ಹೂಡಿಕೆ ಮಾಡುವ ಮುನ್ನ...
ಭಾರತಿ ಭಟ್
`ಇನ್ಫೋ ಎಡ್ಜ್'ನ ಸಂಸ್ಥಾಪಕ ಸಂಜೀವ್ ಬಿಕ್ಚಂದಾನಿ ಹೇಳ್ತಾರೆ, `ಝೊಮೆಟೋ'ನಲ್ಲಿ ಹೂಡಿಕೆ ಮಾಡುವ ಮುನ್ನ 6-7 ತಿಂಗಳು ಅವರು ಆ ವೆಬ್ಸೈಟನ್ನು ಬಳಸಿದ್ದಾರಂತೆ. `ಝೊಮೆಟೋ'ದ ಮೆನು ಕಾರ್ಡ್ ಅವರಿಗೆ ಇಷ್ಟವಾಗಿತ್ತು. `ಝೊಮೇಟೋ'ದ ಸಂಸ್ಥಾಪಕ ಹಾಗೂ ಸಿಇಓ ದೀಪೇಂದರ್ ಗೋಯಲ್ ಅವರ ಇ-ಮೇಲ್ ಐಡಿಯನ್ನು ಸಂಜೀವ್ ಗೂಗಲ್ನಲ್ಲಿ ಹುಡುಕಿದ್ರು. ತಾವು `ಝೊಮೇಟೋ'ದಲ್ಲಿ ಹೂಡಿಕೆ ಮಾಡಲು ಬಯಸುವುದಾಗಿಯೂ, ಸಂಸ್ಥೆಯ ಬಂಡವಾಳವನ್ನು ಹೆಚ್ಚಿಸಲು ಇಚ್ಛಿಸಿದಲ್ಲಿ ತಮಗೊಂದು ಕರೆ ಮಾಡುವಂತೆ ದೀಪೇಂದರ್ ಗೋಯಲ್ ಅವರಿಗೆ ಪತ್ರ ಬರೆದ್ರು. ಪತ್ರ ತಲುಪಿದ ನಾಲ್ಕೇ ಗಂಟೆಗಳಲ್ಲಿ ದೀಪೇಂದರ್ ಅವರಿಂದ ಕರೆ ಬಂತು. ಶೇಕಡಾ 33ರಷ್ಟು ಶೇರುಗಳನ್ನು ಪಡೆದು ಒಂದು ಮಿಲಿಯನ್ ಡಾಲರ್ ಬಂಡವಾಳವನ್ನು ಝೊಮೇಟೋದಲ್ಲಿ ಹೂಡಿಕೆ ಮಾಡಲು ಸಂಜೀವ್ ಬಿಕ್ಚಂದಾನಿ ನಿರ್ಧರಿಸಿದ್ರು. ಇದೀಗ ತಂಡ ಹಾಗೂ ಪೈಪೋಟಿಯ ಕಡೆಗೆ ಸಂಜೀವ್ ಹೆಚ್ಚಿನ ಗಮನಹರಿಸಿದ್ದಾರೆ.
ರೆಸ್ಟೋರೆಂಟ್ಗಳನ್ನು ಹುಡುಕಲು ನೆರವಾಗುವ `ಝೊಮೆಟೋ' ಆ್ಯಪ್, ಇತ್ತೀಚೆಗಷ್ಟೇ ಸಿಂಗಾಪುರದ `ಟೆಮಾಸೆಕ್' ಕಂಪನಿಯಿಂದ 60 ಮಿಲಿಯನ್ ಡಾಲರ್ ನಿಧಿಯನ್ನು ಸಂಗ್ರಹಿಸಿದೆ. ಹಾಲಿ ಹೂಡಿಕೆದಾರ ಸಂಸ್ಥೆ ವಿವೈ ಕ್ಯಾಪಿಟಲ್ ನೆರವಿನಿಂದ ಬಂಡವಾಳ ಹೆಚ್ಚಿಸಿಕೊಂಡಿದೆ. ಈ ಮೂಲಕ `ಝೊಮೆಟೋ'ದ ಒಟ್ಟು ಬಂಡವಾಳ 225 ಮಿಲಿಯನ್ ಡಾಲರ್ಗೆ ತಲುಪಿದೆ. ಇದರಲ್ಲಿ `ಇನ್ಫೋ ಎಡ್ಜ್', `ಸೀಕ್ವೊಯಾ ಇಂಡಿಯಾ', `ವಿವೈ ಕ್ಯಾಪಿಟಲ್' ಮತ್ತು `ಟೆಮಾಸೆಕ್'ನ ಪಾಲಿದೆ.
