Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಹೊತ್ತಿ ಉರಿಯುತ್ತಿರುವ ಭೂಮಿಯ ಶ್ವಾಸಕೋಶ: ಅಮೇಜಾನ್ ನಿತ್ಯಹರಿದ್ವರ್ಣ ಕಾಡು ಎಂಟು ತಿಂಗಳೊಳಗೆ 75,000 ಬಾರಿ ಕಾಡ್ಗಿಚ್ಚಿಗೆ ಸಾಕ್ಷಿಯಾಗಿದೆ

2018 ರಲ್ಲಿ ಅಮೆಜಾನ್‌ ಕಾಡಿನಲ್ಲಿ 40 ಸಾವಿರ ಬಾರಿ ಬೆಂಕಿ ಕಾಣಿಸಿಕೊಂಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಅದು ಈ ವರ್ಷ ದುಪ್ಪಟ್ಟಾಗಿದೆ.

ಹೊತ್ತಿ ಉರಿಯುತ್ತಿರುವ ಭೂಮಿಯ ಶ್ವಾಸಕೋಶ: ಅಮೇಜಾನ್ ನಿತ್ಯಹರಿದ್ವರ್ಣ ಕಾಡು ಎಂಟು ತಿಂಗಳೊಳಗೆ 75,000 ಬಾರಿ ಕಾಡ್ಗಿಚ್ಚಿಗೆ ಸಾಕ್ಷಿಯಾಗಿದೆ

Friday August 23, 2019 , 2 min Read

ಒಂದೆಡೆ ಹೆಚ್ಚುತ್ತಿರುವ ಭೂಮಿಯ ತಾಪಮಾನದಿಂದಾಗಿ ಕರುಗುತ್ತಿರುವ ಹಿಮಗಡ್ಡೆಗಳು ಇದರೊಂದಿಗೆ ಇಡೀ ಭೂಮಿಗೆ ಆಮ್ಲಜನಕದ ಬಹುಭಾಗವನ್ನು‌ ಒದಗಿಸುತ್ತಿರುವ ಅಮೇಜಾನ್ ನಿತ್ಯಹರಿದ್ವರ್ಣ ಕಾಡುಗಳು 2019ರ ಒಳಗಾಗಿ 75,000 ಕಾಡ್ಗಿಚ್ಚಿಗೆ ಆಹುತಿಯಾಗುವುದಕ್ಕೆ  ಸಾಕ್ಷಿಯಾಗಿದ್ದೇವೆ‌.


ಬ್ರೆಜಿಲ್‌ ದೇಶದಲ್ಲಿ ಕಂಡು ಬರುವ ಈ ಮಳೆಕಾಡು ಒಂದು ದಶಲಕ್ಷ ಸ್ಥಳೀಯ ಜನರು ಮತ್ತು ಮೂರು ದಶಲಕ್ಷ ಸಸ್ಯ ಮತ್ತು ಅನೇಕ ಪ್ರಾಣಿ ಸಂಕುಲಗಳಿಗೆ ನೆಲೆಯಾಗಿದೆ. ಅಷ್ಟೇ ಅಲ್ಲದೇ ಭೂಮಿಯ ಆಮ್ಲಜನಕದ ಒಟ್ಟು ಪೂರೈಕೆಯಲ್ಲಿ 20% ರಷ್ಟನ್ನು‌‌ ಇದೊಂದೆ ಕಾಡು ಉತ್ಪಾದಿಸುತ್ತದೆ.


ಈ ವರ್ಷ ದಾಖಲೆಯ ಮಟ್ಟದಲ್ಲಿ ಕಾಡುಗಳು ಹೊತ್ತಿ ಉರಿಯುತ್ತಿವೆ. ವಾಸ್ತವದಲ್ಲಿ ಕಾಡಿನಿಂದ 3,218.68 ಕಿ.ಮೀ ದೂರದಲ್ಲಿರುವ ಬ್ರೆಜಿಲ್‌ನ ಅತಿದೊಡ್ಡ ನಗರವಾದ ʼಸಾವೋ ಪಾಲೋ' ಸಹ ಈ ಕಾಳ್ಗಿಚ್ಚಿನ ಹೊಗೆಯಿಂದ ಆವೃತವಾಗಿದೆ.


ನಗರವು ಮಧ್ಯಾಹ್ನದ ಸಮಯದಲ್ಲಿ ಕಪ್ಪು ಹೊಗೆಯಿಂದ ಆವೃತವಾಗಿತ್ತು (ಚಿತ್ರಕೃಪೆ: ಲೈವ್ ಸೈನ್ಸ್)


ಬಾಹ್ಯಾಕಾಶದಿಂದ ಗಮನಿಸಿದಾಗ, ಈ ಹೊಗೆಯು ಸುಮಾರು 3.1 ಶತಕೋಟಿ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿರುವುದನ್ನು ಗಮನಿಸಿದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ಅರಿಯಬಹುದು. 


