Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಹೋಮ್ ಮೇಡ್ ಹವಾ.. ಮಹಿಳಾ ಗೃಹೋದ್ಯೋಗಿಗಳಿಗೆ ಹೊಸ ಜೀವ...!

ಭಾವನಾ.ಜಿ

ಹೋಮ್ ಮೇಡ್ ಹವಾ.. ಮಹಿಳಾ ಗೃಹೋದ್ಯೋಗಿಗಳಿಗೆ ಹೊಸ ಜೀವ...!

Friday November 06, 2015 , 3 min Read

ಮಲ್ನಾಡ್ ಉಪ್ಪಿನ ಕಾಯಿ ನೆನಪಾಗ್ತಿದೆಯಾ? ಬಾಯಲ್ಲಿ ನೀರೂರಿಸೊ ಅಮ್ಮ ಮಾಡಿದ ಚಕ್ಕುಲಿ ತಿನ್ಬೆಕಾ? ಇಷ್ಟೆಲ್ಲದರ ಮದ್ಯೆ ಹೆಲ್ತ್ ಕೂಡ ಚೆನ್ನಾಗಿರ್ಬೇಕು ಅನ್ನೊ ಹಂಬಲ ನಿಮಗಿದೆ. ಆದ್ರೆ ಈಗ ಎಲ್ಲಿ ನೋಡಿದ್ರೂ ಅನ್​​ಹೆಲ್ದಿ ಫುಡ್​​ಗಳದ್ದೆ ಹವಾ. ನಿಮ್ಮ ಆರೋಗ್ಯದ ಬಗ್ಗೆ ನೀವು ಇಷ್ಟೆಲ್ಲ ಚಿಂತೆ ಮಾಡಬೇಕಿಲ್ಲ. ಇನ್ಮುಂದೆ ನೀವು ಮನೆಯಲ್ಲಿಯೇ ಕುಳಿತು ಹೋಮ್ ಮೇಡ್ ಆನ್​ಲೈನ್ .ಇನ್ (www.homemadeonline.in) ಕ್ಲಿಕ್ ಮಾಡಿದ್ರೆ ಸಾಕು. ನಿಮಗಿಷ್ಟವಾದ ತಿಂಡಿ ತಿನಿಸನ್ನು ಮನೆಯಲ್ಲಿಯೆ ಎಂಜಾಯ್ ಮಾಡಬಹುದು.

