ಬಡವರ ಹಸಿವು ನೀಗಿಸೋ ‘ಅನ್ನಕೂಟ’
ಈಶಾನಾ
ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರೋ ಬೆಂಗಳೂರು ಕಾಸ್ಟ್ಲೀ ದುನಿಯಾ ಆಗಿದೆ. ಒಂದೊತ್ತಿನ ಊಟ ಮಾಡಬೇಕಾದ್ರೆ ಕನಿಷ್ಠ 50 ರೂಪಾಯಿ ಇರಲೇ ಬೇಕು. ಫುಟ್‍ಪಾತ್‍ನಲ್ಲಿ ಊಟ ಮಾಡೋದು, ಚಾಟ್ಸ್ ತಿಂದು ಹೊಟ್ಟೆ ತುಂಬಿಸೋಣ ಅದ್ರೆ ಅದರ ಬೆಲೆಯೂ ಏನು ಕಮ್ಮಿ ಇಲ್ಲ. ದಿನಗೂಲಿ ಮಾಡಿಕೊಂಡು ಜೀವನದ ಬಂಡಿ ಸಾಗಿಸೋ ಅದೆಷ್ಟೋ ಜನರಿಗೆ ದಿನದ ಮೂರೂ ಹೊತ್ತು ಹೊಟ್ಟೆ ತುಂಬಿಸಿಕೊಳ್ಳೋದು ಇಂದಿಗೂ ಕಷ್ಟಕರ. ಊಹಿಸಲು ಅಸಾಧ್ಯವೆನಿಸಿದ್ರೂ ವಾಸ್ತವ. ಜನ ಅದೆಷ್ಟೇ ಹಸಿದು ಬಂದವರಿಗೆ ಅನ್ನ ಹಾಕೋದು ಬಿಡಿ ಕಾಸು ಕಡಿಮೆ ಇದ್ದವರಿಗೆ ಕಡಿಮೆ ದರದಲ್ಲಿ ಊಟ ಕೊಡೋರೂ ಯಾರೂ ಇಲ್ಲ ಈ ಬೆಂಗಳೂರಲ್ಲಿ. ಇಂತ ಯಾಂತ್ರಿ ಸಮಾಜದ ನಡುವೆಯೇ ಪ್ರತಿನಿತ್ಯ ನೂರಾರು ಜನರಿಗೆ ಅನ್ನದಾನ ಮಾಡುವವರು ಇದ್ದಾರೆ ಎಂದರೆ ನಂಬಲಸಾದ್ಯ. ಪ್ರತಿದಿನ ನೂರಾರು ಬಡವರ, ಕೂಲಿಕಾರ್ಮಿಕರ ಹಸಿವನ್ನ ನೀಗಿಸುತ್ತದೆ ಈ ‘ಅನ್ನಕೂಟ’.
ಬೆಂಗಳೂರಿನ ಬಸವನಗುಡಿಯ ಸಮೀಪದಲ್ಲಿರೋ ಮಾಡ್ಯುಲ್ ರಸ್ತೆಯಲ್ಲಿ ಪ್ರತಿನಿತ್ಯ ಅನ್ನದಾನ ನಡೆಯುತ್ತದೆ. ಅ.ನ ಕೃಷ್ಣರಾವ್ ರಸ್ತೆಯಿಂದ ಬನಶಂಕರಿಗೆ ಹೋಗುವ ರಸ್ತೆಯಲ್ಲಿ ಸಾಗಿದರೆ ಮಾಡ್ಯುಲ್ ರಸ್ತೆ ಸಿಗುತ್ತದೆ. ಅಲ್ಲಿ ಯಾರನ್ನೇ ಕೇಳಿದರೂ ಅನ್ನಕೂಟದ ವಿಳಾಸ ತಿಳಿಸುತ್ತಾರೆ. ಮದ್ಯಾಹ್ನ ಆದ್ರೆ ಸಾಕು ವಿಶಾಲ ಛತ್ರಿ ಒಂದನ್ನ ಬಿಡಿಸಿ ವೃದ್ಧ ದಂಪತಿ ಅನ್ನದಾನಕ್ಕೆ ಸಿದ್ಧರಾಗುತ್ತಾರೆ. ಇವರೇ ಹಿರಿಯ ಪತ್ರಕರ್ತರಾಗಿರೋ ರಾಜಸ್ಥಾನ ಮೂಲದ ಧೀರೇಂದ್ರ ಕುಮಾರ್ ದಂಪತಿ. ಬಡವರ ಹಸಿವು ನೀಗಿಸುತ್ತಿರೋ ಮಹಾನ್ ವ್ಯಕ್ತಿಗಳು.
