2 ಲಕ್ಷ ಯೂಸರ್ಸ್ ಮತ್ತು 45 ಲಕ್ಷ ಮಂತ್ಲಿ ಟ್ರಾಫಿಕ್..!
ಟೀಮ್ ವೈ.ಎಸ್. ಕನ್ನಡ
ಒಂದು ಸಾಮಾನ್ಯ ಪರಿವಾರದ ಹುಡುಗ ರವಿಕುಮಾರ್ 2010ರಲ್ಲಿ ನೋಯ್ಡಾದ ಜಿಎಸ್ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಶನ್ ಸಂಸ್ಥೆಯಿಂದ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ್ರು. ರವಿಕುಮಾರ್ ಒಂದು ವರ್ಷದ ತನಕ ವೆಬ್ ಡೆವಲಪರ್ ಆಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸಿದ್ರು. ಆನಂತರ ಮುಂಬೈನ NITIEನಲ್ಲಿ ಎಂಬಿಎ ಕೋರ್ಸ್ ಮಾಡಲು ದಾಖಲಾತಿ ಪಡೆದ್ರು. 2010ರಲ್ಲಿ ಇ-ಕಾಮರ್ಸ್ ಕಂಪನಿಗಳು ಭಾರತದಲ್ಲಿ ಸಖತ್ ಸದ್ದು ಮಾಡುತ್ತಿದ್ದವು. ಯಶಸ್ಸಿನ ಉತ್ತುಂಗದಲಿದ್ದವು. ಇದೇ ಸಮಯದಲ್ಲಿ ರವಿಕುಮಾರ್ ಇ-ಕಾಮರ್ಸ್ಗೆ ಸೇರಿದ ಸೆಕೆಂಡರಿ ಇಂಡಸ್ಟ್ರಿ ಅಂದರೆ ಡೀಲ್ಸ್ ಮತ್ತು ಕೂಪನ್ಸ್ನ್ನ ಅಮೋಘ ಭವಿಷ್ಯವನ್ನು ಕಂಡುಕೊಂಡ್ರು. ಹಾಗಾಗಿ 'FreeKaaMaal' ಅಸ್ಥಿತ್ವಕ್ಕೆ ಬಂತು. ಇದೇ ಕ್ಷೇತ್ರದಲ್ಲಿ CashKaro, CouponRani ತರಹದ ಅನೇಕ ಪ್ರತಿಸ್ಪರ್ಧಿ ಕಂಪನಿಗಳಿಂದ ಸಖತ್ ಪೈಪೋಟಿಯಿತ್ತು. ಆದ್ರೆ ರವಿಕುಮಾರ್ ಪ್ಲಾನ್ ಮುಂದೆ ಅವೆಲ್ಲವೂ ನೆಲಕಚ್ಚಿದವು. ರವಿಕುಮಾರ್ ಹೇಗೆ ಪ್ರತಿಸ್ಪರ್ಧಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ್ರು ಅನ್ನೋದನ್ನ ಯುವರ್ಸ್ಟೋರಿ ಜೊತೆಗಿನ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
YS: ನೀವು ಈ ಪಯಣವನ್ನು ಹೇಗೆ ಆರಂಭಿಸಿದಿರಿ..?
ರವಿಕುಮಾರ್: ಮೊದಲಿನಿಂದಂಲೂ ನಾನು ಏನಾದ್ರೂ ಹೊಸದನ್ನು ಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಇಂತಹ ಕೆಲಸಗಳಿಗೆಲ್ಲಾ ಕಾಲೇಜು ದಿನಗಳು ಉತ್ತಮ. ಯಾಕಂದ್ರೆ ಅಲ್ಲಿ ಏನ್ ಮಾಡಿದ್ರು ಕಳೆದುಕೊಳ್ಳುವುದಕ್ಕೆ ಏನೂ ಇರುವುದಿಲ್ಲ. ನಮ್ಮ ಮೇಲೆ ಯಾವುದೇ ಒತ್ತಡ ಕೂಡ ಇರುವುದಿಲ್ಲ. 2010ರಲ್ಲಿ ಇ-ಕಾಮರ್ಸ್ ಬೂಮ್ ಹೆಚ್ಚಾಗಿತ್ತು. ಎಲ್ಲರೂ ಡೈಲಿ ಡೀಲ್ಸ್, ಗ್ರೂಪ್ ಬೈಯಿಂಗ್ ಸೈಟ್ಸ್ಗಳ ಬಗ್ಗೆ ಮಾತನಾಡುತ್ತಿದ್ರು. ಆಗ ನಾನು ಗ್ರಾಹಕರಿಗೆ ಕಡಿಮೆ ಬೆಲೆಯ ಡೀಲ್ಸ್, ಆಫರ್ಸ್ ಮತ್ತು ಉಚಿತ ವಸ್ತುಗಳನ್ನು ಪೂರೈಸುವ ಸಲುವಾಗಿ, FreeKaaMaal.com ಶುರುಮಾಡಿದೆ. 1500 ರೂಪಾಯಿ ಹಣದಲ್ಲಿ ಒಂದು ವೆಬ್ಸೈಟ್, ಬ್ಲಾಗ್ನ ರೂಪದಲ್ಲಿ ಇದು ಆರಂಭವಾಯ್ತು. ಒಂದೇ ವರ್ಷದಲ್ಲಿ ಈ ಸಾಮಾನ್ಯ ಬ್ಲಾಗ್ ಒಂದು ದೊಡ್ಡ ಪೊರ್ಟಲ್ ಆಗಿ ಬದಲಾಯ್ತು. ಪ್ರತಿದಿನ 50000+ ಯುಸರ್ಳಿಗೆ ಸೇವೆ ನೀಡುತ್ತಿದ್ದೇವೆ.
