ಸೈನಿಕರನ್ನು ಸ್ನೈಪರ್ ದಾಳಿಯಿಂದ ರಕ್ಷಿಸಲು ಬುಲೆಟ್ ಪ್ರೂಫ್ ಜಾಕೆಟ್ ತಯಾರಿಸಿದ ಭಾರತೀಯ ಸೈನ್ಯಾಧಿಕಾರಿ

ಮೇಜರ್ ಅನೂಪ್ ಮಿಶ್ರಾ ಗುಂಡು ನಿರೋಧಕ ಜಾಕೆಟ್ ಅನ್ನು ತಯಾರಿಸಿದ್ದು, ಅದು ಸ್ನೈಪರ್ ರೈಫಲ್ ಗುಂಡಿನ ದಾಳಿಯನ್ನು ತಡೆದುಕೊಳ್ಳುವುದಲ್ಲದೆ, ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಸೈನಿಕರನ್ನು ಸ್ನೈಪರ್ ದಾಳಿಯಿಂದ ರಕ್ಷಿಸಲು ಬುಲೆಟ್ ಪ್ರೂಫ್ ಜಾಕೆಟ್ ತಯಾರಿಸಿದ ಭಾರತೀಯ ಸೈನ್ಯಾಧಿಕಾರಿ

Saturday December 28, 2019,

2 min Read

ಭಾರತೀಯ ಸೇನೆಯ ಮೇಜರ್ ಒಬ್ಬರು ‘ಸರ್ವತ್ರ’ ಎಂಬ ಹೆಸರಿನ ಗುಂಡು ನಿರೋಧಕ ಜಾಕೆಟ್ ಅನ್ನು ಅಭಿವೃದ್ಧಿಪಡಿಸಿದ್ದು, ಇದು ಸ್ನೈಪರ್ ರೈಫಲ್‌ನಿಂದ ಗುಂಡುಗಳು ದೇಹಕ್ಕೆ ತಾಗದಂತೆ ತಡೆಯುತ್ತದೆ.


ಎಎನ್‌ಐ ಜೊತೆಗಿನ ಮಾತುಕತೆಯಲ್ಲಿ ಮೇಜರ್ ಅನೂಪ್ ಮಿಶ್ರಾ,


ಒಂದು ಕಾರ್ಯಾಚರಣೆಯ ಸಮಯದಲ್ಲಿ ನಾನು ಗುಂಡು ನಿರೋಧಕ ಜಾಕೆಟ್‌ ಧರಿಸಿದ್ದರು ಒಂದು ಗುಂಡು ನನಗೆ ತಗುಲಿತ್ತು. ಹೆಚ್ಚಿನ ತೊಂದರೆಯಾಗಲಿಲ್ಲ. ಆದರೆ ಅದರಿಂದ ಉಂಟಾದ ಆಘಾತ ನಾನು ಊಹಿಸಿದಕ್ಕಿಂತಲು ಸ್ವಲ್ಪ ಹೆಚ್ಚೆ ಇತ್ತು. ಆದ್ದರಿಂದ, ನಾನು ಆ ದಿನ ದೇಹಕ್ಕೆ ಆಗುವ ಅಪಾಯಯವನ್ನು ಕಡಿಮೆ ಮಾಡುವ ಗುಂಡು ನಿರೋಧಕ ಜಾಕೆಟ್ ತಯಾರಿಸಲು ನಿರ್ಧರಿಸಿದೆ," ಎಂದು ಹೇಳಿದರು.


ಮೇಜರ್ ಅನೂಪ್ ಮಿಶ್ರಾ (ಚಿತ್ರಕೃಪೆ: ಟಿ ನ್ಯೂಸ್)




ಸೇನೆಯ ಅಧಿಕಾರಿಯೊಬ್ಬರ ಪ್ರಕಾರ, ಹತ್ತು ಮೀಟರ್‌ನಿಂದ ಹಾರಿಸಿದ ಗುಂಡುಗಳನ್ನು ತಡೆಯುವ ಶಕ್ತಿ ಜಾಕೆಟ್ ಗಳಿಗೆ ಇರುತ್ತದೆ. ಪುಣೆಯ ಮಿಲಿಟರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಭಿವೃದ್ಧಿಪಡಿಸಿದ ಈ ಜಾಕೆಟ್, ಯಾವುದೇ ಸ್ನೈಪರ್ ರೈಫಲ್ ಗುಂಡುಗಳಿಂದ ಇಡೀ ದೇಹವನ್ನು ರಕ್ಷಿಸುತ್ತದೆ.


ಮೇಜರ್ ಅವರ ಕೆಲಸ ಮತ್ತು ಹೊಸ ಆಲೋಚನೆಗೆ ಈ ವಾರದ ಆರಂಭದಲ್ಲಿ ಆರ್ಮಿ ಚೀಫ್ ಜನರಲ್ ಬಿಪಿನ್ ರಾವತ್ ಅವರು ಆರ್ಮಿ ಡಿಸೈನ್ ಬ್ಯೂರೋ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.


ಮೇಜರ್ ಅನೂಪ್ ಮಿಶ್ರಾ ಮಾತನಾಡುತ್ತಾ,


"ನಿಯಂತ್ರಣ ರೇಖೆ ಮತ್ತು ಕಾಶ್ಮೀರ ಕಣಿವೆಯ ಮೇಲೆ ಸ್ನೈಪರ್ ದಾಳಿಯ ನಂತರ, ಸೈನಿಕರಿಗೆ ಪೂರ್ಣ-ದೇಹದ ರಕ್ಷಣೆಯ ಅಗತ್ಯವಿತ್ತು. ಈ ಜಾಕೆಟ್ ಅನ್ನು ಕಾಲಾಳುಪಡೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಿಸಲಾಗಿದೆ,” ವರದಿ ಇಂಡಿಯಾ ಟುಡೆ.


ಇದಲ್ಲದೆ, ಈ ಪೂರ್ಣ-ದೇಹದ ಗುಂಡು ನಿರೋಧಕ ಜಾಕೆಟ್‌ಗಳನ್ನು ತಯಾರಿಸಲು ಭಾರತೀಯ ಸೇನೆ ಶೀಘ್ರದಲ್ಲೇ ಟೆಂಡರ್ ಕರೆಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ ಆಯ್ದ ರಕ್ಷಣಾ ಉದ್ಯಮದ ಪಾಲುದಾರ ಕಂಪೆನಿಯೊಂದಿಗೆ ಇದರ ಉತ್ಪಾದನೆಯನ್ನು ಮಾಡಲಾಗುವುದು.


ಮೇಜರ್ ಅನೂಪ್ ಅವರ ಪ್ರಕಾರ, ಈ ತಂತ್ರಜ್ಞಾನದೊಂದಿಗೆ, ಈ ರೀತಿಯ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.



Share on
close