ಆವೃತ್ತಿಗಳು
Kannada

ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಮರುಬಳಕೆ - ವಿಜ್ಞಾನಿಗಳಿಂದ ಡೀಸೆಲ್ ತಯಾರಿಕೆ

ಟೀಮ್​ ವೈ.ಎಸ್.ಕನ್ನಡ

YourStory Kannada
28th Jun 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರಕ ಅನ್ನೋದು ಸುಳ್ಳಲ್ಲ. ಹಾಗಾಗಿಯೇ ಅದೆಷ್ಟೋ ಕಡೆಗಳಲ್ಲಿ ಪ್ಲಾಸ್ಟಿಕ್‍ಗೆ ನಿಷೇಧ ಹೇರಲಾಗಿದೆ. ಆದ್ರೆ ಪ್ಲಾಸ್ಟಿಕ್‍ನಿಂದ ಸಂಪೂರ್ಣವಾಗಿ ದೂರವಿರೋದು ಅಸಾಧ್ಯದ ಮಾತು. ನಮ್ಮ ನಿತ್ಯ ಬಳಕೆಯಲ್ಲಿ ಪ್ಲಾಸ್ಟಿಕ್ ಬೇಕೇ ಬೇಕು ಎಂಬಂತಾಗಿದೆ. ಹಾಗಿದ್ರೆ ಬಳಸಿ ಬಿಸಾಡಿದ ಪ್ಲಾಸ್ಟಿಕ್‍ನ ಮರುಬಳಕೆ ಹೇಗೆ? ಪರಿಸರಕ್ಕೆ ಪೂರಕವಾಗಿ ಅದನ್ನು ಹೇಗೆ ಪರಿವರ್ತಿಸುವುದು ಅನ್ನೋ ತಲೆನೋವು ಎಲ್ಲರನ್ನೂ ಕಾಡ್ತಾ ಇತ್ತು. ಆದ್ರೆ ಇನ್ನು ಮುಂದೆ ಪ್ಲಾಸ್ಟಿಕ್ ಬಹುಪಯೋಗಿ ಎನಿಸಿಕೊಳ್ಳಲಿದೆ. ಎಲ್ಲ ರಾಷ್ಟ್ರಗಳನ್ನೂ ಕಾಡುತ್ತಿರುವ ಇಂಧನ ಸಮಸ್ಯೆಗೆ ಪ್ಲಾಸ್ಟಿಕ್ ಪರಿಹಾರ ಒದಗಿಸಲಿದೆ. ಹೌದು ಪ್ಲಾಸ್ಟಿಕ್‍ನಿಂದ ಇಂಧನ ತಯಾರಿಸಬಹುದು ಅನ್ನೋದನ್ನು ವಿಜ್ಞಾನಿಗಳು ಸಂಶೋಧನೆ ಮೂಲಕ ದೃಢಪಡಿಸಿದ್ದಾರೆ.

ಪ್ರಯೋಗಾಲಯದಲ್ಲಿ ನಡೆಸಿದ ಸಂಶೋಧನೆಯ ಮೂಲಕ ಪ್ಲಾಸ್ಟಿಕ್ ಅನ್ನು ಬಳಕೆಗೆ ಯೋಗ್ಯ ಇಂಧನವನ್ನಾಗಿ ಪರಿವರ್ತಿಸಬಹುದು ಅಂತಾ ವಿಜ್ಞಾನಿಗಳು ಹೇಳಿದ್ದಾರೆ. ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಜಂಟಿಯಾಗಿ ನಡೆಸಿದ ಸಂಶೋಧನೆಯ ಫಲ ಇದು. `ಸೈನ್ಸ್ ಅಡ್ವಾನ್ಸಸ್' ಎಂಬ ಪತ್ರಿಕೆಯಲ್ಲಿ ಈ ಕುರಿತ ಲೇಖನವೂ ಪ್ರಕಟವಾಗಿದೆ. ಇದುವರೆಗೂ ಪ್ಲಾಸ್ಟಿಕ್ ಅನ್ನು ಜೈವಿಕ ಅಥವಾ ರಾಸಾಯನಿಕವಾಗಿ ಪರಿವರ್ತಿಸಬಲ್ಲ ಯಾವುದೇ ತಂತ್ರಜ್ಞಾನವನ್ನು ಜಗತ್ತಿನ ಯಾವ ರಾಷ್ಟ್ರವೂ ಅಭಿವೃದ್ಧಿಪಡಿಸಿರಲಿಲ್ಲ. ಹಾಗಾಗಿ ಈ ಸಂಶೋಧನೆ ಪರಿಣಾಮಕಾರಿ ಬದಲಾವಣೆಯ ಮೂಲವಾಗುವುದರಲ್ಲಿ ಅನುಮಾನವಿಲ್ಲ.