ರೆಹಾನ್ ಯಾರ್ ಖಾನ್
ನೆಸ್ಕಾಮ್ ಪ್ರಾಡಕ್ಟ್ ಕೌನ್ಸಿಲ್ 2015ರಲ್ಲಿ ಮಾತನಾಡಿದ `ಓರಿಯನ್ ವೆಂಚರ್ ಪಾರ್ಟ್ನರ್ಸ್'ನ ರೆಹಾನ್ ಯಾರ್ ಖಾನ್, ಹೂಡಿಕೆ ಹಿಂದಿನ ತೀರ್ಮಾನಗಳನ್ನು ವಿವರಿಸಿದ್ದಾರೆ. ವೈದ್ಯರು, ಡಯಗ್ನೊಸ್ಟಿಕ್ ಕೇಂದ್ರಗಳು ಹಾಗೂ ಸಲೂನ್ಗಳಲ್ಲಿ ಅಪಾಯಿಂಟ್ಮೆಂಟ್ ಬುಕ್ ಮಾಡುವ ಆನ್ಲೈನ್ ವೆಬ್ಸೈಟ್ `ಝಿಪ್ಪಿ'ಯಲ್ಲಿ ಹೂಡಿಕೆ ಮಾಡುವ ತೀರ್ಮಾನ ತುಂಬಾ ಕಠಿಣವಾಗಿತ್ತು ಎಂದಿದ್ದಾರೆ ರೆಹಾನ್. ಯಾಕಂದ್ರೆ ಇದು, ಸಲೂನ್ ಕೈಗಾರಿಕೆಯ ಉಪವಿಭಾಗ ಎಂದೇ ಜನ ಮಾತನಾಡಿಕೊಳ್ತಿದ್ರು. `ಓಲಾ ಕ್ಯಾಬ್ಸ್'ನಲ್ಲಿ ರೆಹಾನ್ ಬಂಡವಾಳ ಹಾಕಿದಾಗಲೂ ಇಂಥದ್ದೇ ಸ್ಥಿತಿ ನಿರ್ಮಾಣವಾಗಿತ್ತು. `ಓಲಾ ಕ್ಯಾಬ್ಸ್' ಅನ್ನು ಟ್ಯಾಕ್ಸಿ ಮಾರುಕಟ್ಟೆಯ ಉಪವಿಭಾಗ ಎಂದು ಹೇಳಲಾಗ್ತಿತ್ತು. ಆದ್ರೆ ಹಾಲಿ ಮಾರುಕಟ್ಟೆಯ ಸ್ಥಿತಿಯ ಬದಲು ಭವಿಷ್ಯದ ಮಾರ್ಕೆಟ್ ಅನ್ನು ಗಮನದಲ್ಲಿರಿಸಿಕೊಂಡು, ಅದರ ಸುತ್ತ ದೃಢ ನಿಶ್ಚಯ ಮಾಡುತ್ತೇವೆ ಎನ್ನುತ್ತಾರೆ ರೆಹಾನ್ ಯಾರ್ ಖಾನ್.
