Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಕಾರ್ಪೋರೇಟ್​ ಕೆಲಸ ಬಿಟ್ಟ ಮಹಿಳೆ- ಪ್ಲಾಸ್ಟಿಕ್​ ವಿರೋಧಿ ಆಂದೋಲನ ಮಾಡುತ್ತಿರುವ "ಬೆಳ್ಳಿ ಕಿರಣ"

ಟೀಮ್​ ವೈ.ಎಸ್​. ಕನ್ನಡ

ಕಾರ್ಪೋರೇಟ್​ ಕೆಲಸ ಬಿಟ್ಟ ಮಹಿಳೆ- ಪ್ಲಾಸ್ಟಿಕ್​ ವಿರೋಧಿ ಆಂದೋಲನ ಮಾಡುತ್ತಿರುವ "ಬೆಳ್ಳಿ ಕಿರಣ"

Wednesday May 24, 2017 , 3 min Read

ಪ್ಲಾಸ್ಟಿಕ್​ ಬಳಕೆ ವಿಶ್ವಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಕೆಲವು ದೇಶಗಳಂತೂ ಪ್ಲಾಸ್ಟಿಕ್​ ಬಳಕೆಗೆ ನಿಷೇಧವನ್ನು ಹೇರಿವೆ. ಇನ್ನು ಕೆಲವು ಕಡೆ ಅವುಗಳ ಪುನರ್​​ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್​ನಿಂದ ಪರಿಸರಕ್ಕೆ ಉಂಟಾಗುವ ಹಾನಿಯ ಬಗ್ಗೆ ತಿಳಿಸಿಕೊಡಲಾಗುತ್ತದೆ. ಸರಕಾರ, ಎನ್​ಜಿಒಗಳು ಕೂಡ ಪ್ಲಾಸ್ಟಿಕ್​ ಬಳಕೆ ಮತ್ತು ಅದರ ನಿಷೇಧದ ಬಗ್ಗೆ ಜನರಿಗೆ ತಿಳಿ ಹೇಳುತ್ತಿವೆ. ಪರಿಸರವಾದಿಗಳು, ಪರಿಸರ ತಜ್ಞರು ಪ್ಲಾಸ್ಟಿಕ್​ನ ಮಾರಕತೆಯ ಬಗ್ಗೆ ವಿವರಿಸುತ್ತಿದ್ದಾರೆ. ದಿನಗಳು ಉರುಳಿದಂತೆ ಪ್ಲಾಸ್ಟಿಕ್​ನಿಂದಾಗುವ ಅನಾಹುತಗಳ ಬಗ್ಗೆ ಜನರು ಕೂಡ ತಿಳಿದುಕೊಳ್ಳುತ್ತಿದ್ದಾರೆ. ವಿದ್ಯಾವಂತರು ಮತ್ತು ಸುಶಿಕ್ಷಿತರು ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ ಪ್ಲಾಸ್ಟಿಕ್​​ ಬಳಕೆ ಮಾಡುತ್ತಿದ್ದಾರೆ. ಜೈವಿಕ ಹಾಗೂ ಪರಿಸರಕ್ಕೆ ಹಾನಿಯಾಗದ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಮೂಡುತ್ತಿದೆ. 

image


ಪರಿಸರಕ್ಕೆ ಪ್ಲಾಸ್ಟಿಕ್‌ ಹಾನಿಕಾರಕ ಎಂಬುದು ಗೊತ್ತಿರುವ ಸತ್ಯ. ಇದನ್ನು ಬಳಸುವುದನ್ನು ನಿಲ್ಲಿಸಬೇಕೆಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಅಕ್ಕೆ ಪರ್ಯಾಯ ಮಾತ್ರ ಯಾರು ಹುಡುಕುತ್ತಿಲ್ಲ. ಆದರೆ ಇಲ್ಲೊಬ್ಬರು ಮಹಿಳೆ ಕಾಟನ್ ಚೀಲಗಳನ್ನು ಪರಿಚಯಿಸಿ, ಪ್ಲಾಸ್ಟಿಕ್ ಅನ್ನು ದೂರ ಇಟ್ಟಿದ್ದಾರೆ. ಹೌದು ಎಂ.ಎಸ್. ಅರುಣಾ ಎಂಬುವವರು ಪ್ಲಾಸ್ಟಿಕ್​ಗೆ ಪರ್ಯಾಯವನ್ನು ಕಂಡುಕೊಳ್ಳಬೇಕು ಎನ್ನುವ ಸದಾಶಯದಿಂದ ಕಾಟನ್‌ ಚೀಲಗಳನ್ನು ಉತ್ಪಾದನೆ ಮಾಡುತ್ತಿದ್ದಾರೆ. ಅದಕ್ಕೆ "ಬೆಳ್ಳಿಕಿರಣ ಕ್ರಿಯೇಷನ್ಸ್" ಎಂಬ ಹೆಸರು ಇಟ್ಟಿದ್ದಾರೆ.