ಇದನ್ನು ಓದಿ: ಟೀಂ ಇಂಡಿಯಾದಲ್ಲಿ ಕಾಫಿನಾಡಿನ ಕುವರಿ - ಕರುನಾಡಿಗೆ ಹೆಮ್ಮೆ ತಂದ ವೇದಾ ಕೃಷ್ಣಮೂರ್ತಿ
ಬಡವರಿಗೆ, ಬಿಕ್ಷುಕರಿಗೆ, ಕೂಲಿಕಾರ್ಮಿಕರಿಗೆ, ಬಡ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಅನ್ನದಾನವನ್ನ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ . ಮದ್ಯಾಹ್ನವಾದ್ರೆ ಸಾಕು ಈ ವೃದ್ಧ ದಂಪತಿ ಎರಡು ಬಾಕ್ಸ್ಗಳಲ್ಲಿ ಅನ್ನದ ತಿನಿಸುಗಳನ್ನ ತಂದು ಹಂಚಲಾರಂಭಿಸುತ್ತಾರೆ. ಉಪ್ಪಿನಕಾಯಿಯೊಂದಿಗೆ ಟೊಮ್ಯಾಟೋಬಾತ್, ಚಿತ್ರಾನ್ನ, ರೈಸ್ ಬಾತ್, ಪಲಾವ್, ಲೆಮೆನ್ ರೈಸ್, ಜೀರಾ ರೈಸ್, ಮೊಸರನ್ನ, ಅನ್ನ ಸಾಂಬಾರ್ ಹೀಗೆ ದಿನಕ್ಕೊಂದು ತರಹದ ಊಟವನ್ನ ತಂದು ಹಂಚುತ್ತಾರೆ. ಇನ್ನು ಹಬ್ಬಹರಿದಿನದಂತಹ ವಿಶೇಷ ದಿನಗಳಂದು ಬಾಳೆಹಣ್ಣ ಅಥವಾ ಸಿಹಿತಿಂಡಿಗಳನ್ನೂ ಹಂಚುತ್ತಾರೆ. ಮದ್ಯಾಹ್ನ 12;15ರಿಂದ 1;30ರ ವರೆಗೆ ಈ ಅನ್ನದಾನ ನಡೆಯುತ್ತದೆ. ಹಸಿದವರು ಬಂದು ಹೊಟ್ಟೆತುಂಬಾ ತಿಂದು ಧನ್ಯರಾಗುತ್ತಾರೆ.
40 ವರ್ಷಗಳ ಕಾಲ ಪತ್ರಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರೋ ಧೀರೇಂದ್ರ ಕುಮಾರ್ ಸದ್ಯ ದೀರ್ ಎಂಬ ಹಿಂದಿ ಮಾಸಿಕವನ್ನ ನಡೆಸುತ್ತಿದ್ದಾರೆ. ಮೂಲತಃ ರಾಜಸ್ಥಾನದವರಾದರು ಬೆಂಗಲೂರಿನಲ್ಲೇ ನೆಲೆಸಿದ್ದಾರೆ. ಇಷ್ಟು ವರ್ಷಗಳಿಂದ ಇಲ್ಲೇ ನೆಲೆಸಿದ್ದೂ ಸಮಾಜಕ್ಕೆ ನಾವೇನು ಮಾಡಿದ್ದೇವೆ ಎಂದು ಚಿಂತಿಸಿರೊ ದೀರೆಂದ್ರ ಕುಮಾರ್ ದಂಪತಿ ಬೆಂಗಳೂರಿನ ಕಾಸ್ಟ್ಲೀ ದುನಿಯಾದಲ್ಲಿ ಒಂದೊತ್ತಿನ ಊಟಕ್ಕೂ ಪರದಾಡೋ ಜನರಿಗೆ ಊಟ ನೀಡೋ ಚಿಂತನೆಗೆ ಮುಂದಾದ್ರು. ಈ ಕುರಿತು ತಮ್ಮ ಮಕ್ಕಳೊಂದಿಗೆ ಮಾತನಾಡಿದಾಗ ತಕ್ಷಣವೇ ಮಕ್ಕಳೂ ಸಾಥ್ ನೀಡಿದ್ರು. ಹೀಗಾಗಿ ಕಳೆದ ಎರಡು ವರ್ಷಗಳಿಂದ ಈ ಅನ್ನದಾನವನ್ನ ನಡೆಸಿಕೊಂಡು ಬರುತ್ತಿದ್ದಾರೆ.
