ಕಳೆದ ಹತ್ತು ವರ್ಷದಲ್ಲಿ 681 ವಿಕಲಾಂಗರ ಪರವಾಗಿ ಪರೀಕ್ಷೆ ಬರೆದಿದ್ದಾರೆ ಬೆಂಗಳೂರಿನ ಪುಷ್ಪ

ಪುಷ್ಪ, ಸೆರೆಬ್ರಲ್ ಪಾಲ್ಸಿ ಮತ್ತು ಡೌನ್ ಸಿಂಡ್ರೋಮ್ ನಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷೆ ಬರೆದುಕೊಟ್ಟು ಸಹಾಯ ಮಾಡುತ್ತಿದ್ದಾರೆ.

ಕಳೆದ ಹತ್ತು ವರ್ಷದಲ್ಲಿ 681 ವಿಕಲಾಂಗರ ಪರವಾಗಿ ಪರೀಕ್ಷೆ ಬರೆದಿದ್ದಾರೆ ಬೆಂಗಳೂರಿನ ಪುಷ್ಪ

Wednesday August 07, 2019,

2 min Read

ಪರೀಕ್ಷಾ ಕೊಠಡಿಗೆ ಹೋಗುವ ಗಳಿಗೆ ನೆನಪಿದೆಯ? ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟ ಅನುಭವ, ಬೆವರುವ ಅಂಗೈಗಳು, ಪ್ರಶ್ನೆಗಳು ಸುಲಭವಾಗಿರಲಿ ಎನ್ನುವಂತಹ ಪ್ರಾರ್ಥನೆಗಳು ಹಾಗೂ ಎಷ್ಟು ಚೆನ್ನಾಗಿ ಅಂಕ ಗಳಿಸಿರಬಹುದು ಎನ್ನುವ ಪರೀಕ್ಷೆಯ ನಂತರದ ಒತ್ತಡ.


ನಮ್ಮಲ್ಲಿ ಹೆಚ್ಚಿನವರು ಪರೀಕ್ಷೆಗಳನ್ನು ಬಲವಂತದಿಂದ ಬರೆಯುತ್ತೇವೆ. ಕಾರಣ, ನಮಗೆ ಬೇರೆ ಅವಕಾಶವಿಲ್ಲ. ಹ್ಞಾ, ಈಗ ಕಳೆದ ಹತ್ತು ವರ್ಷಗಳಿಂದ ಪರೀಕ್ಷಾ ಒತ್ತಡವನ್ನು ಎದುರಿಸುತ್ತಾ, ಸ್ವ ಇಚ್ಛೆಯಿಂದ 681 ಪರೀಕ್ಷೆಗಳನ್ನು ಬರೆದವರ ಬಗ್ಗೆ ಯೋಚಿಸಿನೋಡಿ! ಅವರೇ, ಈ ವರ್ಷ ನಾರಿ ಶಕ್ತಿ ಪುರಸ್ಕಾರಕ್ಕೆ ಭಾಜನರಾದ ಬೆಂಗಳೂರಿನ ಬರಹಗಾರ್ತಿ ಎನ್ ಎಮ್ ಪುಷ್ಪ ಪ್ರಿಯಾ.


ಕ

ವಿಶಿಷ್ಟ ಚೇತನ ಪರೀಕ್ಷಾ ಆಕಾಂಕ್ಷಿಯ ಜೊತೆ ಪುಷ್ಪಾ. (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)


ಭಾರತವು 40 ದಶಲಕ್ಷಕ್ಕೂ ಹೆಚ್ಚು ದೃಷ್ಟಿಹೀನರಿಗೆ ನೆಲೆಯಾಗಿದೆ. ಇವರಲ್ಲಿ ತಮ್ಮ ಆಯ್ಕೆಯ ಶಿಕ್ಷಣ ಪಡೆದುಕೊಳ್ಳುವ ಹಲವರಿಗೆ ನಾವು ಸ್ವಲ್ಪ ಮಟ್ಟಿಗಾದರೂ ಸಹಾಯ ಮಾಡಬೇಕು.


ದಿ ಲಾಜಿಕಲ್ ಇಂಡಿಯನ್ ನೊಂದಿಗೆ ಮಾತನಾಡುತ್ತಾ, ಪುಷ್ಪ,


"ನಾನು ನೋಡಬಲ್ಲೆ, ಮಾತನಾಡಬಲ್ಲೆ ಎಂದರೆ ಅದು ನನ್ನ ಭಾಗ್ಯ, ಆದರೆ ಅದು ನನ್ನನ್ನು ಇತರರಿಗಿಂತ ಉನ್ನತ ಮಟ್ಟಕ್ಕೇರಿಸುವುದಿಲ್ಲ, ಅವರು(ವಿಶಿಷ್ಟ ಚೇತನರು) ಅವರದೇ ರೀತಿಯಲ್ಲಿ ಪ್ರತಿಭಾವಂತರು. ನಾನು ಕೇವಲ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಸಹಾಯ ಮಾಡುತ್ತೇನೆ."