ಇದನ್ನು ಓದಿ: ಟೆರೆಸ್​ ಮೇಲೆ ಬೆಳೆಯುತ್ತೆ ತರಕಾರಿ-ತಪ್ಪಿ ಹೋಯಿತು ಕಸದ ಕಿರಿಕಿರಿ..!

ಮೈಸೂರು ಮೂಲದ ಅರುಣಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರೆ. ಕಾರ್ಪೊರೇಟ್ ಕಂಪನಿಯೊಂದರಲ್ಲಿ ದೊಡ್ಡ ಮೊತ್ತದ ಸಂಬಳ ಪಡೆಯುತ್ತಿದ್ದವರು. ಬೇರೆಯವರ ಕೈ ಕೆಳಗೆ ದುಡಿಯುವ ಬದಲು ನನ್ನದೇ ಸ್ವಂತ ಕಂಪನಿ ಆರಂಭಿಸಬೇಕು. ಆ ಮೂಲಕ ನಾಲ್ಕು ಜನಕ್ಕೆ ನೆರವಾಗಬೇಕು ಎನ್ನುವ ಆಸೆ ಅವರಿಗೆ ಮೊದಲಿಂದಲೂ ಇತ್ತು. ಕಾರ್ಪೊರೇಟ್ ಕೆಲಸಕ್ಕೆರಾಜೀನಾಮೆ ಕೊಟ್ಟು, "ಬೆಳ್ಳಿಕಿರಣ" ಹೆಸರಿನ ಸ್ವಂತ ಕಂಪನಿ ಆರಂಭಿಸಿದರು.

image


ಕೆಲಸಕ್ಕೆ ರಾಜೀನಾಮೆ ನೀಡಿದ ನಂತರ ಅರುಣಾ ಅವರಿಗೆ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವ ಯೋಚನೆ ಬಂತು. ಅದೇ ವೇಳೆಗೆ ನಮಗೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿನ ಸ್ಲಂನಿವಾಸಿಗಳು, ಅದರಲ್ಲೂ ಮಹಿಳೆಯರನ್ನು ಇವರ ಪರಿಚಯ ಮಾಡಿಕೊಂಡರು. ಈ ಮಹಿಳೆಯರಿಗೆಲ್ಲ ಈಗಾಗಲೇ ಒಂದು ಎನ್​ಜಿಒದವರು ಕಾಟನ್ ಚೀಲ ಹೊಲಿಯುವ ತರಬೇತಿ ನೀಡಿದ್ದರು. ಇವರ ಸಹಾಯದಿಂದ, ಸಂಕ್ರಾಂತಿ ಹಬ್ಬಕ್ಕೆ ಎರಡು ಬಗೆಯ ಚೀಲಗಳನ್ನು ಹೊಲಿದರು. ಒಂದು ದೊಡ್ಡ ಚೀಲ; ಕಬ್ಬು, ಬಾಳೆ, ತೆಂಗು ಹಿಡಿಯಲು, ಇನ್ನೊಂದು ಪುಟಾಣಿ ಚೀಲ; ಎಳ್ಳು- ಬೆಲ್ಲದ ಅಚ್ಚು ಹಾಕಲು. ಈ ಚೀಲವನ್ನು ಇವರು ಮೊದಲ ಮಾರಿದ್ದು, ಅಮ್ಮ, ಚಿಕ್ಕಮ್ಮ ಸೇರಿದಂತೆ . ಈ ವಿಷಯ ಅರುಣಾ ಮತ್ತವರ ಗೆಳೆಯರು ಫೇಸ್​ಬುಕ್‌ ಸಹಾಯದಿಂದ ನೂರಾರು ಜನರನ್ನು ತಲುಪಿದರು. ಈ ಸಂಕ್ರಾಂತಿ ಹಬ್ಬವೊಂದರಲ್ಲೇ ಅರುಣಾ ಅವರ ಕಾಟನ್‌ ಚೀಲಗಳು ಒಟ್ಟು 8000 ಬ್ಯಾಗ್ ಮಾರಾಟವಾದವು.

