ಆವೃತ್ತಿಗಳು
Kannada

ಸವಿ ನೆನಪುಗಳಿಗೆ ಪುಸ್ತಕ ರೂಪ ನೀಡುವ ಆನ್​ಲೈನ್​ ಸೇವೆ..!

ಟೀಮ್​ ವೈ.ಎಸ್​. ಕನ್ನಡ

YourStory Kannada
5th Jul 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಶಾಲೆ ಕಾಲೇಜಿನ ಜೀವನ ಎಲ್ಲರಿಗೂ ಅತ್ಯಂತ ಅಮೂಲ್ಯವಾದದ್ದು. ಆ ನೆನಪುಗಳನ್ನು ಸವಿಯಲು ಎಲ್ಲರೂ ಬಯಸುತ್ತಾರೆ. ಅದನ್ನು ಆದಷ್ಟು ಜೋಪಾನವಾಗಿಟ್ಟುಕೊಳ್ಳಲು ಬಯಸುತ್ತಾರೆ. ಕಾಲೇಜು ಮತ್ತು ಶಾಲೆಯ ಕೊನೆಯ ದಿನದಂದು ಆ ಶಾಲಾ ದಿನದ ಮಹತ್ವದ ಅರಿವು ನಮಗಾಗುತ್ತದೆ. ವಿದ್ಯಾರ್ಥಿ ಜೀವನದ ಕೊನೆಯ ಕ್ಷಣದಲ್ಲಿ ಎಲ್ಲಾ ಸವಿ-ಸವಿ ನೆನಪುಗಳನ್ನು ಸೆರೆಹಿಡಿಯಲು ಹಪಹಪಿಸುತ್ತಾರೆ.

ಇದನ್ನು ಓದಿ: ದುಬಾರಿ ಬಾಡಿಗೆಯ ಚಿಂತೆ ಬಿಟ್ಟುಬಿಡಿ- ವೋಲಾರ್​ ಕಾರ್​ ಬುಕ್​ ಮಾಡಿ

ಇಂದಿನ ಯುವಕರು ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚು ಬ್ಯೂಸಿಯಾಗಿರುತ್ತಾರೆ. ಹಲವು ರೀತಿ ಗ್ಯಾಜೆಟ್​ಗಳನ್ನು ಉಪಯೋಗಿಸುತ್ತಾರೆ. ಅವುಗಳನ್ನೆಲ್ಲಾ ಒಂದೆಡೆ ಜೋಪಾನವಾಗಿ ಸಂಗ್ರಹಿಸುವ ಅವಶ್ಯಕತೆಯಿತ್ತು. ಆ ಒಂದು ಅವಶ್ಯಕತೆಗೆ ಸ್ಪಂದಿಸಿದ್ದು, ಅದನ್ನು ಸಾಕಾರಗೊಳಿಸಿದ್ದು, ಐಐಟಿ ಗುವಾಹಟಿಯ ಕೆಲ ಬುದ್ಧಿವಂತ ಯುವಕರು. ವಿದ್ಯಾರ್ಥಿ ಜೀವನದ ಎಲ್ಲಾ ನೆನಪುಗಳನ್ನು ಒಂದೆಡೆ ಸಂಗ್ರಹಿಸುವಂತಹ ವೆಬ್​ಸೈಟ್​ ಇದು. ಪುಸ್ತಕದ ರೂಪದಲ್ಲಿ ನಮ್ಮ ಎಲ್ಲ ನೆನಪುಗಳನ್ನು ಜೋಪಾನವಾಗಿ ಸಂಗ್ರಹಿಸಲು ಪ್ರೇಮಿಗಳ ದಿನದಂದೆ, zaffingo.com ಹೆಸರಿನ ವೆಬ್​ಸೈಟ್ ಆರಂಭಿಸಿದ್ದರು. ಇಲ್ಲಿ ಯಾರು ಬೇಕಾದ್ರು ಹೋಗಿ ತಮ್ಮ ಕಾಲೇಜಿನ ನೆನೆಪುಗಳಿಗೆ ಪುಸ್ತಕದ ರೂಪ ನೀಡಬಹುದು.

