ಬೆಂಗಳೂರಿಗರು ಪ್ರತಿವರ್ಷ 243 ಗಂಟೆಗಳನ್ನು ಟ್ರಾಫಿಕ್‌ ನಲ್ಲಿ ಸಿಲುಕಿ ಕಳೆಯುತ್ತಾರೆ

ವಿಶ್ವದ ಅತ್ಯಂತ ಹೆಚ್ಚು ಟ್ರಾಫಿಕ್‌ ಇರುವ ನಗರಗಳಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ ಲಭಿಸಿದೆ. ಪಟ್ಟಿಯಲ್ಲಿ ಭಾರತದ ಇತರ 4 ನಗರಗಳು ಸೇರಿವೆ.

ಬೆಂಗಳೂರಿಗರು ಪ್ರತಿವರ್ಷ 243 ಗಂಟೆಗಳನ್ನು ಟ್ರಾಫಿಕ್‌ ನಲ್ಲಿ ಸಿಲುಕಿ ಕಳೆಯುತ್ತಾರೆ

Thursday January 30, 2020,

2 min Read

57 ದೇಶದ 416 ಮಹಾನಗರಗಳ ಟ್ರಾಫಿಕ್‌ ಅನ್ನು ಆಧರಿಸಿದ ಟೊಮ್‌ಟೊಮ್‌ ಟ್ರಾಫಿಕ್‌ ಸೂಚ್ಯಂಕದ ವರದಿಯ ಪ್ರಕಾರ, ಬೆಂಗಳೂರು ವಿಶ್ವದಲ್ಲೆ ಅತೀ ಹೆಚ್ಚು ಟ್ರಾಫಿಕ್‌ ಏರ್ಪಡುತ್ತಿರುವ ನಗರವಾಗಿ ಹೊರಹೊಮ್ಮಿದೆ. ಇಲ್ಲಿನ ಚಾಲಕರು ತಮ್ಮ ಚಾಲನಾ ಸಮಯದ ಶೇಕಡಾ ೭೧ ರಷ್ಟು ಅಧಿಕ ಸಮಯವನ್ನು ಟ್ರಾಫಿಕ್‌ ನಲ್ಲಿ ಸಿಲುಕಿ ಕಳೆಯುತ್ತಿದ್ದಾರೆ ಎಂದು ವರದಿ ಊಹಿಸಿದೆ.


ಚಿತ್ರಕೃಪೆ: ಸೆಂತಿಲ್‌ ಕುಮಾರ್

ಜನದಟ್ಟಣೆ ಅಧಿಕವಾಗಿರುವ ಸಮಯದಲ್ಲಿ ಬೆಂಗಳೂರಿಗರು 243 ಗಂಟೆಗಳನ್ನು ಅಂದರೆ 10 ದಿನ, 3 ಗಂಟೆಗಳ ಅಧಿಕ ಸಮಯವನ್ನು ಟ್ರಾಫಿಕ್‌ ನಲ್ಲಿ ಪ್ರತಿ ವರ್ಷ ಕಳೆಯುತ್ತಿದ್ದಾರೆಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಬೆಂಗಳೂರನ್ನು ಹೊರತು ಪಡಿಸಿ ಜಾಗತಿಕ ಪಟ್ಟಿಯ ಅತೀ ಟ್ರಾಫಿಕ್‌ ಏರ್ಪಡುವ ನಗರಗಳ ಮೊದಲ ಹತ್ತು ಸ್ಥಾನಗಳಲ್ಲಿ ಮುಂಬೈ 65 % ದಟ್ಟಣೆಯಿಂದ ೪ ನೇ ಸ್ಥಾನದಲ್ಲಿದೆ (2018 ರಲ್ಲು ಇದೇ ಮಟ್ಟದ ದಟ್ಟಣೆಯಿತ್ತು). ಅದರ ನಂತರದ ಸ್ಥಾನದಲ್ಲಿ ಪುಣೆ ನಗರ 59 % ದಟ್ಟಣೆಯಿಂದ ೫ನೇ ಸ್ಥಾನದಲ್ಲಿದೆ ಮತ್ತು ನವ ದೆಹಲಿ 56% ದಟ್ಟಣೆಯಿಂದ 8ನೇ ಸ್ಥಾನ ಪಡೆದಿದೆ.


ಪಟ್ಟಿಯ ಮೊದಲ ಹತ್ತು ಸ್ಥಾನದಲ್ಲಿರುವ ಇತರ ಜಾಗತಿಕ ನಗರಗಳೆಂದರೆ ಫಿಲಿಫೈನ್ಸ್‌ನ ಮನಿಲಾ, ಕೊಲಂಬಿಯಾದ ಬೊಗೊಟಾ, ರಷ್ಯಾದ ಮೋಸ್ಕೋವ್‌, ಪೇರುನ ಲಿಮಾ, ಟರ್ಕಿಯ ಇಸ್ತಾಂಬುಲ್‌ ಮತ್ತು ಇಂಡೋನೇಷಿಯಾದ ಜಕಾರ್ತಾ.