image


ಅಲ್ಲಿಂದಲೇ ಹೊಸ ಅಧ್ಯಾಯ ಶುರುವಾಯಿತು. ತಾಂಬೂಲ ಚೀಲ, ಸೀರೆ ಚೀಲ, ಸಿರಿಧಾನ್ಯ ಅಂಗಡಿಗಳಲ್ಲಿ ಬಟ್ಟೆ ಚೀಲ, ಬ್ಲೌಸ್ ಪೀಸ್ ಇಡುವ ಪ್ಲಾಸ್ಟಿಕ್ ಕವರ್ ಬದಲು ಬಟ್ಟೆ ಚೀಲ, ಬೇಸಿಗೆ ಶಿಬಿರದಲ್ಲಿ ಕೊಡುವ ಚೀಲ, ಒಂದೇ, ಎರಡೇ... ಹೀಗೆ ಎಲ್ಲದಕ್ಕೂ ಬಟ್ಟೆ ಚೀಲ ಮಾಡಿ ಹೊಸ ಮಾರುಕಟ್ಟೆ ಸೃಷ್ಟಿಮಾಡಿಕೊಂಡರು.

" ಹೆಚ್ಚು ಮಗ್‌ಗಳಿಗೆ ಆರ್ಡರ್​​ ಕೊಟ್ಟರೆ ಮಾಡಿ ಕೊಡುತ್ತೇವೆ. ಪ್ಲಾಸ್ಟಿಕ್ ವಿರೋಧಿ ಆಂದೋಲನಕ್ಕೆ ಸಣ್ಣದೊಂದು ಕೊಡುಗೆ ನೀಡಬೇಕು ಅನ್ನುವ ಹಂಬಲದೊಂದಿಗೆ ಆರಂಭಿಸಿದ ಈ ಕೆಲಸ ಯಶಸ್ವಿಯಾಗಿದೆ ಎಂಬ ಖುಷಿ ಇದೆ".
- ಅರುಣಾ, ಬೆಳ್ಳಿ ಕಿರಣ ಸಂಸ್ಥೆ ಮುಖ್ಯಸ್ಥೆ

ಕನ್ನಡ ಪದಗಳು

ಅರುಣಾ ಅವರ "ಬೆಳ್ಳಿ ಕಿರಣ" ಸಂಸ್ಥೆಯ ಚೀಲಗಳ್ಲಲಿ ಬಹುತೇಕ ಕನ್ನಡ ಪದಗಳು ಇವೆ. ಮದುವೆ, ಮುಂಜಿ, ಗೃಹಪ್ರವೇಶ, ಗುರುವಂದನೆ ಕಾರ್ಯಕ್ರಮ, ಸೀಮಂತ ಹೀಗೆ ಎಲ್ಲದಕ್ಕೂಕನ್ನಡ ಪದಗಳಲ್ಲಿ ಬರೆದು, ಚೀಲಗಳ ಮೇಲೆ ಪ್ರಿಂಟ್ ಮಾಡಿಸಿ ಮಾರಾಟ ಮಾಡಿದ್ದಾರೆ. ಇದರ ಹಿಂದೆಯೇ ಮಗ್ ಮತ್ತು ಟಿ ಶರ್ಟ್​ಗಳ ಮೇಲೆ ಸ್ಲೋಗನ್​ಗಳನ್ನು ಪ್ರಿಂಟ್‌ ಮಾಡಿಸಿ ಮಾರಿದರು. ಬ್ಯಾಗ್​ಗಳನ್ನೂ ಸ್ಲಂನ ಮಹಿಳೆಯರು ಹೊಲಿದು ಕೊಟ್ಟರೆ, ಅಲ್ಲಿಯೇ ಇದ್ದ ಅಂಗವಿಕಲ ಯುವಕರು ಪ್ರಿಂಟಿಂಗ್ ಕೆಲಸ ಮಾಡುತ್ತಿದ್ದರು.