ಎಸ್‌ಎಸ್‌ಎಲ್‌ಸಿ, ಪಿಯುಸಿ, ಎಂಜಿನಿಯರಿಂಗ್, ಕಾನೂನು, ಯುಜಿ ಮತ್ತು ಪಿಜಿ , ಬೆಸ್ಕಾಮ್, ಅಂಚೆ ಮತ್ತು ಬ್ಯಾಂಕಿಂಗ್ ಪರೀಕ್ಷೆ ಯಾವುದೇ ಇರಲಿ, ದೃಷ್ಟಿಹೀನ ವಿದ್ಯಾರ್ಥಿಗಳ ಪರೀಕ್ಷೆ ಬರೆಯುತ್ತಾರೆ. ಹಾಗೂ ಈ ಕೆಲಸಕ್ಕೆ ಅವರು ವಿದ್ಯಾರ್ಥಿಗಳಿಂದ ಯಾವುದೇ ಹಣ ತೆಗೆದುಕೊಳ್ಳುವುದಿಲ್ಲ.


2008 ರಲ್ಲಿ ಮೊದಲ ಬಾರಿಗೆ ಅವರು 19 ವರ್ಷದ ವಿದ್ಯಾರ್ಥಿಗೆ ಪರೀಕ್ಷೆ ಬರೆದುಕೊಟ್ಟಿದ್ದರು. ತಮ್ಮ ಅನುಭವದ ಬಗ್ಗೆ ದಿ ನ್ಯೂ ಇಂಡಿಯಾ ಎಕ್ಸ್‌ಪ್ರೆಸ್‌ ಗೆ ಹೇಳುತ್ತಾ,


"ಆಕೆಯ ಹೆಸರು ಹೇಮ. ಎನ್ ಜಿ ಓ ನಡೆಸುವ ನನ್ನ ಸ್ನೇಹಿತೆ ಕೊನೆಯ ಹೊತ್ತಿಗೆ ಪರೀಕ್ಷೆ ಬರೆಯಲು ಯಾರೂ ಸಿಗದ ಕಾರಣ ಹೇಮಾಳಿಗೆ ನನ್ನ ಹೆಸರು ಸೂಚಿಸಿದ್ದರು. ಪರೀಕ್ಷೆಯಲ್ಲಿ ಅವಳು ಹೇಳುವುದು ನನಗೆ ಮೊದಲು ಅರ್ಥವೇ ಆಗಲಿಲ್ಲ. ನಂತರದಲ್ಲಿ, ನಾನು ಚಿಕ್ಕದೊಂದು ಸಂಶೋಧನೆ ನಡೆಸಿದೆ ಹಾಗೂ ಅವರು ಹೇಗೆ ಓದುತ್ತಾರೆ, ಬರೆಯುತ್ತಾರೆ ಮತ್ತು ಸಂವಹನ ನಡೆಸುತ್ತಾರೆ ಎಂಬುದನ್ನು ಅರಿತುಕೊಂಡೆ."


ಕ

ಇಬ್ಬರು ವಿಶಿಷ್ಟ ಚೇತನರೊಂದಿಗೆ ಪುಷ್ಪಾ (ಚಿತ್ರ: ದಿ ಲಾಜಿಕಲ್ ಇಂಡಿಯನ್)


ಅಲ್ಲಿಂದ ಈ ಪಯಣ ಶುರುವಾಯಿತು. ಕೆಲ ವಿದ್ಯಾರ್ಥಿಗಳನ್ನು ಭೇಟಿಯಾದ ಪುಷ್ಪ, ಅವರ ಪುಸ್ತಕಗಳನ್ನು ಕೊಂಡು, ಓದಿ ಅರ್ಥ ಮಾಡಿಕೊಂಡರು ಹಾಗೂ ಕೆಲ ಟಿಪ್ಪಣಿಗಳನ್ನು ದಾಖಲಿಸಿದರು. ಇಲ್ಲಿಯವರೆಗೆ ಅವರು ಪರೀಕ್ಷೆ ಬರೆದಿರುವರಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಒಳ್ಳೆಯ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ಇನ್ನೂ ಕೆಲವರು ಈಗ ಉದ್ಯೋಗವನ್ನು ಸಹ ಪಡೆದಿದ್ದಾರೆ.


ತಮ್ಮ ದುರ್ಬಲ ಆರ್ಥಿಕ ಪರಿಸ್ಥಿತಿಯಿಂದಾಗಿ ಪುಷ್ಪ ಅವರ ತಂದೆ ಏಳನೇ ತರಗತಿಯ ಶುಲ್ಕ ಪಾವತಿಮಾಡದ ಕಾರಣ ಪರೀಕ್ಷೆ ಬರೆಯಲಾಗಲಿಲ್ಲ, ಆದ್ದರಿಂದ ತಮಗೆ ಶಿಕ್ಷಣದ ಮೌಲ್ಯ ಅರ್ಥವಾಗುತ್ತದೆ ಎಂದು ಪುಷ್ಪಾ ಹೇಳಿದರು.


"ನಾವು ಆರ್ಥಿಕವಾಗಿ ತುಂಬಾ ದುರ್ಬಲರಾಗಿದ್ದೆವು. ನಮ್ಮ ತಂದೆ ಹಾಸಿಗೆ ಹಿಡಿದಿದ್ದರು, ತಾಯಿ‌ ತಿಂಗಳಿಗೆ ಕೇವಲ 500 ರೂಪಾಯಿ ದುಡಿಯುತ್ತಿದ್ದರು. ನಮ್ಮ ಕುಟುಂಬಕ್ಕೆ ಆಹಾರ ಮತ್ತು ಔಷಧಿ ಒದಗಿಸುವುದೇ ಆಕೆಗೆ ಕಷ್ಟವಾಗುತ್ತಿತ್ತು. ಆಗ ನನ್ನ ಅಣ್ಣ ಹಾಗೂ ನಾನು ಒಂದು ವರ್ಷ ಶಾಲೆಯಿಂದ ಹೊರಗುಳಿಯಬೇಕಾಯಿತು. ನಂತರದಲ್ಲಿ ನಮಗೆ ಪರಿಚಯವಿದ್ದ ಒಬ್ಬ ಪೋಲಿಯೋ ರೋಗಿ ನಮಗೆ ಸಹಾಯ ಮಾಡಿದರು. ಈಗ ಬೇರೆಯವರಿಗೆ ಸಹಾಯ ಮಾಡಿ ಅವರ ಋಣ ತೀರಿಸುತ್ತಿದ್ದೇನೆ,” ವರದಿ ಲಾಜಿಕಲ್ ಇಂಡಿಯನ್.


ವ

ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಪುಷ್ಪಾ.( ಚಿತ್ರ : ದಿ ಲಾಜಿಕಲ್ ಇಂಡಿಯನ್)


ಪುಷ್ಪಾ ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ ಹಾಗೂ ಅವರು ಮತ್ತು ಅವರ ಅಣ್ಣ ಇಬ್ಬರೂ ಆರ್ಥಿಕವಾಗಿ ಸಶಕ್ತರಾಗಿದ್ದಾರೆ‌. ಕೆಲ ಸಮಯಗಳಲ್ಲಿ ವಾರದ ದಿನವೂ ಪರೀಕ್ಷೆ ಬರೆಯಬೇಕಾಗಿರುತ್ತದೆ. ಆಗ ಅವರು ತಮ್ಮ ಕಛೇರಿಗೆ ತಡವಾಗಿ ಬರಲು ಅನುಮತಿ ಕೋರುತ್ತಾರೆ. ಆದರೆ ಆಕೆ ಬಾಕಿ ಉಳಿದ ಕೆಲಸವನ್ನು ಹೆಚ್ಚು ಸಮಯ ಕೆಲಸ ಮಾಡಿ ಪೂರ್ತಿಗೊಳಿಸುತ್ತಾರೆ.


6 ವರ್ಷದವರಿಂದ – 60 ವರ್ಷದವರೆಗಿನ ಎಲ್ಲ ಪರೀಕ್ಷಾರ್ಥಿಗಳಿಗೂ ಹಾಗೂ ಸೆರೆಬ್ರಲ್ ಪಾಲ್ಸಿ ಮತ್ತು ಡೌನ್ ಸಿಂಡ್ರೋಮ್ ನಿಂದ ಬಳಲುತ್ತಿರುವ ರೋಗಿಗಳಿಗು ಸಹ ಪರೀಕ್ಷೆ ಬರೆದುಕೊಟ್ಟಿದ್ದಾರೆ