ಆವೃತ್ತಿಗಳು
Kannada

ಪ್ರತಿಯೊಬ್ಬರ ಹೆಜ್ಜೆಗೂ "ಗೆಜ್ಜೆ"ಕಟ್ಟುವ ರೂಪಿಕಾ

ಟೀಮ್​ ವೈ.ಎಸ್​. ಕನ್ನಡ

YourStory Kannada
2nd Mar 2017
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಸಾಧನೆ ಅನ್ನುವುದು ಸುಮ್ಮನೆ ಕುಳಿತಲ್ಲಿಗೆ ಬಂದು ಬೀಳುವ ವಸ್ತುವಲ್ಲ. ಮಂತ್ರ, ಮ್ಯಾಜಿಕ್​ಗಳಿಂದ ಸಿಗುವಂತಹದ್ದಲ್ಲ. ಅದಕ್ಕೆ ಪರಿಶ್ರಮ ಇರಬೇಕು. ಹಠ ಮತ್ತು ಗುರಿಯನ್ನು ಮುಟ್ಟುವ ಛಲ ಇರಬೇಕು. ಕನ್ನಡದ ಅನೇಕ ನಟಿಮಣಿಯರು ನಟನೆ ಒಂದನ್ನೇ ಬದುಕಾಗಿಸಿಕೊಂಡಿದ್ದಾರೆ. ಕೆಲವರಂತೂ ತಾವಾಯಿತು, ತಮ್ಮ ನಟನೆ ಆಯಿತು ಅಂತ ಸುಮ್ಮನೆ ಕುಳಿತಿದ್ದಾರೆ. ಇನ್ನು ಕೆಲವರು ತಮ್ಮಲ್ಲಿರುವ ಪ್ರತಿಭೆಯನ್ನು ಇತರರಿಗೂ ಹಂಚಬೇಕು ಅನ್ನುವ ಉತ್ಸಾಹ ಹೊಂದಿದ್ದಾರೆ. ಸಮಾಜ ಸೇವೆಯಲ್ಲಿ ಕೈಯಾಡಿಸಿದ ನಟಿಮಣಿಯರು ಸಿಗುತ್ತಾರೆ. ಉದ್ಯಮಕ್ಕೆ ಎಂಟ್ರಿ ಆದವರೂ ನಮ್ಮ ಇಂಡಸ್ಟ್ರಿಯಲ್ಲಿದ್ದಾರೆ. ಆದ್ರೆ ನಟಿ ರೂಪಿಕಾ ಮಾತ್ರ ವಿಭಿನ್ನ ಕೆಲಸಕ್ಕೆ ಕೈ ಹಾಕಿದ್ದಾರೆ. ತನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡಿದ್ದಾರೆ. ತಾನು ಕಲಿತಿರುವ ನೃತ್ಯದ ಮೂಲಕ ಉದ್ಯಮ ಆರಂಭಿಸಲು ಯೋಜನೆಗಳನ್ನು ಮಾಡಿಕೊಂಡಿದ್ದಾರೆ. 

image


ರೂಪಿಕಾ, ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ನಮ್ಮಮನೆ ಹುಡಗಿ ಅನ್ನುವಷ್ಟು ಪ್ರೇಕ್ಷಕರಿಗೆ ಹತ್ತಿರವಾಗಿರುವ ನಟಿ. ನಾಟ್ಯವನ್ನೇ ಬದುಕಾಗಿಸಿಕೊಂಡು ಅದನ್ನೇ ಉಸಿರಾಗಿಸಿಕೊಂಡಿರುವ ಕಲಾವಿದೆ. ನಾಟ್ಯ ಅಂದ್ರೆ ಜೀವನ ಅನ್ನುವ ಈ ನೃತ್ಯಗಾತಿ ಪಟ-ಪಟ ಅಂತ ಮಾತನಾಡುವುದರ ಜೊತೆಯಲ್ಲಿ ತಾನು ಕಲಿತಿರುವ ನೃತ್ಯವನ್ನ ಎಲ್ಲರಿಗೂ ಪಸರಿಸಲು ಹೊರಟಿದ್ದಾರೆ. ಸಿನಿಮಾದ ಬ್ಯುಸಿ ಶೆಡ್ಯೂಲ್​ ನಲ್ಲೂ ರೂಪಿಕಾ ತಮ್ಮದೊಂದು ಪುಟ್ಟ ಶಾಲೆಯನ್ನ ತೆರೆಗಿದ್ದಾರೆ. 

