ಹತ್ತುಲಕ್ಷ ಇಡ್ಲಿ ಹಿಟ್ಟನ್ನ ಮಾರಾಟ ಮಾಡುವ ಐಡಿ ಫ್ರೆಶ್​

ಪಿ.ಅಭಿನಾಷ್​​​

ಹತ್ತುಲಕ್ಷ ಇಡ್ಲಿ ಹಿಟ್ಟನ್ನ ಮಾರಾಟ ಮಾಡುವ ಐಡಿ ಫ್ರೆಶ್​

Sunday November 29, 2015,

3 min Read

ಹುಟ್ಟಿದ್ದು ಕೇರಳದಲ್ಲಿ, ಮಾಡಿದ್ದು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಇನ್ನೂ ಓದಬೇಕು ಅಂತಾ ಬೆಂಗಳೂರಿಗೆ ಎಂಟ್ರಿ ಕೊಟ್ರು ಮುಸ್ತಾಫಾ ಪಿಸಿ. ನಗರದ ಪ್ರತಿಷ್ಠಿತ ಐಐಎಮ್ ನಿಂದ ಎಮ್‍ಬಿಎ ಪದವಿಯನ್ನೂ ಪಡೆದುಕೊಂಡ್ರು. ಮುಸ್ತಾಫಾ ಅವರ ವಿದ್ಯಾರ್ಹತೆಗೆ ಅತಿ ಹೆಚ್ಚು ಸಂಬಳ ಪಡೆಯುವ, ಉನ್ನತ ಹುದ್ದೆಯ ಕೆಲಸ ಪಡೆದುಕೊಳ್ಳಬಹುದಿತ್ತು. ಆದ್ರೆ ಅವರೊಳಗಿದ್ದ ಆಹಾರದೆಡೆಗಿನ ಪ್ರೀತಿ ಇಂದು ಮುಸ್ತಾಫಾ ಅವರನ್ನ ಆಹಾರ ವಲಯಕ್ಕ ಕರೆತಂದಿದೆ. ಕೌಟುಂಬಿಕ ಹಿನ್ನೆಲೆ ಇಲ್ಲದಿದ್ರೂ ಇಂದು ಮುಸ್ತಾಫಾ ಆಹಾರವಲಯದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಅದು 2006ನೇ ಇಸವಿ. ಇಡ್ಲಿ ಹಾಗೂ ದೋಸೆ ಹಿಟ್ಟನ್ನ ಪ್ಲಾಸ್ಟಿಕ್​​​ ಬ್ಯಾಗ್‍ಗಳಲ್ಲಿ ಹಾಕಿ ಅದಕ್ಕೊಂದು ರಬ್ಬರ್ ಬ್ಯಾಂಡ್ ಕಟ್ಟಿ ಮಾರಾಟ ಮಾಡಲಾಗ್ತಾ ಇತ್ತು. ಇದೇ ಹಿಟ್ಟಿನಿಂದ ಲಕ್ಷಾಂತರ ಮಂದಿ ತಮ್ಮ ಮನೆಯಲ್ಲಿ ತಿಂಡಿ ತಯಾರು ಮಾಡ್ತಾ ಇದ್ರು. ಆಗಲೇ ಮುಸ್ತಾಫಾ ಅವರಿಗೆ ಹಿಟ್ಟು ತಯಾರಿಸುವ ಐಡಿಯಾ ಹೊಳೆದದ್ದು. ಇಡ್ಲಿ/ದೋಸೆ ಹಿಟ್ಟು ತಯಾರಿಸಲು ಹೊಸ ಯೋಜನೆ ರೂಪಿಸಿ, ಸ್ವಚ್ಛ ಹಾಗೂ ರುಚಿಯಾದ ಇಡ್ಲಿ/ದೋಸೆ ಹಿಟ್ಟು ತಯಾರಿಸುವ ಕೈಗಾರಿಕೆಯನ್ನ ಆರಂಭಿಸಲು ಮುಂದಾದ್ರು. ತಮ್ಮ ನಾಲ್ಕು ಸೋದರರೊಂದಿಗೆ ಚಿಕ್ಕದೊಂದು ಕಾರ್ಖಾನೆಯನ್ನೂ ಆರಂಭಿಸಿದ್ರು. 

