ಕ್ರೆಡಿಟ್ ಕಾರ್ಡ್ಗಿಂತ ಡೆಬಿಟ್ ಕಾರ್ಡ್ ವಾಸಿ- ನೋಟ್ ಬ್ಯಾನ್ ಬಳಿಕ ವ್ಯವಹಾರದಲ್ಲಿ ಡೆಬಿಟ್ ಕಾರ್ಡ್ ಫಸ್ಟ್
ಟೀಮ್ ವೈ.ಎಸ್. ಕನ್ನಡ
ಕ್ರೆಡಿಟ್ ಕಾರ್ಡ್ ಇದ್ರೆ ಸಾಕು, 45 ರಿಂದ 55 ದಿನ ಆರಾಮವಾಗಿ ಕಾಲ ಕಳೆಯಬಹುದು ಅನ್ನುವ ಲೆಕ್ಕಾಚಾರವೇ ಹೆಚ್ಚು. ಬ್ಯಾಂಕ್ಗಳ ನಡುವಿನ ಪೈಪೋಟಿಯಿಂದಾಗಿ ಇವತ್ತು ಕ್ರೆಡಿಟ್ ಕಾರ್ಡ್ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಫರ್ಗಳು ಗ್ರಾಹಕರ ಗಮನ ಸೆಳೆಯುತ್ತಿದೆ. ಕೂಡಿಟ್ಟ ಹಣವನ್ನು ಕ್ರೆಡಿಟ್ ಕಾರ್ಡ್ಗಳ ಮೂಲಕ ಕಳೆದುಕೊಂಡವರ ಸಂಖ್ಯೆಗೇನು ಕಡಿಮೆ ಇಲ್ಲ. ಈ ಮಧ್ಯೆ ಕೇಂದ್ರ ಸರಕಾರ ಕಳೆದ ನವೆಂಬರ್ನಲ್ಲಿ 500 ಹಾಗೂ 1000 ರೂಪಾಯಿಗಳ ನೋಟ್ ಬ್ಯಾನ್ ಮಾಡಿದ್ದು ಡಿಜಿಟಲ್ ವ್ಯವಹಾರಕ್ಕೆ ದೊಡ್ಡ ಬ್ರೇಕ್ ನೀಡಿತ್ತು. ಕ್ರೆಡಿಟ್, ಡೆಬಿಟ್ ಕಾರ್ಡ್ಗಳ ವ್ಯವಹಾರದ ಜೊತೆಗೆ ಪೇಮೆಂಟ್ ವಾಲೆಟ್ಗಳು ಸಾಕಷ್ಟು ಸದ್ದು ಮಾಡಿದ್ದವು. ಭಾರತ ಡಿಜಿಟಲೈಸೇಷನ್ ಕಡೆಗೆ ಓಡುತ್ತಿದೆ ಅನ್ನುವುದರಲ್ಲಿ ಡೌಟೇ ಇಲ್ಲ.
ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ಗಳ ನಡುವಿನ ಸಮರ ಇಂದು ನಿನ್ನೆಯದ್ದಲ್ಲ. ಜೇಬಲ್ಲಿ ದುಡ್ಡು ಇಲ್ದೇ ಇದ್ರೂ ಪರವಾಗಿಲ್ಲ. ಆದ್ರೆ ಕ್ರೆಡಿಟ್ ಕಾರ್ಡ್ ಇದ್ರೆ ಸಾಕು ಅನ್ನುವ ಜಮಾನ ಕೂಡ ಇತ್ತು. ಆದ್ರೆ ಇವತ್ತು ಕಾಲ ಬದಲಾಗಿದೆ. ನೋಟ್ ಬ್ಯಾನ್ ಬಳಿಕ ಕ್ರೆಡಿಟ್ ಕಾರ್ಡ್ಗಿಂತ ಡೆಬಿಟ್ ಕಾರ್ಡ್ ವಾಸಿ ಅನ್ನುವ ಲೆಕ್ಕಾಚಾರಕ್ಕೆ ಗ್ರಾಹಕರು ಬಂದುಬಿಟ್ಟಿದ್ದಾರೆ. ನೋಟ್ ಬ್ಯಾನ್ ಬಳಿಕ ಕ್ರೆಡಿಟ್ ಕಾರ್ಡ್ ವ್ಯವಹಾರದಲ್ಲಿನ ಸಂಖ್ಯೆ ಕಡಿಮೆ ಆಗಿದೆ. ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ನ್ನು ಹಿಂದಿಕ್ಕಿ ವ್ಯವಹಾರದಲ್ಲಿ ಮುನ್ನುಗ್ಗುತ್ತಿದೆ. ಕೇಂದ್ರ ಸರಕಾರ ಕಳೆದ ನವೆಂಬರ್ 8ರಂದು ನೋಟ್ ಬ್ಯಾನ್ ಮಾಡಿತ್ತು. ಆದ್ರೆ ಅದಕ್ಕೂ ಮುನ್ನ ಕ್ರೆಡಿಟ್ ಕಾರ್ಡ್ ವ್ಯವಹಾರ ಡೆಬಿಟ್ ಕಾರ್ಡ್ ವ್ಯವಹಾರಕ್ಕಿಂತ ಶೇಕಡಾ 25ರಷ್ಟು ಮುನ್ನಡೆ ಸಾಧಿಸಿತ್ತು. ಕಳೆದ ಅಕ್ಟೋಬರ್ ವೇಳೆಯಲ್ಲಿ ಡೆಬಿಟ್ ಕಾರ್ಡ್ ವ್ಯವಹಾರ ಶೇಕಡಾ 42ರಷ್ಟು ಇದ್ದರೆ, ಕ್ರೆಡಿಟ್ ಕಾರ್ಡ್ ವ್ಯವಹಾರ ಶೇಕಡಾ 67ರಷ್ಟಿತ್ತು. ನೋಟ್ ಬ್ಯಾನ್ ಬಳಿಕ ಡೆಬಿಟ್ ಕಾರ್ಡ್ ವ್ಯವಹಾರದಲ್ಲಿ ಏರಿಕೆ ಕಂಡಿದ್ದು ಶೇಕಡಾ 60 ರಷ್ಟು ವ್ಯವಹಾರ ನಡೆಯುತ್ತಿದೆ. ಕ್ರೆಡಿಟ್ ಕಾರ್ಡ್ ವ್ಯವಹಾರದಲ್ಲಿ ಸಾಕಷ್ಟು ಇಳಿಕೆ ಕಂಡು ಬಂದಿದೆ.
ಸಣ್ಣ ಬ್ಯಾಂಕ್ಗಳ ವ್ಯವಹಾರಗಳಲ್ಲಿ ಏರಿಕೆ
ಡೆಬಿಟ್ ಕಾರ್ಡ್ ವ್ಯವಹಾರದಲ್ಲಿ ಹೆಚ್ಚಾಗಿರುವುದಕ್ಕೆ ಕಾರಣ ಸಣ್ಣ ಪುಟ್ಟ ಬ್ಯಾಂಕ್ಗಳ ಡೆಬಿಟ್ ಕಾರ್ಡ್ ಬಳಕೆಯ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವುದೇ ಆಗಿದೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ಗಳ ಡೆಬಿಟ್ ಕಾರ್ಡ್ ಬಳಕೆಯಲ್ಲಿ ಶೇಕಡಾ 5ರಷ್ಟು ಏರಿಕೆ ಕಂಡು ಬಂದಿದೆ. ಕಳೆದ ಅಕ್ಟೋಬರ್ ಬಳಿಕ ಡೆಬಿಟ್ ಕಾರ್ಡ್ ಬಳಕೆದಾರರ ಸಂಖ್ಯೆಯಲ್ಲಿ 3 ಪಟ್ಟು ಏರಿಕೆ ಕಂಡಿದೆ. ಅದರಲ್ಲೂ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಡೆಬಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು. ಜನವರಿ ಮತ್ತು ಫೆಬ್ರವರಿ ವೇಳೆಯಲ್ಲಿ ಕೊಂಚ ಕಡಿಮೆ ಆಗಿದ್ದರೂ ಕ್ರೆಡಿಟ್ ಕಾರ್ಡ್ ವ್ಯವಹಾರಕ್ಕಿಂತ ಡೆಬಿಟ್ ಕಾರ್ಡ್ ವ್ಯವಹಾರವೇ ಮುಂದಿದೆ.
