ಆವೃತ್ತಿಗಳು
Kannada

ತೆಂಗಿನ ಕೊಯ್ಲಿನ ಚಿಂತೆ ಬಿಟ್ಟುಬಿಡಿ- ಅಪ್ಪಚ್ಚನ್​ ಅನ್ವೇಷಣೆಯ ಬಗ್ಗೆ ತಿಳಿದುಕೊಳ್ಳಿ

ಟೀಮ್​ ವೈ.ಎಸ್​. ಕನ್ನಡ

YourStory Kannada
29th Jun 2017
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಕೇರಳವೆಂದರೆ ಅಕ್ಷರಶಃ ತೆಂಗಿನ ಮರಗಳ ನಾಡೆಂದೇ ಅರ್ಥ. ಕೇರಳವನ್ನು ನೆನೆದರೆ ಎಲ್ಲರ ಮನಸ್ಸಿನಲ್ಲಿಯೂ ಮೊದಲು ಹೊಳೆಯುವದೇ ಸಾಲುಸಾಲು ಸುಂದರವಾದ ತೆಂಗಿನ ಮರಗಳು. ತೆಂಗು ಕೇರಳದ ಸಂಪ್ರದಾಯ, ಪಾಕಪದ್ಧತಿ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಸಾಂಪ್ರದಾಯಿಕವಾಗಿ ತೆಂಗು ಬೆಳೆಗಾರರು ತೆಂಗಿನ ಕುಯಿಲಿಗೆ ವೃತ್ತಿಪರ ಮರ ಹತ್ತುವವರನ್ನು (ಥಂದಾನರನ್ನು) ಬಳಸಿಕೊಳ್ಳುತ್ತಿದ್ದಾರೆ. ಆದರೆ ಕಾಲಕ್ರಮದಲ್ಲಿ ಥಂದಾನರು ಬೇರೆ ವೃತ್ತಿಗಳನ್ನು ಅನುಸರಿಸುತ್ತಿದ್ದು ಈ ಸಮುದಾಯದ ಸಂಖ್ಯೆಯು ಇಳಿಮುಖಗೊಳ್ಳುತ್ತಿದೆ. ಇದಕ್ಕೆ ತೆಂಗಿನ ಮರ ಹತ್ತುವರದರಲ್ಲಿ ಇರುವ ಅಪಾಯ ಮತ್ತು ಕಡಿಮೆ ಆದಾಯವೇ ಕಾರಣವಾಗಿದೆ.

image


ಇದೇನೇ ಆದರೂ ತೆಂಗಿನ ಮರವಿಲ್ಲದ ಕೇರಳವನ್ನು ಊಹಿಸುವದೂ ಕಷ್ಟ. ಸಾಂಪ್ರದಾಯಿಕ ತೆಂಗಿನ ಮರ ಹತ್ತುವವರ ಕೊರತೆಯಿಂದ ತೆಂಗು ಬೆಳೆಗಾರರಿಗೆ ತಾವೇ ಮರ ಹತ್ತದೆ ಬೇರೆ ಗತಿಯಿಲ್ಲ. ಕನ್ನೂರಿನ ಅಪ್ಪಚನ್ ಎಂದೆ ಕರೆಯಲ್ಪಡುವ ಎಮ್. ಜೆ. ಜೋಸೆಫ್ ಎಂಬ ತೆಂಗು ಬೆಳೆಗಾರ ಇದರಿಂದ ಮನನೊಂದು ಪ್ರತಿಯಾಗಿ ತೆಂಗಿನ ಮರವನ್ನೇರುವ ಸಾಧನವನ್ನೇ ತಯಾರಿಸಿದ. ನ್ಯಾಷನಲ್ ಇನ್ನೋವೇಷನ್ ಫೌಂಡೇಷನ್ (NIF) ಪ್ರಕಾರ 130 ಅಡಿಗಳ ಮವನ್ನೇರಲು ಥಂದಾನರಿಗೆ ಸಾಮಾನ್ಯವಾಗಿ 4 - 5 ನಿಮಿಷಗಳು ತಗಲುತ್ತಿದ್ದರೆ ಅಪ್ಪಚ್ಚನ್‍ನ ಈ ಸಾಧನದಿದಂದ ಇದೇ ಕೆಲಸಕ್ಕೆ 1 - 2 ನಿಮಿಷಗಳು ಮಾತ್ರ ಸಾಕು.

ಇದನ್ನು ಓದಿ: ಡಿಸೈನರ್ "ಬೋಟಿಕ್ " ! ಮಹಿತಾ ಪ್ರಸಾದ್ ಡಿಸೈನ್ಸ್

ಅಪ್ಪಚ್ಚನ್ ಶಾಲಾ ಶಿಕ್ಷಣದಿಂದ ವಂಚಿತನಾಗಿದ್ದರೂ ನೈಜ ಸಮಸ್ಯೆಗಳಿಗೆ ತನ್ನ ಸುತ್ತಲಿನ ವಸ್ತುಗಳನ್ನು ಬಳಸಿ ಪರಿಹಾರ ಕ0ಡುಕೊಳ್ಳುವಲ್ಲಿ ಪರಿಣಿತಿ ಪಡೆದಿದ್ದ. ಈತ ತೆಂಗಿನ ಕಾಯಿಯಿಂದ ಹಾಲು ಮತ್ತು ರಸವನ್ನು ಹಿಂಡುವ ಸಾಧನವನ್ನೂ ಆವಿಷ್ಕರಿಸಿದ್ದ. 2006ರಲ್ಲಿ ಈ ಸಾಧನವು ಪೇಟೆಂಟ್ ಪಡೆದುಕೊ0ಡಿದ್ದು ಮಾತ್ರವಲ್ಲದೇ ನ್ಯಾಷನಲ್ ಇನ್ನೋವೇಷನ್ ಫೌಂಡೇಷನ್ (NIF)ನಿ0ದ ಕಟಾವಿನ ನಂತರ ಬಳಕೆ ಮಾಡುವ ಕೃಷಿ ಸಾಧನವೆಂಬ ಪ್ರಮಾಣಪತ್ರವನ್ನೂ ಪಡೆದುಕೊಂಡಿತು. ಭಾರತ ಮಾತ್ರವಲ್ಲದೇ ಈ ಸಾಧನವನ್ನು ಯು. ಎಸ್. ಎ., ಮೆಕ್ಸಿಕೊ, ಮಾಲ್ಡಿವ್ಸ್, ಥೈಲ್ಯಾಂಡ್, ಆಸ್ಟ್ರೇಲಿಯ ಮತ್ತು ಬ್ರೆಜಿಲ್ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಒಟ್ಟಿನಲ್ಲಿ ತೆಂಗಿನ ಮರಗಳನ್ನು ಹತ್ತಲು ಮನಷ್ಯರ ನೆರವು ಪಡೆದರೆ ಅಪಾಯವಿರುತ್ತದೆ. ಆದ್ರೆ ಮಷಿನ್​ ಮೂಲಕ ತೆಂಗಿನ ಕುಯಿಲು ಮಾಡಿದರೆ ಅಪಾಯ ಕೊಂಚ ಕಡಿಮೆ. ತಾಂತ್ರಿಕತೆಯನ್ನು ಬಳಿಸಿಕೊಳ್ಳಲು ತೆಂಗು ಬೆಳೆಗಾರರು ಮನಸ್ಸು ಮಾಡಬೇಕು ಅಷ್ಟೇ.

ಇದನ್ನು ಓದಿ:

1. ಇಲ್ಲಿ ಕೈದಿಗಳೇ ಕೆಲಸಗಾರರು..!

2. ವ್ಯವಹಾರ ಕುದುರಿಸಿಕೊಳ್ಳುವುದು ಸುಲಭದ ಮಾತಲ್ಲ..! ಅದಕ್ಕೂ ಬೇಕು ಸಖತ್​​ ಐಡಿಯಾ..!

3. ಮಹಿಳೆರಿಗೆ ಕಿರಿಕಿರಿ ಮಾಡುವ ಪುಡಾರಿಗಳೇ ಹುಷಾರ್..! ಜೈಪುರದಲ್ಲಿ ರಚನೆಯಾಗಿದೆ ವಿಶೇಷ ಮಹಿಳಾ ಪೊಲೀಸ್ ಪಡೆ


 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories