ಹಕ್ಕಿಗಳ ಮಾಹಿತಿ ನೀಡುವ ‘ಹಕ್ಕಿ ಪ್ರಪಂಚ’
ಅಗಸ್ತ್ಯ
ಕಾಂಕ್ರೀಟ್ ಕಾಡಾಗಿರುವ ಬೆಂಗಳೂರಿನಲ್ಲಿ ಹಕ್ಕಿಗಳು, ಪ್ರಾಣಿಗಳನ್ನು ಮಕ್ಕಳು ಝೂಗಳಲ್ಲಿ ಮಾತ್ರ ನೋಡಬೇಕು. ಇಲ್ಲದಿದ್ದರೆ ಇಂಟರ್‍ನೆಟ್‍ನಲ್ಲಿ ಹುಡುಕಬೇಕು. ಇನ್ನು ಅವುಗಳ ಬಗ್ಗೆ ತಿಳಿದುಕೊಳ್ಳುವ ಮಾತು ದೂರವೇ ಉಳಿದಿದೆ. ಆದರೆ ನೀವು ಎಲ್ಲೇ ಇರಿ, ನಿಮ್ಮ ಕಣ್ಣಿಗೆ ಬೀಳುವ ಹಕ್ಕಿ ಯಾವುದೆಂದು, ಅದರ ವಿಶೇಷತೆಗಳೇನು ಎಂಬುದನ್ನು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳಬಹುದು. ಅದಕ್ಕಾಗಿಯೇ ಟೆಕ್ಕಿಯೊಬ್ಬರು ‘ಹಕ್ಕಿ ಪ್ರಪಂಚ’ ಎಂಬ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿದ್ದಾರೆ.
ದೂರ ಪ್ರವಾಸ, ವಿಹಾರಕ್ಕೆಂದು ತೆರಳಿದಾಗ, ಕೆರೆಯಂಗಳದಲ್ಲಿ ಕುಳಿತು ತಂಪಾದ ವಾತಾವರಣವನ್ನು ಆಹ್ಲಾದಿಸುತ್ತಿರುವಾಗ ಸಹಜವಾಗಿ ಹಕ್ಕಿಗಳ ಚಿಲಿಪಿಲಿ ನಿಮ್ಮ ಕಿವಿಗೆ ಬಿದ್ದಿರುತ್ತದೆ. ಬಣ್ಣಬಣ್ಣದ ಪಕ್ಷಿಗಳು ನಿಮ್ಮ ಕಣ್ಣಿಗೆ ಬಿದ್ದಾಗ ಹೆಚ್ಚಿನವರಿಗೆ ಅವುಗಳ ಬಗ್ಗೆ ತಿಳಿದಿರುವ ಸಾಧ್ಯತೆ ಕಡಿಮೆ. ಈ ಕೊರತೆಯೇ ಪಕ್ಷಿಗಳ ಅಪೂರ್ವ ಲೋಕವನ್ನು ನಮ್ಮಿಂದ ದೂರಾಗಿಸುತ್ತದೆ. ಅದಕ್ಕಾಗಿಯೇ ಪಕ್ಷಿ ವೀಕ್ಷಣೆಯನ್ನು ಹವ್ಯಾಸವಾಗಿಸಿಕೊಂಡಿರುವ ಎಂ. ಶಿವಶಂಕರ್ ಎಂಬ ಟೆಕ್ಕಿಯೊಬ್ಬರು ಕರ್ನಾಟಕದಲ್ಲಿರುವ ಹಕ್ಕಿಗಳ ಬಗ್ಗೆಯೇ ಒಂದು ಮೊಬೈಲ್ ಅಪ್ಲಿಕೇಷನ್ ಅಭಿವೃದ್ದಿಪಡಿಸಿದ್ದು, ಇದು ಆಸಕ್ತ ವಿದ್ಯಾರ್ಥಿಗಳು ಮತ್ತು ಪಕ್ಷಿ ವೀಕ್ಷಕರಿಗಂತೂ ಅತ್ಯುಪಯುಕ್ತ ಎನಿಸಿದೆ. ಆ್ಯಂಡ್ರಾಯ್ಡ್ ಅಪ್ಲಿಕೇಷನ್ ಒಳಗೊಂಡಿರುವ ಇದಕ್ಕೆ `ಹಕ್ಕಿ ಪ್ರಪಂಚ' ಎಂಬ ಹೆಸರನ್ನಿಡಲಾಗಿದೆ. ಇದು ಉಚಿತ ಆ್ಯಪ್ ಆಗಿದೆ.
