8ನೇ ವರ್ಷಕ್ಕೆ ಮದುವೆಯಾದ್ರೂ ಹಠ ಬಿಡಲಿಲ್ಲ- ಡಾಕ್ಟರ್ ಆಗಲು ಸಿದ್ಧರಾಗಿದ್ದಾರೆ ರೂಪಾ..!

ಟೀಮ್​ ವೈ.ಎಸ್​. ಕನ್ನಡ

8ನೇ ವರ್ಷಕ್ಕೆ ಮದುವೆಯಾದ್ರೂ ಹಠ ಬಿಡಲಿಲ್ಲ- ಡಾಕ್ಟರ್ ಆಗಲು ಸಿದ್ಧರಾಗಿದ್ದಾರೆ ರೂಪಾ..!

Wednesday July 05, 2017,

2 min Read

ಮನಸ್ಸಿದ್ದರೆ ಮಾರ್ಗ, ಇದು ಎಂದೆಂದಿಗೂ ಸತ್ಯವಾಗಿರುವ ಮಾತು. ಬಡವ ಇರಲಿ, ಅಥವಾ ಶ್ರೀಮಂತನೇ ಆಗಿರಲಿ, ಮನಸ್ಸಿದ್ದರೆ ಎಲ್ಲವನ್ನೂ ಸಾಧಿಸಬಹುದು. ರೂಪಾ ಯಾದವ್ ಅನ್ನುವ ಮಹಿಳೆ ಇದಕ್ಕೊಂದು ಸ್ಪೂರ್ತಿದಾಯಕ ಉದಾಹರಣೆ. ರೂಪಾಗೆ 8ನೇ ವರ್ಷದಲ್ಲಿ ಮದುವೆಯ ಮೂರುಗಂಟು ಬಿದ್ದರೂ, ಈಗ ಆಕೆ ಹಠಕ್ಕೆ ಬಿದ್ದು ಡಾಕ್ಟರ್ ಆಗಲು ಹೊರಟಿದ್ದಾಳೆ. ರೂಪಾ ಸಾಧನೆಯ ಹಿಂದೆ ಪರಿಶ್ರಮವೊಂದೇ ಎದ್ದು ಕಾಣುತ್ತದೆ. ನೀಟ್ ಪರೀಕ್ಷೆಯಲ್ಲಿ ಪಾಸ್ ಆಗಿರುವ ರೂಪಾ ಈಗ ಮೆಡಿಕಲ್ ಸೀಟ್ ಪಡೆದುಕೊಳ್ಳುವ ಕನಸು ಕಾಣ್ತಿದ್ದಾಳೆ.

image


ರೂಪಾ ಕೋಟಾದ ಕೋಚಿಂಗ್ ಸೆಂಟರ್ ಒಂದರಲ್ಲಿ ಅಭ್ಯಾಸ ಮಾಡಿದ್ದಳು. ಅಷ್ಟೇ ಅಲ್ಲ ಈ ಹಿಂದೆ ಎರಡು ಬಾರಿ ನೀಟ್ ಪರೀಕ್ಷೆ ಬರೆದು ಫೇಲ್ ಆಗಿದ್ದರು. ಆದರೆ ಹಠಕ್ಕೆ ಬಿದ್ದು 3ನೇ ಬಾರಿ ಪರೀಕ್ಷೆ ಬರೆದ ರೂಪಾ ಈಗ 603 ಅಂಕಗಳೊಂದಿಗೆ ಪಾಸ್ ಆಗಿದ್ದಾರೆ. ಅಷ್ಟೇ ಅಲ್ಲ ಆಲ್ ಇಂಡಿಯಾ ಶ್ರೇಯಾಂಕದಲ್ಲಿ 2612 ಶ್ರೇಯಾಂಕ ಪಡೆದುಕೊಂಡಿದ್ದಾರೆ. ಕೌನ್ಸೆಲಿಂಗ್ ಸೆಷನ್ ಗೂ ಹಾಜಾರಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಪಡೆದುಕೊಳ್ಳಲು ಶ್ರಮಪಡುತ್ತಿದ್ದಾರೆ.

