Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಡಿಜಿಟಲ್​ ಪೇಮೆಂಟ್​ ಕಡೆ ಗಮನ ಕೊಡಿ- ಆಕರ್ಷಕ ಬಹುಮಾನ ಗೆಲ್ಲಿರಿ..!

ಟೀಮ್​ ವೈ.ಎಸ್​. ಕನ್ನಡ

ಡಿಜಿಟಲ್​ ಪೇಮೆಂಟ್​ ಕಡೆ ಗಮನ ಕೊಡಿ- ಆಕರ್ಷಕ ಬಹುಮಾನ ಗೆಲ್ಲಿರಿ..!

Thursday December 15, 2016 , 3 min Read

ಡಿಜಿಟಲ್ ಇಂಡಿಯಾ, ಡಿಜಿಟಲ್ ವ್ಯವಹಾರ. ಕೇಂದ್ರ ಸರಕಾರದ ಈ ಯೋಜನೆ ಭವಿಷ್ಯದ ಭಾರತ ಕಟ್ಟಲು ನೆರವಾಗುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಭಾರತ ದಿಟ್ಟವಾಗಿ ಶ್ರಮಿಸುತ್ತಿದೆ. ಕೇಂದ್ರ ಸರಕಾರ ಈಗಾಗಲೇ 500 ಮತ್ತು 1000 ರೂಪಾಯಿಗಳ ನೋಟ್​ಗಳನ್ನು ಅಮಾನ್ಯ ಮಾಡಿ, ಡಿಜಿಟಲ್ ವ್ಯವಹಾರದ ಕಡೆಗೆ ಎಲ್ಲರೂ ಗಮನ ಕೊಡುವಂತೆ ಮಾಡಿದೆ. ಡಿಜಿಟಲ್ ಪೇಮೆಂಟ್​ಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ NITI (ನ್ಯಾಷನ್ ಇನ್ಸ್ಟಿಟ್ಯೂಷನ್ ಫಾರ್ ಟ್ರಾನ್ಸ್​ಫಾರ್ಮಿಂಗ್​ ಇಂಡಿಯಾ) 2 ಹೊಸ ಯೋಜನೆಗಳನ್ನು ಮಾಡಿದೆ. ಈ ಮೂಲಕ ಭಾರತೀಯರೆಲ್ಲರೂ ಡಿಜಿಟಲ್ ಟ್ರಾನ್ಸ್ಆ್ಯಕ್ಷನ್ ಬಗ್ಗೆ ಹೆಚ್ಚು ಗಮನಕೊಡುವಂತೆ ಮಾಡಿದೆ. NITIಯ "ಲಕ್ಕಿ ಗ್ರಾಹಕ ಯೋಜನೆ" ಮತ್ತು "ಡಿಜಿ-ಧನ್ ವ್ಯಾಪಾರಿ ಯೋಜನೆ" ಭಾರತದ ಡಿಜಿಟಲ್ ವ್ಯವಹಾರದ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡುವುದು ಖಚಿತ.

"ಲಕ್ಕಿ ಗ್ರಾಹಕ ಯೋಜನೆ" ಮತ್ತು "ಡಿಜಿ ಧನ್ ವ್ಯಾಪಾರಿ ಯೋಜನೆ"ಯ ಹಿಂದೆ ಗ್ರಾಹಕಜರನ್ನು ಮತ್ತು ವ್ಯಾಪಾರಿಗಳನ್ನು ಡಿಜಿಟಲ್ ವ್ಯವಹಾರಕ್ಕೆ ಒಗ್ಗಿಕೊಳ್ಳುವಂತೆ ಮಾಡಲು ದೂರದೃಷ್ಟಿಯನ್ನು ಇಟ್ಟುಕೊಂಡಿದೆ. ಡಿಜಿಟಲ್ ವ್ಯಹಾರಗಳನ್ನು ಬೆಂಬಲಿಸುವ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಈ ಯೋಜನೆಯಡಿ ವಿಶೇಷ ನಗದು ಬಹುಮಾನ ಕೂಡ ಸಿಗಲಿದೆ. NITI ಈ ಯೋಜನೆಗೆ NPCI (ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ)ಯನ್ನು ಈ ಯೋಜನೆ ಇಂಪ್ಲಿಮೆಂಟಿಂಗ್ ಏಜೆನ್ಸಿಯಾಗಿ ಮಾಡಿಕೊಂಡಿದೆ. ಈ ಯೋಜನೆ ಚಿಕ್ಕ ವ್ಯಾಪಾರಿಗಳನ್ನು ಮತ್ತು ಸಣ್ಣ ಉದ್ದಿಮೆದಾರರನ್ನು ಮತ್ತು ಮಧ್ಯಮ ವರ್ಗದ ಗ್ರಾಹಕರನ್ನು ಡಿಜಿಟಲ್ ವ್ಯವಹಾರಕ್ಕೆ ಎಳೆದು ತರಲಿದೆ.

image


ಲಕ್ಕಿ ಗ್ರಾಹಕ ಯೋಜನೆ

"ಲಕ್ಕಿ ಗ್ರಾಹಕ ಯೋಜನೆ" ಪ್ರಕಾರ NPCI ಒಂದು ವಿಶೇಷ ಸಾಫ್ಟ್​ವೇರ್ ಅನ್ನು ಅಭಿವೃದ್ಧಿ ಪಡಿಸಲಿದೆ. ಡಿಜಿಟಲ್ ವ್ಯವಹಾರ ನಡೆದ ಸಂದರ್ಭದಲ್ಲಿ ಟ್ರಾನ್ಸ್ಆ್ಯಕ್ಷನ್ ಐಡಿ ಜನರೇಟ್ ಆಗುತ್ತದೆ. ಈ ಐಡಿ, NPCI ಅಭಿವೃದ್ಧಿ ಪಡಿಸಿದ ಸಾಫ್ಟ್​ವೇರ್ ಮೂಲಕ ಎಲ್ಲಾ ಕಡೆಯೂ ಸಿಗಲಿದೆ. ಪ್ರತಿದಿನ ವಿಶೇಷ ಡ್ರಾ ಮೂಲಕ ಒಬ್ಬ ಲಕ್ಕಿ ವಿಜೇತ ಗ್ರಾಹಕರನ್ನು ಆಯ್ಕೆ ಮಾಡಲಾಗುತ್ತದೆ. ಮುಂದಿನ 100 ದಿನಗಳಲ್ಲಿ ಪ್ರತಿದಿನ 15000 ಲಕ್ಕಿ ಗ್ರಾಹಕರನ್ನು ಡ್ರಾ ಮೂಲಕ ಆಯ್ಕೆ ಮಾಡಿ ಪ್ರತಿಯೊಬ್ಬರಿಗೂ ತಲಾ 1000 ರೂಪಾಯಿಗಳ ನಗದು ಬಹುಮಾನ ನೀಡಲಾಗುತ್ತದೆ. ವಾರದ ಲಕ್ಕಿ ವಿಜೇತರು 1 ಲಕ್ಷ ರೂಪಾಯಿ, 10000 ರೂಪಾಯಿ ಮತ್ತು 5000 ರೂಪಾಯಿಗಳ ಬಹುಮಾನ ಪಡೆಯಲಿದ್ದಾರೆ.

"ಲಕ್ಕಿ ಗ್ರಾಹಕ ಯೋಜನೆ" ಡಿಜಿಟಲ್ ಪೇಮೆಂಟ್ ಸಿಸ್ಟಂ ಅನ್ನು ಪ್ರೋತ್ಸಾಹಿಸಲಿದೆ. ಯುಪಿಐ (UPI), ಯುಎಸ್ಎಸ್​ಡಿ (USSD), ಎಇಪಿಎಸ್ (AEPS) ಮತ್ತು ರೂಪೇ (RuPay) ಕಾರ್ಡ್​ನಲ್ಲಿ ವ್ಯವಹಾರ ಮಾಡುವವರಿಗೆ ಮಾತ್ರ ಅನ್ವಯಿಸುತ್ತದೆ. ಈ ಯೋಜನೆ ಖಾಸಗಿ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮತ್ತು ಡಿಜಿಟಲ್ ವಾಲೆಟ್ ಪೇಮೆಂಟ್​ಗಳಿಗೆ ಅನ್ವಯವಾಗುವುದಿಲ್ಲ.

ಡಿಜಿ-ಧನ್ ವ್ಯಾಪಾರಿ ಯೋಜನೆ

"ಡಿಜಿ- ಧನ್ ವ್ಯಾಪಾರಿ ಯೋಜನೆ" ಅಡಿಯಲ್ಲಿ ಡಿಜಿಟಲ್ ಮೋಡ್​ಗಳ ಮೂಲಕ ವ್ಯಾಪಾರ ನಡೆಸುವ ವ್ಯಾಪಾರಿಗಳಿಗೆ ಅನ್ವಯವಾಗುತ್ತದೆ. ಇಂತಹ ವ್ಯಾಪಾರಿಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ಡಿಜಿಟಲ್ ಕ್ರಾಂತಿಗೆ ನೆರವಾಗುವ ವ್ಯಾಪಾರಿಗಳು ವಾರಕ್ಕೆ 50000, 5000 ಮತ್ತು 2500 ರೂಪಾಯಿಗಳ ನಗದು ಬಹುಮಾನ ಪಡೆಯುವ ಸಾಧ್ಯತೆಗಳಿವೆ.

ಇದನ್ನು ಓದಿ: ದೆಹಲಿಯ ಇಬ್ಬರು ಸಹೋದರರ ವಿಭಿನ್ನ ಕಥೆ- ಹೊಸ ಉದ್ಯಮ, ಹೊಸ ಕನಸು..!

ಈ ಎರಡೂ ಯೋಜನೆಗಳು ಡಿಸೆಂಬರ್ 25ರಿಂದ ಜಾರಿಗೆ ಬರಲಿದೆ. ಅಂದೇ ಮೊದಲ ಲಕ್ಕಿ ಡ್ರಾ ಕೂಡ ನಡೆಯಲಿದೆ. ಏಪ್ರಿಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಇದೆ. ಆವತ್ತು ಮೆಗಾ ಡ್ರಾ ಕೂಡ ನಡೆಯಲಿದೆ.

ಮೆಗಾ ಡ್ರಾದ ದಿನ ಡಿಜಿಟಲ್ ವ್ಯವಹಾರದ ಮೂಲಕ ಖರೀದಿ ಮಾಡಿದ ಗ್ರಾಹಕರು 1 ಕೋಟಿ, 50 ಲಕ್ಷ ಮತ್ತು 25 ಲಕ್ಷ ರೂಪಾಯಿಗಳ ಬಹುಮಾನ ಪಡೆಯಲಿದ್ದಾರೆ. 2016ರ ನವೆಂಬರ್ 8ರಿಂದ, 2017ರ ಏಪ್ರಿಲ್ 13ರ ತನಕ ಡಿಜಿಟಲ್ ಮೋಡ್ಗಳನ್ನು ಬಳಸಿಕೊಂಡು ವ್ಯವಹಾರ ಮಾಡಿದ ಗ್ರಾಹಕರು ಅದೃಷ್ಟಶಾಲಿಗಳಾಗಲಿದ್ದಾರೆ.

ಇನ್ನು ಮೆಗಾ ಡ್ರಾಕ್ಕೆ ವ್ಯಾಪಾರಿಗಳು ಕೂಡ ಅರ್ಹರಾಗಿರುತ್ತಾರೆ. 2016ರ ನವೆಂಬರ್ 8ರಿಂದ, 2017ರ ಏಪ್ರಿಲ್ 13ರ ತನಕ ಡಿಜಿಟಲ್ ಮೋಡ್​ಗಳನ್ನು ಬಳಸಿಕೊಂಡು ವ್ಯಾಪಾರ ನಡೆಸುವ ವ್ಯಾಪಾರಿಗಳು ಲಕ್ಕಿ ಡ್ರಾ ಮೂಲಕ 50 ಲಕ್ಷ, 25 ಲಕ್ಷ ಮತ್ತು 12 ಲಕ್ಷ ರೂಪಾಯಿಗಳ ಬಹುಮಾನ ಪಡೆಯಲಿದ್ದಾರೆ.

"ರಿಯಲ್ ಇಂಡಿಯಾ"ದ ಕಡೆಗೆ ಗಮನ

ಸದ್ಯ ಭಾರತದ ಬಹುತೇಕ ಪಟ್ಟಣ ನಿವಾಸಿಗಳು ಡಿಜಿಟಲ್ ಪೇಮೆಂಟ್​ಗಳ ಬಗ್ಗೆ ಹೆಚ್ಚು ಜ್ಞಾನವನ್ನು ಪಡೆದುಕೊಂಡಿದ್ದಾರೆ. ಆದ್ರೆ ಗ್ರಾಮೀಣ ಭಾರತದಲ್ಲಿ ಇನ್ನೂ ಡಿಜಿಟಲ್ ಪೇಮೆಂಟ್​ಗಳ ಬಗ್ಗೆ ಜಾಗೃತಿ ಹುಟ್ಟಿಕೊಂಡಿಲ್ಲ. ಆದ್ರೆ ಡಿಜಿಟಲ್ ಕ್ರಾಂತಿ ಮೂಲಕ ಭಾರತ ಪ್ರತಿಯೊಬ್ಬ ಪ್ರಜೇ ಕೂಡ ಡಿಜಿಟಲ್ ವ್ಯವಹಾರದ ಬಗ್ಗೆ ಜ್ಞಾನ ಪಡೆಯಬೇಕು ಅನ್ನುವುದು ಸರಕಾರದ ಆಶಯವಾಗಿದೆ. ಹೀಗಾಗಿ ಸರಕಾರ USSD ಮತ್ತು ಆಧಾರ್ ಆಧರಿತ ಪೇಮೆಂಟ್ ಸಿಸ್ಟಮ್​ಗಳನ್ನು ಜನರಿಗೆ ಹತ್ತಿರವಾಗುವಂತೆ ಮಾಡಲು ಕ್ರಮಗಳನ್ನು ಕೈಗೊಂಡಿದೆ.

ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹಿಸುವ ಸಲುವಾಗಿ ಸರಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ. 50 ರೂಪಾಯಿಯಿಂದ ಹಿಡಿದು 3000 ರೂಪಾಯಿಗಳ ವ್ಯವಹಾರದ ತನಕದ ವ್ಯವಹಾರಗಳು ಕೂಡ ಈ ಯೋಜನೆ ಕೆಳಗೆ ಬರಲಿದೆ. ಗ್ರಾಹಕರು, ವ್ಯಾಪಾರಿಗಳು, ಸರ್ಕಾರಿ ಏಜೆನ್ಸಿಗಳು ಮತ್ತು AEPS ಟ್ರಾನ್ಸ್ ಆ್ಯಕ್ಷನ್​ಗಳು ನಗದು ಬಹುಮಾನದ ಯೋಜನೆ ಕೆಳಗೆ ಬರಲಿದೆ. ಮೊದಲ ಹಂತದ ಈ ಯೋಜನೆಗೆ ಸರಕಾರ ಸುಮಾರು 340 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಏಪ್ರಿಲ್ 14ರ ಬಳಿಕ ಸರಕಾರ ಈ ಯೋಜನೆ ಬಗ್ಗೆ ಪನರ್ ಪರಿಶೀಲನೆ ನಡೆಸಲಿದೆ.

ಇದೇ ಮೊದಲಲ್ಲ..!

ಸರಕಾರ ಡಿಜಿಟಲ್ ಪೇಮೆಂಟ್​ಗಳಿಗೆ ಇದೇ ಮೊದಲ ಬಾರಿಗೆ ಬಹುಮಾನ ಘೋಷಿಸಿಲ್ಲ. ಈ ಹಿಂದೆಯೂ ಕ್ಯಾಶ್​ಲೆಸ್ ವ್ಯವಹಾರಕ್ಕೆ ಸಾಕಷ್ಟು ಪ್ರೋತ್ಸಾಹಗಳನ್ನು ನೀಡಿತ್ತು. ಸರಕಾರ ಇನ್ನುಮುಂದೆ ತನ್ನ ವ್ಯವಹಾರಗಳನ್ನು, ಡಿಜಿಟಲ್ ಸ್ಕೀಮ್ ಮುಖಾಂತರವೇ ಮಾಡಲಿದೆ.

ಕೇಂದ್ರ ಸರಕಾರ ಕೆಲ ದಿನಗಳ ಹಿಂದೆ ಡಿಜಿಟಲ್ ಪೇಮೆಂಟ್​ಗಳ ಮೂಲಕ ಪೆಟ್ರೋಲ್, ಡಿಸೇಲ್ ಖರೀದಿ ಮಾಡಿದವರಿಗೆ ಡಿಸ್ಕೌಂಟ್ ಅನ್ನು ಘೋಷಿಸಿತ್ತು. ಬ್ಯಾಂಕ್​ಗಳಿಗೆ PoS (ಪಾಯಿಂಟ್ ಆಫ್ ಸೇಲ್)ಗಳನ್ನು ಅಧಿಕಗೊಳಿಸಲು ಸೂಚಿಸಿತ್ತು. ಡಿಜಿಟಲ್ ವ್ಯವಹಾರವನ್ನು ಎಲ್ಲಾ ಕಡೆಯೂ ಮಾಡಬೇಕು ಅನ್ನುವ ಸರಕಾರದ ಪ್ಲಾನ್​ಗೆ ಈ ವಿಶೇಷ ಯೋಜನೆಗಳೆಲ್ಲವೂ ಪಾಸಿಟಿವ್ ರೆಸ್ಪಾನ್ಸ್​ ನೀಡಲಿವೆ. 

ಇದನ್ನು ಓದಿ:

1. ಪೇವರ್ಲ್ಡ್​ ಎಂಪೋಸ್: ಸಣ್ಣ ವ್ಯಾಪಾರಿಗಳಿಗೆ ಅನುಕೂಲಕರ ಸಾಧನ

2. Posಗಳಿಗೆ ದಿಢೀರ್​ ಬೇಡಿಕೆ- ಬ್ಯಾಂಕ್​ಗಳಿಗೆ ಹೆಚ್ಚಿದ ತಲೆನೋವು

3. ಡಿಜಿಟಲ್​ ಪ್ರಯೋಗಕ್ಕೆ ಮುಂದಾದ ಪೊಲೀಸ್​ ಡಿಪಾರ್ಟ್​ಮೆಂಟ್​- ಕಾರ್ಡ್​ ಸ್ವೈಪಿಂಗ್​ಗೆ ತಯಾರಿ ಮಾಡಿಕೊಂಡ ಟ್ರಾಫಿಕ್​ ಪೋಲಿಸರು