ಕಳೆದ ಅಕ್ಟೋಬರ್ನಿಂದ ಇಲ್ಲಿ ತನಕ ಡೆಬಿಟ್ ಕಾರ್ಡ್ ವ್ಯವಹಾರಗಳ ಸಂಖ್ಯೆ ಕ್ರೆಡಿಟ್ ಕಾರ್ಡ್ ಕಾರ್ಡ್ಗಿಂತಲೂ ಹೆಚ್ಚಿದೆ. ನೋಟ್ ಬ್ಯಾನ್ ನಂತರ 61.7 ಕೋಟಿ ಡೆಬಿಟ್ ಕಾರ್ಡ್ ಬಳಕೆದಾರರಿಂದ ಸುಮಾರು 10, 893 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಇದು ಸರಕಾರಿ ಬ್ಯಾಂಕ್ಗಳ ಲೆಕ್ಕವಾಗಿದೆ. ಖಾಸಗಿ ಬ್ಯಾಂಕ್ಗಳ ಡೆಬಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಇರುವುದು ಕೇವಲ 12.25 ಕೋಟಿ. ಆದ್ರ ಇಷ್ಟರಲ್ಲೇ ಸುಮಾರು 11,048 ಕೋಟಿ ರೂಪಾಯಿ ವ್ಯವಹಾರ ಡೆಬಿಟ್ ಕಾರ್ಡ್ ಮೂಲಕ ನಡೆದಿದೆ.
ಇದನ್ನು ಓದಿ: ಭಾರತದ ವಾರೆನ್ ಬಫೆಟ್ ಕಥೆ ಗೊತ್ತಾ..? ಅಂಬಾನಿ ಸಂಪತ್ತಿಗೆ ಸವಾಲೆಸೆದ “ಧಮನಿ”..!
ನೋಟ್ ಬ್ಯಾನ್ ಬಳಿಕ ಎಟಿಎಂಗಳಲ್ಲಿ ಹಣದ ಅಭಾವ ಉಂಟಾಗಿತ್ತು. ಅಷ್ಟೇ ಅಲ್ಲ ದೈನಂದಿನ ಖರ್ಚುಗಳಿಗೂ ಡಿಜಿಟಲ್ ಮೋಡ್ ಆಫ್ ಪೇಮೆಂಟ್ನ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ಹೀಗಾಗಿ ಕಳೆದ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಸಹಜವಾಗೇ ಡೆಬಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಹೆಚ್ಚಿತ್ತು. ಜನವರಿ ತಿಂಗಳಲ್ಲಿ ಸರಕಾರಿ ಬ್ಯಾಂಕ್ಗಳ ಡೆಬಿಟ್ ಕಾರ್ಡ್ ಬಳಕೆದಾರರಿಂದ ಸುಮಾರು 23, 339 ಕೋಟಿ ರೂಪಾಯಿ ವ್ಯವಹಾರ ನಡೆದಿದ್ದರೆ, ಖಾಸಗಿ ಬ್ಯಾಂಕುಗಳ ಡೆಬಿಟ್ ಕಾರ್ಡ್ ಬಳಕೆ ಮೂಲಕ 19,664 ಕೋಟಿ ರೂಪಾಯಿ ವ್ಯವಹಾರ ನಡೆದಿದೆ.
