳಿಸಿದರು,” ಎಂದು ನೆನಪಿಸಿಕೊಳ್ಳುತ್ತಾರೆ ಅಶೀರ್‌.


ಇದುವರೆಗೂ ದೆಹಲಿ ಹೊರತುಪಡಿಸಿ ಭಾರತದ ಇತರ 30 ನಗರಗಳಲ್ಲಿ ಅಶೀರ್‌ ಮತ್ತು ಅಸಿಸ್‌ ಸಹಾಯ ಮಾಡಿದ್ದಾರೆ.