image


ಕೆಲವು ಯಂತ್ರಗಳನ್ನ ಖರೀದಿಸಿ ತಂದರು, ಹಿಟ್ಟನ್ನ ಪ್ಯಾಕ್ ಮಾಡಲು ಹೊಸ ಐಡಿಯಾ ಮಾಡಿದ್ರು. ಆಗಲೇ ಐಡಿ ಇಡ್ಲಿ/ದೋಸೆ ಹಿಟ್ಟು ಹುಟ್ಟಿಕೊಂಡಿದ್ದು. 'ಯೋಜನೆ ತುಂಬಾ ಸುಲಭವಾಗಿತ್ತು. ಜನರಿಗೆ ಸ್ವಚ್ಛತೆ ಕಾಪಾಡಿದ, ಆಕರ್ಷಕವಾಗಿ ಹಾಗೂ ಸೇಫ್ ಆಗಿ ಪ್ಯಾಕ್ ಮಾಡಿದ ಹಿಟ್ಟನ್ನ ತಲುಪಿಸುವುದಾಗಿತ್ತು' ಅಂತಾರೆ ಮುಸ್ತಾಫಾ. ಕೆಲವೇ ವಾರಗಳಲ್ಲಿ ಚಿಕ್ಕದಾಗಿ ಆರಂಭಿಸಿದ ಉದ್ದಿಮೆ ದೊಡ್ಡಮಟ್ಟಕ್ಕೆ ಬೆಳೆದಿತ್ತು. ಬೆಂಗಳೂರಿನಲ್ಲಿ ಹಿಟ್ಟಿಗೆ ಹೆಚ್ಚಿನ ಬೇಡಿಕೆ ಬಂದಿತ್ತು. ಮುಸ್ತಾಫಾ ಹಾಗೂ ಅವರ ಸೋದರರ ಐಡಿಯಾ ವರ್ಕ್‍ಔಟ್ ಆಗಿತ್ತು. ಐಡಿ ಫ್ರೆಶ್ ಕೆಲವೇ ದಿನಗಳಲ್ಲಿ ಪ್ರಿಸರ್ವೇಟಿವ್ ಮುಕ್ತ ಸಿದ್ದ ಆಹಾರೋತ್ಪನ್ನ ತಯಾರಿಸಲು ಮುಂದಾಗಿತ್ತು.

'ನಾವು ಉತ್ಪನ್ನಗಳ ಗುಣಮಟ್ಟ ಹಾಗೂ ಪ್ಯಾಕಿಂಗ್ ಬಗ್ಗೆ ಹೆಚ್ಚು ನಿಗಾ ವಹಿಸಿದೆವು. ಬೃಹತ್ ಮಾರುಕಟ್ಟೆಯಂತೂ ಇದ್ದೇ ಇದೆ.' ಅಂತಾರೆ ಮುಸ್ತಾಫಾ. ಐಡಿ ಫ್ರೆಶ್ ಗ್ರಾಹಕರಿಗೆ ಉತ್ಪನ್ನ ತಲುಪಿಸುವುದರಲ್ಲೂ ಪರಿಣಿತಿ ಪಡೆದುಕೊಂಡಿತ್ತು. ಇಂದು ನಗರ ಒಂದರಲ್ಲೇ ಅರವತ್ತೈದು ಸಾವಿರ ರೀಟೈಲ್ ಅಂಗಡಿಗಳಲ್ಲಿ ಇವರ ಉತ್ಪನ್ನಗಳು ಸಿಗ್ತಾ ಇವೆ. ಆ ಪೈಕಿ ಹನ್ನೆರೆಡು ಸಾವಿರ ಅಂಗಡಿಗಳಲ್ಲಿ ರೆಫ್ರಿಜರೇಟರ್‍ಗಳಿವೆ.

image


ಕೆಲವು ವರ್ಷಗಳ ನಂತ್ರ, ಐಡಿ ಫ್ರೆಶ್ ಮತ್ತಷ್ಟು ಬಂಡವಾಳವನ್ನ ಹೂಡಿ ತನ್ನ ಉತ್ಪನ್ನಗಳನ್ನ ಹೆಚ್ಚಸಿಕೊಂಡಿತ್ತು. 2014ರಲ್ಲಿ ಹೆಲಿಕಾನ್ ವೆಂಚರ್ ಪಾರ್ಟ್​ನರ್ಸ್​ನಿಂದ ಮೂವತ್ತೈದು ಕೋಟಿ ಹಣವನ್ನ ಬಂಡವಾಳವನ್ನಾಗಿ ಪಡೆದುಕೊಳ್ಳಲಾಗಿದೆ. ಆ ಸಮಯದಲ್ಲಿ ಕಂಪನಿಯಲ್ಲಿ 600 ಸಿಬ್ಬಂದಿ ಇದ್ರು. ನಂತ್ರ ಹೊಸದಾಗಿ ತರಲಾದ ಬಂಡವಾಳದಿಂದ ಹೆಚ್ಚಿನ ಸಿಬ್ಬಂದಿಯನ್ನ ನಿಯೋಜಿಸಿಕೊಳ್ಳಲಾಯ್ತು. ತದನಂತ್ರ ಹಲವು ಹೊಸ ಪದಾರ್ಥಗಳು ಮಾರುಕಟ್ಟೆಗೆ ಪರಿಚಿತಗೊಂಡವು.

