ಸಿಯಾಚಿನ್ ಯುದ್ಧಭೂಮಿಯಲ್ಲಿ ಭಾರತೀಯ ಸೈನ್ಯದ ಸಾಹಸಮಯ ಸ್ವಚ್ಛ ಭಾರತ ಅಭಿಯಾನ

ಜಗತ್ತಿನ ಅತೀ ಎತ್ತರದ ಯುದ್ದ ಭೂಮಿ ಸಿಯಾಚಿನ್ ಹಿಮನದಿಗಳಲ್ಲಿಶೇಕರಿಸಲ್ಪಟ್ಟ 130 ಟನ್ ಕಸವನ್ನು ತೆಗೆದು ತ್ಯಾಜ್ಯ ನಿರ್ವಹಣೆಯನ್ನು ಸಮಪ೯ಕವಾಗಿ ನಡೆಸುತ್ತಿರುವ ಭಾರತೀಯ ಸೇನಾಪಡೆ.

ಸಿಯಾಚಿನ್ ಯುದ್ಧಭೂಮಿಯಲ್ಲಿ ಭಾರತೀಯ ಸೈನ್ಯದ ಸಾಹಸಮಯ ಸ್ವಚ್ಛ ಭಾರತ ಅಭಿಯಾನ

Thursday September 26, 2019,

2 min Read

ಭಾರತ ಮತ್ತು ಪಾಕಿಸ್ತಾನದೊಂದಿಗೆ ಗಡಿಹಂಚಿಕೊಳ್ಳುವ ಪ್ರಮುಖ ಪ್ರದೇಶ ಸಿಯಾಚಿನ್. ಜೀವಸಂಕುಲಕ್ಕೆ ಅನರ್ಹವಾದ ಸ್ಥಳ. ಅಂತಹ ಮೈಕೊರೆಯುವ ಚಳಿಯಲ್ಲೂ ವೈರಿಗಳ ಒಳನುಸುಳುವಿಕೆಯಿಂದ ನಮ್ಮ ದೇಶವನ್ನು ಕಾಪಾಡಲು ಶಾಸ್ತ್ರಸನ್ನದ್ದರಾಗಿದ್ದ ಸೈನಿಕರು ಇದೀಗ ಸಿಯಾಚಿನ್ ಪ್ರದೇಶದಲ್ಲಿ ಶೇಖರಣೆಯಾಗಿರುವ ತ್ಯಾಜ್ಯಗಳನ್ನು ಆರಿಸಿ "ಸ್ವಚ್ಛ ಭಾರತಕ್ಕೆ" ಮಾದರಿಯಾಗಿದ್ದಾರೆ.


ಚಳಿಗಾಲದಲ್ಲಿ ಹಿಮನದಿಯಲ್ಲಿ ಹಿಮಪಾತ ಮತ್ತು ಭೂಕುಸಿತಗಳು ಸಾಮಾನ್ಯವಾಗಿದೆ ಈ ಸಂಧರ್ಭದಲ್ಲಿ ಸಿಯಾಚಿನ್ ನ ತಾಪಮಾನವು ಮೈನಸ್ 60 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿಯಬಹುದು. ಅಧಿಕೃತ ಅಂಕಿ ಅಂಶಗಳ ಪ್ರಕಾರ, ಕಳೆದ 10 ವರ್ಷಗಳಲ್ಲಿ ವಿಶ್ವದ ಅತ್ಯುನ್ನತ ಯುದ್ಧಭೂಮಿಯಲ್ಲಿ ಸೇನೆಯು 163 ಸಿಬ್ಬಂದಿಗಳನ್ನು ಕಳೆದುಕೊಂಡಿದೆ.


