ಡಿಜಿಟಲ್ ನಾವೀನ್ಯತೆ ಮತ್ತು ಸಾಮಾಜಿಕ ಬದಲಾವಣೆ-`ಮಂಥನ್ ದಕ್ಷಿಣ ಏಷ್ಯಾ ಪ್ರಶಸ್ತಿ 2015'ರ ವಿಜೇತರು
ಟೀಮ್ ವೈ.ಎಸ್. ಕನ್ನಡ
12ನೇ ವಾರ್ಷಿಕ ಮಂಥನ್ ಕಾನ್ಫರೆನ್ಸ್ ಹಾಗೂ ಬೆಸ್ಟ್ ಸೌತ್ ಏಷ್ಯನ್ ಡಿಜಿಟಲ್ ಕಂಟೆಂಟ್ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಇತ್ತೀಚೆಗಷ್ಟೇ ದೆಹಲಿಯಲ್ಲಿ ಮುಕ್ತಾಯವಾಗಿದೆ. ಸ್ಪರ್ಧೆಯ 12 ವಿಭಾಗಗಳಲ್ಲೂ ಈ ಬಾರಿ ಹೊಸಬರದ್ದೇ ದರ್ಬಾರ್. 12 ವಿಭಾಗಗಳಲ್ಲಿ ಈ ವರ್ಷ 57 ಫೈನಲಿಸ್ಟ್ಗಳಿದ್ರು. ಈ ಪೈಕಿ 27 ಸಂಸ್ಥೆಗಳು ಸ್ಪರ್ಧೆಯಲ್ಲಿ ಗೆಲುವು ಸಾಧಿಸಿವೆ. ಈ ಪ್ರಶಸ್ತಿಗಾಗಿ 36 ದೇಶಗಳ 412 ಕಂಪನಿಗಳು ನಾಮನಿರ್ದೇಶನಗೊಂಡಿದ್ದವು. ತೀರ್ಪುಗಾರರ ಸುದೀರ್ಘ ಚರ್ಚೆಯ ಬಳಿಕ 27 ಕಂಪನಿಗಳನ್ನು ವಿಜೇತರನ್ನಾಗಿ ಘೋಷಿಸಲಾಯ್ತು. `ಡಿಜಿಟಲ್ ಎಂಪವರ್ಮೆಂಟ್ ಫೌಂಡೇಶನ್'ನ ಸಂಸ್ಥಾಪಕ ಒಸಾಮಾ ಮಂಜರ್, `ಮಂಥನ್ ಅವಾರ್ಡ್ಸ್ ' ಕಾರ್ಯಕ್ರಮವನ್ನು ಆಯೋಜಿಸಿದ್ರು. ಇದು ಕಳೆದ ಒಂದು ದಶಕದಲ್ಲಿ 4,000ಕ್ಕೂ ಅಧಿಕ ಅತ್ಯದ್ಭುತ ಡಿಜಿಟಲ್ ಆವಿಷ್ಕಾರಗಳಿಗೆ ಸಾಕ್ಷಿಯಾಗಿದೆ.
`ಇಂಡಿಯಾ ಹ್ಯಾಬಿಟ್ ಸೆಂಟರ್'ನಲ್ಲಿ ನಡೆದ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಅಂದ್ರೆ, ಗ್ರಾಮೀಣ ವಿಷಯಗಳಿಂದ್ಲೇ ವಿನ್ಯಾಸಗೊಂಡ ಹೊರಾಂಗಣ ವೇದಿಕೆಯಲ್ಲಿ ನಡೆದ `ಅನ್ಕಾನ್ಫರೆನ್ಸ್'. ಪ್ರಶಸ್ತಿ ವಿಭಾಗಗಳ ಜೊತೆಗೆ ಗುಂಪು ಗುಂಪಾದ ಚರ್ಚೆಗೂ ಇದು ವೇದಿಕೆಯಾಗಿತ್ತು. ಇದರ ಜೊತೆಜೊತೆಗೆ ಸಂಗೀತದ ರಸದೌತಣವಿತ್ತು. ಸುಫಲಾ ಪಟನ್ಕರ್ ಅವರ ತಬಲಾ ವಾದನ ಮತ್ತು ಉಮರ್ ಫಾರೂಖ್ ಅವರ ರಾಜಸ್ತಾನಿ ಜಾನಪದ ವಾದ್ಯ ಭಪಂಗ್ನ ಜುಗಲ್ಬಂದಿಯಿತ್ತು.