ಈಗ ಐಡಿ ಫ್ರೆಶ್‍ನಲ್ಲಿ 1000 ಕ್ಕೂ ಹೆಚ್ಚು ಮಂದಿ ಕೆಲಸ ಮಾಡ್ತಿದ್ದಾರೆ. ಏಳು ಕಾರ್ಖಾನೆಗಳು ಏಳುಕಡೆಗಳಲ್ಲಿ ತಲೆತ್ತಿವೆ. ಎಂಟು ಕಚೇರಿಗಳಲ್ಲಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. 'ಸದ್ಯ ನಾವು ಪ್ರತಿನಿತ್ಯ 50000 ಕೆಜಿಯಷ್ಟು ಇಡ್ಲಿ ಹಾಗೂ ದೋಸೆ ಹಿಟ್ಟನ್ನ ತಯಾರು ಮಾಡ್ತಿದ್ದೇವೆ, ಇದ್ರಿಂದ ಹತ್ತು ಲಕ್ಷ ಇಡ್ಲಿಗಳನ್ನ ಸಿದ್ದಗೊಳಿಸಬಹುದು'. ಅಂತಾರೆ ಮುಸ್ತಾಫಾ. ಹಿಟ್ಟನ್ನ ಹೊರತುಪಡಿಸಿ ಐಡಿ ಫ್ರೆಶ್ ಮಲಬಾರ್ ಪರೋಟಾಗಳನ್ನ ಪರಿಚಯಿಸಿದೆ. ಹಾಗು ಚಟ್ನಿಯನ್ನೂ ಪರಿಚಯಿಸಲಾಗಿದ್ದು, ದಕ್ಷಿಣ ಭಾರತದಲ್ಲಿ ಇದು ಮನೆಮಾತಾಗಿದೆ. ಇಡ್ಲಿ/ದೋಸೆ ಹಿಟ್ಟು ಐಡಿ ಫ್ರೆಶ್‍ನ ಪ್ರಸಿದ್ದ ಉತ್ಪನ್ನ ಜೊತೆಗೆ ಪರೋಟಾ ಕೂಡ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಹಿಟ್ಟನ್ನ ಹಾಗೂ ಉತ್ಪನ್ನಗಳನ್ನ ತಯಾರಿಸುವ ಬಗ್ಗೆ ಮಾತಾಡೋದಾದ್ರೆ ಮುಸ್ತಾಫಾ ಹೀಗೆ ಹೇಳ್ತಾರೆ 'ಹಿಟ್ಟನ್ನ ತಯಾರಿಸಿ, ಸೀಲ್ ಮಾಡಿ ಬೆಳಗ್ಗೆ ಐದು ಗಂಟೆಯೊಳಗಾಗಿ ತಣ್ಣನೆ ಪೆಟ್ಟಿಗೆಯಲ್ಲಿರಿಸಿ ವ್ಯಾನ್‍ಗಳಿಗೆ ತುಂಬಲಾಗತ್ತೆ. ಇದನ್ನ ಬೆಂಗಳೂರು ಸೇರಿದಂತೆ ನಾವು ಹಲವು ನಗರಗಳನ್ನ ಸ್ಟೋರ್‍ಗಳಿಗೆ ತಲುಪಿಸುತ್ತೇವೆ. ಸಾವರಾರು ರೀಟೈನ್ ಸ್ಟೋರ್‍ಗಳೊಂದಿಗೆ ನಾವು ಒಪ್ಪಂದ ಮಾಡಿಕೊಂಡಿದ್ದು, ಮಧ್ಯಾಹ್ನ ಎರಡು ಗಂಟೆಯೊಳಗಾಗಿ ಎಲ್ಲಾ ಏರಿಯಾಗಳಿಗೂ ತಲುಪಿಸಿಬಿಡುತ್ತೇವೆ'.

