ಜಾಗತಿಕ ಕಂಪನಿಗಳಿಗೆ ಹೂಡಿಕೆ-ಸ್ನೇಹಿ ವ್ಯಾಪಾರ ವಾತಾವರಣ ನಿರ್ಮಿಸುತ್ತೇವೆ: ನರೇಂದ್ರ ಮೋದಿ

ಇಂಡಿಯಾ ಗ್ಲೋಬಲ್‌ ವೀಕ್‌ 2020ರಲ್ಲಿ ಮಾತನಾಡಿದ ಮೋದಿ, ಕೊರೊನಾವೈರಸ್‌ ಲಾಕ್‌ಡೌನ್‌ನಿಂದ ಹೊರಬರುತ್ತಿರುವ ಭಾರತದಲ್ಲಿ ಈಗಾಗಲೇ ಆರ್ಥಿಕ ಪುನಶ್ಚೇತನದ ಹಸಿರು ನಿಶಾನೆ ಗೋಚರಿಸುತ್ತಿವೆ ಎಂದರು.

ಜಾಗತಿಕ ಕಂಪನಿಗಳಿಗೆ ಹೂಡಿಕೆ-ಸ್ನೇಹಿ ವ್ಯಾಪಾರ ವಾತಾವರಣ ನಿರ್ಮಿಸುತ್ತೇವೆ: ನರೇಂದ್ರ ಮೋದಿ

Thursday July 09, 2020,

1 min Read

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯು ವಿಶ್ವದಲ್ಲೇ ಅತ್ಯಂತ ಮುಕ್ತವಾದ ಆರ್ಥಿಕತೆಯಾಗಿದೆ ಮತ್ತು ಹೂಡಿಕೆ ಸ್ನೇಹಿ, ಸ್ಪರ್ಧಾತ್ಮಕ ವ್ಯಾಪಾರ ವಾತಾವರಣ ಮತ್ತು ಅಪಾರ ಅವಕಾಶಗಳನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.


ಇಂಡಿಯಾ ಗ್ಲೋಬಲ್‌ ವೀಕ್‌ 2020ರಲ್ಲಿ ಮಾತನಾಡಿದ ಮೋದಿ, ಕೊರೊನಾವೈರಸ್‌ ಲಾಕ್‌ಡೌನ್‌ನಿಂದ ಹೊರಬರುತ್ತಿರುವ ಭಾರತದಲ್ಲಿ ಈಗಾಗಲೇ ಆರ್ಥಿಕ ಪುನಶ್ಚೇತನದ ಹಸಿರು ನಿಶಾನೆ ಗೋಚರಿಸುತ್ತಿವೆ ಎಂದರು.


“ವಿಶ್ವದಲ್ಲೆ ಭಾರತ ಅತ್ಯಂತ ಮುಕ್ತವಾದ ಆರ್ಥಿಕತೆಯನ್ನು ಹೊಂದಿದೆ. ಎಲ್ಲ ಜಾಗತಿಕ ಕಂಪನಿಗಳು ಇಲ್ಲಿ ಬಂದು ನೆಲೆಸಲು ಸಾವು ಸ್ವಾಗತಿಸುತ್ತೇವೆ. ಇಂದು ಕೆಲವೇ ಕೆಲವು ದೇಶಗಳು ಭಾರತದಂತೆ ಅವಕಾಶಗಳನ್ನು ನೀಡುತ್ತಿವೆ,” ಎಂದರು ಅವರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ




ಜಾಗತಿಕ ಬಂಡವಾಳವನ್ನು ಪಡೆಯಲು ಕೃಷಿಯಲ್ಲಿನ ಇತ್ತೀಚಿನ ಸುಧಾರಣೆಗಳು ಮತ್ತು ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿನ ಸುಧಾರಣೆಗಳನ್ನು ಅವರು ಪಟ್ಟಿ ಮಾಡಿದರು.


“ನಾವು ಆರ್ಥಿಕತೆಯನ್ನು ಹೆಚ್ಚೆಚ್ಚು ಫಲದಾಯಕ, ಹೂಡಿಕೆ ಸ್ನೇಹಿ ಮತ್ತು ಸ್ಪರ್ಧಾತ್ಮಕವಾಗಿಸುತ್ತಿದ್ದೇವೆ. ಭಾರತದಲ್ಲಿ ಏಳಿಗೆ ಕಾಣುವಂತಹ ಅನೇಕ ರಂಗಗಳಲ್ಲಿ ಹಲವು ಸಾಧ್ಯತೆಗಳು ಮತ್ತು ಅವಕಾಶಗಳಿವೆ,” ಎಂದರು.


ಕೃಷಿ ಕ್ಷೇತ್ರದಲ್ಲಿ ತಂದ ಸುಧಾರಣೆಗಳು ಶೇಖರಣೆ ಮತ್ತು ಸಾಗಾಟ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಕರ್ಷಕ ಅವಕಾಶಗಳನ್ನು ಸೃಷ್ಟಿಸಿವೆ. ಹೂಡಿಕೆದಾರರು ಇಲ್ಲಿ ಬಂದು ನೇರವಾಗಿ ಬಂಡವಾಳ ಹೂಡಬಹುದು,” ಎಂದರು ಪ್ರಧಾನಿ.


ದೊಡ್ಡ ಕೈಗಾರಿಕೆಗಳಿಗೆ ಪೂರಕವಾಗುವ ಕಿರು, ಸಣ್ಣ ಮತ್ತು ಮಧ್ಯಮ(ಎಂಎಸ್‌ಎಂಇ) ಕೈಗಾರಿಕೆಗಳಲ್ಲೂ ಸುಧಾರಣೆಗಳನ್ನು ತರಲಾಗಿದೆ.


"ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಅವಕಾಶಗಳಿವೆ," ಎಂದ ಅವರು, ರಕ್ಷಣಾ ಉತ್ಪಾದನೆಯ ಕೆಲವು ಭಾಗಗಳನ್ನು ಖಾಸಗಿ ವಲಯಕ್ಕೆ ತೆರೆಯುವುದನ್ನು ಉಲ್ಲೇಖಿಸಿದರು.


ಅಲ್ಲದೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶಗಳಿವೆ. "ಇದು ಜನರ ಅನುಕೂಲಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನದ ವಾಣಿಜ್ಯ ಬಳಕೆಗೆ ಹೆಚ್ಚಿನ ಅವಕಾಶವನ್ನು ನೀಡುತ್ತದೆ" ಎಂದು ಅವರು ಹೇಳಿದರು.

“ಅಸಾಧ್ಯವನ್ನು ಸಾಧಿಸುವ ಮನೋಭಾವ ಭಾರತೀಯರಿಗೆ ಇದೆ. ಭಾರತದಲ್ಲಿ ಆರ್ಥಿಕ ಚೇತರಿಕೆಗೆ ಕುರುಹುಗಳನ್ನು ನಾವು ಈಗಾಗಲೇ ನೋಡುತ್ತಿರುವುದರಲ್ಲಿ ಆಶ್ಚರ್ಯವಿಲ್ಲ," ಎಂದು ಅವರು ಹೇಳಿದರು.