ಸ್ವೈಪಿಂಗ್ ಮಷಿನ್ಗಳಿಗೆ ಸಿಗಲಿದೆ ಬಹುಭಾಷೆಯ ಟಚ್- ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೊಸ ಕಿಕ್
ಟೀಮ್ ವೈ.ಎಸ್. ಕನ್ನಡ
ಡಿಜಿಟಲ್ ಇಂಡಿಯಾದ ಕನಸು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಕೇಂದ್ರ ಸರಕಾರವಂತೂ ಕ್ಯಾಶ್ಲೆಸ್ ಟ್ಯಾನ್ಸ್ಆ್ಯಕ್ಷನ್ಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಗ್ರಾಹಕರಿಗೆ ಮತ್ತು ಉದ್ಯಮಿಗಳಿಗೆ ನೆರವಾಗುವಂತಹ ವ್ಯವಸ್ಥೆ ಮಾಡಿಕೊಡುತ್ತಿದೆ. ಕಳೆದ ನವೆಂಬರ್ 8ರ ನೋಟ್ ಬ್ಯಾನ್ ಬಳಿಕ ಡಿಜಿಟಲ್ ಪಾವತಿಗೆ ಸಾಕಷ್ಟು ಪ್ರೋತ್ಸಾಹ ಸಿಕ್ಕಿತ್ತು. ಕೈಯಲ್ಲಿ ನೋಟ್ ಇಲ್ದೇ ಇದ್ದಾಗ ಗ್ರಾಹಕರು ಅನಿವಾರ್ಯವಾಗಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೊಂದಿಕೊಂಡು ಹೋಗಿದ್ದರು. ಈಗ ನೋಟ್ಗಳು ಲಭ್ಯವಿದ್ದರೂ ಗ್ರಾಹಕರಿಗೆ ಮತ್ತು ಉದ್ಯಮಿಗಳಿಗೆ ಡಿಜಿಟಲ್ ಟ್ಯಾನ್ಸ್ ಆ್ಯಕ್ಷನ್ನ ಲಾಭದ ಅರಿವಾಗಿದೆ. ಹಾರ್ಡ್ ಕರೆನ್ಸಿಯಲ್ಲಿರುವ ರಿಸ್ಕ್ ಡಿಜಿಟಲ್ ವ್ಯವಸ್ಥೆಯಲ್ಲಿ ಶೂನ್ಯ ಅನ್ನುವುದು ಮನದಟ್ಟಾಗಿದೆ.
ನೋಟ್ ಬ್ಯಾನ್ಗೂ ಮುನ್ನ ಡಿಜಿಟಲ್ ವ್ಯವಹಾರದ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಆದ್ರೆ ನೋಟ್ ಬ್ಯಾನ್ ಬಳಿಕ ಸ್ವೈಪಿಂಗ್ ಮಷಿನ್ಗಳು ಎಲ್ಲಾ ಕಡೆ ಸಾಮಾನ್ಯವಾಗಿ ಬಿಟ್ಟಿವೆ. ಕೆಲವೇ ಸಾವಿರ ರೂಪಾಯಿ ವಹಿವಾಟು ನಡೆಸುವ ಉದ್ಯಮದಿಂದ ಹಿಡಿದು ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುವ ಬಜಾರ್ಗಳ ತನಕ ಎಲ್ಲವೂ ಕಾರ್ಡ್ ಸ್ವೈಪಿಂಗ್ ಮೂಲಕ ನಡೆಯುತ್ತಿದೆ. ಇನ್ನೊಂದು ಅರ್ಥದಲ್ಲಿ ಮನೆ ಪಕ್ಕದ ಪೆಟ್ಟಿ ಅಂಗಡಿಯಿಂದ ಹಿಡಿದು ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಬಿಗ್ ಬಜಾರ್, ಡಿ ಮಾರ್ಟ್ನಂತಹ ಶಾಪಿಂಗ್ ಕಾಂಪ್ಲೆಕ್ಸ್ಗಳಲ್ಲಿ ಡಿಟಿಟಲ್ ಪಾವತಿಯೇ ಮುಖ್ಯವಾಗಿ ಬಿಟ್ಟಿದೆ.
ಇದನ್ನು ಓದಿ: ಸಿನಿಮಾರಂಗದಲ್ಲಿ ಮೂವರು ಸಹೋದರರ ಸಾಹಸ- ಇದು ಖಾಸನೀಸ್ ಕುಟುಂಬದ ಖಾಸ್ಬಾತ್
ಪಿಒಎಸ್ಗೆ ಹೊಸ ಟಚ್
ಸ್ಟೈಪಿಂಗ್ ಮಷಿನ್ನಲ್ಲಿ ಬಳಸುವ ಎಲ್ಲಾ ಕಡೆ ಇಂಗ್ಲೀಷ್ ಭಾಷೆ ಮಾತ್ರ ಪ್ರಮುಖವಾಗಿತ್ತು. ಕೆಲವೊಂದು ಭಾಗಗಳಲ್ಲಿ ಹಿಂದಿ ಭಾಷೆ ಲಭ್ಯವಿದ್ದರೂ ಅದು ಗ್ರಾಹಕರನ್ನಾಗಲಿ ಅಥವಾ ವ್ಯಾಪಾರಿಗಳನ್ನಾಗಲಿ ಸರಿಯಾಗಿ ತಲುಪುತ್ತಿರಲಿಲ್ಲ. ಆದ್ರೆ ಇನ್ನು ಕೆಲವೇ ದಿನಗಳಲ್ಲಿ ಒಟ್ಟು 8 ಭಾಷೆಗಳಲ್ಲಿ ಪಿಒಎಸ್ ಕೆಲಸ ಮಾಡಲಿದೆ. ಕನ್ನಡ , ತೆಲುಗು, ತಮಿಳು, ಬೆಂಗಾಲಿ, ಮಲಯಾಳಂ , ಮರಾಠಿ ಮತ್ತು ಪಂಜಾಬಿ ಭಾಷೆಗಳಲ್ಲಿ ಸ್ವೈಪಿಂಗ್ ಮಷಿನ್ ಕೆಲಸ ಮಾಡುವಂತೆ ಮಾಡಲು ಸಿದ್ಧತೆಗಳು ನಡೆಯುತ್ತಿದೆ. ಈ ಮೂಲಕ ಗ್ರಾಹಕರು ಮತ್ತು ವ್ಯಾಪಾರಸ್ಥರು ತಮಗೆ ಗೊತ್ತಿರುವ ಭಾಷೆಯಲ್ಲೇ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಮಾಡುವ ಪ್ರಯತ್ನ ಇದಾಗಿದೆ. ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪಿಒಎಸ್ ಗಳಲ್ಲಿ ಬಹುಭಾಷೆಯ ಆಯ್ಕೆ ಒದಗಿಸಲು ಸಾಕಷ್ಟು ಕಂಪನಿಗಳು ಮುಂದೆ ಬಂದಿವೆ.
"ಪಿಒಎಸ್ಗಳಿಗೆ ಬಹುಭಾಷಾ ಆಯ್ಕೆ ನೀಡುವುದು ಉತ್ತಮ ಬೆಳವಣಿಗೆ. ಆದ್ರೆ ಬ್ಯಾಂಕಿಂಗ್ಗೆ ಮತ್ತು ಸ್ವೈಪಿಂಗ್ ಮಷಿನ್ಗೆ ಒಪ್ಪುವ ಭಾಷೆ ಬಳಸುವುದು ಸೂಕ್ತ. ಗ್ರಾಹಕರಿಗೆ ಹಾಗೂ ವರ್ತಕರಿಗೆ ಉಪಯೋಗವಾಗುವಂತಹ ಭಾಷೆ ಇದ್ದರೆ ವ್ಯವಹಾರಗಳು ಸಲೀಸಾಗಿ ನಡೆದು ಬಿಡುತ್ತದೆ. ಡಿಜಿಟಲ್ ಪಾವತಿ ಬಗೆಗಿನ ಆಸಕ್ತಿ ಮತ್ತಷ್ಟು ಹೆಚ್ಚುತ್ತದೆ."