ಹಾಗಾದರೆ, ಈ ಬೆಂಕಿಗೆ ಕಾರಣವಾದದ್ದು ಏನು?


ಬ್ರೆಜಿಲ್‌ನ ಬಾಹ್ಯಾಕಾಶ ಸಂಶೋಧನಾ ಕೇಂದ್ರವಾದ ಐಎನ್‌ಪಿಇ ಪ್ರಕಾರ, 2018 ರ ಇದೇ ಅವಧಿಯಲ್ಲಿ 40,000 ಬಾರಿ ಕಾಡಿಗೆ ಬೆಂಕಿ ಸಂಭವಿಸಿದೆ.


ಬ್ರೆಜಿಲಿಯನ್ ಫೆಡರಲ್ ಪ್ರಾಸಿಕ್ಯೂಟರ್ ಅಧಿಕಾರಿಗಳು ಈ ವಿಷಯವನ್ನು ಕೈಗೆತ್ತಿಕೊಂಡು ಅರಣ್ಯನಾಶ ಮತ್ತು ಕಾಡಿನ ಬೆಂಕಿ ಹೆಚ್ಚುತ್ತಿರುವ ವಿಷಯದ ಕುರಿತಾಗಿ ತನಿಖೆ ನಡೆಸಲು ‌ನಡೆಸಲು ನಿರ್ಧರಿಸಿದ್ದಾರೆ‌.


ಅಮೇಜಾನ್ ಕಾಡಿನ ಬೆಂಕಿಯಿಂದ ಉಂಟಾದ ಹೊಗೆಯ ಚಿತ್ರವನ್ನು ನಾಸಾದ ಉಪಗ್ರಹದಿಂದ ಸೆರೆ ಹಿಡಿಯಲಾಗಿದೆ (ಚಿತ್ರಕೃಪೆ: ನಾಸಾ)


ಇಂತಹ ಅವಘಡಗಳಿಗೆ ಸ್ಪಷ್ಟ ಕಾರಣ ಕೊಡುವುದಾರೆ,‌ ಅದು ಮಾನವ ಹಾಗೂ ಮಾನವನ ಚಟುವಟಿಕೆಗಳು. ಸಿಎನ್ಎನ್‌ ಪ್ರಕಾರ, ಹಿಡುವಳಿದಾರರು ತಮ್ಮ ಬಳಕೆಗಾಗಿ ಭೂಮಿಯನ್ನು ತೆರುವುಗೊಳಿಸಿರುವುದು ಹಾಗೂ ದನ ಸಾಕುವಿಕೆಯಿಂದ ಕಾಡ್ಗಿಚ್ಚು ಹರಡುತ್ತದೆ ಎಂದು‌ ಸಂಶೋಧಕರು ತಿಳಿಸುತ್ತಾರೆ.


ಲಾಭರಹಿತ ಸಂಸ್ಥೆಯಾದ 'ಅಮೇಜಾನ್ ವಾಚ್‌'ನ ಕಾರ್ಯಕ್ರಮ‌‌ ನಿರ್ದೇಶಕ ಕ್ರಿಶ್ಚಿಯನ್ ಪೋರಿಯರ್, ಒಂದು ಹೇಳಿಕೆಯಲ್ಲಿ ಹೀಗೆ ಹೇಳಿದರು, 


"ಈ ಬೆಂಕಿಗಳಲ್ಲಿ ಹೆಚ್ಚಿನವು ಮಾನವ ಬೆಳಕಿನಿಂದ‌ ಕೂಡಿರುತ್ತವೆ. ಶುಷ್ಕ ಅವಧಿಯಲ್ಲಿಯೂ ಸಹ,‌ ಅಮೇಜಾನ್- ಆರ್ದ್ರ ಮಳೆಕಾಡು- ಕ್ಯಾಲಿಫೋರ್ನಿಯಾ ಅಥವಾ ಆಸ್ಟ್ರೇಲಿಯಾದ ಒಣ‌ ಶುಷ್ಕಭೂಮಿಯಂತೆ ಸುಲಭವಾಗಿ ಬೆಂಕಿಯನ್ನು ಹಿಡಿಯುವುದಿಲ್ಲ" ಎಂದು‌‌‌ ಸಿಎನ್ಎನ್ ವರದಿ ಮಾಡಿದೆ.


ಪರಿಸ್ಥಿತಿ ಎಷ್ಟು ಹಾಳಾಗಿದೆ‌ ಮತ್ತು ಇದಕ್ಕಾಗಿ ಏನು ಮಾಡಲು ಸಾಧ್ಯ?