image


ಹೌದು, ಇಂತಹದೊಂದು ವಿನೂತನ ಕಾನ್ಸೆಪ್ಟ್ ಇಟ್ಟುಕೊಂಡು ಮಹಿಳೆಯೊಬ್ಬರು ಮಹಿಳೆಯರನ್ನೆಲ್ಲ ಸಬಲರನ್ನಾಗಿ ಮಾಡ್ತಿದ್ದಾರೆ. ಅವರ ಹೆಸರು ಅಜಂತಾ ಚಂದನ್. ಮೂಲತಃ ಇಟಾಲಿಯನ್ ಫಾಸ್ಟ್​​ಫುಡ್ ಔಟ್​​ಲೆಟ್​​​ಗಳಲ್ಲಿ ತಮ್ಮ ಕರಿಯರ್ ಶುರು ಮಾಡಿದ್ದ ಅಜಂತಾ ಚಂದನ್ ಅವರಿಗೆ ಮಧ್ಯಮ ವರ್ಗದ ಮಹಿಳೆಯರನ್ನು ಸಬಲರನ್ನಾಗಿ ಮಾಡಬೆಕು ಎನ್ನೋ ಕನಸಿತ್ತು. ಆನ್​ಲೈನ್ ಮಾರ್ಕೆಟಿಂಗ್ ಏರುಗತಿ ಪಡೆದುಕೊಳ್ಳುತ್ತಿದ್ದ ಸಮಯ ಅದು. ಇದೇ ಆನ್​ಲೈನ್​​​ ಮಾರ್ಕೆಟಿಂಗ್ ಬಳಸಿಕೊಂಡು ಗೃಹ ಉದ್ಯೋಗಿ ಮಹಿಳೆಯರಿಗೆ ಯಾಕೆ ಹೊಸ ವೇದಿಕೆ ಸೃಷ್ಟಿಸಬಾರದು ಅಂತ ಅನಿಸಿದ್ದೇ ತಡ, ಅಜಂತಾ ಒಂದೇ ಒಂದು ಕ್ಷಣ ಕೂಡ ತಡ ಮಾಡಲಿಲ್ಲ. ತಮ್ಮ ಪತಿಯೊಂದಿಗೆ ಚರ್ಚಿಸಿ ಅಜಂತಾ, ಗೃಹೊದ್ಯಮದಲ್ಲಿ ತೊಡಗಿದ್ದ ಮಹಿಳೆಯರನ್ನೆಲ್ಲ ಭೇಟಿ ಮಾಡಿ ಮಾತುಕತೆ ನಡೆಸಿದರು. ಆನ್​ಲೈನ್ ಮಾರ್ಕೆಟಿಂಗ್ ಸಾಕಷ್ಟು ಹೊಡೆತ ಕೊಟ್ಟಿದ್ದ ಟೈಮ್​​ನಲ್ಲಿ ಇದೇ ಅನ್​ಲೈನ್​​, ಚಿಕ್ಕಪುಟ್ಟ ಮಹಿಳಾ ಗೃಹೋದ್ಯೋಗಿಗಳಿಗೆ ಹೊಸ ಆಶಾಕಿರಣ ಮೂಡಿಸಿತ್ತು. ಹಾಗೆ ರೂಪುಗೊಂಡಿದ್ದೇ ಹೋಮ್​​ಮೇಡ್​​​ಆನ್​ಲೈನ್​​.ಇನ್ ​​​​​​​(www.homemadeonline.in)

ಏನಿದೆ ಇದರಲ್ಲಿ..?

ಹೋಮ್ ಮೇಡ್ ಆನ್​​ಲೈನ್ ನಿಮ್ಮ ನಾಲಿಗೆಯ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ನಿಮ್ಮ ಆರೋಗ್ಯವನ್ನೂ ಕಾಪಾಡುತ್ತದೆ. ಬೇರೆ ಬೇರೆ ಪ್ರದೇಶದ ಅಹಾರ ಪದಾರ್ಥಗಳು ಒಂದೇ ಕ್ಲಿಕ್ ನಲ್ಲಿ ಸಿಗೋದು ಹೋಮ್ ಮೇಡ್ ಆನ್​ಲೈನ್ ವಿಶೇಷತೆ. 60 ಬಗೆಯ ಚಟ್ನಿ ಪೌಡರ್ ಗಳು, ಅಗಸಿ ಪೌಡರ್, ಕರಿಬೆವು ಚಟ್ನಿಪುಡಿ, ಆರ್ಗನಿಕ್ ಚಟ್ನಿಪುಡಿ, ಶೇಂಗಾ ಚಟ್ನಿ, ಗುರೆಳ್ಳು ಚಟ್ನಿ, ಬೆಳ್ಳುಳ್ಳಿ ಚಟ್ನಿ, ಹೀಗೆ ಪಟ್ಟಿ ಉದ್ದವಾಗೆ ಬೆಳೆಯುತ್ತೆ. ಇದರ ಜೊತೆಗೆ 140 ವಿವಿಧ ಬಗಯೆ ಮಸಾಲಾ ಪೌಡರ್ ಗಳು ಘಮ ಘಮಿಸುತ್ತವೆ. ಮೈಸುರು ಪುಳಿಯೋಗರೆಯಂತಹ ರೆಡಿಮಿಕ್ಸ್ ಪ್ರಾಡಕ್ಟ್​​​ಗಳೂ ಹೋಮ್​​ಮೇಡ್​​​​​​​​ಆನ್ಲೈನ್ ನಲ್ಲಿ ಲಭ್ಯವಿದೆ. ಸ್ಪೆಷಲ್ ಮಸಾಲಾ ಪುಡಿಗಳನ್ನೂ ಕೂಡ ಆನ್​ಲೈನ್​​ನಲ್ಲಿಯೇ ಬುಕ್ ಮಾಡಬಹುದು. ಇನ್ನೂ 140 ವೆರೈಟಿಯ ಉಪ್ಪಿನಕಾಯಿ, ಗೊಜ್ಜು, ತೊಕ್ಕು, ಚಟ್ನಿಗಳು ಆನ್​ಲೈನ್​​ನಲ್ಲಿ ಸಿಗುವಂತೆ ಮಾಡಿದ ಕೀರ್ತಿ ಅಜಂತಾ ಅವರದ್ದು.

