''ಶಕ್ತಿ - ವುಮೆನ್ ಸ್ಟಾರ್ಟ್ಅಪ್ ಇಂಡಿಯಾ'' - ಮಹಿಳೆಯರ ಯಶಸ್ಸಿನ ಸಂಭ್ರಮಾಚರಣೆ
ಟೀಮ್ ವೈ.ಎಸ್.ಕನ್ನಡ
ಮಹಿಳೆಯರು ನಮ್ಮ ಆರ್ಥಿಕತೆಯ ಬೆನ್ನೆಲುಬು. ಭವಿಷ್ಯದಲ್ಲಿ ಭಾರತದ ಆರ್ಥಿಕತೆ ಯಾವ ರೂಪ ಪಡೆದುಕೊಳ್ಳಲಿದೆ ಎಂಬುದು ಕೂಡ ಮಹತ್ವದ ಸ್ಟೇಕ್ ಹೋಲ್ಡರ್ಗಳನ್ನೇ ಅವಲಂಬಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಮಹಿಳೆಯರು ಗುರುತಿಸಿಕೊಳ್ಳಬೇಕು ಅನ್ನೋದೇ ನಮ್ಮ ಹೆಬ್ಬಯಕೆ. ಸ್ಟಾರ್ಟ್ಅಪ್ ಮತ್ತು ಸ್ಕೇಲ್ ಅಪ್ಗಾಗಿ ಮಹಿಳೆಯರಿಗೆ ಮತ್ತಷ್ಟು ಅವಕಾಶಗಳನ್ನು ಒದಗಿಸಿಕೊಡಬಲ್ಲ ಸಾಂಪ್ರದಾಯಿಕ ಮತ್ತು ಪ್ರಬಲ ಕ್ಷೇತ್ರಗಳು ನಮ್ಮಲ್ಲಿವೆ.
ರಾಷ್ಟ್ರೀಯ ಮಹಿಳಾ ಆಯೋಗ, 'ಯುವರ್ಸ್ಟೋರಿ' ಜೊತೆಗೂಡಿ ಮಹಿಳೆಯರಲ್ಲಿರುವ ಉತ್ಸಾಹ, ಬಲ ಮತ್ತು ಅವರ ಯಶಸ್ಸಿನ ಕಹಾನಿಯನ್ನು ಪ್ರೋತ್ಸಾಹಿಸಲು ಮತ್ತು ಶ್ಲಾಘಿಸಲು ಮುಂದಾಗಿದೆ. ಮಹಿಳೆಯರ ಸಾಧನೆಗಳ ಸಂಭ್ರಮವನ್ನು ಆಚರಿಸುತ್ತಿದೆ. ಈ ಸಂತಸದಲ್ಲಿ ನೀವು ಕೂಡ ಪಾಲ್ಗೊಳ್ಳಬಹುದು.
''ಶಕ್ತಿ - ವುಮೆನ್ ಸ್ಟಾರ್ಟ್ಅಪ್ ಇಂಡಿಯಾ''
ಕೆಳಕಂಡ ಕ್ಷೇತ್ರಗಳ ನೈಪುಣ್ಯ ಅಭಿವೃದ್ಧಿ...
* ಕರಕುಶಲ ಮತ್ತು ಸಾಂಪ್ರದಾಯಿಕ ಕಲೆಗಳು
* ಕೃಷಿ ಮತ್ತು ಸಾವಯವ ಆಹಾರ
* ಉಡುಪುಗಳು, ಜವಳಿ, ಹೆಣೆದ ಉಡುಪುಗಳು
* ಪ್ರಯಾಣ ಪ್ರವಾಸೋದ್ಯಮ ಮತ್ತು ತಂತ್ರಜ್ಞಾನ
ಈ ಕಾರ್ಯಕ್ರಮದಲ್ಲಿ ಕಾರ್ಯಾಗಾರಗಳ ಮೂಲಕ ಕೌಶಲ್ಯ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತದೆ. ಕೈಗಾರಿಕಾ ತಜ್ಞರು, ಸರ್ಕಾರ/ಖಾಸಗಿ ವಲಯಗಳು/ಎನ್ಜಿಓದ ಪ್ರತಿನಿಧಿಗಳು ಹಾಗೂ ಹೂಡಿಕೆದಾರರು ಈ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾದರಿ ಎನಿಸುವಂತಹ ಪ್ರಕರಣಗಳ ಬಗ್ಗೆ ಕೂಡ ಪ್ರಸ್ತಾಪಿಸಲಾಗುತ್ತದೆ.