ಜನದಟ್ಟಣೆ ಹೆಚ್ಚಿರುವ ಸಮಯದಲ್ಲಿ ವಾಹನ ಚಲಾಯಿಸುತ್ತಿರುವ ಮುಂಬೈಯಿಗರು ಅವರ 209 ತಾಸುಗಳನ್ನು ಅಂದರೆ 8 ದಿನ 17 ಗಂಟೆಗಳ ಅಧಿಕ ಸಮಯವನ್ನು ಪ್ರತಿ ವರ್ಷ ಟ್ರಾಫಿಕ್‌ ನಲ್ಲಿ ಕಳೆಯುತ್ತಾರೆ.


ಜನದಟ್ಟಣೆ ಅಧಿಕವಿರುವ ಸಮಯದಲ್ಲಿ ವಾಹನ ಚಲಾಯಿಸುತ್ತಿರುವ ಪುಣೆ ನಿವಾಸಿಗಳು ಅವರ 193 ತಾಸುಗಳನ್ನು ಅಂದರೆ 8 ದಿನ 1 ಗಂಟೆಗಳ ಅಧಿಕ ಸಮಯವನ್ನು ಪ್ರತಿ ವರ್ಷ ಟ್ರಾಫಿಕ್‌ನಲ್ಲಿ ಕಳೆಯುತ್ತಾರೆ. ಇದೇ ಮೊದಲ ಬಾರಿಗೆ ಪುಣೆ ನಗರ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.


ಜನದಟ್ಟಣೆ ಹೆಚ್ಚಿರುವ ಸಮಯದಲ್ಲಿ ವಾಹನ ಚಲಾಯಿಸುತ್ತಿರುವ ದೆಹಲಿಗರು 190 ತಾಸುಗಳನ್ನು ಅಂದರೆ 7 ದಿನ 22 ಗಂಟೆಗಳ ಅಧಿಕ ಸಮಯವನ್ನು ಪ್ರತಿ ವರ್ಷ ಟ್ರಾಫಿಕ್‌ ನಲ್ಲಿ ಕಳೆಯುತ್ತಾರೆ.


ಕಳೆದ ದಶಕದಲ್ಲಿ ಜಾಗತಿಕವಾಗಿ ಟ್ರಾಫಿಕ್‌ ಹೆಚ್ಚುತ್ತಲಿದ್ದು, ಕಂಪನಿ 239 ಹೊಸ ನಗರಗಳನ್ನು(ಪಟ್ಟಿಯ 57%) ಹೊಸ ಟ್ರಾಫಿಕ್‌ ಸೂಚ್ಯಂಕದಲ್ಲಿ 2018 ಮತ್ತು 2019 ರ ನಡುವೆ ಸೇರಿಸಿದೆ ಮತ್ತು ಇವುಗಳ ಸೇರ್ಪಡೆಯು ದಟ್ಟಣೆಯನ್ನು ಅಧಿಕಗೊಳಿಸಿದೆ. ಪಟ್ಟಿಯಲ್ಲಿರುವ ಕೇವಲ ೬೩ ನಗರಗಳು ದಟ್ಟಣೆಯಲ್ಲಿ ಗಮನಿಸಬಹುದಾದ ಪ್ರಮಾಣದಲ್ಲಿ ಇಳಿಮುಖ ತೊರಿಸಿವೆ.


ಜಾಗತಿಕವಾಗಿ ಹೆಚ್ಚುತ್ತಿರುವ ಈ ದಟ್ಟಣೆ ದೃಢವಾದ ಆರ್ಥಿಕತೆಯ ಸೂಚನೆಯಾಗಿದ್ದರು ಅರ್ಥವ್ಯವಸ್ಥೆಗೆ ಬಿಲಿಯನ್‌ಗಳಷ್ಟು ವೆಚ್ಚಭರಿಸುವಂತಾಗಿದೆ.


ಟೊಮ್‌ಟೊಮ್‌ ಇಂಡಿಯಾದ ಜನರಲ್‌ ಮ್ಯಾನೆಜರ್‌ ವೆರ್ನರ್‌ ವ್ಯಾನ್‌ ಹುಯಸ್ಟೀನ್‌ ಜಾಗತಿಕ ದಟ್ಟಣೆಯನ್ನು ಹತೋಟಿಗೆ ತರುವುದಕ್ಕೆ ಇನ್ನು ತುಂಬಾ ಸಮಯ ಬೇಕಾಗುತ್ತದೆ ಎಂದಿದ್ದಾರೆ.


ಈ ಪರಿಸ್ಥಿತಿಯಲ್ಲಿ ಕಾರ್‌-ಶೇರಿಂಗ್‌ ಸೇವೆಗಳು ದಟ್ಟಣೆಯನ್ನು ಕಡಿಮೆಗೊಳಿಸಲು ಸಹಕಾರಿಯಾಗಬಲ್ಲವು. ಆದರೆ ಯೋಜಕರು ಮತ್ತು ನೀತಿ ನಿರೂಪಕರು ತಮ್ಮ ಬಳಿಯಿರುವ ಸುಧಾರಿತ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಿ ಟ್ರಾಫಿಕ್‌ ಮಟ್ಟವನ್ನು ಮತ್ತು ಅದರ ಪರಿಣಾಮವನ್ನು ವಿಶ್ಲೇಷಿಸಿ ಮೂಲಭೂತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೇರವಾಗಬೇಕಿದೆ.