ಭಾರತದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ 19 ವರ್ಷದ ರಾಧಿಕಾ ಜೋಶಿ

ಭಾರತದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ದಿ ಸೆಕೆಂಡ್ ಚಾನ್ಸ್ ಪ್ರಾಜೆಕ್ಟ ನ ಸಂಸ್ಥಾಪಕಿ ರಾಧಿಕಾ ಜೋಶಿ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ದಿ ಸೆಕೆಂಡ್ ಚಾನ್ಸ್ ಪ್ರಾಜೆಕ್ಟ ಇಂದು 10 ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ, 900 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಕಾಯಪ್ರವೃತ್ತರನ್ನಾಗಿಸಿದೆ, ಮತ್ತು 100 ದಾನಿಗಳನ್ನು ನೊಂದಾಯಿಸಿದೆ.

ಭಾರತದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ 19 ವರ್ಷದ ರಾಧಿಕಾ ಜೋಶಿ

Saturday November 02, 2019,

3 min Read

ತಮ್ಮ 17 ನೇ ವಯಸ್ಸಿನಲ್ಲಿ, ಮೂತ್ರಪಿಂಡ ವೈಫಲ್ಯದಿಂದ ಅವರು ಪ್ರೀತಿಪಾತ್ರರನ್ನು ಕಳೆದುಕೊಂಡಾಗ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಆ ಘಟನೆಯೇ ಅವರಿಗೆ ಜನರಲ್ಲಿ ಜಾಗ್ರತಿ ಮೂಡಿಸಲು ಅಂಗಾಂಗ ದಾನಕ್ಕೆ ಮುಂದಾಗಲು ಜನರನ್ನು ಪ್ರೇರೇಪಿಸಲು ಕಾರಣವಾಯಿತು.


ಭಾರತದಲ್ಲಿ ಅಂಗಾಂಗ ದಾನದ ಕುರಿತು ಸಂಶೋಧನೆ ನಡೆಸುತ್ತಿರುವಾಗ, ರಾಧಿಕಾ ಜೋಶಿ ಅವರಿಗೆ ಅಂಗಗಳ ಅಲಭ್ಯತೆಯಿಂದಾಗಿ ಪ್ರತಿವರ್ಷ ಸುಮಾರು ಐದು ಲಕ್ಷ ವ್ಯಕ್ತಿಗಳು ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ತಿಳಿಯಿತು. ಕಾರಣ ಮತ್ತು ಅರಿವಿನ ಕೊರತೆಯ ಸುತ್ತಲಿನ ಅಸಂಖ್ಯಾತ ಮೂಢನಂಬಿಕೆಯಿಂದಾಗಿ ಪ್ರತಿ ಮಿಲಿಯನ್ ಜನರಿಗೆ ಕೇವಲ 0.86 ರಷ್ಟು ಜನರು ಮಾತ್ರ ತಮ್ಮ ಅಂಗಗಳನ್ನು ದಾನ ಮಾಡುತ್ತಾರೆ ಎಂಬ ಸತ್ಯ ಅರಿವಿಗೆ ಬಂತು.


ಅಂಗ ದಾನ: ಭಾರತದಲ್ಲಿ ನಿಷೇಧ?

ಅಂಗಾಂಗಗಳ ವೈಫಲ್ಯದಿಂದ ಗಂಭೀರ ಸ್ಥಿತಿಯಲ್ಲಿ ಅಂದಾಜು 1.5 ಲಕ್ಷ ರೋಗಿಗಳು ನಮ್ಮ ದೇಶದಲ್ಲಿದ್ದಾರೆ, ಅವರಿಗೆ ಜೀವ ಉಳಿಸುವ ಅಂಗಾಂಗ ಕಸಿ ಅಗತ್ಯವಿರುತ್ತದೆ; ಈ ಪೈಕಿ 5,000 ಜನರು ದಾನಿಗಳಿಂದ ಅಂಗಗಳನ್ನು ಪಡೆಯುತ್ತಾರೆ. ದಾನ ಮಾಡಿದ 5,000 ಅಂಗಗಳಲ್ಲಿ, ಸುಮಾರು 200 ಶವದ ದಾನದಿಂದ ಬಂದವು. ಆಗಾಗ್ಗೆ ಒಬ್ಬ ರೋಗಿಯು ಅಂಗಕ್ಕಾಗಿ ಮೂರರಿಂದ ನಾಲ್ಕು ವರ್ಷಗಳವರೆಗೆ ಕಾಯುತ್ತಾನೆ. ವಾಸ್ತವವಾಗಿ, 1997 ಕ್ಕಿಂತ ಮೊದಲು, ಭಾರತದಲ್ಲಿ ಯಶಸ್ವಿ ಅಂಗಾಂಗ ದಾನಕ್ಕೆ ದಾಖಲಾದ ಒಂದೇ ಒಂದು ಪ್ರಕರಣವಿತ್ತು.


ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ರಾಧಿಕಾ ಜೋಶಿಯವರು ದಿ ಸೆಕೆಂಡ್ ಚಾನ್ಸ್ ಯೋಜನೆಯನ್ನು ಸ್ಥಾಪಿಸಿದರು.


ಹಲವಾರು ಕಾರಣಗಳಿಂದಾಗಿ ಭಾರತದಲ್ಲಿ ಅಂಗಾಂಗ ದಾನ ಕಡಿಮೆ. ಮೊದಲನೆಯದಾಗಿ, ಅಂಗಾಂಗ ದಾನವು ಯಾವ ಪರಿಸ್ಥಿತಿಗಳಲ್ಲಿ ಸಾಧ್ಯ ಎಂಬ ಬಗ್ಗೆ ಸಾರ್ವಜನಿಕರಲ್ಲಿ, ರೋಗಿಗಳಲ್ಲಿ ಮತ್ತು ವೈದ್ಯರಲ್ಲಿ ತೀವ್ರ ಅರಿವಿನ ಕೊರತೆಯಿದೆ. ಎರಡನೆಯದಾಗಿ, ಭಾರತದಲ್ಲಿ ಕೆಲವೇ ಕೆಲವು ಆಸ್ಪತ್ರೆಗಳು ಅಂಗಾಂಗಗಳನ್ನು ಹೊರತೆಗೆಯಲು ಅರ್ಹತೆ ಪಡೆದಿವೆ ಮತ್ತು ಕಸಿ ಮಾಡುವ ಕೌಶಲ್ಯಗಳು, ಸೌಲಭ್ಯಗಳು ಮತ್ತು ಉಪಕರಣಗಳ ಕೊರತೆಯಿದೆ.


ಅಂಗ ದಾನವನ್ನು ನಿರ್ಣಯಿಸುವುದು ಹೇಗೆ?

ರಾಧಿಕಾ, ತಮ್ಮ ಯೋಜನೆಯಲ್ಲಿನ ವಿವಿಧ 6 ತಂಡಗಳ ಸದಸ್ಯರೊಂದಿಗೆ, ಅಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಬೀದಿನಾಟಕಗಳು, ಬಿತ್ತಿಪತ್ರಗಳು, ಮೊದಲಾದ ವೆಚ್ಚಪರಿಣಾಮಕಾರಿ ತಂತ್ರಗಳ ಮೂಲಕ ಜನರಲ್ಲಿ ಜಾಗ್ರತಿ ಮೂಡಿಸುತ್ತಿದ್ದಾರೆ.


ಸರಳವಾದ ಕಿಚನ್ ಅಫ್ರನ್‌ಗಳಲ್ಲಿ ದಾನ ಮಾಡಬಹುದಾದ ವಿವಿಧ ಅಂಗಗಳ ಚಿತ್ರಗಳನ್ನು ಅಂಟಿಸುವ ಮೂಲಕ ಸೆಕೆಂಡ್ ಚಾನ್ಸ್ ಪ್ರಾಜೆಕ್ಟ್ ಇತ್ತೀಚೆಗೆ ಅಂಗಾಂಗ ದಾನ ಅಫ್ರನ್‌ಗಳ ಬಳಕೆಯನ್ನು ಪ್ರಾರಂಭಿಸಿದೆ. ಅವರು ಕಾರ್ಯನಿರ್ವಹಿಸುವ ವಿವಿಧ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆಯಿರುವಾಗ ಇದು ವಿಶೇಷವಾಗಿ ಉಪಯುಕ್ತವಾಗಿದೆ.


ಅಂಗಾಂಗ ದಾನದ ಅಫ್ರನ್‌ ವಿದ್ಯಾರ್ಥಿಗಳಿಗೆ ಯಾವ ಅಂಗಗಳನ್ನು ದಾನ ಮಾಡಬಹುದು ಎಂದು ತಿಳಿಸುತ್ತದೆ.


ಅಂತಹ ವಿಷಯಗಳ ಬಗ್ಗೆ ಚರ್ಚಿಸುವ ಬಗ್ಗೆ ರಾಧಿಕಾ ಹೆಚ್ಚು ಮುಕ್ತ ಮನಸ್ಸಿನವರಾಗಿರುವುದರಿಂದ ವೇದಿಕೆಯು ಯುವಕರ ಪ್ರಶ್ನೆಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಏಕೆಂದರೆ ಸಮಾಜದಲ್ಲಿ ಬದಲಾವಣೆ ತರಲುವಲ್ಲಿ ಯುವಕರ ಪಾತ್ರ ಮಹತ್ವದ್ದು. ಈಗ ವೇದಿಕೆಯು ಮೂರು ಶಾಲೆಗಳು, ಐದು ಕಾಲೇಜುಗಳು ಮತ್ತು ಒಂದು ಕೆಫೆಯಲ್ಲಿ ತಿಂಗಳಲ್ಲಿ ಒಂದು ಭಾರಿ ಅಧಿವೇಶನಗಳನ್ನು ನಡೆಸುತ್ತದೆ.