ಎಂಬಿಎ ಅಂತಿಮ ವರ್ಷದಲ್ಲಿರುವಾಗಲೇ ನನಗೆ ಗ್ಯಾಟಿ ಲಿಮಿಟೆಡ್ನಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಸಿಕ್ತು. ಆದರೆ ನಾನು ಅಲ್ಲಿ ಸೇರುವ ನಿರ್ಧಾರವನ್ನು ಬಿಟ್ಟುಬಿಟ್ಟೆ. ಒಂದು ಆಕರ್ಷಕ ಕಾರ್ಪೊರೇಟ್ ಆಫರ್ ಬಿಟ್ಟ ನಂತರ ನಾನು ನನ್ನ ಎಂಬಿಎಯನ್ನು ಪೂರ್ಣಗೊಳಿಸಿದೆ. 2012ರಲ್ಲಿ ನಾನು ಗ್ರಿಟಿಕ್ ಲ್ಯಾಬ್ಸ್ ಪ್ರವೈಟ್ ಲಿಮಿಟೆಡ್ ಹೆಸರಿನ ಕಂಪನಿ ಆರಂಭಿಸಿದೆ. ಕೆಲಸಗಾರರನ್ನು ಭರ್ತಿ ಮಾಡಿಕೊಳ್ಳುವ ಕೆಲಸವನ್ನು ಆರಂಭಿಸಿದೆ.
ಇದನ್ನು ಓದಿ: ದುಬಾರಿ ಬಾಡಿಗೆಯ ಚಿಂತೆ ಬಿಟ್ಟುಬಿಡಿ- ವೋಲಾರ್ ಕಾರ್ ಬುಕ್ ಮಾಡಿ
YS: ನಿಮ್ಮ ಬ್ಯುಸಿನೆಸ್ನ್ನು ಹೇಗೆ ಅಭಿವೃದ್ಧಿ ಪಡಿಸಿದ್ರಿ..?
ರವಿಕುಮಾರ್: ಸದ್ಯ ನಮ್ಮ ಬಳಿ 17 ಪ್ರತಿಭಾವಂತ ಜನರ ಒಂದು ತಂಡವಿದೆ. ಅಪರೇಷನ್ನಿಂದ ಹಿಡಿದು ಮಾರ್ಕೆಂಟಿಗ್ ತನಕ ಎಲ್ಲಾ ಕೆಲಸವನ್ನು ಅವರು ನಿಭಾಯಿಸುತ್ತಾರೆ. ಐಡಿಯಾ, ಮಾಸ್ಟರ್ಸ್ ನಂತಹ ವಿಭಿನ್ನ ಎಂಎನ್ಸಿಯ ವೃತ್ತಿಪರರು ಮತ್ತು ಐಐಟಿ, ಡಿಸಿಐ ನಂತಹ ಪ್ರತಿಷ್ಠಿತ ಸಂಸ್ಥೆಗಳಿಂದ ಪಧವಿ ಪಡೆದವರಿದ್ದಾರೆ.