ಇನ್ನು ಒಂದೆಡೆ ಅನ್ನದಾನ ನಡೆಯತ್ತೆ ಅಂದ್ರೆ ಅಲ್ಲಿ ಪ್ಲೇಟಿನ ಕಸದ ರಾಶಿ ಗ್ಯಾರಂಟಿ. ಆದ್ರೆ ಇಲ್ಲಿ ಅದು ಇರಲ್ಲ. ಪೇಪರ್ ಪ್ಲೇಟ್‍ನಲ್ಲಿ ಊಟ ಮಾಡೋ ಇಲ್ಲಿನ ಜನರೆಲ್ಲರೂ ತಮ್ಮ ಪ್ಲೇಟನ್ನ ಕಸದಬುಟ್ಟಿಗೆ ಹಾಕುವಂತೆ ಮಾರ್ಗದರ್ಶನ ನೀಡುತ್ತಾರೆ. ಜೊತೆಗೆ ಒಂದು ತಟ್ಟೆಯನ್ನ ಒಂದೇ ಬಾರಿ ಬಳಸದೆ ಸ್ವಚ್ಛಗೊಳಿಸಿ ಮರುಬಳಕೆ ಮಾಡುವಂತೆಯೂ ಅರಿವು ಮುಡಿಸಿದ್ದಾರೆ. ಕುಡುಕರನ್ನ ಹೊರತುಪಡಿಸಿ ಮತ್ತೆಲ್ಲರೂ ಸ್ವಚ್ಛತೆಗೆ ಆಧ್ಯತೆ ನೀಡುತ್ತಿದ್ದಾರೆ ಅಂತಾರೆ ದೀರೆಂದ್ರ ಕುಮಾರ್.
ಇನ್ನು ಅನ್ನಕೂಟದ ಪಕ್ಕದಲ್ಲೇ ಇರೋ ಚಟ್‍ಪಟ್ ಹೊಟೇಲ್‍ನ ಅಡುಗೆಮನೆಯಲ್ಲಿ ಊಟ ರೆಡಿ ಮಾಡಲಾಗುತ್ತದೆ. ಧೀರೇಂದ್ರ ಕುಮಾರ್ ಅವರ ದರ್ಮಪತ್ನಿಯೇ ಮುಂದೆನಿಂತು ಪ್ರತಿನಿತ್ಯ ಊಟ ರೆಡಿ ಮಾಡಿಸ್ತಾರೆ. ಪ್ರತಿನಿತ್ಯದ ಅನ್ನದಾನಕ್ಕಾಗಿ 2000 ರೂಪಾಯಿ ವ್ಯಯಿಸುತ್ತಾರೆ. ಇನ್ನು ಯಾರಾದರು ಅನ್ನದಾನಕ್ಕೆ ಕೊಡುಗೆ ನೀಡಿದಲ್ಲಿ ಅನ್ನಕೂಟ ಫಲಕದ ಪಕ್ಕದಲ್ಲಿರೋ ಬೋರ್ಡ್‍ನಲ್ಲಿ ದಾನಿಗಳ ಹೆಸರನ್ನ ನಮೂದಿಸಿರುತ್ತಾರೆ. ಧಿರೇಂದ್ರ ಕುಮಾರ್ ಅವರ ಅನ್ನದಾನದ ಸೇವೆಗೆ ಅವರ ಸ್ನೇಹಿತರಾದ ಪ್ರಶಾಂತ್ ಸಿಂಘ್ವಿ ಹಾಗೂ ಕಪಿಲ್ ಸಿಂಘ್ವಿ ಸಾಥ್ ನೀಡುತ್ತಿದ್ದಾರೆ.
1. ಆನ್‍ಲೈನ್‍ನಲ್ಲೂ ಸಿಗುತ್ತೆ ಪೂಜೆಗೆ ಬೇಕಾಗುವ ವಸ್ತುಗಳು