ಮತ್ತೆ ಬಂತು ನೊಕಿಯಾ- ಹಳೆಯ ಮಾಡೆಲ್ಗೆ ಸ್ಮಾರ್ಟ್ ಟಚ್..!
ಟೀಮ್ ವೈ.ಎಸ್. ಕನ್ನಡ
ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ, ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧವಾಗಿದ್ದ HMD ಗ್ಲೋಬಲ್ ಕಂಪನಿಯ ನೊಕಿಯಾ 3310 ಮೊಬೈಲ್ ಹ್ಯಾಂಡ್ಸೆಟ್ ಮತ್ತೆ ಗ್ರಾಹಕರ ಮನೆ ಗೆಲ್ಲಲು ತಯಾರಿ ಮಾಡಿಕೊಂಡಿದೆ. ಹಳೆಯ ಅನುಭವ ಮತ್ತು ಮೊಬೈಲ್ನ ಹೊಸತನ ನೊಕಿಯಾಗೆ ಹೊಸ ಮಾರುಕಟ್ಟೆ ಒದಗಿಸಿಕೊಡುವ ಭರವಸೆ ಇದೆ. ಹಳೆಯ ಹೆಸರಿನ ಜೊತೆ ತನ್ನ ಮೊಬೈಲ್ ಹ್ಯಾಂಡ್ಸೆಟ್ ಹೊಸ ಟಚ್ ನೀಡಿದೆ. ಸ್ಮಾರ್ಟ್ಫೋನ್ ಯುಗಕ್ಕೆ ಬೇಕಾದ ಬದಲಾವಣೆಗಳನ್ನು ಇದು ಮಾಡಿಕೊಂಡಿದೆ.
1. ಹೊಸ ಆವೃತ್ತಿಯ ನೊಕಿಯಾ ಫೋನ್ ಮೇ 18ರಿಂದ ಮಾರುಕಟ್ಟೆಗೆ ಬರಲಿದೆ. ಈ ಫೋನ್ನ ಆರಂಭಿಕ ಬೆಲೆ 3,310ರೂಪಾಯಿಗಳು ಇರಲಿದೆ. ಭಾರತದ ಎಲ್ಲಾ ಮೊಬೈಲ್ ಸ್ಟೋರ್ಗಳಲ್ಲಿ ಇದು ಲಭ್ಯವಿರಲಿದೆ. ಸದ್ಯಕ್ಕೆ ನೊಕಿಯಾ ಮೊಬೈಲ್ ಆನ್ ಲೈನ್ ನಲ್ಲಿ ಲಭ್ಯವಿಲ್ಲ.
2.ಒಟ್ಟು 4 ಬಣ್ಣಗಳಲ್ಲಿ ಹೊಸ ನೊಕಿಯಾ ಮೊಬೈಲ್ ಲಭ್ಯವಿದೆ. ವಾರ್ಮ್ ರೆಡ್, ಹಳದಿ, ಕಡುನೀಲಿ ಮತ್ತು ಗ್ರೇ ಕಲರ್ನಲ್ಲಿ ನೊಕಿಯಾ ಮೊಬೈಲ್ ಲಭ್ಯವಿರಲಿದೆ. ವಾರ್ಮ್ ರೆಡ್ ಮತ್ತು ಹಳದಿ ಬಣ್ಣದ ಮೊಬೈಲ್ ಗ್ಲಾಸ್ ಫಿನಿಷ್ ಹೊಂದಿರಲಿದ್ದರೆ, ಉಳಿದ 2 ಬಣ್ಣಗಳು ಮ್ಯಾಟ್ ಫಿನಿಷ್ ಮಾಡೆಲ್ನಲ್ಲಿ ನೊಕಿಯಾ ಮೊಬೈಲ್ ಮಾರುಕಟ್ಟೆಗೆ ಕಾಲಿಡಲಿದೆ.
ಇದನ್ನು ಓದಿ: ಸಾಧನೆಯ ಹಿಂದಿದೆ ಬೆಟ್ಟದಂತಹ ಪರಿಶ್ರಮ- ಸಾಲ್ಸಾದಲ್ಲಿ ಗಿನ್ನೆಸ್ ದಾಖಲೆ ಬರೆದ ಸೂರ್ಯಕಾಂತ
3. ಹೊಸ ನೊಕಿಯಾ ಮೊಬೈಲ್ 2.4 ಇಂಚ್ ಡಿಸ್ಪ್ಲೇ ಹೊಂದಿರಲಿದೆ. 115.6*51*12.8ಎಂಎಂ ಅಳತೆ ಹೊಂದಿದ್ದು ಹಳೆಯ ಫೋನ್ಗಿಂತ ತೆಳುವಾಗಿರಲಿದೆ.
4. ಡುಯಲ್ ಸಿಮ್ ಮತ್ತು 2.5 ಜನರೇಷನ್ ಫೀಚರ್ ಫೋನ್ ಇದಾಗಿರಲಿದೆ. ಹಳೆಯ ನೊಕಿಯಾ ಮೊಬೈಲ್ ಸಿಂಗಲ್ ಸಿಮ್ ಕಾರ್ಡ್ ಸ್ಲಾಟ್ ಹೊಂದಿತ್ತು.