ರೂಪಾ ಯಾದವ್ ಹುಟ್ಟಿದ್ದು ಜೈಪುರ ಜಿಲ್ಲೆಯ ಕರೇರಿಯಲ್ಲಿ. ರೂಪಾ ಮತ್ತು ಸಹೋದರಿ ರುಕ್ಮಾ 8 ವರ್ಷದವರಿದ್ದಾಗಲೇ 12 ವರ್ಷದ ಶಂಕರ್ ಲಾಲ್ ಮತ್ತು ಬಾಬುಲಾಲ್ ಜೊತೆ ಮದುವೆಯಾಗಿತ್ತು. ಆ ಕಾಲದಲ್ಲಿ ರಾಜಸ್ಥಾನದಲ್ಲಿ ಬಾಲ್ಯ ವಿವಾಹ ಮಾಮೂಲಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹದ ಸಂಖ್ಯೆ ಕಡಿಮೆಯಾಗಿದ್ದರೂ, ರಾಜಸ್ಥಾನದಲ್ಲಿ ಇನ್ನೂ ಕೂಡ ಬಾಲ್ಯ ವಿವಾಹ ನಡೆಯುತ್ತಿದೆ.

ಇದನ್ನು ಓದಿ: ಡಿಸೈನರ್ "ಬೋಟಿಕ್ " ! ಮಹಿತಾ ಪ್ರಸಾದ್ ಡಿಸೈನ್ಸ್

ರೂಪಾ ವಿವಾಹದ ನಂತರ ವಿದ್ಯಾಭ್ಯಾಸವನ್ನು ಮುಂದುವರೆಸಿದ್ರು. ರಾಜಸ್ತಾನದಲ್ಲಿ ಮದುವೆ ನಂತರ ಶಿಕ್ಷಣ ಪಡೆಯುವುದು ಸವಾಲಿನ ಮಾತೇ ಸರಿ. 10ನೇ ತರಗತಿಯಲ್ಲಿ ರೂಪಾ ಶೇಕಡಾ 84ರಷ್ಟು ಅಂಕ ಪಡೆದಿದ್ದರು. ಇದು ಆಕೆಯ ಗಂಡ ಮತ್ತು ಗಂಡನ ಸಹೋದರನಿಗೆ ರೂಪಾಳನ್ನು ಓದಿನ ಕಡೆ ಹುರಿದುಂಬಿಸಲು ಪ್ರೇರಣೆ ನೀಡಿತ್ತು. 12ನೇ ತರಗತಿಯಲ್ಲೂ 84 ಶೇಕಡಾ ಅಂಕ ಪಡೆದು ಮತ್ತೆ ಮಿಂಚಿದ್ರು. ಅಚ್ಚರಿ ಅಂದರೆ ರೂಪಾ ಮನೆ ಕೆಲಸ ಮಾಡಿಕೊಂಡೇ ಈ ಎಲ್ಲಾ ಸಾಧನೆಯನ್ನು ಮಾಡಿದ್ದರು.

“ ನನಗೆ ಉತ್ತಮ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗಲಿಲ್ಲ. ಆದರೆ ನನ್ನ ಸಾಧನೆಯಿಂದ ಪ್ರೇರಣೆಗೊಂಡಿದ್ದ ಗಂಡ ಮತ್ತು ಅವರ ಸಹೋದರ ಕೋಟಾದಲ್ಲಿ ಎಂಬಿಬಿಎಸ್ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವ ಸಂಸ್ಥೆಯೊಂದಕ್ಕೆ ನನ್ನನ್ನು ಸೇರಿಸಿದ್ರು. ಇದು ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಆಯಿತು.”
- ರೂಪಾ, ಸಾಧಕಿ