ಕನ್ನಡ-ಇಂಗ್ಲೀಷ್‍ನಲ್ಲಿ ಮಾಹಿತಿ ಲಭ್ಯ
ಇಂಗ್ಲೀಷ್ ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಹಕ್ಕಿ ಪ್ರಪಂಚ ಮಾಹಿತಿ ನೀಡುತ್ತದೆ. ಹಕ್ಕಿಗಳ ಕುರಿತಂತೆ ಕನ್ನಡದಲ್ಲಿ ಮಾಹಿತಿ ನೀಡುವ ಏಕೈಕ ಅಪ್ಲಿಕೇಷನ್ ಇದಾಗಿದೆ. ಇದರಲ್ಲಿ ವಿಶೇಷವಾಗಿ ಕರ್ನಾಟಕ ಮತ್ತು ಭಾರತದಲ್ಲಿ ಕಾಣಸಿಗುವ ಪ್ರಮುಖ ಹಕ್ಕಿಗಳ ಕುರಿತು ಮಾಹಿತಿ ಇದೆ. ಹಕ್ಕಿಗಳ ಕುರಿತಂತೆ ಕೇವಲ ಮಾಹಿತಿ ನೀಡದೆ ಅವುಗಳ ಚಿತ್ರವನ್ನೂ ಇಲ್ಲಿ ಕಾಣಸಿಗುತ್ತದೆ. ಹಕ್ಕಿಗಳ ಸ್ಥಳೀಯವಾಗಿ ಬಳಕೆಯಲ್ಲಿರುವ ಕನ್ನಡದ ಮತ್ತು ವೈಜ್ಞಾನಿಕ ಹೆಸರುಗಳು, ಅವುಗಳ ಮುಖ್ಯ ಲಕ್ಷಣಗಳು ಮತ್ತು ವಾಸಿಸುವ ಪ್ರದೇಶ ಮುಂತಾದ ಮಾಹಿತಿಗಳು ಹಕ್ಕಿ ಪ್ರಪಂಚದಲ್ಲಿ ಲಭ್ಯವಿದೆ.
ಯಾವ್ಯಾವ ಹಕ್ಕಿಗಳ ಮಾಹಿತಿ..?
ಇಲ್ಲಿ ದೇಶದಲ್ಲಿ ಕಾಣಿಸಿಕೊಳ್ಳುವ ಅದರಲ್ಲೂ ಕೇರಳ, ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿರುವ 32 ಬಗೆಯ ಪಕ್ಷಿಗಳ ಮಾಹಿತಿ ಲಭ್ಯವಿದೆ. ಅವುಗಳೆಂದರೆ ಸಿಳ್ಳಾರ ನೀರು ಬಾತು, ಬಿಳಿ ಬಾತು, ಪೆಟ್ರಲ್, ಗುಳು ಮುಳಕ, ಕರಿತಲೆ ತಕ್ಕಿ, ಕೊಳದ ಬಕ, ಬೂದು ಬಕ, ದೊಡ್ಡ ಬೆಳ್ಳಲ್ಲಿ, ಮುಖವಾಡದ ಬೂಬಿ, ಪುಟ್ಟ ನೀರು ಕಾಗೆ ಹೀಗೆ ಬಗೆಬಗೆಯ ಹಕ್ಕಿಗಳ ಮಾಹಿತಿ ಹಕ್ಕಿ ಪ್ರಪಂಚದಲ್ಲಿ ಸಿಗುತ್ತದೆ.
ಆ್ಯಪ್ ಹುಟ್ಟಿದ್ದು ಹೇಗೆ..?
ಎಂ.ಶಿವಶಂಕರ್‍ಗೆ ಹಕ್ಕಿಗಳಿಗಾಗಿ ಅಪ್ಲಿಕೇಷನ್ ಸಿದ್ಧಪಡಿಸಲು ಹಿಂದಿನ ಪ್ರೇರಣೆ ಹಕ್ಕಿಗಳ ಬಗ್ಗೆ ಅವರಲ್ಲಿದ್ದ ಆಸಕ್ತಿ. ಪ್ರತಿಯೊಬ್ಬರೂ ಸ್ಮಾರ್ಟ್ ಫೆÇೀನ್‍ಗಳನ್ನು ಬಳಸುತ್ತಾರೆ. ಪ್ರಮುಖ ಹಕ್ಕಿಗಳ ಬಗ್ಗೆ ಆ್ಯಂಡ್ರಾಯ್ಡ್‍ನಲ್ಲಿ ಆ್ಯಪ್ ರೂಪಿಸಿದರೆ ಪಕ್ಷಿ ವೀಕ್ಷಕರು ಮತ್ತು ಆಸಕ್ತರಿಗೆ ಅನುಕೂಲ ಆಗುತ್ತದೆ ಎಂಬ ಉz್ದÉೀಶದಿಂದ ಈ ಸಾಹಸಕ್ಕೆ ಕೈ ಹಾಕಿದ್ದರು. ಮೊದಲಿಗೆ ಈ ರೀತಿಯ ಅಪ್ಲಿಕೇಷನ್ ಕನ್ನಡದಲ್ಲಿದೆಯೇ ಎಂಬುದನ್ನು ಹುಡುಕಿದ ಅವರಿಗೆ, ಇಂಗ್ಲಿಷ್‍ನಲ್ಲಿ ಸಾಕಷ್ಟು ಆ್ಯಪ್‍ಗಳು ಇರುವುದು ಗೊತ್ತಾಗಿದೆ. ಕನ್ನಡದಲ್ಲಿ ಒಂದೇ ಒಂದು ಅಪ್ಲಿಕೇಷನ್ ಕೂಡ ಇಲ್ಲ ಎಂಬುದನ್ನು ತಿಳಿದ ಅವರು ಸ್ನೇಹಿತರೊಬ್ಬರ ಸಹಾಯದಿಂದ ಹಕ್ಕಿ ಪ್ರಪಂಚ ಸೃಷ್ಟಿಸಿದ್ದಾರೆ. ಅಲ್ಲದೆ ಈವರೆಗೆ ಇದ್ದ ಅಪ್ಲಿಕೇಷನ್‍ಗಳಲ್ಲಿ ಬಹುತೇಕ ಪೇಯ್ಡ್ ಅಪ್ಲಿಕೇಷನ್‍ಗಳಾಗಿವೆ. ಈ ಕಾರಣಕ್ಕೆ ಕನ್ನಡದಲ್ಲಿ ಉಚಿತ ಆ್ಯಪ್ ಅಭಿವೃದ್ಧಿ ಪಡಿಸಲು ನಿರ್ಧರಿಸಿ ಅದರಂತೆ ನೂತನ ಅಪ್ಲಿಕೇಷನ್ ಸಿದ್ಧಪಡಿಸಿದರು.
100 ಹಕ್ಕಿಗಳ ಮಾಹಿತಿ
ಕನ್ನಡದ ಅಪ್ಲಿಕೇಷನ್ ಅನ್ನು ಈಗಾಗಲೆ ಹಲವರು ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಕೆಲವರು ಇನ್ನೂ ಕೆಲವು ಮಾಹಿತಿಗಳನ್ನು ಸೇರಿಸುವ ಬಗ್ಗೆ ಸಲಹೆಗಳನ್ನು ಎಂ.ಶಿವಶಂಕರ್‍ಗೆ ನೀಡಿದ್ದಾರೆ. ಈ ಆ್ಯಪ್‍ಗೆ 100 ಪಕ್ಷಿಗಳ ಮಾಹಿತಿ ಸೇರಿಸಿದ ಬಳಿಕ, ಹೆಚ್ಚಿನ ಪಕ್ಷಿಗಳ ಮಾಹಿತಿಯನ್ನು ಒಳಗೊಂಡ ಇನ್ನೊಂದು ಪೇಯ್ಡ್ ಆ್ಯಪ್ ಅಭಿವೃದ್ಧಿಪಡಿಸುವ ಉz್ದÉೀಶ ಅವರದ್ದಾಗಿದೆ. ಅದರೊಂದಿಗೆ ಚಿಟ್ಟೆಗಳು ಮತ್ತು ಹಾವುಗಳ ಕುರಿತೂ ಕನ್ನಡದಲ್ಲಿ ಆ್ಯಪ್ ತಯಾರಿಸುವ ಕನಸು ಹೊಂದಿದ್ದಾರೆ.