 "ಈ ಈಯರ್​ ಬುಕ್ ಕೇವಲ ಪುಟಗಳ ಪುಸ್ತಕವಲ್ಲ. ನಮ್ಮ ನೆನಪುಗಳ ಹೂಗುಚ್ಚ, ಜೀವನದ ಕೊನೆಯ ತನಕವೂ ಅದು ಪರಿಮಳ ಬೀರುತ್ತಿರುತ್ತದೆ".
           - ಶಿಖರ್​ ಸಕ್ಸೆನಾ, ಸಿಇಓ

ಈ ವೆಬ್​ಸೈಟ್​ ಲಾಂಚ್​ ಆಗಿದ್ದೇ ತಡ ಇಡೀ ಭಾರತದಲ್ಲಿ ಇದರ ಜನಪ್ರಿಯತೆ ಹೆಚ್ಚಿದೆ. ಯುವಕರನ್ನು ಸೆಳೆಯುವಲ್ಲಿ ಇದು ಯಶಸ್ವಿಯಾಗಿದೆ. ಇಲ್ಲಿ ನೀವು ನಿಮ್ಮ ಗೆಳೆಯರನ್ನು ಆಮಂತ್ರಿಸುವಂತಹ ಅವಕಾಶವಿದೆ. ಅವರ ಬಗ್ಗೆ ಬರೆಯಬಹುದು, ನಿಮ್ಮ ಬಗ್ಗೆ ಅವರಿಗೂ ಬರೆಯುವಂತಹ ಅವಕಾಶ ಇಲ್ಲಿ ಕಲ್ಪಿಸಲಾಗಿದೆ. ಜೊತೆಗೆ ನಿಮ್ಮ ಸ್ನೇಹಿತರೊಂದಿಗೆ ಕಳೆದ ಪ್ರತಿ ಕ್ಷಣವನ್ನು ಇಲ್ಲಿ ಶೇಖರಿಸಿಡಬಹುದು. ಸುಲಭವಾಗಿ ಫೋಟೋ ಅಪ್​ಲೋಡ್ ಮಾಡಿ ಎಡಿಟ್ ಮಾಡಲು ಅವಕಾಶವಿದೆ. "ಈಯರ್​ ಬುಕ್" ತಯಾರಿಸಿ ನಿಮ್ಮ ನೆನಪುಗಳನ್ನು ಹಸಿರಾಗಿಸಿಕೊಳ್ಳುವುದು ಸುಲಭ. ಜೊತೆಗೆ ಇದು ರೋಚಕ, ಮನರಂಜನಕಾರಿಯಾಗಿದೆ.

image


zaffingo.comನ ಪರಿಕಲ್ಪನೆಗೆ ರೆಕ್ಕೆಪುಕ್ಕ ಹಚ್ಚಿದವರು, ಐಐಟಿ ಗುವಾಟಿಯ ಇಬ್ಬರು ವಿದ್ಯಾರ್ಥಿಗಳು. ತಥಾಗತ್ ಲೋಕಂಡೆ ಮತ್ತು ಶಿಖರ್ ಸಕ್ಸೇನಾ ಅವರ ಪಾತ್ರ ಪ್ರಮುಖವಾಗಿದೆ. 

"ಈ ಈಯರ್​ ಬುಕ್​ ಕೇವಲ ಒಂದು ಪುಸ್ತಕವಲ್ಲ ಸುಂದರ ನೆನಪುಗಳ ಹಾರ. ವ್ಯಾಸಾಂಗದ ವೇಳೆ ಕಳೆದಂತಹ ಸಮಯ ಮರಳಿ ಬರುವುದಿಲ್ಲ. ಆದರೆ ಇಂತಹ ನೆನಪುಗಳನ್ನು ಅಲಂಕರಿಸಿಡಲು zaffingo.com ಒಂದು ಸಶಕ್ತ ಮಾಧ್ಯಮವಾಗಿದೆ".
                     - ಶಿಖರ್​ ಸಕ್ಸೆನಾ, ಸಿಇಓ

ಭಾರತದಲ್ಲಿ ಈಯರ್​ಬುಕ್​​ನ ಪರಂಪರೆ ಇನ್ನೂ ಅಷ್ಟಾಗಿ ಬೆಳೆದಿಲ್ಲ. ಆದರೆ ಈ ವೆಬ್​ಸೈಟ್ ನೋಡಿದ ಮೇಲೆ ಹುಡುಗರ ಅಭಿರುಚಿ ಹೆಚ್ಚುತ್ತಾ ಸಾಗಿದೆ. ಮೊದಲೆಲ್ಲ ಭಾರತದಲ್ಲಿ ಈಯರ್​ಬುಕ್​ ಅಂದ್ರೆ ಒಂದು ನೋಟ್​ಬುಕ್​ನಲ್ಲಿ ಕೆಲ ಕವಿತೆ, ಕವನಗಳನ್ನು ಬರೆದು ಅಲ್ಲಿ ಫೋಟೊ ಅಂಟಿಸುವ ವಾಡಿಕೆಯಿತ್ತು. ಅದನ್ನೇ ಮತ್ತಷ್ಟೂ ಅದ್ಭತವಾಗಿ ಮಾಡಬೇಕೆಂದು ಪಣತೊಟ್ಟು ನಾವು ಈಯರ್​ಬುಕ್​ ತಯಾರಿಸಿದೆವು ಎಂದು ಶಿಖರ್ ಹೇಳುತ್ತಾರೆ. ನಮ್ಮ ತಂಡ ಇದನ್ನು ಒಂದು ದೊಡ್ಡ ಸವಾಲಾಗಿ ಸ್ವೀಕರಿಸಿತು. ಆರಂಭದಲ್ಲಿ ಡಾಟಾ ಸಂಗ್ರಹಿಸುವುದು, ಆನಂತರ ಅದಕ್ಕೆ ಈಯರ್​ಬುಕ್​ನ ಮೂರ್ತ ಸ್ವರೂಪ ನೀಡುವ ಕೆಲಸವಿತ್ತು. ಇದನ್ನು ಗಂಭೀರವಾಗಿ ಸ್ವೀಕರಿಸಿದ ನಮ್ಮ ತಂಡ ನಾವು ಅಂದುಕೊಂಡಂತೆ ಈಯರ್​ಬುಕ್​ನ್ನು ತಯಾರಿಸಿದೆ. ನೆನಪುಗಳನ್ನು ರೋಚಕ ಮತ್ತು ಮನೋರಂಜನಾತ್ಮಕವಾಗಿಸಿದೆ.

