ರಾಷ್ಟ್ರಗೀತೆಗೆ ವಿಶೇಷ ಗೌರವ ಸಲ್ಲಿಸಲು ಸೂಚನೆ-
ಟೀಮ್ ವೈ.ಎಸ್. ಕನ್ನಡ
ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇನ್ನು ಮುಂದೆ ಸಿನೆಮಾ ಥಿಯೇಟರ್ಗಳಲ್ಲಿ ಚಲನ ಚಿತ್ರ ಆರಂಭವಾಗುವುದಕ್ಕೆ ಮುನ್ನ ಕಡ್ಡಾಯವಾಗಿ ರಾಷ್ಟ್ರಗೀತೆ ಮೊಳಗಲಿದೆ. ಅಷ್ಟೇ ಅಲ್ಲ ರಾಷ್ಟ್ರಗೀತೆ ಮೊಳಗುತ್ತಿರುವ ಸಮಯದಲ್ಲಿ ಎಲ್ಲಾ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಬೇಕಿದೆ. ಭಾರತದ ರಾಷ್ಟ್ರ ಧ್ವಜವನ್ನು ಬೆಳ್ಳಿ ಪರದೆಯ ಮೇಲೆ ಕಾಣುವಂತೆ ಇಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಅಮಿತವ ರಾಯ್ ನೇತೃತ್ವದ ಪೀಠ ರಾಷ್ಟ್ರಗೀತೆ ಬಗ್ಗೆ ವಿಶೇಷ ಆದೇಶ ನೀಡಿದೆ.
“ ರಾಷ್ಟ್ರಗೀತೆ ಮೊಳಗುತ್ತಿರುವ ಸಮಯದಲ್ಲಿ ಪ್ರತಿಯೊಬ್ಬರೂ ಅದಕ್ಕೆ ಗೌರವ ನೀಡುವುದು ಮೊದಲ ಕರ್ತವ್ಯ. ಇದು ರಾಷ್ಟ್ರೀಯತೆ ಮತ್ತು ರಾಷ್ಟ್ರ ಭಕ್ತಿಯನ್ನು ಹೆಚ್ಚುವಂತೆ ಮಾಡುತ್ತದೆ.”
ಸುಪ್ರೀಂ ಕೋರ್ಟ್ ರಾಷ್ಟ್ರಗೀತೆಯನ್ನು ಕಮರ್ಷಿಯಲ್ ಆಗಿ ಅಥವಾ ನಾಟಕೀಯವಾಗಿ ಬಳಸಿಕೊಳ್ಳಬಾರದು ಅನ್ನೋದನ್ನ ಸ್ಪಷ್ಟಪಡಿಸಿದೆ. ಒಟ್ಟಿನಲ್ಲಿ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯತೆಯ ಗೌರವ ಮತ್ತು ಜವಾಬ್ದಾರಿಯನ್ನು ಎತ್ತಿಹಿಡಿಯಬೇಕಾದ ಕರ್ತವ್ಯ ಪ್ರತಿಯೊಬ್ಬ ಭಾರತೀಯರದ್ದಾಗಿದೆ.
1. ಅಭಿವೃದ್ಧಿಯ ಕನಸಿಗೆ ಬಡತನದ ಕಡಿವಾಣ- ಯೂನಿಸೆಫ್ ವರದಿಯಲ್ಲಿ ಶಾಕಿಂಗ್ ನ್ಯೂಸ್
2. ಒತ್ತಡವಿಲ್ಲದ ಕೆಲಸ- ಕೈ ತುಂಬಾ ಸಂಬಳ- ನೆಮ್ಮದಿಯಾಗಿ ಸಮಯ ಕಳೆಯುವ ಬಗ್ಗೆ ಯೋಚನೆ ಮಾಡಿ