- ಮಹೇಶ್, ಉದ್ಯಮಿ, ವ್ಯಾಪಾರಸ್ಥರು
ಪ್ರಸ್ತುತ ಪಿಒಎಸ್ಗಳು ಇಂಗ್ಲೀಷ್ ಭಾಷೆಯಲ್ಲಿ ಹೆಚ್ಚು ಕೆಲಸ ಮಾಡುತ್ತಿವೆ. ಕೆಲವೇ ಕೆಲವು ಕಡೆ ಮಾತ್ರ ಹಿಂದಿ ಭಾಷೆಯಲ್ಲಿ ಲಭ್ಯವಿದೆ. ಈಗಾಗಲೇ ಭೀಮ್ ಆ್ಯಪ್ ಹಲವು ಭಾರತೀಯ ಭಾಷೆಗಳನ್ನು ಒದಗಿಸಿಕೊಡುತ್ತಿದೆ. ಭೀಮ್ ಭಾಷೆಗಳ ಆಯ್ಕೆಯಿಂದಲೇ ಸಾಕಷ್ಟು ಗ್ರಾಹಕರ ಗಮನ ಸೆಳೆದಿದೆ. ಹೀಗಾಗಿ ಪಿಒಎಸ್ಗಳಿಗೂ ಬಹುಭಾಷಾ ಆಯ್ಕೆ ನೀಡಲು ಪ್ಲಾನ್ಗಳು ನಡೆಯುತ್ತಿದೆ. ಈ ಮೂಲಕ ಜನರನ್ನು ಸೆಳೆಯಲು ಯೋಜನೆ ರೂಪಿಸಲಾಗಿದೆ.
"ಸ್ವೈಪಿಂಗ್ ಮಷಿನ್ನಲ್ಲಿ ಕನ್ನಡ ಭಾಷೆಯ ಆಯ್ಕೆ ಇದ್ದರೆ ನಮಗೆ ಉಪಯೋಗವಾಗುತ್ತದೆ. ಕೆಲವೊಮ್ಮೆ ಇಂಗ್ಲೀಷ್ ಬಾರದೇ ಇರುವವರಿಗೆ ಅರ್ಥ ಮಾಡಿಸಲು ನಮಗೆ ಕಷ್ಟವಾಗುತ್ತಿದೆ. ಆದ್ರೆ ಕನ್ನಡದಲ್ಲಿ ಸ್ವೈಪಿಂಗ್ ಮಾಡುವ ಅವಕಾಶ ಸಿಕ್ಕರೆ ನಮ್ಮ ಕೆಲಸ ಸ್ವಲ್ಪ ಸುಲಭವಾಗುತ್ತದೆ."
- ಹನುಮಂತು, ವ್ಯಾಪಾರಿ
ಡಿಜಿಟಲ್ನಲ್ಲಿ ಚಿಲ್ಲರೆ ಕಿರಿಕಿರಿ ಇಲ್ಲ
ಡಿಜಿಟಲ್ ಪಾವತಿ ವ್ಯವಸ್ಥೆ ಜನಪ್ರಿಯವಾದ ಮೇಲೆ ಚಿಲ್ಲರೆಯ ಕಿರಿಕಿರಿ ತಪ್ಪಿದೆ. ಅಷ್ಟೇ ಅಲ್ಲ ಗ್ರಾಹಕರಿಗೆ ಆಗಲಿ ಅಥವಾ ವ್ಯಾಪಾರಿಗಳಿಗೇ ಆಗಲಿ ಒಂದು ನಯಾಪೈಸೆಯ ನಷ್ಟವೂ ಆಗುತ್ತಿಲ್ಲ. ಹೀಗಾಗಿ ಡಿಜಿಟಲ್ ಪಾವತಿ ಬಗೆಗಿನ ಮೋಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂದೊಂದು ದಿನ ಭಾರತ ಕ್ಯಾಶ್ಲೆಸ್ ನೇಷನ್ ಆದ್ರೂ ಅಚ್ಚರಿ ಇಲ್ಲ.
1. ಅಡಕೆ ಕೊಯ್ಲಿನ ಚಿಂತೆ ಬಿಡಿ- ಹೊಸ ಯಂತ್ರದ ಬಗ್ಗೆ ತಿಳಿದುಕೊಳ್ಳಿ..!
2. ನವರಸ ಸಾಧನಗಳ ಪರಿಣಿತ- ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡಿಗ
3. ಹುಬ್ಬಳ್ಳಿಯಿಂದ ದೆಹಲಿ ತನಕ- ಇದು ಬಣ್ಣದ ಕ್ಯಾನ್ವಾಸ್ನಲ್ಲಿ ಸಾಧನೆ ಕಥೆ