ಗ್ರಾಮೀಣ ಭಾರತಕ್ಕೆ ಡಿಜಿಟಲ್ ಅವಕಾಶಗಳನ್ನು ವಿಸ್ತರಿಸಲು ಕಾರ್ಯಕ್ರಮದಲ್ಲಿ ಕಾರ್ಪೊರೇಟ್ ಉಪಕ್ರಮಗಳನ್ನು ಕೂಡ ಹೈಲೈಟ್ ಮಾಡಲಾಗಿತ್ತು. ಉದಾಹರಣೆಗೆ ......ನ `ಲೈಟಿಂಗ್ ಎ ಬಿಲಿಯನ್ ಲೈವ್ಸ್ ಪ್ರೋಗ್ರಾಮ್' `ಪಬ್ಲಿಕ್-ಪ್ರೈವೇಟ್-ಪೀಪಲ್' (ಪಿಪಿಪಿ) ಪಾಲುದಾರಿಕೆಯ ಸಂರಕ್ಷಣೆಗೆ ತೆಗೆದುಕೊಂಡ ಉಪಕ್ರಮವಾಗಿದೆ. `ಇಂಡಸ್ ಟವರ್ಸ್' ಈ ವರ್ಷ 6 ಪ್ರಮುಖ `ಸಿಎಸ್ಆರ್' ಪ್ರಾಜೆಕ್ಟ್ಗಳನ್ನು ಕೈಗೆತ್ತಿಕೊಂಡಿದೆ. 25 `ಕಮ್ಯೂನಿಟಿ ಇನ್ಫಾರ್ಮೇಶನ್ ರಿಸೋರ್ಸ್ ಸೆಂಟರ್'ಗಳನ್ನು ತೆರೆದಿದೆ. `ಇಂಡಸ್ ಟವರ್ಸ್'ನ ನಿಯಂತ್ರಕ ವ್ಯವಹಾರಗಳು ಮತ್ತು ಸಂರಕ್ಷಣಾ ವಿಭಾಗದ ಮುಖ್ಯಸ್ಥ ಕುಮಾರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಾಮ್ ಉತ್ಪನ್ನಗಳ ಬಗ್ಗೆ ಸರ್ಕಾರ ಕೂಡ ಗಮನಹರಿಸುತ್ತಿದೆ. ಇ-ಗವರ್ನೆನ್ಸ್ ಮೂಲಕ ಅದನ್ನೆಲ್ಲ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಆದ್ರೆ ಸರ್ಕಾರಿ ಇಲಾಖೆಗಳಲ್ಲಿ ಇನ್ನೂ ಕೂಡ ಯಂತ್ರಾಂಶಗಳ ಬಗ್ಗೆ ಒಲವಿದೆ. ಕೆಲವೇ ಕೆಲವು ಕಚೇರಿಗಳಲ್ಲಿ ಮಾತ್ರ ಇದನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ ಎನ್ನುತ್ತಾರೆ ಸಿಕ್ಕಿಂ ಸರ್ಕಾರದ ಐಟಿ ಇಲಾಖೆಯ ಮಾಜಿ ಕಾರ್ಯದರ್ಶಿ ರಾಜೇಶ್ ವರ್ಮಾ. ಡಿಜಿಟಲ್ ತಂತ್ರಜ್ಞಾನ, ಪರಿಸರ ವ್ಯವಸ್ಥೆಯಲ್ಲಿ ಅಗಾಧವಾದ ದಕ್ಷತೆಯನ್ನು ತರಲು ನೆರವಾಗುತ್ತಿದೆ. ಖುದ್ದಾಗಿ ತೆರಳಲು ಅಸಾಧ್ಯವಾದಲ್ಲಿಗೆ ಕೂಡ ತಲುಪಲು ಬ್ಯಾಂಕ್ಗಳಿಗೆ ಸಹಕಾರಿಯಾಗಿದೆ ಅನ್ನೋದು `ಯೆಸ್ ಬ್ಯಾಂಕ್'ನ ಗ್ರೂಪ್ ಪ್ರೆಸಿಡೆಂಟ್ ಹಾಗೂ ಕಂಟ್ರಿ ಹೆಡ್ ನಮಿತಾ ವಿಕಾಸ್ ಅವರ ಅಭಿಪ್ರಾಯ.
ಇ-ಅಗ್ರಿಕಲ್ಚರ್, ಇ-ಜರ್ನಲಿಸಮ್, ಇ-ಎಜುಕೇಶನ್, ಇ-ಹೆಲ್ತ್ ಜೊತೆಗೆ `ಡಿಜಿಟಲ್ ಕಾಮರ್ಸ್ & ಬ್ಯಾಂಕಿಂಗ್' ಕೂಡ ಮಂಥನ್ ಪ್ರಶಸ್ತಿಗಾಗಿ ನಡೆದ ಸ್ಪರ್ಧೆಗಳ ವಿಭಾಗದಲ್ಲಿತ್ತು. ಪ್ರಶಸ್ತಿ ವಿಜೇತರ ಸಂಪೂರ್ಣ ವಿವರವೂ ಇದೆ. ವಿಶೇಷ ಉಲ್ಲೇಖ ಹಾಗೂ ರನ್ನರ್ ಅಪ್ಗಳ ವಿವರ ಕೂಡ ಇದೆ. ಇವರೆಲ್ಲ ದಕ್ಷಿಣ ಏಷ್ಯಾದಲ್ಲಿ ಡಿಜಿಟಲ್ ಲಾಭಾಂಶವನ್ನು ವಾಸ್ತವವಾಗಿ ಪರಿವರ್ತಿಸಿದ್ದಾರೆ.
ಅನುವಾದಕರು: ಭಾರತಿ ಭಟ್