ಟೋಲ್​ಗಳಲ್ಲಿ ಇನ್ನುಮುಂದೆ ಪೇಟಿಎಂ ಹವಾ..!

ಟೀಮ್​ ವೈ.ಎಸ್​. ಕನ್ನಡ

ಟೋಲ್​ಗಳಲ್ಲಿ ಇನ್ನುಮುಂದೆ ಪೇಟಿಎಂ ಹವಾ..!

Thursday September 22, 2016,

3 min Read

ಮೊಬೈಲ್ ಯುಗದಲ್ಲಿ ಏನಿದ್ರೂ ಮನಿವಾಲೆಟ್​ಗಳದ್ದೇ ಕಾರುಬಾರು. ಅದ್ರಲ್ಲೂ Paytmನಂತಹ ವಿಶ್ವವಿಖ್ಯಾತ ವಾಲೆಟ್​ಗಳು ದಿನಕ್ಕೊಂದು ಉದ್ಯಮವನ್ನು ಆರಂಭಿಸಿವೆ. ಈಗಾಗಲೇ ಪೇಟಿಎಂ ಹಲವು ಭಾರತೀಯರ ನೆಚ್ಚಿನ ಪೇಮಂಟ್ ವಾಲೆಟ್ ಆಗಿ ಬೆಳೆದು ಬಿಟ್ಟಿದೆ. ಹೀಗಾಗಿ ಪೇಟಿಎಂ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಇನ್ನು ಮುಂದೆ ನೀವು ಪೇಟಿಎಂ ಮೂಲಕ ನ್ಯಾಷನಲ್ ಹೈವೇಗಳಲ್ಲಿ ಟೋಲ್​ಗಳಲ್ಲಿ ಪಾವತಿ ಮಾಡಬಹುದು. ನಿಮ್ಮ ನಾನ್​ಸ್ಟಾಪ್​ ಡ್ರೈವ್​ಗೆ ಪೇಟಿಎಂ ಸಹಾಯ ನೀಡಬಹುದು. ಯಾಕಂದ್ರೆ ಪೇಟಿಎಂ ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ(NHAI) ಜೊತೆಗೆ ಕ್ಯಾಶ್​ಲೆಶ್ ಟೋಲ್ ಕಲೆಕ್ಷನ್​ಗೆ ಒಪ್ಪಂದ ಮಾಡಿಕೊಂಡಿದೆ.

image


ಪೇಟಿಎಂ ಮೂಲಕ ನೀವು ಇನ್ನುಮುಂದೆ ನ್ಯಾಷನಲ್ ಹೈವೇಗಳ ಟೋಲ್​ಗಳಲ್ಲಿ ವಾಹನವನ್ನು ನಿಲ್ಲಸದೆಯೇ ಮುಂದಕ್ಕೆ ಹೋಗಬಹುದು. ಇದಕ್ಕಾಗಿ ಪೇಟಿಂ FASTag ಅನ್ನೋ ಡಿವೈಸ್​ನ್ನು ಅಭಿವೃದ್ಧಿ ಮಾಡಿದೆ. ಇದು ರೆಡಿಯೋ ಫ್ರೀಕ್ವೆನ್ಸಿ ಟೆಕ್ನಾಲಜಿಯಾಗಿದ್ದು (RFID), ನಿಮ್ಮ ವಾಹನ ಟೋಲ್​ಗೇಟ್​ನ್ನು ಪಾಸ್ ಮಾಡಿದ ತಕ್ಷಣವೇ ಪೇಟಿಎಂ ಅಕೌಂಟ್​ನಿಂದ ಹಣ ವರ್ಗಾವಣೆ ಆಗಲಿದೆ. ಕಳೆದ ಏಪ್ರಿಲ್​ನಲ್ಲೇ NHAI ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಕೂಡ ಮಾಡಿತ್ತು.

ಇದನ್ನು ಓದಿ: ಗುಡ್​ಮಾರ್ನಿಂಗ್​​...! ಎದ್ದು ಬಿಡಿ... ಯಶಸ್ಸಿನ ಕಥೆಯನ್ನು ನೀವೇ ಬರೆಯಿರಿ..!

NHAI ಮತ್ತು ಪೇಟಿಎಂ ನಡುವಿನ ಒಪ್ಪಂದದಿಂದಾಗಿ ಭಾರತದ ಸುಮಾರು 55000 ಕಿಲೋಮೀಟರ್​ನಲ್ಲಿ ಹಬ್ಬಿರುವ 350 ಟೋಲ್ ಪ್ಲಾಜಾಗಳು ಕ್ಯಾಶ್ಲೆಸ್ ಟ್ರಾನ್ಸ್ಆಕ್ಷನ್​ಗೆ ಒಳಪಡಲಿದೆ. ಮುಂದಿನ ತಿಂಗಳಲೇ ಸುಮಾರು 1800 ಕೋಟಿ ರೂಪಾಯಿ ಪೇಟಿಎಂ ಮೂಲಕ ಸಂಗ್ರಹವಾಗುವ ನಿರೀಕ್ಷೆ ಇದೆ. ಈ ಟೆಕ್ನಾಲಜಿಯಿಂದಾಗಿ ವರ್ಷವೊಂದಕ್ಕೆ ನ್ಯಾಷನಲ್ ಹೈವೇ ಅಥಾರಿಟಿ ಸುಮಾರು 60000 ಕೋಟಿ ರೂಪಾಯಿಯನ್ನು ಉಳಿತಾಯ ಮಾಡುವ ನಿರೀಕ್ಷೆ ಇಟ್ಟುಕೊಂಡಿದೆ.