ಭಾರತದಲ್ಲಿ ಇ-ಕಾಮರ್ಸ್ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದ ವೇಳೆಯಲ್ಲೆ FreeKaaMaal.comಗೆ ಅಡಿಪಾಯ ಇಟ್ಟಾಗಿತ್ತು. ಆದರೆ ಇ-ಕಾಮರ್ಸ್ನಲ್ಲಿ ಸೆಕೆಂಡರಿ ಇಂಡಸ್ಟ್ರಿ ಕೂಡ ಇದೆ. ಅದೇ ಡೀಲ್ಸ್ ಮತ್ತು ಕೂಪನ್ನದ್ದು. ಆರಂಭದಲ್ಲಿ FreeKaaMaal.com ಉದ್ದೇಶ ಎಫ್ಎಂಸಿಜಿ ಕಂಪನಿ ಕಡೆಯಿಂದ ಬಂದ ಫ್ರೀ ಸ್ಯಾಂಪ್ಲಿಂಗ್ ಕೂಪನ್ಗಳ ಬಗ್ಗೆ ಸೂಚನೆ ನೀಡುವುದಾಗಿತ್ತು. ಇ-ಕಾಮರ್ಸ್ ಬೂಮ್ ಜೊತೆಗೆ ನಾವು ಕೈಜೋಡಿಸಿದ್ವಿ. ನಾವು ಕಡಿಮೆ ಬೆಲೆಯ ಡೀಲ್ಸ್ ಮತ್ತು ಕೂಪನ್ಗಳ ಬಗ್ಗೆ ಮಾಹಿತಿ ಕೊಡಲು ಆರಂಭಿಸಿದೆವು. ನಾವು ಮಾಡಲ್ ಕಲೆಕ್ಟೀವ್ ಇಂಟಲಿಜನ್ಸ್ ಸಿದ್ದಾಂತದ ಮೇಲೆ ಕೆಲಸ ಮಾಡಲು ಆರಂಭಿಸಿದೆವು. ಅನೇಕ ಶಾಪರ್ಸ್ಗಳು ನಮ್ಮೊಂದಿಗೆ ಡೀಲ್ಸ್ ಶೇರ್ ಮಾಡ್ತಾರೆ. ನಾವು ಅದರಲ್ಲಿ ಯಾವುದು ಬೆಸ್ಟ್ ಡೀಲ್ ಆಗಿರುತ್ತೋ ಅದನ್ನು ಆಯ್ಕೆ ಮಾಡಿ ನಮ್ಮ ಹೋಮ್ಪೇಜ್ನಲ್ಲಿ ಪ್ರಮೋಟ್ ಮಾಡ್ತಿವಿ. ಇಂದು FreeKaaMaal.comಗೆ ಮೂರುವರೇ ವರ್ಷವಾಗಿದೆ. ಪ್ರತಿ ತಿಂಗಳು ಸರಾಸರಿ 45 ಲಕ್ಷ ವಿಸಿಟರ್ ಇಲ್ಲಿಗೆ ಬೇಟಿ ನೀಡ್ತಾರೆ..
YS: ಭಾರತದಲ್ಲಿ ಇ-ಕಾಮರ್ಸ್ಗೆ ಸ್ಪೇಸ್ ಬಗ್ಗೆ ನೀವೇನು ಯೋಚಿಸುತ್ತೀರಿ?
ರವಿ ಕುಮಾರ್: ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಈ ಇ-ಕಾಮರ್ಸ್ ತುಂಬಾ ವೇಗವಾಗಿ ವಿಕಾಸವಾಗಿದೆ. ಸದ್ಯ ಭಾರತದಲ್ಲಿ 11ಪ್ರತಿಶತ ಇಂಟರ್ನೆಟ್ ಬಳಕೆದಾರರಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಸಂಖ್ಯೆ ತುಂಬಾ ಹೆಚ್ಚಲಿದೆ. ಇದರೊಂದಿಗೆ ಇ-ಕಾಮರ್ಸ್ ಮಾರ್ಕೆಟ್ ಕೂಡ ಬೆಳೆಯಲಿದೆ. ಮುಂಬರುವ ಮೂರು ವರ್ಷದಲ್ಲಿ ಭಾರತದಲ್ಲಿ ಇ-ಕಾಮರ್ಸ್ ಇಂಡಸ್ಟ್ರಿ 8 ಅರಬ್ ಡಾಲರ್ ಆಗಲಿದೆ. ನಮ್ಮ ಬ್ಯುಸಿನೆಸ್ ಮಾಡಲ್ ಇ-ಕಾಮರ್ಸ್ ಸೈಟ್ಸ್ ಒಂದೇ ಸಮಾನಂತರದಲ್ಲಿ ನಡೆಯುತ್ತದೆ. ಒಂದುವೇಳೆ ಈ ಇಂಡಸ್ಟ್ರೀ ಅಭಿವೃದ್ಧಿಯಾದ್ರೆ ನಾವು ಕೂಡ ಅಭಿವೃದ್ಧಿಯಾಗುತ್ತೇವೆ.
