ದೇಶಕ್ಕೆ ಮಾದರಿ ಬನ್ನೇರುಘಟ್ಟ ಜೈವಿಕ ಉದ್ಯಾನವನ
ಎನ್ಎಸ್ಆರ್
ಇತ್ತೀಚಿನ ದಿನಗಳಲ್ಲಿ ಜೈವಿಕ ಉದ್ಯಾನವನದಲ್ಲಿರುವ ಪ್ರಾಣಿಗಳು ಹೆಚ್ಚು ಬದುಕುತ್ತಿಲ್ಲ. ತಮ್ಮ ಆಯಸ್ಸಿಗಿಂತ ತುಂಬಾ ಕಮ್ಮಿ ಬದುಕುತ್ತಿವೆ. ಪ್ರಾಣಿಗಳಿಗೆ ಸರಿಯಾದ ಆರೈಕೆ ಮತ್ತು ಸೂಕ್ತ ಕ್ರಮದಲ್ಲಿ ಆಹಾರ ಕೊಡದಿರುವುದು ಅವುಗಳ ಸಾವಿಗೆ, ಅಲ್ಪ ಆಯುಷ್ಯಕ್ಕೆ ಕಾರಣ. ಆದರೆ ನಿಮ್ಮಗೆ ಸಂತಸದ ಸುದ್ದಿಯೆಂದರೆ, ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವದಲ್ಲಿ ಇರೋ ಪ್ರಾಣಿಗಳ ಆಯಸ್ಸು ಹೆಚ್ಚಾಗಿದೆ. ಈ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನ ದೇಶದ ಎಲ್ಲ ಉದ್ಯಾನವನಗಳಿಗೆ ಮಾದರಿಯಾಗಿದೆ.
ವಿಶ್ವದ ಎಲ್ಲ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳು ಅಲ್ಪ ವಯಸ್ಸಿನಲ್ಲೇ ಸಾವನಪ್ಪುತ್ತಿವೆ. ಆದರೆ ಬನ್ನೇರುಘಟ್ಟ ಜೈವಿಕ ಉದ್ಯಾವನದಲ್ಲಿ ಈ ವರ್ಷ ಸಂತಸ ಮನೆ ಮಾಡಿದೆ. ಬನ್ನೇರುಘಟ್ಟ ಜೈವಿಕ ಉದ್ಯಾವನದ ಪುನರ್ವಸತಿ ಕೇಂದ್ರದಲ್ಲಿ ಇರೋ ಹುಲಿ, ಸಿಂಹ ಮತ್ತು ಚಿರತೆಗಳು ಅಯಸ್ಸಿಗಿಂತ ಹೆಚ್ಚು ಅವಧಿ ಬದುಕಿ ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿವೆ. ಉದ್ಯಾನವನದ ಅಧಿಕಾರಿಗಳ ಮಾಹಿತಿಯಂತೆ ಹುಲಿ, ಸಿಂಹ ಹಾಗೂ ಚಿರತೆಗಳು ಕಾಡಿನಲ್ಲಿ ಇದ್ದರೆ ಕೇವಲ 15 ರಿಂದ 18 ವರ್ಷ ಬದುಕುತ್ತವೆ. ಆದ್ರೆ ಪುನರ್ವಸತಿ ಕೇಂದ್ರದಲ್ಲಿ ಸರಾಸರಿ 25 ವರ್ಷ ದಾಟಿವೆ ಅಂತರೇ ಇಲ್ಲಿನ ವೈದ್ಯರಾದ ಮಂಜುನಾಥ್.