5. ನೊಕಿಯಾ ಮೊಬೈಲ್ 1200mAh ಬ್ಯಾಟರಿ ಹೊಂದಿರಲಿದೆ. ಒಂದು ಸಾರಿ ಸಂಪೂರ್ಣವಾಗಿ ಚಾರ್ಜ್ ಆದರೆ 22 ಗಂಟೆಗಳ ಟಾಕ್ ಟೈಮ್ ಈ ಬ್ಯಾಟರಿ ಮೂಲಕ ಸಿಗಲಿದೆ. 51 ಗಂಟೆಗಳ MP3 ಪ್ಲೇ ಬ್ಯಾಕ್ ಅನ್ನು ಈ ಬ್ಯಾಟರಿ ಮೂಲಕ ಮಾಡಬಹುದು. 39 ಗಂಟೆಗಳ ಎಫ್ಎಂ ರೇಡಿಯೋವನ್ನು ಕೂಡ ಈ ಬ್ಯಾಟರಿಯಿಂದ ಪಡೆಯಬಹುದು. ಸ್ಟ್ಯಾಂಡ್ ಬೈ ಮೋಡ್ನಲ್ಲಿದ್ದರೆ, ಸುಮಾರು ಒಂದು ತಿಂಗಳ ಕಾಲ ಬ್ಯಾಟರಿ ಚಾಲ್ತಿಯಲ್ಲಿರಬಹುದು. ಮೈಕ್ರೋ ಯುಎಸ್ಬಿ ಚಾರ್ಜರ್ ಈ ಫೋನ್ನ ಸ್ಪೆಷಾಲಿಟಿಯಾಗಲಿದೆ.
6. ಈ ಮೊಬೈಲ್ ಫೋನ್ 2 ಮೆಗಾಪಿಕ್ಸೆಲ್ ಬ್ಯಾಕ್ ಕ್ಯಾಮರಾ ಮತ್ತು ಎಲ್ಇಡಿ ಫ್ಲಾಷ್ ಹೊಂದಿರಲಿದೆ.
ಮಲ್ಟಿಮೀಡಿಯಾ ಫೋನ್ ಇದಾಗಿರುವುದರಿಂದ ಬ್ಲೂ ಟೂಥ್, ಮತ್ತು ಯುಎಸ್ಬಿ ಕನೆಕ್ಷನ್ ವ್ಯವಸ್ಥೆಯನ್ನು ಈ ಮೊಬೈಲ್ ಹೊಂದಿರಲಿದೆ. 16 ಜಿಬಿ ಇಂಟರ್ನಲ್ ಮೆಮೊರಿ ಹೊಂದಿದ್ದು, 32 ಜಿಬಿ ತನಕ ಎಕ್ಸಾಂಪಡ್ ಮಾಡಿಕೊಳ್ಳಬಹುದು.
ಮಾರುಕಟ್ಟೆಯಲ್ಲಿರುವ ಇತರೆ ಮೊಬೈಲ್ಗಳ ಜೊತೆ ಸ್ಪರ್ಧೆ ನಡೆಸಲು ನೊಕಿಯಾ ಮತ್ತೆ ಸಿದ್ಧವಾಗಿದೆ. ಹೊಸ ಮಾಡೆಲ್ನ ನೊಕಿಯಾ ಫೋನ್ ಜಗತ್ತಿನ ವಿವಿದೆಡೆ ಸುಮಾರು 126 ಮಿಲಿಯನ್ ಗ್ರಾಹಕರನ್ನು ಪಡೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಸ್ಮಾರ್ಟ್ ಮೆಸೇಜಿಂಗ್, ಕರೆನ್ಸಿ ಕನ್ವರ್ಟರ್ ಸೇರಿದಂತೆ ಹಲವು ಫೀಚರ್ಗಳು ಈ ಫೋನ್ನಲ್ಲಿ ಲಭ್ಯವಿರಲಿದೆ. ಹೊಸ ಆವೃತ್ತಿಯ ನೋಕಿಯಾ 3310 ಮೊಬೈಲ್ ಯಾವುದೇ ಕಾರಣಕ್ಕೂ ಗ್ರಾಹಕರ ಮನ ಗೆಲ್ಲದೆ ಇರಲು ಸಾಧ್ಯವೇ ಇಲ್ಲ.
1. ಹೆತ್ತವರಿಂದ್ಲೇ ತಿರಸ್ಕೃತಳಾದ ಮಂಗಳಮುಖಿ – ಕೀಳರಿಮೆ ಮೆಟ್ಟಿ ನಿಂತು ಮುನ್ನಡೆದ ಸಾಧಕಿ
2. 1 ರೂಪಾಯಿಗೆ ವೈದ್ಯಕೀಯ ಸೇವೆ- ಮುಂಬೈನಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದೆ ಭಾರತೀಯ ರೈಲ್ವೇ..!
3. ದೊಡ್ಡದಾಗಿ ಬೆಳೆಯುತ್ತಿದೆ ಸಿಲಿಕಾನ್ ಸಿಟಿ-ಪ್ರಯಾಣಿಕರಿಗೆ ತಪ್ಪಲ್ಲ ಟ್ರಾಫಿಕ್ ಕಿರಿಕಿರಿ