`ಓರಿಯಸ್ ವೆಂಚರ್ಸ್ ಪಾರ್ಟ್ನರ್ಸ್'ನಿಂದ ಸಿರೀಸ್ ಎ ಸುತ್ತಿನಲ್ಲಿ `ಝಿಪ್ಪಿ' 15 ಕೋಟಿ ಬಂಡವಾಳ ಪಡೆದಿದೆ. ಆನ್ಲೈನ್ನಲ್ಲಿ ಆರೋಗ್ಯ, ಕ್ಷೇಮ ಮತ್ತು ವೈಯಕ್ತಿಕ ಕಾಳಜಿ ಅತಿ ಹೆಚ್ಚು ಅಸ್ತಿತ್ವದಲ್ಲಿವೆ. ಹೆಚ್ಚು ಪ್ರಮಾಣ, ಬಳಕೆ ಮತ್ತು ಆವರ್ತನವನ್ನು ಹೊಂದಿರುವ ವಿಭಾಗಗಳು ಇವು ಅನ್ನೋದು ರೆಹಾನ್ ಅವರ ನಂಬಿಕೆ. ರೆಹಾನ್ ಕೇವಲ ಬಂಡವಾಳಗಾರರು ಮಾತ್ರವಲ್ಲ, `ಫ್ಲೋರಾ2000 ಡಾಟ್ ಕಾಮ್'ನ ಸಂಸ್ಥಾಪಕರೂ ಹೌದು. 2007-08ರ ಸಮಯದಲ್ಲಿ ರೆಹಾನ್ `ಧ್ರುವ' ಮತ್ತು `ಓಲಾ ಕ್ಯಾಬ್ಸ್'ಗೆ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ. ಜಿಗ್ಸಿ, ಸಪೀನ್ಸ್, ಅನ್ಬಾಕ್ಸ್ಡ್, ಪ್ರೆಟಿ ಸೀಕ್ರೆಟ್ಸ್ ಮುಂತಾದ ಸಂಸ್ಥೆಗಳಲ್ಲೂ ರೆಹಾನ್ ಬಂಡವಾಳ ಹಾಕಿದ್ದಾರೆ. ಸಂಸ್ಥೆಯ ಸಲಹೆಗಾರರಾಗಿ ಮತ್ತು ಹೆಚ್ಚಿನ ಮೌಲ್ಯ ಸೇರ್ಪಡೆ ಕೆಲಸದ ಮೂಲಕವೇ ಉತ್ತಮ ಬಂಡವಾಳಗಾರ ಎನಿಸಿಕೊಂಡಿದ್ದೇನೆಂಬ ಭಾವನೆ ರೆಹಾನ್ ಅವರಲ್ಲಿತ್ತು. ಆದ್ರೆ ಖ್ಯಾತ ಉದ್ಯಮಿಗಳಾದ ಓಲಾದ ಭವೇಶ್ ಮತ್ತು ಧ್ರುವ ಸಂಸ್ಥೆಯ ಜಸ್ಪ್ರೀತ್ ದೃಢ ಸಂಕಲ್ಪ ಮತ್ತು ತಮ್ಮದೇ ಆದ ಕಾರ್ಯವೈಖರಿಯನ್ನು ಹೊಂದಿದ್ದಾರೆ ಅನ್ನೋದು ರೆಹಾನ್ಗೆ ಅರಿವಾಯ್ತು. ಅವರಿಗೆ ಸಲಹೆಯ ಅಗತ್ಯವೇ ಇಲ್ಲ ಎಂಬ ವಿಚಾರ ಪಾಠ ಕಲಿಸಿತ್ತು. ನಿಮ್ಮೊಳಗಿನ ಕಾಳಜಿಯ ಪ್ರಚೋದನೆ ಕಂಪನಿಗಳಲ್ಲಿ ಹೂಡಿಕೆ ಮಾಡಲು ತಪ್ಪಾದ ಪ್ರೇರಣೆಯಾಗಬಲ್ಲದು ಅನ್ನೋದು ರೆಹಾನ್ ಅವರ ಅನುಭವದ ಮಾತು.
ಉದ್ಯಮವನ್ನು ಅಂಕಿ-ಅಂಶಗಳ ಮೂಲಕ, ಗುಣಮಟ್ಟದ ಮೂಲಕ, ವಿಚ್ಛಿದ್ರಕಾರಕ ಮಾರ್ಕೆಟಿಂಗ್ ಅನ್ನು ಅಳೆದು ಬೆಂಬಲ ಸೂಚಿಸುವವರೇ ಹೆಚ್ಚು. ಇನ್ನು ಸ್ವಯಂ ನಿಶ್ಚಯ ಮತ್ತು ಕಲಿಕಾ ಸಾಮರ್ಥ್ಯದಿಂದ ಹೂಡಿಕೆ ಮಾಡುವವರೂ ಇದ್ದಾರೆ. ಆವಿಷ್ಕಾರ, ಬಲ ಬೆಂಬಲದೊಂದಿಗಿನ ಚುರುಕುತನ, ದೃಢ ನಿಶ್ಚಯ ಹಾಗೂ ಸಮಸ್ಯೆ ಪರಿಹರಿಸಬಲ್ಲ ಕೌಶಲ್ಯ ಉದ್ಯಮಿಗೆ ಇರಬೇಕಾದ ಪ್ರಮುಖ ಅರ್ಹತೆ. ಭಾರತದ ಮಧ್ಯಮ ವರ್ಗದ ಜನ ಅನುಸರಿಸಬಲ್ಲ ಮಾದರಿಯನ್ನೇ ಅವರು ಅಳವಡಿಸಿಕೊಂಡಿದ್ದಾರೆ.