ಉದ್ಯಮವನ್ನು ಆರಂಭಿಸಿ ಅದನ್ನು ಮುನ್ನಡೆಸಲು ಮಹಿಳೆಯರಿಗೆ ಅಗತ್ಯವಾದ ಅಸ್ತ್ರಗಳು ಮತ್ತು ಬೆಂಬಲ ನೀಡುವ ಬಗ್ಗೆ ಸರ್ಕಾರ, ಖಾಸಗಿ ವಲಯಗಳು ಮತ್ತು ಮಹಿಳಾ ಸಂಘಟನೆಗಳು ಯಾವ ಕ್ಷೇತ್ರವನ್ನು ಗಮನದಲ್ಲಿರಿಸಿಕೊಂಡಿವೆ ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಕೂಡ ಈ ಕಾರ್ಯಕ್ರಮದಲ್ಲಿ ನಡೆಯಲಿದೆ. ಮಹಿಳೆಯರ ಯಶಸ್ಸನ್ನು ಆಚರಿಸಿದಾಗ್ಲೇ ಭಾರತ ವಿಶ್ವದಾದ್ಯಂತ ಮಿಂಚಲಿದೆ ಅನ್ನೋದು ಎಲ್ಲರ ವಿಶ್ವಾಸ. ನೀವು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು, ಇದಕ್ಕಾಗಿ ನೋಂದಣಿ ಮಾಡಿಸಬೇಕಷ್ಟೆ.
ದಿನಾಂಕ: ಮಾರ್ಚ್ 8, ಮಂಗಳವಾರ
ಸಮಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 6.30
ಸ್ಥಳ: ಸ್ಕೋಪ್ ಆಡಿಟೋರಿಯಮ್, ಸ್ಕೋಪ್ ಕಾಂಪ್ಲೆಕ್ಸ್, ಮೊದಲ ಮಹಡಿ, ಕೋರ್-87, ಲೋಧಿ ರಸ್ತೆ, ನವದೆಹಲಿ - 110003
ಅಜೆಂಡಾ: ಕಾರ್ಯಾಗಾರದ ವಿಷಯಗಳು,
ಉದ್ಯಮ ಆರಂಭಕ್ಕಾಗಿ ಕೌಶಲ್ಯ ಅಭಿವೃದ್ಧಿ
ಉದ್ಯಮಗಳು ಎದುರಿಸಿದ ಸವಾಲುಗಳು ಮತ್ತು ಅವನ್ನು ಎದುರಿಸಿದ ಬಗೆ
ಸದಾ ಉತ್ಸಾಹದಿಂದ ಕಾರ್ಯನಿರ್ವಹಣೆ
ಉದ್ಯಮ ಲೋಕದ ನಾಯಕನಂತಹ ಚಿಂತನೆ
ಪ್ಯಾನಲ್...
ನಿಮ್ಮ ಮನಸ್ಸಿನ ಮಿತಿಯನ್ನು ದಾಟುವುದು - ನಿಜವಾದ ವ್ಯಾಪಾರದ ಪರಿಕಲ್ಪನೆಯ ನಿರ್ಮಾಣ ಹೇಗೆ?
ಕಠಿಣ ಸಮಯದಲ್ಲೂ ಉದ್ಯಮವನ್ನು ಮುನ್ನಡೆಸುವುದು ಹೇಗೆ?
ಮಹಿಳಾ ಉದ್ಯಮಿಗಳಿಗಾಗಿ ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ಅಪ್ ಇಂಡಿಯಾ
ಮನೆಯಲ್ಲೇ ಬ್ಯುಸಿನೆಸ್
ನೀವು ಕೂಡ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ, ಕೂಡಲೇ ನೋಂದಣಿ ಮಾಡಿಸಿಕೊಳ್ಳಿ.
ಇದನ್ನೂ ಓದಿ...