ಇದನ್ನು ಓದಿ: ವರ್ತಕರ ಸಮಸ್ಯೆಗೆ ಪರಿಹಾರ ಒದಗಿಸಿಲಿದೆ ರೋಡ್ ರನ್ನರ್
ಹೌದು ಇದನ್ನ ನೀವು ನಂಬಲೇಬೇಕು, ಕಾಡಿನಲ್ಲಿ ಇದ್ದರೆ ಬದುಕುವ ಆಯಸ್ಸಿಗಿಂತ ಹುಲಿ, ಸಿಂಹ ಮತ್ತು ಚಿರತೆಗಳ ಆಯಸ್ಸು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೆಚ್ಚಾಗಿದೆ. 15-18 ವರ್ಷ ಬದುಕುವ ಹುಲಿ ಸಿಂಹಗಳು ಇಲ್ಲಿ 25 ವರ್ಷ ದಾಟುವ ಮೂಲಕ ಎಲ್ಲರ ಸಂತಸಕ್ಕೆ ಕಾರಣವಾಗಿದೆ. ಹುಲಿ, ಸಿಂಹ ಮತ್ತು ಚಿರತೆಗಳು ಸಮರೋಪಾದಿಯಲ್ಲಿ ಸಾಯುತ್ತಿದ್ದು, ದೇಶದಲ್ಲಿ ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪುನರ್ವಸತಿ ಕೇಂದ್ರ ಈ ಪ್ರಾಣಿಗಳ ಪಾಲಿಗೆ ಸಂಜೀವನಿಯಾಗಿ ಪರಿಣಮಿಸಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ವಿದೇಶಿಗರನ್ನು ಆಕರ್ಷಿಸುವಲ್ಲಿ ಈ ಉದ್ಯಾನವನ ಯಶಸ್ವಿಯಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾವನ, ಪುನರ್ವಸತಿ ಕೇಂದ್ರ 2000ನೇ ಇಸವಿಯಲ್ಲಿ ಆರಂಭವಾಗಿತ್ತು. ಆ ಸಂದರ್ಭದಲ್ಲಿ 120 ಹುಲಿ, ಸಿಂಹ ಮತ್ತು ಚಿರತೆಗಳಿದ್ದವು. ಅಲ್ಲಿಂದ ಇಲ್ಲಿಯವರೆಗೆ 70 ಪ್ರಾಣಿಗಳು ಮಾತ್ರ ಸಾವನ್ನಪ್ಪಿವೆ. ಈಗ ಇಲ್ಲಿ ಕೇವಲ 40 ಪ್ರಾಣಿಗಳು ಉಳಿದಿವೆ. ಆದರೆ ಸಾವನ್ನಪ್ಪಿರುವ ಪ್ರಾಣಿಗಳು 25 ವರ್ಷದವರೆಗೆ ಬದುಕ್ಕಿದ್ದವು ಎಂಬುವುದು ಮಹತ್ವದ ಸಂಗತಿ. ‘ಇಲ್ಲಿಯ ಪ್ರಾಣಿಗಳ ಆಯಸ್ಸು ಹೆಚ್ಚಾಗಲೂ ಇಲ್ಲಿನ ಸಿಬ್ಬಂದಿಗಳ ಆರೈಕೆಯೇ ಕಾರಣ ಅಂತಾರೇ ಇಲ್ಲಿನ ಅಧಿಕಾರಿ ಸಂತೋಷ್ ಕುಮಾರ್.’
ಭಾರತದಲ್ಲಿರುವ ಎಲ್ಲ ಜೈವಿಕ ಉದ್ಯಾನವನಕ್ಕೆ ಹೋಲಿಸಿದ್ರೆ, ಬನ್ನೇರುಘಟ್ಟ ಜೈವಿಕ ಉದ್ಯಾನವನ ತನ್ನದೆಯಾದ ಸ್ಥಾನಮಾನ ಹೊಂದಿದೆ. ಎಲ್ಲ ಉದ್ಯಾನವನದಲ್ಲಿ ಹುಲಿ, ಸಿಂಹ ಚಿರತೆಗಳು ಕೇವಲ, 15-18 ವರ್ಷ ಬದುಕಿದ್ರೆ, ಇಲ್ಲಿ 25 ವರ್ಷಕ್ಕಿಂತ ಹೆಚ್ಚು ಕಾಲ ಬದುಕುವ ಮೂಲಕ ದೇಶದ ಎಲ್ಲ ಉದ್ಯಾನವನಗಳಿಗೆ ಬನ್ನೇರುಘಟ್ಟ ಮಾದರಿಯಾಗಿ ನಿಂತಿದೆ.ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳ ಅಯಸ್ಸು ಹೆಚ್ಚಾಗಿದ್ದು, ಈ ವಿಚಾರ ಎಲ್ಲರಲ್ಲಿಯೂ ಸಂತಸ ಮೂಡಿಸಿದೆ.
1. ಪೋಲಿಯೋ ಬಾಧಿತ ಈಗ ಟ್ರಾಫಿಕ್ ವಾರ್ಡನ್..!
2. ಸ್ಟಾರ್ಟ್ಅಪ್ ಉದ್ಯಮಿಗಳಿಗೆ ಸ್ಫೂರ್ತಿ ನೀಡಬಲ್ಲ ಸ್ಪೋರ್ಟ್ಸ್ಮನ್ ಸ್ಪಿರಿಟ್.. !