ಗ್ಲೋಬಲ್ ಪ್ಲೇಯರ್ಸ್ ಪ್ರವೇಶದಿಂದ ಈ-ಕಾಮರ್ಸ್ಗೆ ಸಂಬಂಧಿಸಿದ ಮಾರ್ಕೆಟಿಂಗ್ ಇಂಡಸ್ಟ್ರಿ ಕೂಡ ಬೆಳೆಯುತ್ತಿದೆ. ಕಳೆದ ವರ್ಷ ಅಮೇಜಾನ್ ಪ್ರವೇಶವಾಯ್ತು. ಇದರಿಂದ ನಾವು ನಮ್ಮ ರೇವೆನ್ಯೂನ 20ಪ್ರತಿಶತ ಹೆಚ್ಚಳ ನೋಡಿದ್ವಿ. ಗ್ಲೋಬಲ್ ಕಂಪನಿಗಳ ಆಗಮನದಿಂದ ಮಾರುಕಟ್ಟೆಗೆ ಒಂದು ಹೊಸ ರೂಪ ತರುತ್ತವೆ. ಜನರನ್ನು ಆಕರ್ಷಿಸುವ ಮಹತ್ವ ಅವರು ಅರಿಯುತ್ತಾರೆ. ಸ್ಪರ್ಧೆಯನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ಇದರಿಂದ ಇ-ಕಾಮರ್ಸ್ನ ಸಣ್ಣ-ಪುಟ್ಟ ಸೈಟ್ಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತವೆ. ಇದರಿಂದ ನಮ್ಮಂತಹ ಸೈಟ್ಗಳಿಗೆ ನೇರವಾಗಿಯೇ ಹೆಚ್ಚು ಲಾಭವಾಗುತ್ತದೆ.
YS: ಸ್ಫರ್ಧಾತ್ಮಕ ಸಮಯದಲ್ಲೂ ನಿಮ್ಮ ಕಂಪನಿಯನ್ನು ಹೇಗೆ ನಿಭಾಯಿಸುತ್ತಿದ್ದೀರಿ?
ರವಿ ಕುಮಾರ್: FreeKaaMaal.com ಯಾವತ್ತಿಗೂ ಹೂಡಿಕೆದಾರರು ಮತ್ತು ಕುಟುಂಬದವರಿಂದ ಹಣವನ್ನು ಸಂಗ್ರಹಿಸಿಲ್ಲ. ನಾವು ಬರುತ್ತಿರುವ ಲಾಭವನ್ನೇ ಹೂಡಿಕೆ ಮಾಡಿದ್ದೇವೆ. ಸಮಯದೊಂದಿಗೆ ಸಾಗುತ್ತಿದ್ದೇವೆ. ನಮ್ಮ ಸೇಲ್ ಪ್ರತಿದಿನ 5ಟ್ರಾನ್ಸಾಕ್ಷನ್ನಿಂದ 1500+ ಆಗಿಬಿಟ್ಟಿದೆ. ನಾವು ಮೊದಲ ದಿನದಿಂದಲೂ ಲಾಭ ಪಡೆಯುತ್ತಿದ್ದೇವೆ. ಪ್ರತಿ ತಿಂಗಳು 45 ಲಕ್ಷಕ್ಕಿಂತ ಹೆಚ್ಚು ಹಿಟ್ ಪಡೆಯುತ್ತಿದ್ದೇವೆ. ಇಂದು ನಾವು ಭಾರತದ 450+ ವ್ಯಾಪಾರಿಗಳೊಂದಿಗೆ (ಮರ್ಚಂಟ್ಸ್) ಕೆಲಸ ಮಾಡುತ್ತಿದ್ದೇವೆ.
ಹೀಗೆ ತನ್ನ ಮುಂದಿನ ಕನಸುಗಳ ಬಗ್ಗೆ ಪ್ಲಾನ್ ಹೇಳುತ್ತಾ ಮಾತು ಮುಗಿಸಿದರು ರವಿಕುಮಾರ್.
ಲೇಖಕರು: ಸಾಹಿಲ್
1. ಹಸಿವಾಗಿದ್ಯಾ, ಕ್ಲಿಕ್ ಮಾಡಿ..ಫುಡ್ಪಂಡಾ ಹೊಟ್ಟೆ ತುಂಬಿಸುತ್ತೆ..!
2. ಕಿರಿಕಿರಿ ಮುಕ್ತವಾಗಲಿದೆ ಬೆಂಗಳೂರು ಟ್ರಾಫಿಕ್- ಇದು ನಮ್ಮ ಮೆಟ್ರೋದ ಮ್ಯಾಜಿಕ್