ಇದನ್ನು ಓದಿ: ವಯಸ್ಸಾದ ಮೇಲೂ ಅದ್ಭುತ ಕನಸು ಕಾಣಬಹುದು..!

ಗೆಜ್ಜೆ ಕಟ್ಟಿದ ರೂಪವಂತೆ

ಚಿಕ್ಕಂದಿನಿಂದಲೂ ವೇದಿಕೆ ಏರಿ ಕಾರ್ಯಕ್ರಮಗಳನ್ನು ನೀಡುವುದೆಂದರೆ ರೂಪಿಕಾಗೆ ಪಂಚಪ್ರಾಣ. ಆ ಆಸಕ್ತಿಯೇ ಮುಂದೆ ಕನ್ನಡ ಚಿತ್ರರಂಗಕ್ಕೆ ನಟಿಯೊಬ್ಬಳನ್ನು ನೀಡಿತು ಎಂದರೆ ತಪ್ಪಿಲ್ಲ. ಚಿಕ್ಕವಯಸ್ಸಿನಿಂದಲೇ ಒಂದಲ್ಲ ಒಂದು ವಿಭಾಗದಲ್ಲಿ ರೂಪಿಕಾ ತೊಡಗಿಕೊಳ್ಳುತ್ತಿದ್ದರಂತೆ. ಒಮ್ಮೆ ಇವರ ನೃತ್ಯ ನೋಡಿ ನಟ,ನಿರ್ದೇಶಕ ಎಸ್ ನಾರಾಯಣ್ ತಮ್ಮ ನಿರ್ದೇಶನದಲ್ಲಿ ಮೂಡಿ ಬಂದ ‘ಚೆಲುವಿನ ಚಿಲಿಪಿಲಿ’ ಚಿತ್ರದಲ್ಲಿ ನಾಯಕಿಯನ್ನಾಗಿಸಿದರು. ನಂತರದಲ್ಲಿ ‘ಕಾಲ್ಗೆಜ್ಜೆ', 'ಕುಂಭರಾಶಿ’ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ರೂಪಿಕಾ ಅಭಿನಯವಿತ್ತು. ಚಿತ್ರನಟಿಯಾಗಿ ಒಂದು ಕಡೆ ಮಿಂಚುತ್ತಿದ್ದರೂ, ತಾನು ಬೆಳೆದು ಬಂದ ಹಾದಿ, ತನ್ನ ಹವ್ಯಾಸ ಮತ್ತು ಆಸಕ್ತಿಯ ಕ್ಷೇತ್ರವಾದ ನಾಟ್ಯವನ್ನು ಮರೆಯಬಾರದು ಅನ್ನುವ ಉದ್ದೇಶದಿಂದ, ಆಸೆಯಿಂದ ‘ಗೆಜ್ಜೆ’ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. 

image


" ನಾನು ಇಂದು ಏನೇ ಗುರುತಿಸಿಕೊಂಡರು ಅದು ನೃತ್ಯದಿಂದ. ನೃತ್ಯವೇ ಬದುಕು,ಅದಕ್ಕೆ ಕುಟುಂಬದ ಸಹಾಯ ಸಿಕ್ಕಿರೋದು ನನ್ನ ಬೆಳವಣಿಗೆಗೆ ತುಂಬಾನೇ ಸರ್ಪೋರ್ಟ್ ಸಿಕ್ಕಂತಾಗಿದೆ " 
- ರೂಪಿಕಾ, ನಟಿ