image


ಪಾನಿಪುರಿ ಮಸಾಲಾ, ಮಿಕ್ಸರ್, ಕರುಂ ಕುರುಂ ಚಕ್ಕುಲಿಗೆ ಮನೆಯಲ್ಲಿ ಮಾಡಿದ ಟೇಸ್ಟ್ ಇರತ್ತೆ. ಮನೆಯ ತಿನಿಸುಗಳಿಗೆ ವಾಣಿಜ್ಯೀಕರಣದ ಟಚ್ ಕೊಡಬೆಕು ಅಂದುಕೊಂಡು ಶುರುಮಾಡಿದ ಹೋಮ್​​ಮೇಡ್ಆನ್​​ಲೈನ್​​​ನಲ್ಲಿ ಇಂದು ಬರೊಬ್ಬರೀ 1500 ಕ್ಕೂ ಹೆಚ್ಚು ಉತ್ಪನ್ನಗಳು ಸೇರಿವೆ. ಅವೆಲ್ಲ ಉತ್ಪನ್ನಗಳೂ ಕೂಡ ಆಯಾಯ ಪ್ರಾದೇಶಿಕ ಮಹತ್ವವನ್ನು ಹೊಂದಿದ ತಿಂಡಿ ತಿನಿಸುಗಳು ಅನ್ನೋದೆ ಸ್ಪೆಷಲ್.

ಅಮ್ಮಂದಿರ ಕೈಯಲ್ಲಿ ತಯಾರಾಗುತ್ತವೆ ತಿನಿಸುಗಳು..!

ಹೋಮ್ ಮೇಡ್ ಆನ್​​ಲೈನ್​​ನಲ್ಲಿ ರಿಜಿಸ್ಟರ್ ಮಾಡಿಕೊಂಡವರು ಶೇ.90 ರಷ್ಟು ಮಹಿಳೆಯರು. ಚಿಕ್ಕಪುಟ್ಟ ಮನೆಗಳಲ್ಲಿ ಚಕ್ಕುಲಿ, ಸಿಹಿತಿಂಡಿ, ಚಟ್ನಿಪುಡಿ, ಮಸಾಲೆ ಸಾಂಬಾರ್ ಪುಡಿಗಳನ್ನು ತಯಾರಿಸೋ ಸಾವಿರಾರು ಮಹಿಳೆಯರಿದ್ದಾರೆ. ಗೃಹ ಉತ್ಪನ್ನಗಳಿಂದಲೇ, ಚಿಕ್ಕ ಪುಟ್ಟ ಸ್ನ್ಯಾಕ್ಸ್ ತಯಾರಿಸಿಯೇ ಜೀವನೋಪಾಯ ನಡೆಸುವ ವಿದವೆಯರಿದ್ದಾರೆ. ಗಂಡಂದಿರನ್ನು ಕಳೆದುಕೊಂಡಿರುವ ನೂರಾರು ಮಹಿಳೆಯರಿಗೆ ಚಕ್ಕುಲಿ, ಉಂಡೆ, ಮಸಾಲೆ ಉತ್ಪನ್ನಗಳೇ ಬದುಕಿನ ದಾರಿ. ಆದರೆ ಅವುಗಳಿಗೆ ದೊಡ್ಡ ಮಾರುಕಟ್ಟೆಯನ್ನು ಕಂಡುಕೊಳ್ಳುವುದು ಕಷ್ಟದ ಮಾತು. ಇಂಥ ಸಾವಿರಾರು ಮಹಿಳೆಯರಿಗೆ ಮಾರುಕಟ್ಟೆಯ ಹೊಸ ದಾರಿಯನ್ನು ತೆರೆದಿಟ್ಟು ಬದುಕು ರೂಪಿಸಿಕೊಡುವುದೇ ಹೋಮ್​​ಮೇಡ್​​​ಆನ್​​ಲೈನ್​​​ ಉದ್ದೇಶ ಅಂತಾರೆ ಇದರ ಬೆನ್ನೆಲುಬಾಗಿರುವ ಅಜಂತ. ಇಲ್ಲಿನ ಉತ್ಪನ್ನಗಳನ್ನು ಅತ್ಯಂತ ಶುದ್ದವಾದ ಸ್ಥಳದಲ್ಲಿ ಸ್ವಚ್ಚ ರೀತಿಯಲ್ಲಿ ಆರೋಗ್ಯಕ್ಕೆ ಅತ್ಯುತ್ತಮ ಎನಿಸುವಂತೆ ತಯಾರಿಸಿ ಗ್ರಾಹಕರಿಗೆ ನೀಡಲಾಗ್ತಿದ್ದು ಇದುವರೆಗೆ ಒಟ್ಟೂ 250 ಕ್ಕೂ ಹೆಚ್ಚುಗೃಹೋದ್ಯೊಗಿಗಳು ನೋಂದಾಯಿಸಿಕೊಂಡಿದ್ದಾರೆ.

image


ಹೋಮ್ ಮೇಡ್ ಆನ್​ಲೈನ್​​ನಲ್ಲಿ ಲಾಗಿನ್ ಆಗಿ ನಿಮ್ಮ ಇಷ್ಟದ ತಿಂಡಿ, ತಿನಿಸು, ಮಸಾಲೆ ಪೌಡರ್ ಗಳು, ಪ್ರಾದೇಶಿಕ ಆಹಾರಗಳ ದೊಡ್ಡ ಪಟ್ಟಿಯೇ ಇದೆ. ಜಸ್ಟ್ ಕ್ಲಿಕ್ ಮಾಡಿ ಆಯ್ಕೆ ಮಾಡಿದರೆ ಸಾಕು ನಿಮಗಿಷ್ಟವಾದ ತಿಂಡಿ ತಿನಿಸು ತಿನ್ನೋದಕ್ಕೆ ರೆಡಿ. ನಿಮ್ಮದೆ ಊರಿನ ರೆಡಿ ಮಿಕ್ಸ್ ಗಳು ನಿಮ್ಮ ಮನೆಗೆ ಬಂದು ಕೂರುತ್ತವೆ.

ಕಳೆದ ನಾಲ್ಕು ತಿಂಗಳ ಹಿಂದೆ ರಾಜಧಾನಿಯಲ್ಲಿ ಲಾಂಚ್ ಆಗಿರುವ ಹೋಮ್ ಮೇಡ್ ಆನ್​ಲೈನ್​ನ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದೆ. ಮನೆಯಲ್ಲಿ ಕುಳಿತೇ ಆಹಾರ ತಿನಿಸು ತಯಾರಿಸುವ ಸಾವಿರಾರು ಮಹಿಳೆಯರನ್ನು- ಲಕ್ಷಾಂತರ ಗ್ರಾಹಕರನ್ನು ತಲುಪಬೇಕು ಎನ್ನೋದು ಅಜಂತಾ ಅವರ ಕಣ್ಣ ಮುಂದಿರುವ ಕನಸು. ಕೇವಲ ಹಣ ಮಾಡುವುದಷ್ಟೇ ಅಲ್ಲ, ಬದಲಿಗೆ ಚಿಕ್ಕಪುಟ್ಟ ಮಹಿಳಾ ಉದ್ಯೋಗಿಗಳಿಗೆ ಬದುಕು ರೂಪಿಸಿಕೊಡಬೇಕು ಅಂತ ಪ್ರಬುದ್ದ ಮಾತುಗಳನ್ನಾಡ್ತಾರೆ ಅಜಂತ.