image


ಸೈನ್ಸ್ ಅಡ್ವಾನ್ಸಸ್‍ನ ಸೈ-ಟೆಕ್ ಟುಡೇ ವರದಿಯ ಪ್ರಕಾರ ಅತ್ಯಂತ ಕಡಿಮೆ ವಿದ್ಯುತ್ ಬಳಸಿ ಈ ಪ್ರಕ್ರಿಯೆ ನಡೆಸಲಾಗುತ್ತದೆ, ಅಂತಿಮವಾಗಿ ಪರಿಶುದ್ಧವಾದ ಇಂಧನ ದೊರೆಯುವುದು ವಿಶೇಷ. ನಮ್ಮ ಪ್ಲಾಸ್ಟಿಕ್ ಕಸದ ಸದುಪಯೋಗಕ್ಕೆ ಇದೊಂದು ಅತ್ಯುತ್ತಮ ಮಾರ್ಗ ಅನ್ನೋ ವಿಶ್ವಾಸ ಅವರದ್ದು. ಇದಕ್ಕೆ ಅತಿ ಹೆಚ್ಚು ಬಿಸಿ ಅಥವಾ ವಿದ್ಯುತ್ ಅಗತ್ಯವಿಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಮುರಿಯಲು ಸಾಧ್ಯವಾಗದ ಕೇವಲ ಪಾಲಿಮರ್ ಬಳಕೆಗೆ ಉಪಯೋಗಿಸುತ್ತಿದ್ದ ಅನುಪಯುಕ್ತ ಪ್ಲಾಸ್ಟಿಕ್‍ಗಳಿಂದ ಇಂಧನ ತಯಾರಿಸಬಹುದು.

ಇದನ್ನು ಓದಿ: ಕೊಳಗೇರಿ ಮಕ್ಕಳ ಭವಿಷ್ಯ ರೂಪಿಸುತ್ತಿರುವ ಜನಾಗ್ರಹ ಸಂಸ್ಥೆ

ಶಾಪಿಂಗ್ ಬ್ಯಾಗ್, ಪ್ಲಾಸ್ಟಿಕ್ ಬಾಟಲ್‍ಗಳು, ಕವರ್‍ಗಳಂತಹ ಫಾಲಿಥಿನ್ ಆಧಾರದ ಪ್ಲಾಸ್ಟಿಕ್‍ಗಳ ಮರುಬಳಕೆಗೆ ಹೈಡೋಕಾರ್ಬನ್‍ಗಳ ಜೊತೆಗೆ ಎರಡು ಬಗೆಯ ವೇಗವರ್ಧಕಗಳನ್ನು ವಿಜ್ಞಾನಿಗಳು ಬಳಸಿಕೊಂಡಿದ್ದಾರೆ. ಮೊದಲನೆಯ ವೇಗವರ್ಧಕ ಒಂದು ಇರಿಡಿಯಮ್ ಆಧಾರಿತ ಸಂಯುಕ್ತ, ಪ್ಲಾಸ್ಟಿಕ್‍ನಲ್ಲಿರುವ ಇಂಗಾಲದ ಅಣುಗಳಿಗೆ ಜೋಡಿಸಲಾದ ಹೈಡೋಜನ್ ಕಡೆಗೆ ಆಕರ್ಷಿತವಾಗುತ್ತದೆ. ಆ ಎರಡು ಕಾರ್ಬನ್ ಆಟಮ್‍ಗಳು ತಮ್ಮ ಸಹಚರರೊಂದಿಗೆ ಪರಸ್ಪರ ಎರಡು ಬಂಧಕಗಳನ್ನು ಸೃಷ್ಟಿಸುತ್ತವೆ. ಆ ದ್ವಿಬಂಧಗಳು ಏಕಬಂಧಕ್ಕಿಂತ ಎರಡನೇ ವೇಗವರ್ಧಕಕ್ಕೆ ಹೆಚ್ಚು ಒಳಗಾಗುತ್ತವೆ. ಅದು ದೀರ್ಘ ಸರಣಿಯನ್ನು ಮುರಿಯಲು ದುರ್ಬಲ ಸ್ಪಾಟ್ ಅನ್ನು ಬಳಸಿಕೊಳ್ಳುತ್ತದೆ. ನಂತರ ಮೊದಲ ವೇಗವರ್ಧಕ ಪಡೆದುಕೊಂಡ ಜಲಜನಕದೊಂದಿಗೆ ಕೂಡಿಕೊಳ್ಳುತ್ತದೆ. ಉದ್ದವಾದ ಪಾಲಿಮರ್ ಮಧ್ಯಮ ಗಾತ್ರದ ಆಲ್ಕೇನ್ಸ್‍ಗಳಾಗಿ ಸಂಪೂರ್ಣ ಚೂರಾಗುವವರೆಗೆ ಈ ಪ್ರಕ್ರಿಯೆ ನಡೆಯುತ್ತದೆ. ಅವುಗಳ ಅಣುಗಳು ಡೀಸೆಲ್ ಇಂಧನವನ್ನಾಗಿ ಪರಿವರ್ತಿಸಲು ಸಾಕಷ್ಟು ಇಂಗಾಲವನ್ನು ಹಿಡಿದಿಟ್ಟುಕೊಳ್ಳುತ್ತವೆ. ಕ್ರಿಯೆಯ ಸಮಯ, ಆಲ್ಕೇನ್ಸ್‍ಗಳನ್ನು ಇಂಧನವನ್ನಾಗಿ ಅಥವಾ ಮೇಣವನ್ನಾಗಿ ಪರಿವರ್ತಿಸುವಲ್ಲಿ ವಿಜ್ಞಾನಿಗಳು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೆ ಅನ್ನೋದೇ ಸದ್ಯಕ್ಕಿರುವ ಕುತೂಹಲ. ``ವೇಗವರ್ಧಕಗಳನ್ನು ಇಷ್ಟು ಉತ್ತಮವಾಗಿ, ಸಮಾಜಕ್ಕೆ ಅನುಕೂಲಕರವಾದ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ಅಚ್ಚರಿ ಹಾಗೂ ಸಂತೋಷದ ವಿಚಾರ'' ಅಂತಾ ರಟ್ಜರ್ಸ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಅಲನ್ ಗೋಲ್ಡ್‍ಮನ್ ಹೇಳಿದ್ದಾರೆ.

ಒಟ್ಟಿನಲ್ಲಿ ವಿಜ್ಞಾನಿಗಳ ಈ ಹೊಸ ಸಂಶೋಧನೆ ಎಲ್ಲ ರಾಷ್ಟ್ರಗಳಲ್ಲೂ ಆಶಾಕಿರಣ ಮೂಡಿಸಿದೆ. ಪ್ಲಾಸ್ಟಿಕ್ ಸದುಪಯೋಗಕ್ಕೆ ಅವಕಾಶ ಸಿಕ್ಕಂತಾಗಿದೆ. ಈ ಪ್ರಯೋಗ ಸಂಪೂರ್ಣ ಯಶಸ್ವಿಯಾದಲ್ಲಿ ಇಂಧನ ಸಮಸ್ಯೆಗೂ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. 

ಇದನ್ನು ಓದಿ:

1. 68ರ ಹರೆಯದಲ್ಲೂ ಶಾಲೆಗೆ ಹೋಗುವ ಉತ್ಸಾಹ - ನೇಪಾಳದ ಹಿರಿಯ ವಿದ್ಯಾರ್ಥಿ ದುರ್ಗಾ ಕಮಿ

2. ರಂಜಾನ್ ತಿಂಗಳಲ್ಲೊಂದು ಪವಿತ್ರ ಕೆಲಸ- ಅರಬ್ ದೇಶಗಳಲ್ಲಿ ಸುಮಯ್ಯ ಹೊಸ ಸಾಹಸ

3. ಭಾರತೀಯ ರೈಲ್ವೇಗೂ ಬಂತೂ ಬದಲಾವಣೆಯ ಕಾಲ..!

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

  Latest Stories