ಪ್ರತಿಯೊಬ್ಬರ ಹೆಜ್ಜೆಗೂ ಗೆಜ್ಜೆ ಕಟ್ಟೋ ಸಹಾಯ

ತಾನು ಕಲಿತ ವಿದ್ಯೆಯನ್ನ ಎಲ್ಲರಿಗೂ ನೀಡಬೇಕು ಅನ್ನೋ ಉದ್ದೆಶದಿಂದ ಗೆಜ್ಜೆ ಶಾಲೆಯನ್ನ ಪ್ರಾರಂಭ ಮಾಡಿದ್ದಾರೆ ರೂಪಿಕಾ. ಭರತನಾಟ್ಯ, ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಚಲನಚಿತ್ರ ನೃತ್ಯ, ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ನಾಟಕಾಭಿನಯ ಹೀಗೆ ಇನ್ನೂ ಅನೇಕ ನೃತ್ಯಗಳ ತರಬೇತಿ ನೀಡುವುದಷ್ಟೇ ಅಲ್ಲದೆ ಹಲವಾರು ಕಾರ್ಯಕ್ರಮಗಳನ್ನು ನೀಡುತಿದೆ ರೂಪಿಕಾ ತಂಡ. ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸ್ಫರ್ಧೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ 5000ಕ್ಕೂ ಹೆಚ್ಚು ಪ್ರದರ್ಶನ ಹಾಗೂ ಸ್ಫರ್ಧೆಗಳಲ್ಲಿ ಭಾಗವಹಿಸಿರುವ ಹೆಗ್ಗಳಿಕೆ ಈ ತಂಡಕ್ಕಿದೆ. 

ನೃತ್ಯಕ್ಕೆ ಅಭಿನಯಕ್ಕೆ ಸಿಕ್ಕಿದೆ ಹಲವಾರು ಪ್ರಶಸ್ತಿ

ರೂಪಿಕಾ ನೃತ್ಯ ಹಾಗೂ ಅಭಿನಯ ಎರಡನ್ನೂ ಸಮನಾಗಿ ತೂಗಿಸಿಕೊಂಡು ಬರುತ್ತಿದ್ದಾರೆ. ತಮ್ಮ ನೃತ್ಯಕ್ಕೆ ಸಾಕಷ್ಟು ಪ್ರಶಸ್ತಿಗಳು ಒಲಿದುಬಂದಿದ್ದು 3000 ಹೆಚ್ಚು ಪ್ರಶಸ್ತಿ ಹಾಗೂ ಬಹುಮಾನಗಳು ಇವರ ಜೊತೆಯಲ್ಲಿವೆ. 2008ರಲ್ಲಿ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ, 2010ರಲ್ಲಿ ಅಸಾಧಾರಣ ಪ್ರತಿಭೆ ಪ್ರಶಸ್ತಿ, 2014ರಲ್ಲಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ವಿಶ್ವ ಮಾನ್ಯ ಪ್ರಶಸ್ತಿ, ಬೆಳ್ಳಿ ದೀಪ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ‘ಪ್ರಕೃತಿ’ ಕಿರುಚಿತ್ರಕ್ಕೆ ಶ್ರೇಷ್ಠ ಬಾಲ ನಟಿ ಪ್ರಶಸ್ತಿ, ಚಿತ್ರರಸಿಕ ಸಂಘದಿಂದ ‘ಕಾಲ್ಗೆಜ್ಜೆ’ ಚಿತ್ರಕ್ಕೆ ಶ್ರೇಷ್ಠನಟಿ ಪ್ರಶಸ್ತಿ ಸಂದಿರುವುದು ತಮ್ಮ ಸಾಧನೆಗೆ ಮತ್ತಷ್ಟು ಪುಷ್ಠಿ ನೀಡಿದೆ ಅಂತಾರೆ ರೂಪಿಕಾ. ಅಂದಹಾಗೇ ಚಾಮರಾಜಪೇಟೆಯಲ್ಲಿ "ಗೆಜ್ಜೆ ಸ್ಟುಡಿಯೋ" ಇದ್ದು ಆಸಕ್ತಿ ಇದ್ದವರು ಕೂಡ ಈ ತಂಡಕ್ಕೆ ಸೇರಿಕೊಳ್ಳಬಹುದು.

ಇದನ್ನು ಓದಿ: 

1. ಉದ್ಯಮ ಯಾವುದು ಅನ್ನುವುದು ಮುಖ್ಯವಲ್ಲ- ಇಂಟರ್​ನೆಟ್​​ಗೆ ಮೊದಲ ಸ್ಥಾನ..!

2. ಕನ್ನಡ ಶಾಲೆಗಳಿಗೆ "ಶ್ರೀನಿವಾಸ"ಕೃಪೆ..!

3. ರಂಗಭೂಮಿಯಲ್ಲಿ ಪ್ರಯೋಗದ ಕಿಕ್​​- "ವಿ ಮೂವ್"​ನಿಂದ ಹೊಸತನದ ಟಚ್​

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags