ಮಹಿಳೆಯರ ಒಳಿತಾಗಿ ಎದ್ದು ನಿಂತ ನಾರಿಯರು- "ಸ್ಕಿಲ್ ಶ್ರೀ"ನಿಂದ ಹೆಣ್ಣುಮಕ್ಕಳ ಜೀವನಕ್ಕೆ ಶ್ರೀಕಾರ
ಟೀಮ್ ವೈ.ಎಸ್. ಕನ್ನಡ
ಈಗಿನ ಕಾಲದಲ್ಲಿ ಹೆಣ್ಣುಮಕ್ಕಳು ಯಾವುದೇ ಪುರಷರಿಗಿಂತ ಕಡಿಮೆ ಇಲ್ಲ ಎಲ್ಲದರಲ್ಲೂ ಸಮಾನಳು ಅಂತ ಎಷ್ಟೇ ಕೂಗಿ ಹೇಳಿದ್ರು ಕೂಡ ಎಲ್ಲೋ ಒಂದು ಕಡೆ ಯಾಮಾರಿ ಜೀವನದ ಹಾದಿಯನ್ನ ಕಂಗಂಟಾಗಿ ಮಾಡಿಕೊಳ್ತಾರೆ. ಅಂತಹ ಅದೆಷ್ಟೋ ಹೆಣ್ಣು ಮಕ್ಕಳ ಪಾಲಿಗೆ ಇಂದು ಬೆನ್ನೆಲುಬಾಗಿ ನಿಂತಿರುವುದು "ಸ್ಕಿಲ್ ಶ್ರೀ ನಾನ್ ಫಂಡಬಲ್ ಟ್ರಸ್ಟ್"
3 ಮಹಿಳೆಯರ ಸಾಧನೆ
"ಸ್ಕಿಲ್ ಶ್ರೀ ನಾನ್ ಫಂಡಬಲ್ ಟ್ರಸ್ಟ್" ಅನ್ನು ಆರಂಭಿಸಿದ್ದು ರಮಾ. ಈ ಟ್ರಸ್ಟ್ ಅನ್ನ ಆರಂಭಿಸಿದ ನಂತರ ರಮಾ ಅವರ ಒಳ್ಳೆಯ ಕೆಲಸಕ್ಕೆ ಜೊತೆಯಾಗಿದ್ದು ಸುಧಾ ಮತ್ತು ಕಲ್ಪನಾ. ಮನೆ ಬಿಟ್ಟ ಹಜೆಣ್ಣು ಮಕ್ಕಳು ಬೀದಿ ಪಾಲಾಗ ಬಾರದು ಅನ್ನುವ ಉದ್ದೇಶದಿಂದ ಈ ಟ್ರಸ್ಟ್ ಆರಂಭ ಮಾಡಿದ್ದು, ಇದರಿಂದ ಅದೆಷ್ಟೋ ಹೆಣ್ಣು ಮಕ್ಕಳು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಬಂದ ಹೆಣ್ಣು ಮಕ್ಕಳಿಗೆ ಈ ಮೂವರು ಸೇರಿ ಸಾಕಷ್ಟು ವಿಧವಾದ ಮತ್ತು ವಿಭಿನ್ನ ಟ್ರೈನಿಂಗ್ಗಳನ್ನು ಕೊಟ್ಟು ನಂತರ ಕೆಲಸವನ್ನ ಕೊಡಿಸಿ ಜೀವನಾಧಾರಕ್ಕೆ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ.