ಮುಂದಿನ ಗುರಿ

ಸೆಕೆಂಡ್ ಪ್ರೊಜೆಕ್ಟ್ ಯೋಜನೆಯಲ್ಲಿ ರಾಧಿಕಾ ಸೇರಿದಂತೆ ಆರು ಪ್ರಮುಖ ಸದಸ್ಯರಿದ್ದಾರೆ. ತಂಡದ ಸದಸ್ಯರು ಭೌಗೋಳಿಕವಾಗಿ ರಾಷ್ಟ್ರದಾದ್ಯಂತ ಹರಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ನಾಶವಾಗುವ ಅಂಗಗಳಿಗೆ ಎರಡನೇ ಅವಕಾಶಗಳನ್ನು ಕಲ್ಪಿಸುವ ಉದ್ದೇಶವನ್ನು ಇವರು ಹೊಂದಿದ್ದಾರೆ.


ಪ್ರಸ್ತುತ, ಅವರು ಮಹಾರಾಷ್ಟ್ರ ಮತ್ತು ಉತ್ತರಾಖಂಡದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಹೆಚ್ಚಿನ ಯುವಕರನ್ನು ಒಳಗೊಳ್ಳುವ ಮೂಲಕ ಭಾರತದಾದ್ಯಂತ ವಿಸ್ತರಿಸಲು ಯೋಜಿಸುತ್ತಿದ್ದಾರೆ.


ನಮ್ಮ ದೇಶದಲ್ಲಿ ಆಗಾಗ ಕೇಳಿಬರುತ್ತಿರುವ ಅಂಗಾಂಗ ಕಳ್ಳಸಾಗಣೆ ಮತ್ತು ಮೂತ್ರಪಿಂಡದ ದಂಧೆಯ ಬಗ್ಗೆ ಮಾಧ್ಯಮಗಳಲ್ಲಿ ವಿವಿಧ ಸುದ್ದಿಗಳು ಬಂದಿದ್ದರಿಂದ, ರಾಧಿಕಾ ಅಂಗಾಂಗ ದಾನದಂತಹ ಕಾರಣಕ್ಕಾಗಿ ಕೆಲಸ ಮಾಡುವ ಬಗ್ಗೆ ಅವರಿಗೆ ಸ್ವಲ್ಪ ಭಯವಾಯಿತು. ಆದರೆ ಇಂದು ಅಂಗಗಳ ಅಗತ್ಯತೆಯನ್ನು ಅವರು ಮನಗಂಡ ಬಳಿಕ ತಂಡದ ಸದಸ್ಯರೊಂದಿಗೆ ಕೈಜೋಡಿಸಿ ಈ ಕಾರ್ಯಕ್ರಮದಲ್ಲಿ ಬೆನ್ನೆಲುಬಾಗಿದ್ದಾರೆ.


ಸೆಕೆಂಡ್ ಪ್ರೊಜೆಕ್ಟ್ ಯೋಜನೆಯು ಶಾಲಾ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ಅಭಿಯಾನಕ್ಕೆ ಬಳಸಿಕೊಳ್ಳುತ್ತಿದೆ.


ಕಾರ್ಯಕ್ರಮವನ್ನು ಪ್ರಾರಂಭಿಸುವ ರಾಧಿಕಾ ಅವರ ಆಲೋಚನೆಯು ಅವರ ಹಿರಿಯ ಸಹೋದರಿಯಿಂದ ಪ್ರಭಾವಿತವಾಗಿದೆ, ಅವರು ಮಿಷನ್ ಸಂಸ್ಕಾರ್ ಸ್ಥಾಪಕರಾಗಿದ್ದಾರೆ, ಇದು ಹೆಣ್ಣುಮಕ್ಕಳ ಮಾಸಿಕ ಋತುಸ್ರಾವ ಹಾಗೂ ಆವರ ಕಾಪಡಿಕೊಳ್ಳಬೇಕಾದ ಆರೋಗ್ಯ ಮತ್ತು ನೈರ್ಮಲ್ಯವನ್ನು ಬಗ್ಗೆ ಗಮನಹರಿಸುತ್ತದೆ.