“ ಟೋಲ್​ಫ್ಲಾಝಾಗಳಲ್ಲಿ ಕ್ಯಾಶ್ ಕೊಟ್ಟು ಮುಂದಕ್ಕೆ ಸಾಗುವುದು ಅತೀ ದೊಡ್ಡ ಸಮಸ್ಯೆಯೇ ಆಗುತ್ತಿತ್ತು. ಕೆಲವೊಂದು ಬಾರಿ ಕೆಲವು ನಿಮಿಷಗಳ ಕಾಲ ಟೋಲ್ ಪ್ಲಾಝಾಗಳಲ್ಲಿ ಕ್ಯೂನಲ್ಲಿ ಸಾಗಬೇಕಾಗುತ್ತದೆ. ಚಿಲ್ಲರೆ ಸಮಸ್ಯೆಯೂ ಎದುರಾಗುತ್ತದೆ. ಆದ್ರೆ ಪೇಟಿಎಂ ಮೂಲಕ ಈ ಸಮಸ್ಯೆಗಳನ್ನು ನಿವಾರಿಸಬಹುದು. ಅಷ್ಟೇ ಅಲ್ಲ ನ್ಯಾಷನಲ್ ಹೈವೇಗಳಲ್ಲಿ ನಿಮ್ಮ ಸಮಯ ಮತ್ತು ಇಂಧನ ಕೂಡ ಉಳಿತಾಯವಾಗಲಿದೆ. ”
- ಕಿರಣ್ ವಸಿರೆಡ್ಡಿ, ಸೀನಿಯರ್ ವಿ.ಪಿ. ಪೇಟಿಎಂ

ಕಳೆದ ಕೆಲವು ತಿಂಗಳುಗಳಿಂದ ಪೇಟಿಎಂ ಮಾರ್ಕೆಟ್​ನಲ್ಲಿ ತನ್ನ ಅಗ್ರೆಸ್ಸಿವ್ ತಂತ್ರಗಳ ಮೂಲಕ ಸುದ್ದಿ ಮಾಡುತ್ತಿದೆ. ಅಷ್ಟೇ ಅಲ್ಲ ಭಾರತದ ಮೂಲೆ ಮೂಲೆಯಲ್ಲಿರುವ ಗ್ರಾಹಕರನ್ನು ಆಕರ್ಷಿಸಲು ವಿವಿಧ ಯೋಜನೆಗಳನ್ನು ರೂಪಿಸಿದೆ. ಮಾರ್ಕೆಟ್​ನಲ್ಲಿ ತನ್ನ ಶೇರ್ ಹೆಚ್ಚಿಸಿಕೊಳ್ಳುವ ಸಾಹಸವನ್ನು ಮಾಡುತ್ತಿದೆ. ಈಗಾಗಲೇ ಪೇಟಿಎಂ Jugnoo ಜೊತೆ ಮಾಡಿಕೊಂಡ ಒಪ್ಪಂದ ಆಟೋರಿಕ್ಷಾ ಟ್ರಿಪ್​ಗಳ ಪೇಮೆಂಟ್ ಅನ್ನು ಸುಲಭವಾಗಿಸಿದೆ. ಪೇಟಿಎಂನ ಈ ಪ್ರಯತ್ನ ಆಟೋರಿಕ್ಷಾ ಮಾರುಕಟ್ಟೆ ಹಾಗೂ ಪ್ರಯಾಣಿಕರಿಗೆ ದೊಡ್ಡ ಪ್ರಮಾಣದಲ್ಲಿ ಇಷ್ಟವಾಗಿತ್ತು ಅನ್ನೋದನ್ನ ಮರೆಯುವ ಹಾಗಿಲ್ಲ.

ಪೇಟಿಎಂ ಕಳೆದ ಜುಲೈನಲ್ಲೇ ಹೊಸ ಮಾರುಕಟ್ಟೆ ತಂತ್ರವನ್ನು ಪರಿಚಯಿಸುವ ಯೋಜನೆಗೆ ಚಾಲ್ತಿ ನೀಡಿತ್ತು. ಕೆಲವು ಖಾಸಗಿ ಬ್ಯಾಂಕ್​ಗಳ ಜೊತೆ ಒಪ್ಪಂದ ಮಾಡಿಕೊಂಡು, ಕಿರಾಣಿ ಅಂಗಡಿಗಳಲ್ಲೂ ಪೇಟಿಎಂ ಬಳಕೆ ಅನ್ನುವ ಬ್ಯುಸಿನೆಸ್ ಪ್ಲಾನ್ ಮಾಡಿತ್ತು. ಇದು ಮಾರುಕಟ್ಟೆಯಲ್ಲಿ ದೊಡ್ಡ ಸದ್ದು ಮಾಡಿತ್ತು.