ಸಿಯಾಚಿನ್ ನಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಭಾರತೀಯ ಸೈನಿಕರ ನಿಯೋಜನೆಯಿಂದಾಗಿ ಕಸವು ಸಂಗ್ರಹಗೊಳ್ಳುತ್ತಿದೆ. ಅತ್ಯಂತ ಶೀತಮಯ ಪ್ರದೇಶವಾದ್ದರಿಂದ ತ್ಯಾಜ್ಯವು ಇಲ್ಲಿ ಕೊಳೆಯುವುದಿಲ್ಲ. ಆದ್ದರಿಂದ ವರ್ಷಕ್ಕೆ 100 ಟನ್ ತ್ಯಾಜ್ಯವನ್ನು ಹೊರತೆಗೆಯಲು ಭಾರತೀಯ ಸೇನೆಯು ಯೋಜಿಸಿದೆ. ಒಂದು ಅಂದಾಜಿನ ಪ್ರಕಾರ, ಸಿಯಾಚಿನ್‌ನಲ್ಲಿ ಪ್ರತಿವರ್ಷ 236 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ.


ಭಾರತೀಯ ಸೇನೆಯು ಈ ಹಿಮನದಿಯಲ್ಲಿ ತನ್ನ ಸೈನಿಕರಿಗಾಗಿ,


"ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್" ಒಂದನ್ನು ಸಿದ್ಧಪಡಿಸಿದೆ, ಅದರ ಪ್ರಕಾರ ಬೇಸ್ ಕ್ಯಾಂಪ್‌ಗೆ ಇಳಿಯುವಾಗ, ಅವರು ಯಾವುದೇ ಕಠಿಣ ಪರಿಸ್ಥಿತಿಗಳಲ್ಲಿಯೂ ಒಂದು ಸಣ್ಣ ಕಸವನ್ನಾದರೂ ತರಬೇಕಾಗುತ್ತದೆ.

ಮೈಕೊರೆಯುವ ಚಳಿಯಲ್ಲಿ ತ್ಯಾಜ್ಯವನ್ನು ಹೊರತೆಗೆಯುತ್ತಿರುವ ಭಾರತೀಯ ಸೈನಿಕರು (ಚಿತ್ರಕೃಪೆ: ಎ ಎನ್‌ ಐ)



ಏಷಿಯನ್ ಏಜ್ ನೊಂದಿಗೆ ಮಾತನಾಡಿದ ಸೇನಾಧಿಕಾರಿಯೊಬ್ಬರು,


"ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು" ದೇಶದ ಪ್ರಯತ್ನಗಳನ್ನು" ಪ್ರಧಾನಿ ನರೇಂದ್ರ ಮೋದಿ ಹೊರತಂದ ಒಂದು ದಿನದ ನಂತರ, ಕಳೆದ 19 ತಿಂಗಳಿ೦ದ ಸಿಯಾಚಿನ್ ಹಿಮನದಿಯಲ್ಲಿ, ಸೇನೆ 130 ಟನ್‌ಗಿಂತಲೂ ಹೆಚ್ಚು ಕಸವನ್ನು ತೆರವುಗೊಳಿಸಿದೆ" ಎಂದರು.


ಹೊರೆಗೆ ತೆಗೆದ ಒಟ್ಟು ತ್ಯಾಜ್ಯಗಳಲ್ಲಿ 130.14 ಟನ್‌ನಲ್ಲಿ 48.14 ಟನ್‌ ಜೈವಿಕ ವಿಘಟನೀಯವಾಗಿದ್ದರೆ, 40 ಟನ್‌ ಪ್ಲಾಸ್ಟಿಕ್ ಮತ್ತು ಗಾಜಿನ ತ್ಯಾಜ್ಯವಾಗಿದೆ. ಸುಮಾರು 41.45 ಟನ್ಗಗಳಷ್ಟು ಕಸವು ಲೋಹೀಯ ಸಾಮಗ್ರಿಗಳು, ಯುದ್ಧಸಾಮಗ್ರಿಗಳನ್ನು ಒಳಗೊಂಡಿದೆ. ಸ್ವಚ್ಛ ಸಿಯಾಚಿನ್ ಅಭಿಯಾನದ ಅಡಿಯಲ್ಲಿ 10,000 ಅಡಿಎತ್ತರದ ಬೇಸ್ ಕ್ಯಾಂಪ್‌ ಹಾಗೂ 21,000 ಅಡಿ ಎತ್ತರದ ಬಾನಾಪೋಸ್ಟ್‌ನಲ್ಲಿ, ಸಂಗ್ರಹವಾಗಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಗುರಿಯನ್ನು ಹೊಂದಿದೆ.