ಡೆಬಿಟ್ ಕಾರ್ಡ್ ಲೆಕ್ಕ
ನೋಟ್ ಬ್ಯಾನ್ಗೂ ಮುನ್ನ ಒಂದು ಅಂದಾಜಿನ ಪ್ರಕಾರ ಸುಮಾರು 100 ಡೆಬಿಟ್ ಕಾರ್ಡ್ಗೆ ಕೇವಲ 19 ವ್ಯವಹಾರಗಳು ಮಾತ್ರ ನಡೆಯುತ್ತಿದ್ದವು. ಆದ್ರೆ ನೋಟ್ ಬ್ಯಾನ್ ಬಳಿಕ ಕಳೆದ ಡಿಸೆಂಬರ್ನಲ್ಲಿ ಇದರ ಸಂಖ್ಯೆ 54ಕ್ಕೆ ಏರಿಕೆ ಆಗಿತ್ತು. ಆದ್ರೆ ಎಟಿಎಂನಲ್ಲಿ ದುಡ್ಡು ಕೈಗೆ ಸಿಗುತ್ತಿದ್ದಂತೆ ಡೆಬಿಟ್ ಕಾರ್ಡ್ ಬಳಕೆದಾರರ ಸಂಖ್ಯೆಯೂ ಕಡಿಮೆ ಆಗಿದೆ. ಜನವರಿಯಲ್ಲಿ ಡೆಬಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಶೇಕಡಾ 40ರಷ್ಟು ಕುಸಿತ ಕಂಡಿದೆ. ಒಂದು ಅಂದಾಜಿನ ಪ್ರಕಾರ ಡೆಬಿಟ್ ಕಾರ್ಡ್ ಹೊಂದಿರುವವರು ತಿಂಗಳಿಗೆ ಒಮ್ಮೆ ಡೆಬಿಟ್ ಕಾರ್ಡ್ ಮೂಲಕ ವ್ಯವಹಾರ ನಡೆಸಿದರೂ ಒಟ್ಟು ವಹಿವಾಟಿನ ಶೇಕಡಾ 80ರಷ್ಟು ಡೆಬಿಟ್ ಕಾರ್ಡ್ ಮೂಲಕವೇ ನಡೆದಂತಾಗುತ್ತದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಕನಸಿಗೆ ನೋಟ್ ಬ್ಯಾನ್ ಸಮಯದಲ್ಲಿ ಹೆಚ್ಚು ಮಹತ್ವ ಸಿಕ್ಕಿತ್ತು. ಆದ್ರೆ ನೋಟ್ ಕೈಗೆ ಸಿಗುತ್ತಿದ್ದಂತೆ ಹಾರ್ಡ್ ಕ್ಯಾಶ್ ವ್ಯವಹಾರಗಳೇ ಹೆಚ್ಚಾಗುತ್ತಿವೆ. ಸ್ವೈಪಿಂಗ್ ಮಷಿನ್ಗಳು ಮತ್ತು ವಿವಿಧ ರೀತಿಯ ಡಿಜಿಟಲ್ ಪೇಮೆಂಟ್ ಮೋಡ್ಗಳು ನಿಧಾನವಾಗಿ ಮಾಯವಾಗುತ್ತಿರುವುದು ನಿಜಕ್ಕೂ ಬೇಸರದ ವಿಷಯ.
1. ಆಡುವ ವಯಸ್ಸಿನಲ್ಲಿ ಉದ್ಯಮದ ಕನಸು- 13ನೇ ವರ್ಷದಲ್ಲೇ ಸಿಇಒ ಆಗಿ ದಾಖಲೆ ಬರೆದ ಯುವ ಉದ್ಯಮಿ
2. ನವರಸ ಸಾಧನಗಳ ಪರಿಣಿತ- ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡಿಗ
3. ಸಿನಿಮಾರಂಗದಲ್ಲಿ ಮೂವರು ಸಹೋದರರ ಸಾಹಸ- ಇದು ಖಾಸನೀಸ್ ಕುಟುಂಬದ ಖಾಸ್ಬಾತ್