image


ಈ ವೆಬ್​ಸೈಟ್​ ನಿರ್ಮಾಣ ಮಾಡಲು ಸಂಪೂರ್ಣ ಖರ್ಚನ್ನು ತಂಡವೇ ವಹಿಸಿಕೊಂಡಿತ್ತು. ಕಾಲೇಜಿನಿಂದ ಅಥವಾ ಬೇರೆ ಯಾರಿಂದಲೂ ಆರ್ಥಿಕ ಸಹಾಯ ಪಡೆಯಲಿಲ್ಲ. ಭವಿಷ್ಯದಲ್ಲಿ ಈ ತಂಡ ವಿದ್ಯಾರ್ಥಿಗಳ ಚೌಕಟ್ಟಿನಿಂದ ಹೊರಬಂದು ದೊಡ್ಡ ಪ್ರಮಾಣದಲ್ಲಿ ಏನಾದ್ರು ಮಾಡುವ ಇರಾದೆಯಲ್ಲಿದ್ದಾರೆ. ಈಯರ್​ಬುಕ್​ ನಂತರ ಈಗ ‘ಟೀಮ್​ಬುಕ್​ ’ ಎಂಬ ಹೊಸ ಕನಸನ್ನು ನನಸಾಗಿಸಿಕೊಳ್ಳುವ ಹಂತದಲ್ಲಿದ್ದಾರೆ. ಕ್ಲಬ್​ಗಳ ಮತ್ತು ಕಂಪನಿಗಳ ಅವೀಸ್ಮರಣಿಯ ಕ್ಷಣಗಳನ್ನು ಒಂದು ಡಿಜಿಟಲ್ ಅಲ್ಬಂನಲ್ಲಿ ಸೆರೆಹಿಡಿಯುಂತಹ ಯೋಜನೆ ಇದಾಗಿದೆ. ಇದೆಲ್ಲಾ ಮನೆಯಲ್ಲೇ ಕುಳಿತು ಆನ್​ಲೈನ್​ನಲ್ಲೇ ಮಾಡಬಹುದು.

ಈಯರ್​ಬುಕ್​ನ ವಿಶೇಷತೆಯೆಂದರೆ ಇದನ್ನು ಮನೆಯಲ್ಲೇ ಕುಳಿತು ಇಂಟರ್​ನೆಟ್ ಬಳಸಿ ಬುಕ್ ತಯಾರಿಸಿಕೊಳ್ಳಬಹುದು. ಬೇಕಾದರೆ ಇದರ ಪ್ರಿಂಟ್ ಕೂಡ ನಾವು ತೆಗೆದುಕೊಳ್ಳಬಹುದು. ಇಲ್ಲವಾದಲ್ಲಿ ಮನೆಯ ಕಂಪ್ಯೂಟರ್​ನಲ್ಲೇ ಸಾಫ್ಟ್ ಕಾಪಿ ಇಟ್ಟುಕೊಳ್ಳಬಹುದಾಗಿದೆ.

ಇದನ್ನು ಓದಿ: 

1. ಶ್ರದ್ಧೆ ಇದ್ದರೆ ಯಶಸ್ಸು ಖಂಡಿತ- ಶ್ರಮವಹಿಸಿದರೆ ಲಾಭ ಖಚಿತ..!

2. ಟೆಕ್ಕಿ ಹೈನುಗಾರನಾದ ಯಶೋಗಾಥೆ..!

3. ಹಸಿವಾಗಿದ್ಯಾ, ಕ್ಲಿಕ್ ಮಾಡಿ..ಫುಡ್​ಪಂಡಾ ಹೊಟ್ಟೆ ತುಂಬಿಸುತ್ತೆ..!

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories