"ಗ್ರೀನ್ ಕಾರ್ಪೆಟ್" ಹಾಸಿತು ಆಧುನಿಕ ಪಾಟ್ ಬ್ಯುಸಿನೆಸ್

ಟೀಮ್​ ವೈ.ಎಸ್​. ಕನ್ನಡ

5th Jun 2017
  • +0
Share on
close
  • +0
Share on
close
Share on
close

ಇವತ್ತು ಹೆಣ್ಣು ಮಕ್ಕಳು ಸ್ಟಾರ್ಟ್​ಅಪ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಹೊಸ ಬೆಳವಣಿಗೆ, ಆದ್ರೆ 15 ವರ್ಷಗಳ ಹಿಂದೆಯೇ ಇಂಥದೊಂದು ನಿರ್ಧಾರ ಕೈಗೊಂಡು ಅದರಲ್ಲಿ ಯಶಸ್ಸನ್ನು ಕಂಡವರು ಮೈನಾ ಅವರು. ಯಶಸ್ಸು ಮಾತ್ರವಲ್ಲ ಮೈನಾ ಅವರದ್ದು ಮಾದರಿ ಸಾಧನೆ.

ಹೊಸ ಹೆಜ್ಜೆ

ಇವತ್ತು ಗಾರ್ಡನಿಂಗ್ ಅನ್ನೋದು ಕ್ವಾಲಿಟಿ ಆಫ್ ಲೀವಿಂಗ್​ನ ಒಂದು ಭಾಗವಾಗಿದೆ. ಗಾರ್ಡನಿಂಗ್​ನಲ್ಲಿ ಮಣ್ಣಿನ ಪಾಟ್​​ಗಳ ಜಾಗದಲ್ಲಿ ಆಧುನಿಕ ಪಾಟ್​ಗಳು ಹೆಚ್ಚು ಪಾಲು ಪಡೆದುಕೊಂಡಿವೆ. ಆದ್ರೆ ಇಂತಹ ಆಧುನಿಕ ಪಾಟ್​ಗಳನ್ನು ಬೆಂಗಳೂರಿಗರಿಗೆ ಪರಿಚಯಿಸಿದ ಕೀರ್ತಿ ಮೈನಾ ಅವರಿಗೆ ಸಲ್ಲುತ್ತದೆ.

image


ಇಲ್ಲಿದೆ ವೈವಿಧ್ಯತೆ

ಇವರ "ಗ್ರೀನ್ ಕಾರ್ಪೆಟ್" ಶಾಪ್ ಒಳ ಹೊಕ್ಕ ತಕ್ಷಣ ಕಣ್ಣು ಹಾಯಿಸಿದಲ್ಲೆಲ್ಲಾ ವಿವಿಧ ವಿನ್ಯಾಸದ, ಪರಿಚಯವಿರದ ಹೂ ಕುಂಡಗಳು ಕಾಣಸಿಗುತ್ತವೆ. ಒಂದಕ್ಕಿಂದಲೂ ಒಂದು ಭಿನ್ನ, ವಿಭಿನ್ನ. ವಿವಿಧ ವಿನ್ಯಾಸ... ವೈವಿಧ್ಯಮಯವಾದ ಬಣ್ಣ... ಈ ಪಾಟ್ ಕಲೆಕ್ಷನ್​ಗಳು ಇಂದು ಗಾರ್ಡನಿಂಗ್ ಪ್ರಪಂಚವನ್ನು ಆಳುತ್ತಿವೆ.

ಇದನ್ನು ಓದಿ: ಕಾರ್ಪೋರೇಟ್​ ಕೆಲಸ ಬಿಟ್ಟ ಮಹಿಳೆ- ಪ್ಲಾಸ್ಟಿಕ್​ ವಿರೋಧಿ ಆಂದೋಲನ ಮಾಡುತ್ತಿರುವ "ಬೆಳ್ಳಿ ಕಿರಣ"

ವಿದೇಶದ ನೀತಿ ಬೆಂಗಳೂರಿಗೆ ಪ್ರೀತಿ

ಅಂದ ಹಾಗೇ ಗಾರ್ಡನಿಂಗ್ ಅನ್ನೋದು ಭಾರತದಲ್ಲಿ ಈಗೀಗ ಕಣ್ಣು ಬಿಡುತ್ತಿದೆ. ಅಷ್ಟೇ ಅಲ್ಲದೇ ಉದ್ಯಮವಾಗಿ ಇದಕ್ಕೆ ಸಿಗಬೇಕಾದ ಮಾನ್ಯತೆಯೂ ಇನ್ನೂ ದಕ್ಕಿಲ್ಲ. ಆದ್ರೆ ವಿದೇಶದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಗಾರ್ಡನಿಂಗ್ ಅನ್ನೋದು ಲೀವಿಂಗ್ ಸ್ಟೈಲ್ ಮತ್ತು ಸ್ಟೇಟಸ್​ನ ಪ್ರತೀಕ. ವಿದೇಶಿಗರೂ ಇದಕ್ಕಂತಲೇ ಸಾವಿರಾರೂ ಡಾಲರ್​ಗಳನ್ನು ವ್ಯಯಿಸುತ್ತಾರೆ. ಅಂದ ಹಾಗೇ ಅಲ್ಲಿ ಸೀಸನ್​ಗೆ ತಕ್ಕಂತೆ ಗಿಡಗಳನ್ನು ಬೆಳೆಸುತ್ತಾರೆ, ಹೂ ಬಿಟ್ಟ ನಂತರ ಆ ಸಸಿಗಳು ಒಣಗಲು ಆರಂಭಿಸುತ್ತವೆ. ನಂತರ ಅದೇ ಸ್ಥಳಕ್ಕೆ ಬೇರೊಂದು ಹೂ ಗಿಡ ಬಂದು ಅರಳುತ್ತದೆ. ಇದಕ್ಕಾಗಿ ವಿದೇಶದಲ್ಲಿ ನಾನಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಕೇವಲ ಮಣ್ಣಿನ ಪಾಟ್​ಗಳಷ್ಟೇ ಅಲ್ಲದೇ ಸೆರಾಮಿಕ್, ಟೆರಾಕೋಟಾ ಸೇರಿದಂತೆ, ಹಲವಾರು ಆರ್ಟಿ ಫ್ಯಾಕ್ಟ್​ಗಳನ್ನು ಕೂಡ ಬಳಸುತ್ತಾರೆ.

image


ಮೊದಲು ಐಡಿಯಾ ಹೊಳೆದದ್ದು

ಇಂತಹ ಹಲವಾರು ವಿಷಯಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದು, ಗ್ರೀನ್ ಕಾರ್ಪೆಟ್​​ನ ಮಾಲೀಕಾರದ ಮೈನಾರವರು. ಮೈನಾರವರು 15 ವರ್ಷಗಳಿಂದಲೂ ಈ ಆಧುನಿಕ ಪಾಟ್ ಡೀಲರ್​ಶಿಪ್ ಬ್ಯುಸಿನೆಸ್​ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ತಾವು ಹೆಚ್.ಆರ್. ಕನ್ಸಲ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಗ ಹಲವಾರು ದೇಶಗಳನ್ನು ಸುತ್ತುವ ಅವಕಾಶ ದೊರೆತಿತ್ತು. ಇಂತಹ ಸಂದರ್ಭದಲ್ಲಿ ವಿದೇಶದಲ್ಲಿನ ಗಾರ್ಡನಿಂಗ್ ಪ್ರೀತಿಗೆ ಮನಸೋತ ಮೈನಾ ಅವರು ಬೆಂಗಳೂರಿನ ತಮ್ಮ ಮನೆಯಲ್ಲೆ ಗಾರ್ಡನಿಂಗ್ ಮಾಡುವ ಬಗ್ಗೆ ಚಿಂತಿಸಿದ್ರು . ಆ ಯೋಚನೆಯೇ ಅವರ ಬದುಕು ಬದಲಿಸಿತ್ತು.

" ನಾನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಧುನಿಕ ಪಾಟ್​ಗಳಿಗೆ ಹುಡುಕಾಟ ನಡೆಸಿದಾಗ ಎಲ್ಲೂ ಕೂಡ ಅದರ ಸುಳಿವು ಸಿಗಲಿಲ್ಲ. ಇನ್​ಫ್ಯಾಕ್ಟ್​​ ಅದರ ಪರಿಚಯವೇ ಇರಲಿಲ್ಲ. ಆ ಸಂದರ್ಭದಲ್ಲಿ ನಾನೇ ಏಕೆ ಈ ಪಾಟ್​ಗಳನ್ನು ಬೆಂಗಳೂರಿಗರಿಗೆ ಪರಿಚಯಿಸಬಾರದು ಎಂದು ನಿರ್ಧರಿಸಿ, ವಿದೇಶದಿಂದ ಪಾಟ್ ಡೀಲರ್​ಶಿಪ್ ಪಡೆದುಂಡೆ. ಅಂದಿನಿಂದ ಇಂದಿನ ತನಕ ಮುಟ್ಟಿದೆಲ್ಲಾ ಸಕ್ಸಸ್ ಎನಿಸುತ್ತಿದೆ.”
- ಮೈನಾ, ಗ್ರೀನ್ ಕಾರ್ಪೆಟ್, ಸಂಸ್ಥಾಪಕಿ

ಯಶಸ್ಸಿನ ಮಂತ್ರ

ಹೀಗೆ ಪಾಟ್ ಬ್ಯುಸಿನೆಸ್ ಆರಂಭಿಸಿದ ಮೈನಾ ಅವರು ಜರ್ಮನ್ ಕಂಪನಿಯ ಡೀಲರ್ ಶಿಪ್ ತೆಗೆದುಕೊಂಡು ಆರಂಭದಲ್ಲಿ ಬೆಂಗಳೂರಿನಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಿದರು. ಮೊದ ಮೊದಲು ಜನರನ್ನು ಕನ್ವಿನ್ಸ್ ಮಾಡುವುದೇ ದೊಡ್ಡ ಸವಾಲಾಗಿತ್ತು. ಇದಕ್ಕಾಗಿ ಸಾಕಷ್ಟು ವರ್ಕ್​ಶಾಪ್, ಸೆಮಿನಾರ್​ಗಳನ್ನು ಮಾಡಲು ಆರಂಭಿಸಿದ್ರು. ಫಾಲೋ ಅಪ್​​ಗಳನ್ನು ಮಾಡಲು ಆರಂಬಿಸಿದ್ರು. ಸೋ ಬ್ಯುಸಿನೆಸ್ ನಿಧಾನವಾಗಿ ಕೈ ಹತ್ತಿತು.

image


ಸಾಲದಿಂದ ಸಿರಿವಂತಿಕೆ ತನಕ

ಮೊದಲು ತಮ್ಮ ಬಳಿಯಿದ್ದ ಅಲ್ಪ ಸ್ವಲ್ಪ ಸೇವಿಂಗ್ಸ್​ನಲ್ಲೇ ಉದ್ಯಮ ಅರಂಭಿಸಿದ್ರು, ಆನಂತರ ತಮ್ಮ ಪ್ರಾಪರ್ಟಿ ಪ್ಲೆಡ್ಜ್ ಮಾಡಿ ಬ್ಯಾಂಕ್​ನಿಂದ ಸಾಲ ತೆಗೆದು ಮೂಲ ಬಂಡವಾಳವನ್ನಾಗಿಸಿದ್ರು. ನಂತರ ಇದು ದೊಡ್ಡ ಮಟ್ಟದಲ್ಲಿ ಬೆಳೆಯಲಾರಂಭಿಸಿತು. ಸೆರಾಮಿಕ್, ಪಾಲಿ ಪ್ರಾಪಲಿನ್, ಬೋನ್ಸಾಯ್, ಜೆನ್ ಪಾಟ್ ಗಾರ್ಡನಿಂಗ್ ಸೇರಿದಂತೆ ಹಲವಾರು ರೀತಿಯ ಪಾಟ್ ಕಲೆಕ್ಷನ್ಸ್ ಇಲ್ಲಿದೆ.

ಗಿಡಗಳ ಕ್ಲಿನಿಕ್

ಅಷ್ಟೇ ಅಲ್ಲದೇ ನೀವೇನಾದ್ರೂ ಊರಿಗೆ ಹೊರಟರೇ ನಿಮ್ಮ ಗಿಡಗಳನ್ನು ಇವರು ನೋಡಿಕೊಳ್ಳುತ್ತಾರೆ. ನೀವು ಬರುವ ತನಕ ಅದರ ಆರೈಕೆ ಮಾಡುತ್ತಾರೆ. ಇನ್ನು ಒಂದು ವೇಳೇ ನಿಮ್ಮ ಗಿಡಗಳಿಗೆ ರೋಗ ತಗುಲಿದ್ರೆ ಚಿಂತೆನೇ ಬೇಡ. ಮೈನಾ ಅವರು ಅದನ್ನು ಟ್ರೀಟ್ ಮಾಡುತ್ತಾರೆ. ಅದಕ್ಕೆ ಅಗತ್ಯವಾದ ಚಿಕಿತ್ಸೆ ಕೂಡ ನೀಡುತ್ತಾರೆ.

image


ಸ್ಪೂರ್ತಿ ಚಿಲುಮೆ

ಒಟ್ಟಿನಲ್ಲಿ ಒಂದೆ ಸೂರಿನಡಿಯಲ್ಲಿ ಹಲವು ವಿಷಯಗಳನ್ನು ಮೈನಾ ನಿಭಾಯಿಸುತ್ತಿರುವುದು ನಿಜಕ್ಕೂ ಸ್ಫೂರ್ತಿದಾಯಕ ಬೆಳವಣಿಗೆ. ಈಗ ಬೆಂಗಳೂರಿನಲ್ಲಿ ಏರಿಯಾದಲ್ಲೊಂದು ಪಾಟ್ ಪ್ಲಾಜಾಗಳು ಕಾಣ ಸಿಗುತ್ತವೆ. ಆದ್ರೆ 15 ವರ್ಷದ ಹಿಂದೆ ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟ ಮೊದಲ ಲೇಡಿ ಮೈನಾ ಅವರ ಸಾಧನೆ ಎಂಥವರಿಗೂ ಸ್ಪೂರ್ತಿ ತುಂಬುವಂಥದ್ದು. ಆರಂಭದಲ್ಲಿ ಎಲ್ಲವೂ ಕಷ್ಟ ಎನಿಸುತ್ತದೆ. ಆದರೆ ಕೊಂಚ ಮನಸು ಮಾಡಿ ಧೈರ್ಯ ಮಾಡಿದ್ರೆ ಎಲ್ಲವೂ ನಮ್ಮ ಕೈಯಲ್ಲಿ ಸಾಧ್ಯವಾಗುತ್ತೆ ಅನ್ನೋದಕ್ಕೆ ಮೈನಾ ಅವರು ಉತ್ತಮ ಉದಾಹರಣೆ. 

ಇದನ್ನು ಓದಿ:

1. ವಯಸ್ಸು ಜಸ್ಟ್​ 59- ಆದ್ರೆ 400 ಕಂಪನಿಗಳ ಮಾಲೀಕ..!

2. ಮರ ಬೆಳೆಸಿ, ಪರಿಸರ ಉಳಿಸಿ- ಸಿಲಿಕಾನ್​ ಸಿಟಿಯಲ್ಲಿ ಪರಿಸರ ಬೆಳೆಸು ಕಾರ್ಯಕ್ಕೆ ಡಿಜಿಟಲ್​ ಟಚ್​​​

3. ಅಜ್ಜಿ ಕಥೆಗೆ ಸರಕಾರಿ ಆರ್ಡರ್..!

Want to make your startup journey smooth? YS Education brings a comprehensive Funding and Startup Course. Learn from India's top investors and entrepreneurs. Click here to know more.

  • +0
Share on
close
  • +0
Share on
close
Share on
close

Our Partner Events

Hustle across India