ಮೊದಲು ಸಂಕ್ರಾಂತಿಗೆಂದು ಶುರುವಾಗಿದ್ದು ಬಟ್ಟೆ ಚೀಲ, ಬರುಬರುತ್ತಾ ವರ್ಷಪೂರ್ತಿ ಬಳಕೆ ಆಗುವ ವಸ್ತುವೇ ಆಯಿತು. ಸ್ಲಂ ಮಹಿಳೆಯರಿಗೆ ಟ್ರೈನಿಂಗ್ ನೀಡಲಾಗಿದೆ. ಅಂತಹ ಮಹಿಳೆಯರಿಗೆ ಇಷ್ಟೇ ಅಗಲ ಚೀಲ , ಇಷ್ಟೇ ಉದ್ದ, ಇದೇ ಬಣ್ಣದ ದಾರ, ಅಂತೆಲ್ಲ ಹೇಳಿ ಡಿಸೈನ್​​ ಮಾಡಿಸುತ್ತಾರೆ. ಕೆಲವೊಮ್ಮೆ ಗ್ರಾಹಕರ ಅಭಿರುಚಿಯ ಆದ್ಯತೆ ಮೇರೆಗೆ ಸಲಹೆ ನೀಡುತ್ತಾರೆ. ಇಂತಹ ಚೀಲಗಳ ಬೆಲೆ 8 ರೂಪಾಯಿಯಿಂದ ಆರಂಭಗೊಳ್ಳುತ್ತವೆ. "ಬೆಳ್ಳಿ ಕಿರಣ" ಸಂಸ್ಥೆಯ ಚೀಲಗಳು ಮುಂಬೈ, ಪುಣೆ ಹಾಗೂ ಚೆನ್ನೈನಲ್ಲೂ ಮಾರಾಟ ಆಗಿದ್ದಿದೆ. ಹೊರರಾಜ್ಯಗಳ ಮನೆಯ ಫ್ರಿಡ್ಜ್​ನಲ್ಲಿ ನಮ್ಮ ಕನ್ನಡ ಇದೆಯೆಂಬ ಖುಷಿ ಅರುಣಾ ಅವರಿಗಿದೆ. 5 ಕೆಜಿ ತರಕಾರಿ ಹಿಡಿಸುವ ಬಟ್ಟೆಯ ಬ್ಯಾಗನ್ನು ಪ್ರತಿದಿನ ಬಳಸಿದರೂ ಅದು ಆರೆಂಟು ತಿಂಗಳು ಬಾಳಿಕೆ ಬರುತ್ತದೆ. ಬಟ್ಟೆ ಚೀಲಗಳಲ್ಲಿ ಆಹಾರ ಇಟ್ಟುಕೊಳ್ಳುವುದು ಆರೋಗ್ಯಕ್ಕೂ ಉತ್ತಮ. ಅರುಣಾ ಅವರ ಶ್ರಮಕ್ಕೆ ಎಲ್ಲರ ಬೆಂಬಲವು ಬೇಕಿದೆ. 

ಇದನ್ನು ಓದಿ:

1. 5 ದಿನಗಳಲ್ಲಿ 2 ಬಾರಿ ಮೌಂಟ್ ಎವರೆಸ್ಟ್ ಏರಿದ ಧೀರ ಮಹಿಳೆ

2. ಪಾರಿವಾಳಗಳ ಪಾಲಿಗೆ ಅನ್ನದಾತ- ಪಕ್ಷಿ ಸಂಕುಲವನ್ನು ಕಾಪಾಡುವ ಸಂರಕ್ಷಕ

3. ಪತ್ರಕರ್ತನ ಸ್ಟಾರ್ಟ್​ಅಪ್ ಉದ್ಯಮ- "ನದಿಮನೆ"ಯಲ್ಲಿ ಪ್ರವಾಸಿಗರಿಗೆ ಸಿಗುತ್ತೆ ಸಂಭ್ರಮ