ಬಿಬಿಸಿ ಪ್ರಕಾರ, ಅಮೇಜಾನ್‌ ನಿತ್ಯಹರಿದ್ವರ್ಣ ಕಾಡಿನ‌ ಒಂದು ಸೀಮಿತ ಪ್ರದೇಶವು‌ ಒಂದು‌ ಪುಟ್ಬಾಲ್ ಮೈದಾನದ ಗಾತ್ರಕ್ಕೆ ಸಮವಾಗಿರುತ್ತದೆ. ಇದಲ್ಲದೆ, ಬ್ರೆಜಿಲ್‌ನ ಹೊಸ ಬಲಪಂಥೀಯ ಅಧ್ಯಕ್ಷರು‌‌ ಸರಂಕ್ಷಣೆಗಿಂತ ಕೈಗಾರಿಕ ಅಭಿವೃದ್ಧಿಯೆಡೆಗೆ ಹೆಚ್ಚಿನ ಒಲವು‌ ತೋರಿರುವದರಿಂದ ನಷ್ಟದ ಪ್ರಮಾಣ ಹೆಚ್ಚಾಗಿದೆ.


ರೊರೈಮಾ ಬೆಂಕಿಯಲ್ಲಿ 141 ಪ್ರತಿಶತ , ಎಕರೆಯಲ್ಲಿ 138 ಪ್ರತಿಶತ , ರೊಂಡೋನಿಯಾ 115 ಪ್ರತಿಶತ ಮತ್ತು ಅಮೆಜೋನಾಸ್ 81 ಪ್ರತಿಶತ ದಷ್ಟು ಹೆಚ್ಚಳ‌‌ ಕಂಡಿದ್ದರಿಂದ ಈ ಬೆಂಕಿಯು ಉತ್ತರ ಬ್ರೆಜಿಲ್ ಮೇಲೆ ತೀವ್ರ ಪರಿಣಾಮ ಬೀರಿದೆ.


ಅಮೆಜಾನ್ ಕಾಡಿನ ಬೆಂಕಿ (ಚಿತ್ರಕೃಪೆ: ಎಕ್ಸ್‌ಪ್ರೆಸ್)


"ಈ ಬೆಂಕಿಯು ಅಂತರಾಷ್ಟ್ರೀಯ ಬಿಕ್ಕಟ್ಟು" ಈ ಬಾರಿಯ ಜಿ7 ಶೃಂಗಸಭೆಯಲ್ಲಿ ಈ ವಿಷಯವು ಉನ್ನತ ಕಾರ್ಯಸೂಚಿಯಾಗಬೇಕಿದೆ. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ‌ ಮೋದಿ ಸಹ ಪಾಲ್ಗೊಳ್ಳಲಿದ್ದಾರೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ. 


ಅಧ್ಯಕ್ಷರಾದ ಮ್ಯಾಕ್ರನ್ ಟ್ವೀಟ್ ಮಾಡಿದಂತೆ, 


"ನಮ್ಮ ಮನೆ ಉರಿಯುತ್ತಿದೆ. ಅಕ್ಷರಶಃ ನಮ್ಮ ಗ್ರಹದ 20 ಪ್ರತಿಶತ ಆಮ್ಲಜನಕವನ್ನು ಉತ್ಪಾದಿಸುವ ಶ್ವಾಸಕೋಶಗಳಾದ ಅಮೇಜಾನ್ ನಿತ್ಯಹರಿದ್ವರ್ಣ ಕಾಡುಗಳು ಬೆಂಕಿಯಲ್ಲಿವೆ. ಇದು ಅಂತರಾಷ್ಟ್ರೀಯ ಬಿಕ್ಕಟ್ಟಾಗಿದ್ದು, ಜಿ7 ಶೃಂಗಸಭೆಯ ಸದಸ್ಯರು ಈ ತುರ್ತು ಆದೇಶವನ್ನು ಎರಡು ದಿನಗಳಲ್ಲಿ ಚರ್ಚಿಸೋಣ! #ActForTheAmazon".


ನೀವು ಇದಕ್ಕೆ ಸಹಾಯ ಮಾಡಲು ಬಯಸಿದರೆ, "ರೇನ್‌ಫಾರೆಸ್ಟ್ ಆ್ಯಕ್ಷನ್ ನೆಟ್‌ವರ್ಕ್‌ಗೆ ದಾನ ಮಾಡಬಹುದಾಗಿದೆ" ಎಂದು‌ ಸಿಎನ್ಇಟಿ ಹೇಳುತ್ತದೆ. ಇದು ಒಂದು ಎಕರೆ‌ ಮಳೆಕಾಡನ್ನು‌ ರಕ್ಷಿಸುತ್ತದೆ.


1998 ರಿಂದ, ಈ ರೇನ್‌ಫಾರೆಸ್ಟ್ ಸಂಘವು 23 ಮಿಲಿಯನ್ ಎಕರೆ ಅರಣ್ಯ ಪ್ರದೇಶವನ್ನು ಉಳಿಸಿದೆ ಮತ್ತು ಹೆಚ್ಚಿನದನ್ನು ಉಳಿಸಲು‌ ನೀವು ಅವರಿಗೆ ಸಹಾಯ ಮಾಡಬಹುದು.