ಕೃಷ್ಣನ್ ಗಣೇಶ್
ಉದ್ಯಮಿ ಹಾಗೂ ಹೂಡಿಕೆದಾರರಾದ ಕೃಷ್ಣನ್ ಗಣೇಶ್, 2011ರಲ್ಲಿ ಆನ್ಲೈನ್ ದಿನಸಿ ಮಳಿಗೆ `ಬಿಗ್ ಬಾಸ್ಕೆಟ್'ನಲ್ಲಿ ಬಂಡವಾಳ ತೊಡಗಿಸಿದ್ರು. ಆದ್ರೆ ಆ ಸಮಯದಲ್ಲಿ ಆನ್ಲೈನ್ನಲ್ಲಿ ದಿನಸಿ ಖರೀದಿ ಬಗ್ಗೆ ಗ್ರಾಹಕರಲ್ಲಿ ಋಣಾತ್ಮಕ ಭಾವನೆಯಿತ್ತು. ಮುಟ್ಟಿ ನೋಡಿ ದಿನಸಿ ಕೊಳ್ಳುವುದರಲ್ಲೇ ಗ್ರಾಹಕರಿಗೆ ಹೆಚ್ಚು ನಂಬಿಕೆಯಿತ್ತು. ಆ ಸಮಯದಲ್ಲಿ ಕೃಷ್ಣನ್ ಅವರಿಗೆ ಪೈಪೋಟಿಯೇ ಇರಲಿಲ್ಲ. ಸಂಸ್ಥಾಪಕರು ಕಾರ್ಯರೂಪಕ್ಕೆ ತರಬಲ್ಲ ಐಡಿಯಾಗಳ ಜೊತೆ ಬರಬೇಕು ಅನ್ನೋದು ಅವರ ಅಭಿಪ್ರಾಯ. ಈಗ `ಪೆಪ್ಪರ್ ಟ್ಯಾಪ್', `ಝಾಪ್ ನೌ' , ಹಾಗೂ `ಜಂಗೂ'ನಂತಹ ಸಂಸ್ಥೆಗಳ ಆಗಮನದಿಂದ ಆನ್ಲೈನ್ ದಿನಸಿ ಮಾರುಕಟ್ಟೆಯಲ್ಲಿ ಸಂಚಲನ ಶುರುವಾಗಿದೆ. ಭಾರತದ 5 ಪ್ರಮುಖ ದಿನಸಿ ಉದ್ಯಮಗಳು ಈ ವರ್ಷ 120 ಮಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಿವೆ. ಈಗ ಆಹಾರ ಮತ್ತು ದಿನಸಿ ಇಂಡಸ್ಟ್ರಿಯ ಮೌಲ್ಯ 383 ಬಿಲಿಯನ್ ಡಾಲರ್ನಷ್ಟಿದೆ. 2020ರ ವೇಳೆಗೆ ಇದು ಒಂದು ಟ್ರಿಲಿಯನ್ ಡಾಲರ್ನಷ್ಟಾಗಲಿದೆ. ಏಂಜೆಲ್ ಹೂಡಿಕೆಯಲ್ಲಿ ಅತಿ ಹೆಚ್ಚು ಅಪಾಯ ಮತ್ತು ಅತ್ಯಂತ ಕಡಿಮೆ ಆದಾಯವಿದೆ. ಇದು ಜೂಜಾಟ ಹಾಗೂ ಲಾಟರಿ ಇದ್ದಂತೆ. ಹೆಚ್ಚಿನ ಅವಕಾಶ ಪಡೆಯಲು ಹೆಚ್ಹೆಚ್ಚು ಟಿಕೆಟ್ಗಳನ್ನು ಖರೀದಿಸಬೇಕು.