ಹಿಮನದಿಯಿಂದ ಸಂಗ್ರಹಿಸಿದ ತ್ಯಾಜ್ಯವನ್ನು ನೋಡಿಕೊಳ್ಳಲು, ಸೇನೆಯು ಇದೀಗ ಪೇಪರ್ ಬೈಲರ್ ಯಂತ್ರವನ್ನು ಹಾಕಿದೆ, ಅದು ಕಾಗದದ ಪೆಟ್ಟಿಗೆಗಳನ್ನು ಮತ್ತು ಮರುಬಳಕೆ ಮಾಡಬಹುದಾದ ಇತರ ವಸ್ತುಗಳನ್ನು ಪರಿವರ್ತಿಸುತ್ತದೆ.


ಎನ್ ಡಿ ಟಿ ವಿ ಯೊಂದಿಗೆ ತಾವು ತ್ಯಾಜ್ಯ ನಿರ್ವಹಣೆಗೆ ಕೈಗೊಂಡಿರುವ ಯೋಜನೆಗಳನ್ನು ವಿವರಿಸುತ್ತಾ, ಸೇನಾಧಿಕಾರಿಯೊಬ್ಬರು,


"ಲೋಹವಲ್ಲದ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲು ಸಿಯಾಚಿನ್ ಬೇಸ್ ಕ್ಯಾಂಪ್ ಬಳಿಯ ಪಾರ್ಟಾಪುರ ಮತ್ತು ಲೇಹ್‌ನ ಬುಕ್‌ಡಾಂಗ್‌ನಲ್ಲಿ ದಹನಕಾರಕಗಳನ್ನು ಅಳವಡಿಸಲಾಗಿದೆ" ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಸೈನ್ಯವು ಲೇಹ್‌ನಲ್ಲಿ ಕಾರ್ಡಬೋರ್ಡ್ ಮರುಬಳಕೆ ಯಂತ್ರಗಳನ್ನು ಸಹ ಸ್ಥಾಪಿಸಿದೆ.


ಸುಮಾರು ಒಂದು ವರ್ಷದಿಂದ ಕಾರ್ಯಪ್ರವೃತ್ತರಾಗಿರುವ ಭಾರತೀಯ ಸೇನೆ (ಚಿತ್ರ ಕೃಪೆ: ಎನ್ ಡಿ ಟಿವಿ)

ಸಾರ್ವಜನಿಕರ ಸಹಕಾರದ ಬಗ್ಗೆ ಇಂಡಿಯಾ ಟುಡೇ ಯೊಂದಿಗೆ ಮಾತನಾಡಿದ ಸೇನಾಧಿಕಾರಿ,


"ನಾಗರಿಕರು ಸಹ ಭಾಗವಹಿಸುತ್ತಿದ್ದಾರೆ ಮತ್ತು ತ್ಯಾಜ್ಯವನ್ನು ಪ್ರತ್ಯೇಕ ಬ್ಯಾರೆಲ್‌ಗಳಲ್ಲಿ ಹಾಕುತ್ತಿದ್ದಾರೆ. ಸೈನ್ಯದ ವಿಲೇವಾರಿ ಕಾರ್ಯವಿಧಾನವನ್ನು ನಾಗರಿಕರು ಸಹ ಬಳಸುತ್ತಿದ್ದಾರೆ "ಎಂದು ಹರ್ಷ ವ್ಯಕ್ತಪಡಿಸಿದರು.



ಎಂತಹ ಕಠಿಣ ಪರಿಸ್ಥಿಯಲ್ಲೂ ದೇಶವಾಸಿಗಳ ಜೀವರಕ್ಷಣೆಯ ಜವಾಬ್ದರಿಯನ್ನು ಹೆಗಲಿಗೇರಿಸಿಕೊಂಡ ಭಾರತೀಯ ಸೇನೆ, ಸ್ವಚ್ಛ ಭಾರತಕ್ಕೆ ಕೈಜೋಡಿಸಿ, ತಾವು ಆ ಕಾರ್ಯದಲ್ಲಿ ಭಾಗಿಯಾಗಿ ನಮಗೆಲ್ಲಾ ಮಾದರಿಯಾಗಿದ್ದಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.