image


ನಗರಕ್ಕೆ ಎಷ್ಟು ಹಿಟ್ಟನ್ನ ಪೂರೈಸಬೇಕು, ಎಷ್ಟು ಬೇಡಿಕೆ ಇದೆ ಅನ್ನೋದನ್ನ ಲೆಕ್ಕಾಚಾರ ಮಾಡಿ, ಉತ್ಪನ್ನಗಳನ್ನ ಪೂರೈಸುತ್ತೇವೆ. ಇದು ಹೊಸದಾಗಿ ಹುಟ್ಟೆಕೊಂಡಿರುವ ಕಂಪನಿಯೊಂದು ಆಹಾರ ವಲಯದಲ್ಲಿ ಪಡೆದುಕೊಂಡಿರುವ ಪ್ರಸಿದ್ಧಿಗೆ ಉದಾಹರಣೆಯಾಗಿದೆ. ದಿನಸಿ ಪೂರೈಸುವ ಪೋರ್ಟಲ್‍ಗಳಾದ ಬಿಗ್ ಬ್ಯಾಸ್ಕೆಟ್, ಗ್ರಾಫರ್ಸ್‍ಗಳಲ್ಲೂ ಲಭ್ಯವಿದೆ. ' ಈ ಹೊಸ ಮಾರ್ಗಗಳು ಜನರ ಆಸಕ್ತಿಯ್ನನ ನೇರವಾಗಿ ನಮಗೆ ಮುಟ್ಟಿಸುತ್ತದೆ. ಆದ್ರೆ, ಆನ್‍ಲೈನ್‍ನ ಪ್ರಮಾಣ ತುಂಬಾ ಕಡಿಮೆ. ನಮ್ಮ ನಿಜವಾದ ಮಾರ್ಕೆಟ್ ಅಂಗಡಿಗಳೇ'.

ಬಂಡವಾಳ ಹೂಡುವವರ ಸಂಖ್ಯೆ ಹೆಚ್ಚಾಗ್ತಿರೋದ್ರಿಂದ, ಆಹಾರ ವಯದಲ್ಲಿ ಹಲವು ಹೊಸ ಉತ್ಪನ್ನಗಳು ಹುಟ್ಟುಪಡೆದುಕೊಳ್ಳುತ್ತಿವೆ. ಮಾರುಕಟ್ಟೆಗಳು ನವೀಕರಣಗೊಳ್ಳುತ್ತಿವೆ. ಹಲವು ರೆಸ್ಟೋರೆಂಟ್‍ಗಳು,ನಾನಾ ಬಗೆಯ ಆಹಾರಗಳನ್ನ ಡೆಲಿವರಿ ಮಾಡ್ತಾ ಇವೆ. ಇಂಟರ್‍ನೆಟ್ ಹಾಗೂ ಫಸ್ಟ್ ಕಿಷನ್ ಮೂಲಕವೂ ತಿನಿಸುಗಳು ನೇರವಾಗಿ ಜನರನ್ನ ತಲುಪ್ತಾ ಇವೆ. ಮಾರುಕಟ್ಟೆ ದೊಡ್ಡದು ಹೌದು, ಸಾಕಷ್ಟು ಮಂದಿ ಇಲ್ಲಿದ್ದಾರೆ. ಹಾಗಾಗಿ ಒಟ್ಟಿಗೆ ಸಾಗುವುದು ಒಳ್ಳೆಯದು. ಐಡಿ ಫ್ರೆಶ್‍ಗೆ ತನ್ನ ಗುರಿ ಮುಟ್ಟುವ ಹಾದಿ ತಿಳಿದಿದೆ. ಮತ್ತ್ಟು ನಗರಗಳಲ್ಲಿ ಉತ್ಪನ್ನಗಳನ್ನ ಲಾಂಚ್ ಮಾಡುವುದು, ಪ್ರಾಡಕ್ಟ್‍ಗಳ ಗುಣಮಟ್ಟವನ್ನ ಹೆಚ್ಚಿಸುವುದು. ಮದ್ಯಪ್ರಾಚ್ಯ ದೇಶಗಳಲ್ಲಿ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡುವ ಮೂಲಕ ಸಮುದ್ರದಾಚೆಗೂ ತನ್ನ ಮಾರುಕಟ್ಟೆಯನ್ನ ವಿಸ್ತರಿಸಿದೆ. ಮಾರುಕಟ್ಟೆಯಲ್ಲಿ ನಮಗಿರುವ ಬೇಡಿಕೆ ಏನು ಅನ್ನೋದು ನಮಗೆ ತಿಳಿದಿದೆ. ಹಾಗೂ ಆ ಸ್ಥಾನವನ್ನ ಉಳಿಸಿಕೊಳ್ಳುವ ಬಗೆಯೂ ಗೊತ್ತಿದೆ. ನಾವು 2020ರ ವೇಳೆಗೆ 1000 ಕೋಟಿ ಟರ್ನ್‍ಓವರ್ ಮಾಡುವ ಗುರಿ ಹೊಂದಿದ್ದೇವೆ ಅಂತಾರೆ ಮುಸ್ತಾಫಾ.