ಇದನ್ನು ಓದಿ: ಎಂಟರ ನಂಟು ಬಿಡಲಿಲ್ಲ ಬಣ್ಣದ ನಂಟು
ಹೆಣ್ಣು ಮಕ್ಕಳಿಂದ ಹೆಣ್ಣು ಮಕ್ಕಳಿಗಾಗಿ ಇರುವ ಟ್ರಸ್ಟ್
"ಸ್ಕಿಲ್ ಶ್ರೀ ನಾನ್ ಫಂಡಬಲ್ ಟ್ರಸ್ಟ್"ಗೆ ಬಂದ ಹೆಣ್ಣು ಮಕ್ಕಳಿಗೆ ಬೇಕಿಂಗ್,ಟೈಲರಿಂಗ್, ಹಾಸ್ಪಿಟಾಲಿಟಿ, ಕ್ಯಾಂಡೆಲ್ ಮೇಕಿಂಗ್, ಪೇಪರ್ ಪ್ರಾಡಕ್ಟ್, ಕಂಪ್ಯೂಟರ್ ಟ್ರೈನಿಂಗ್,ಸ್ಕ್ರೀನ್ ಪ್ರಿಂಟಿಂಗ್,ಕಾರ್ ಡ್ರೈವಿಂಗ್ ಹೀಗೆ ಇನ್ನೂ ಹತ್ತು ಹಲವು ಕೆಲಸಗಳನ್ನ ಹೇಳಿಕೊಡುತ್ತಾರೆ. ಸುಮಾರು ಆರು ತಿಂಗಳು ಇದೇ ವಿಚಾರದಲ್ಲಿ ಟ್ರೈನಿಂಗ್ ನೀಡಿ ನಂತ್ರ ಎಲ್ಲಿ ಕೆಲಸಗಾರರ ಅವಶ್ಯಕತೆ ಇರುತ್ತದೋ ಅಂತಹ ಕಡೆಗಳಲ್ಲಿ ಇವರನ್ನ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಬೇಕಿಂಗ್ನಲ್ಲಿ ಸಾಕಷ್ಟು ಪ್ರಾವೀಣ್ಯತೆ ಪಡೆದಿರೋ "ಸ್ಕಿಲ್ ಶ್ರೀ" ತಂಡದದವರು ಸಾಕಷ್ಟು ಸಮಾರಂಭಗಳಲ್ಲಿ ಕೇಕ್ ತಯಾರಿಸಿ ಬೇಷ್ ಎನ್ನಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕೆ ಒಂದು ಟನ್ ಕೇಕ್ ತಯಾರಿಸಿ ಪ್ರೇಕ್ಷಕರ ಮೆಚ್ಚುಗೆಯನ್ನ ಪಡೆದುಕೊಂಡಿದ್ದರು. ಈ ರೀತಿಯ ಆರ್ಡರ್ಗಳಲ್ಲಿ ಬಂದಂತ ಹಣವನ್ನ ಸಂಪೂರ್ಣವಾಗಿ ಮಹಿಳೆಯರ ಸಮಸ್ಯೆ ಮತ್ತು ಅಲ್ಲಿ ಉಳಿದುಕೊಳ್ಳುವ ಮಹಿಳೆಯರ ಖರ್ಚಿಗಾಗಿ ಉಪಯೋಗ ಮಾಡಿಕೊಳ್ಳಲಾಗುತ್ತದೆ.
" ಜೀವನದಲ್ಲಿ ಸಾಕಷ್ಟು ವಿಚಾರಗಳಿಗೆ ಹೆಣ್ಣುಮಕ್ಕಳು ಮನೆ ಬಿಟ್ಟುಬರುತ್ತಾರೆ. ಅಂತಹವರಿಗೆ ಆಶ್ರಯದ ಜೊತೆ ಮುಂದಿನ ಜೀವನ ನಡೆಸಲು ಹಾದಿ ಕೊಡುವುದೆ ನಮ್ಮ ಉದ್ದೇಶ. ಸುಮಾರು ಆರರಿಂದ ಒಂದು ವರ್ಷ ಹೆಣ್ಣುಮಕ್ಕಳನ್ನು ಇಲ್ಲೇ ಇರಿಸಿಕೊಂಡು ತರಬೇತಿ ನೀಡಿ ದೈಹಿಕ ಮತ್ತು ಮಾನಸಿಕವಾಗಿ ಶಕ್ತರನ್ನಾಗಿ ಮಾಡುತ್ತೇವೆ."
- ರಮಾ, ಸ್ಕಿಲ್ ಶ್ರೀ ಸಂಸ್ಥಾಪಕಿ
ಮನೆ ಬಿಟ್ಟು ಬಂದ ಹೆಣ್ಣು ಮಕ್ಕಳು,ಊರು ಬಿಟ್ಟು ಬಂದ ಹೆಣ್ಣು ಮಕ್ಕಳನ್ನ ಕಮೀಷನರ್ ಆಫೀಸ್ನಲ್ಲಿರುವ ಮಹಿಳಾ ಸಹಾಯವಾಣಿಯಿಂದ ಪತ್ತೆ ಹಚ್ಚಿ ಇಲ್ಲಿಗೆ ಕರೆತರಲಾಗುತ್ತದೆ. ನಂತರ ಅವರಿಗೆ ಇಷ್ಟವಾದ ವಿಭಾಗದಲ್ಲಿ ಅವರಿಗೆ ಟ್ರೈನಿಂಗ್ ನೀಡುವ ಕೆಲಸ ಮಾಡಲಾಗುತ್ತದೆ. ಇದೇ ರೀತಿಯಲ್ಲಿ ಸುಮಾರು 3 ವರ್ಷದಿಂದ ಮಹಿಳೆಯ ಒಳಿತಿಗಾಗಿ ಈ ಮೂವರು ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ಹೆಣ್ಣು ಮಕ್ಕಳ ಮೇಲಿನ ಶೋಷಣೆ ಕಡಿಮೆ ಆಗಬೇಕು, ಹೆಣ್ಣು ಮಕ್ಕಳು ತಮ್ಮ ಜೀವನವನ್ನ ತಾವೇ ಸ್ವಾವಲಂಭಿಯಾಗಿ ನಡೆಸುವಂತಾಗಬೇಕು ಅನ್ನುವುದು ಈ ಮೂವರು ನಾರಿಯದ ಉದ್ದೇಶ.
ಸ್ವಾವಲಂಭಿ ನಾರಿಯರು
ಇಲ್ಲಿಂದ ಟ್ರೈನಿಂಗ್ ಪಡೆದ ಮಹಿಳೆಯರು ಇಂದಿಗೂ ಕೂಡ ಸಾಕಷ್ಟು ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದಿರಾನಗರದ ಮುಖ್ಯರಸ್ತೆಯಲ್ಲಿರುವ ಪ್ರೆಟ್ರೋಲ್ ಬಂಕ್ ಬಳಿ "ಕ್ವೀಕ್ಕಿಸ್" ಅನ್ನುವ ಬೇಕರಿ ಶಾಪ್ ಇದ್ದು ಇಲ್ಲಿ ಸ್ಕಿಲ್ಶ್ರೀ ಅಡಿಯಲ್ಲಿ ತಯಾರಾದ ಬೇಕಿಂಗ್ ಪ್ರಾಡಕ್ಟ್ಗಳು ಲಭ್ಯವಾಗುತ್ತದೆ. ಅಷ್ಟೇ ಅಲ್ಲದೆ ಇಲ್ಲಿ ಮದುವೆ ಸಮಾರಂಭ, ಹಬ್ಬಗಳಿಗೆ ಆರ್ಡರ್ ಗಳನ್ನ ತೆಗೆದುಕೊಳ್ಳಲಾಗುತ್ತದೆ. ಇದರ ಜೊತೆಯಲ್ಲಿ ಒಂದಿಷ್ಟು ರೆಸ್ಟೋರೆಂಟ್ ಮತ್ತು ಬೇಕರಿಗಳಿಗೆ ಇಲ್ಲಿಂದಲೇ ಬೇಕಿಂಗ್ ಪ್ರಾಡಕ್ಟ್ ಸಪ್ಲೈ ಮಾಡಲಾಗುತ್ತದೆ. ಮಾಡುವ ಕೆಲಸದಲ್ಲಿ ಒಂದಿಷ್ಟು ಸಾರ್ಥಕವಾಗಬೇಕು ಅನ್ನುವ ಭಾವನೆ ನಿಮ್ಮಲ್ಲಿಯೂ ಇದ್ರೆ ನೀವು ಬೇಕಿದ್ರೆ ನಿಮ್ಮ ಮಕ್ಕಳ ಅಥವಾ ಮನೆಯ ಹಬ್ಬಕ್ಕೆ ಇಲ್ಲಿಂದ ಸ್ವೀಟ್ಸ್ ಮತ್ತು ಕೇಕ್ ಅನ್ನ ಆರ್ಡರ್ ಮಾಡಬಹುದು. ಆ ಮೂಲಕ ಸಮಾಜ ಸೇವೆಯಲ್ಲಿ ನಿಮಗೆ ಗೊತ್ತೇ ಇಲ್ಲದಂತೆ ನೀವು ಕೂಡ ಕೈ ಜೋಡಿಸಬಹುದು.
1. “ಪಂಕ್ಚರ್ ಪ್ಲಾನರ್”ಗಳಿಗೆ ಪಾಠ ಕಲಿಸಿದ ಎಂಜಿನಿಯರ್- ರಸ್ತೆಯಿಂದ ಮೊಳೆ ಹೆಕ್ಕಿದ ಸಾಧಕ..!
2. ಒಂದೇ ಕ್ಲಿಕ್- ಒಂದೇ ಮೆಸೇಜ್- ನಿಮ್ಮ ಮನೆ ಬಾಗಿಲಲ್ಲೇ ಇರುತ್ತೆ ತರಕಾರಿ ವ್ಯಾನ್..!
3. ಮಕ್ಕಳಿಗಾಗಿ ಬಂತು ಬ್ಯೂಟಿ ಪಾರ್ಲರ್- ಮೇಕ್ಓವರ್ ಜೊತೆಗೆ ಮಸ್ತಿ ಗ್ಯಾರೆಂಟಿ..!