ರೂಪಾ ಸಂಬಂಧಿಯೊಬ್ಬರು, ಎದೆ ನೋವಿನಿಂದ ಬಳಲುತ್ತಿದ್ದ ವೇಳೆ ಸರಿಯಾದ ಚಿಕಿತ್ಸೆ ಸಿಗದೆ ಮರಣ ಹೊಂದಿದ್ದರು. ಇದು ರೂಪಾಗೆ ಡಾಕ್ಟರ್ ಆಗುವಂತೆ ಪ್ರೇರೇಪಿಸಿತು. ಕೋಟಾದಲ್ಲಿ ಅಭ್ಯಾಸ ನಡೆಸಿದ್ದು ಉತ್ತಮ ಅಂಕ ಪಡೆಯಲು ನೆರವಾಯಿತು ಅನ್ನುವುದು ರೂಪಾ ಅಭಿಪ್ರಾಯ. ರೂಪಾ, ಖಾಸಗಿ ಕೋಚಿಂಗ್ ಸೆಂಟರ್ ನಲ್ಲಿ ಕೋಚಿಂಗ್ ಪಡೆದಿದ್ದರೂ, ಆಕೆ ಶುಲ್ಕದ ಶೇಕಡಾ 75ರಷ್ಟು ರಿಯಾಯಿತಿ ಸಿಕ್ಕಿತ್ತು. ಇದು ಕೂಡ ಬಡ ಕುಟುಂಬದಿಂದ ಬಂದಿದ್ದ ರೂಪಾಗೆ ಕಷ್ಟವಾಗಿತ್ತು.

“ ನಮ್ಮದು ಕೃಷಿಯನ್ನೇ ನಂಬಿ ಬದುಕುತ್ತಿರುವ ಕುಟುಂಬ. ಆದಾಯ ಕೂಡ ಕಡಿಮೆಯೇ ಇದೆ, ಹೀಗಾಗಿ ನನ್ನ ಗಂಡ ಟ್ಯಾಕ್ಸಿ ಓಡಿಸಿಕೊಂಡು, ನನ್ನ ಶೈಕ್ಷಣಿಕ ಶುಲ್ಕವನ್ನು ಭರಿಸಿದರು.”
- ರೂಪಾ, ಸಾಧಕಿ

ತನ್ನ 8ನೇ ವರ್ಷದಲ್ಲಿ ಮದುವೆಯ ಬಂಧನಕ್ಕೆ ರೂಪಾ ಬಿದ್ದರೂ, ಆಕೆಯ ಹಠ ಮತ್ತು ಶ್ರಮ ಆಕೆಯನ್ನು ಈಗ ಡಾಕ್ಟರ್ ಆಗುವ ಹಂತಕ್ಕೆ ತಂದು ನಿಲ್ಲಿಸಿದೆ, ಕೆಲವೇ ದಿನಗಳಲ್ಲಿ ರೂಪಾ ಎಂಬಿಬಿಎಸ್ ಕ್ಲಾಸ್ ಗೆ ಹಾಜಾರಾಗಲಿದ್ದಾರೆ. 

ಇದನ್ನು ಓದಿ:

1. ಜಲಚರ ಸಂರಕ್ಷಣೆಗಾಗಿ ಹುಟ್ಟಿಕೊಂಡಿದೆ ಈ ಟೀಮ್​..!

2. ಸಾಂಪ್ರದಾಯಿಕ ದೋಸೆ ತಿನ್ನಲು ಇಲ್ಲಿ ಬೇಟಿ ನೀಡಿ

3. ಗ್ರಾಮೀಣ ಕ್ರೀಡಾಪಟುಗಳ ಜೀವನ ರೂಪಿಸುವ ಸಿದ್ಧಾರ್ಥ್- ಒಂದೂವರೆ ಲಕ್ಷ ಪ್ರತಿಭೆಗಳ ಬದಕು ಕಟ್ಟಿಕೊಡುವ ಸ್ಟೈರ್ಸ್