ಏಪ್ರಿಲ್​ನಲ್ಲಿ ನೀಲ್ಸನ್ ನಡೆಸಿದ ಸರ್ವೇ ಪ್ರಕಾರ ಫ್ರೀ ಚಾರ್ಜ್ ಮಾರ್ಕೆಟ್ ಶೇರ್​ನಲ್ಲಿ ಶೇಕಡಾ 30ರಷ್ಟು ಅಧಿಪತ್ಯ ಸ್ಥಾಪಿಸಿತ್ತು. ಆದ್ರೆ ಈಗ ಪೇಟಿಎಂ ಮಾರ್ಕೆಟ್​ ಶೇರ್​ನಲ್ಲಿ ಉತ್ತಮ ನಿರ್ವಹಣೆ ತೋರಿದ್ದು ಶೇಕಡಾ 40ರಷ್ಟು ಅಧಿಪತ್ಯ ಸ್ಥಾಪಿಸಿದೆ. ಕಳೆದ ಅಕ್ಟೋಬರ್​ನಲ್ಲಿ ಪೇಟಿಎಂ ಮಾರ್ಕೆಟ್​ನಲ್ಲಿ ಶೆಕಡಾ 35ರಷ್ಟು ಅಧಿಪತ್ಯವನ್ನು ಹೊಂದಿತ್ತು.

ಈ ವರ್ಷದ ಆಗಸ್ಟ್​ನಲ್ಲಿ ಪೇಟಿಎಂ ತೈವಾನ್​ನ ಮೆಡಿಯ-ಟೆಕ್ ಮೂಲಕ ಮೌಂಟೈನ್ ಕ್ಯಾಪಿಟಲ್​ನಿಂದ ಸುಮಾರು 60 ಮಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿತ್ತು. ಇದಾದ ಮೇಲೆ ಪೇಟಿಎಂ ಮಾರುಕಟ್ಟೆಯಲ್ಲಿ ಹೊಸ ಹವಾ ಸೃಷ್ಟಿಸಿದೆ. ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಗ್ರಾಹಕರನ್ನು ಸೆಳೆಯುತ್ತಿದೆ. ಮುಂದಿನ ಡಿಸೆಂಬರ್ ಹೊತ್ತಿಗೆ ಪೇಟಿಎಂ ಸುಮಾರು 500 ಮಿಲಿಯನ್ ಡಾಲರ್ ವಹಿವಾಟು ನಡೆಸುವ ಯೋಜನೆ ಹಾಕಿಕೊಂಡಿದೆ.

ಪೇಟಿಎಂ ಈಗ NHAI ಜೊತೆ ಮಾಡಿಕೊಂಡಿರುವ ಒಪ್ಪಂದ ಇನ್ನೂ ಹಲವು ವಾಲೆಟ್​ಗಳಾಗಿರುವ ಫ್ರಿಚಾರ್ಜ್, ಮೊಬಿವಿಕ್ ಮತ್ತು ಆಕ್ಸಿಜನ್​ನಂತಹ ಕಂಪನಿಗಳಿಗೆ ಹೊಸ ತಲೆ ಬಿಸಿ ಉಂಟು ಮಾಡಿದೆ. ಆದ್ರೆ NHAI ಕೇವಲ ಪೇಟಿಎಂ ಜೊತೆಗೆ ಮಾತ್ರ ಒಪ್ಪಂದ ಮಾಡಿಕೊಳ್ಳುವ ಪ್ಲಾನ್ ಮಾಡಿಕೊಂಡಿಲ್ಲ. ಲಾಭದ ದಾರಿಯನ್ನು NHAI ಕೂಡ ಹುಡುಕುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪೇಟಿಎಂಗೆ ಸಾಕಷ್ಟು ಇತರೆ ವಾಲೆಟ್ ಕಂಪನಿಗಳಿಂದ ಸವಾಲು ಎದುರಾಗಬಹುದು.

ಇದನ್ನು ಓದಿ:

1. ತೊಟ್ಟಿ ಸೇರುವ ಆಹಾರವನ್ನು ಹೊಟ್ಟೆ ಸೇರುವಂತೆ ಮಾಡಿದ ಫ್ರಾನ್ಸ್‌ ಸರ್ಕಾರ..!

2. ಕಾಲು ಇಲ್ಲದೇ ಇದ್ರೂ ಫುಟ್ಬಾಲ್ ಆಟ ನಿಂತಿಲ್ಲ- ರೊನಾಲ್ಡೊರನ್ನು ಭೇಟಿಯಾಗಲು ಸಿದ್ಧವಾಗಿದ್ದಾರೆ ಅಬ್ದುಲ್ಲಾ..!

3. ಕೊಕೊವಾದಿಂದ ಚಾಕಲೇಟ್ ತನಕದ ಕಥೆ..!