ರಾಧಿಕಾ ಅವರ ಅನುಭೂತಿ ಸಾಮರ್ಥ್ಯ ಮತ್ತು ಅವರ ಉದ್ಯಮಶೀಲತಾ ಮನೋಭಾವವನ್ನು ಇತ್ತೀಚೆಗೆ ಅಶೋಕ ಸಮುದಾಯ ಗುರುತಿಸಿದೆ. ರಾಧಿಕಾ ಪ್ರಸ್ತುತ ಅಶೋಕ ಯಂಗ್ ಚೇಂಜ್ ಮೇಕರ್ ಆಗಿ ವಿಶ್ವದ ಅತಿದೊಡ್ಡ ಸಾಮಾಜಿಕ ಉದ್ಯಮಿಗಳು ಮತ್ತು ಬದಲಾವಣೆ ಮಾಡುವವರೊಂದಿಗೆ ಸಹಭಾಗಿತ್ವ ಹೊಂದಿದ್ದಾರೆ.


ಯೋಜನೆಯ ಸೂಕ್ಷ್ಮತೆ

ಪ್ರತಿ ಅಧಿವೇಶನದಲ್ಲಿ, ಅವರು ಹರಡುವ ಜಾಗೃತಿಯ ಮಟ್ಟವನ್ನು ಅರ್ಥಮಾಡಿಕೊಳ್ಳಲು ನಂತರದ ಮತ್ತು ಪೂರ್ವ-ಸಮೀಕ್ಷೆಯನ್ನು ನಡೆಸಲಾಗುತ್ತದೆ, ಇದು ಜನರಲ್ಲಿ ತಾವು ಮೂಡಿಸಿರುವ ಜಾಗೃತಿಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ತಂಡಕ್ಕೆ ಸಹಾಯ ಮಾಡುತ್ತದೆ.


'ಸಂವೇದನಾಶೀಲ ಜನರ ಸಂಖ್ಯೆ, ಅಂಗ ದಾನಿಗಳಾಗಿ ನೋಂದಾಯಿಸಲ್ಪಟ್ಟ ವ್ಯಕ್ತಿಗಳ ಸಂಖ್ಯೆ, ಮತ್ತು ಒಂದೊಳ್ಳೆ ಕಾರಣಕ್ಕಾಗಿ ಸ್ವಯಂಸೇವಕರಾಗಲು ಆಸಕ್ತಿ ಹೊಂದಿರುವವರು' ಆಧರಿಸಿ ಪರಿಣಾಮವನ್ನು ಅಳೆಯಲಾಗುತ್ತದೆ.


ನೋಂದಣಿಯನ್ನು ಮೋಹನ್ ಫೌಂಡೇಶನ್ ಸಹಾಯದಿಂದ ಮಾಡಲಾಗುತ್ತದೆ, ನಂತರ ನೋಂದಾಯಿತ ದಾನಿಗಳಿಗೆ ದಾನಿ ಕಾರ್ಡ್‌ನೊಂದಿಗೆ ಇಮೇಲ್ ಕಳುಹಿಸಲಾಗುತ್ತದೆ. ನೋಂದಣಿಯನ್ನು ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ನೋಟೊ/NOTTO) ಗುರುತಿಸಿದೆ. ಆದಾಗ್ಯೂ, ದಾನಿಗಳಾಗಿ ನೋಂದಾಯಿಸುವುದರೊಂದಿಗೆ ಪ್ರಕ್ರಿಯೆಯು ನಿಲ್ಲುವುದಿಲ್ಲ, ಕುಟುಂಬದ ಕಾನೂನು ಕಾಳಜಿಯನ್ನು ಸಹ ಪರಿಗಣಿಸುತ್ತದೆ.


ತನ್ನ ಉಪಕ್ರಮಗಳ ಮೂಲಕ, ಸೆಕೆಂಡ್ ಚಾನ್ಸ್ ಪ್ರಾಜೆಕ್ಟ್ 900 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಸಂವೇದನಾಶೀಲಗೊಳಿಸಲು ಸಾಧ್ಯವಾಯಿತು ಮತ್ತು ಸುಮಾರು 100 ದಾನಿಗಳನ್ನು ನೋಂದಾಯಿಸಲಾಗಿದೆ. ಅವರು ಮೋಹನ್ ಫೌಂಡೇಶನ್, ಎನ್ಎಸ್ಎಸ್, ಮತ್ತು ರೊಟರಾಕ್ಟ್ ನಂತಹ ಇತರ 10 ಸಮಾನ ಮನಸ್ಕ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದಾರೆ, ಇದು ಜನರು ದಾನಿಗಳಾಗಿ ನೋಂದಾಯಿಸಲು ಸಹಾಯ ಮಾಡುತ್ತದೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.