ಮೊದಲ ಮಹಿಳಾ ಮೋಟಾರ್‌ಸೈಕಲ್ ಸವಾರಿ ಬ್ರಿಗೇಡ್ ಪ್ರಾರಂಭಿಸಿದ ಬೆಂಗಳೂರು ನಗರ ಪೊಲೀಸರು

ಮೋಟಾರ್ ಸೈಕಲ್‌ಗಳನ್ನು ಸವಾರಿ ಮಾಡುವ ಮಹಿಳೆಯರ ಬಗ್ಗೆ ಇರುವ ತಾರತಮ್ಯದ ಧೋರಣೆಯನ್ನು ಕೊನೆಗೊಳಿಸುವ ಸಲುವಾಗಿ ಬೆಂಗಳೂರು ನಗರ ಪೊಲೀಸರು, ರಾಯಲ್ ಎನ್‌ಫೀಲ್ಡ್ ಸಹಭಾಗಿತ್ವದಲ್ಲಿ, ಮಹಿಳಾ ಮೋಟಾರ್‌ಸೈಕಲ್ ಸವಾರಿ ಬ್ರಿಗೇಡ್ ಅನ್ನು ಪ್ರಾರಂಭಿಸಿದ್ದಾರೆ.

ಮೊದಲ ಮಹಿಳಾ ಮೋಟಾರ್‌ಸೈಕಲ್ ಸವಾರಿ ಬ್ರಿಗೇಡ್ ಪ್ರಾರಂಭಿಸಿದ ಬೆಂಗಳೂರು ನಗರ ಪೊಲೀಸರು

Monday January 20, 2020,

2 min Read

‘ವಿ ಫಾರ್ ವುಮೆನ್', ಎಂಬ ತಂಡವು ಬೆಂಗಳೂರನ್ನು ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತ ನಗರವನ್ನಾಗಿ ಮಾಡುವ ಧ್ಯೇಯವನ್ನು ಹೊಂದಿದೆ.


ಮೋಟಾರ್ ಸೈಕಲ್ ಸವಾರಿ ಮಾಡುವ ಉತ್ಸಾಹ ಹೊಂದಿರುವ ಹದಿನೈದು ಪೋಲಿಸ್ ಸಬ್ ಇನ್ಸ್‌ಪೆಕ್ಟರ್‌ಗಳಿಗೆ ತಮ್ಮ ಸವಾರಿ ಕೌಶಲ್ಯವನ್ನು ಹೆಚ್ಚಿಸಲು, ವಿವಿಧ ಪರಿಸ್ಥಿತಿಗಳಲ್ಲಿ, ಕರ್ತವ್ಯದಲ್ಲಿದ್ದಾಗ ಅವರು ಎದುರಿಸಬಹುದಾದ ಯಾವುದೇ ಸವಾಲನ್ನು ಎದುರಿಸಲು ಅಗತ್ಯವಾದ ತರಬೇತಿಯನ್ನು ನೀಡಲಾಯಿತು.


ಮಹಿಳೆಯರಿಗೆ ಬೆಂಗಳೂರು ಸುರಕ್ಷಿತವಾಗಲು ಬ್ರಿಗೇಡ್ ಸವಾರಿ ಮಾಡುವ ಮಹಿಳೆಯರು ಗಸ್ತು ತಿರುಗುವ ಕರ್ತವ್ಯವನ್ನು ವಹಿಸಿಕೊಳ್ಳುತ್ತಿದ್ದಾರೆ.


ಪತ್ರಿಕಾ ಪ್ರಕಟಣೆ ಹೇಳಿಕೆಯಂತೆ, ಈ ತಂಡದ ರಚನೆಯು ಬೆಂಗಳೂರನ್ನು ಸುರಕ್ಷಿತವಾಗಿಸಲು ಮೀಸಲಾಗಿರುವ ಸ್ಮಾರ್ಟ್ ಲೇಡಿ ಅಧಿಕಾರಿಗಳನ್ನು ಹೊರತರುವಲ್ಲಿ ಸಹಾಯ ಮಾಡಿದರೆ, ಬೆಂಗಳೂರು ಸಿಟಿ ಪೋಲಿಸ್ ಮತ್ತು ಟೀಮ್ ರಾಯಲ್ ಎನ್‌ಫೀಲ್ಡ್ ಸಹ ಪುರುಷ ಪ್ರಾಬಲ್ಯವೆಂದು ಪರಿಗಣಿಸಲ್ಪಟ್ಟ ಸುತ್ತಲಿನ ಸಮಾಜದಲ್ಲಿನ ತಾರತಮ್ಯದ ಧೋರಣೆಯನ್ನು ಮುರಿಯಲು ಪ್ರಯತ್ನಿಸುತ್ತದೆ.


ಈ ವಿಶೇಷ ಯೋಜನೆಯ ನೇತೃತ್ವದಲ್ಲಿ, ಬೆಂಗಳೂರಿನ ಸಿಟಿ ಸಶಸ್ತ್ರ ಮೀಸಲು ಕೇಂದ್ರ ಕಚೇರಿಯ ಡಿಸಿಪಿ ಐಪಿಎಸ್ ದಿವ್ಯಾ ಸಾರಾ ಥಾಮಸ್ ಮಾತನಾಡುತ್ತಾ,


ಹೆಚ್ಚಿನ ಮಹಿಳೆಯರನ್ನು ಈ ಕೆಲಸಕ್ಕೆ ತೆಗೆದುಕೊಂಡು, ಅವರನ್ನು ಮತ್ತಷ್ಟು ಸಬಲೀಕರಣಗೊಳಿಸುವ ಅವಶ್ಯಕತೆಯಿದೆ. ‘ವಿ ಫಾರ್ ವುಮೆನ್’ ಅಡಿಯಲ್ಲಿ, ನಾವು ಈಗ 15 ಮಹಿಳಾ ಸಬ್ ಇನ್ಸ್‌ಪೆಕ್ಟರ್‌ಗಳಿಗೆ ತರಬೇತಿ ನೀಡಿದ್ದೇವೆ ಮತ್ತು ಈ ಮೋಟರ್ಸೈಕ್ಲಿಸ್ಟ್‌ಗಳ ತಂಡವನ್ನು ಮುಂದುವರಿಸುತ್ತೇವೆ. ನಗರವನ್ನು ಸುರಕ್ಷಿತವಾಗಿರಿಸಿಕೊಳ್ಳುವಾಗ ಈ ಮಹಿಳೆಯರು ಉದಾಹರಣೆಯಾಗಿ ಮುನ್ನಡೆಯಬೇಕು ಮತ್ತು ಇತರ ಮಹಿಳೆಯರಿಗೆ ಸ್ಫೂರ್ತಿ ನೀಡಬೇಕೆಂದು ನಾವು ಬಯಸುತ್ತೇವೆ,” ಎಂದರು.


ಈ 15 ಮಹಿಳಾ ಅಧಿಕಾರಿಗಳಿಗೆ ಎರಡು ಹಂತಗಳಲ್ಲಿ ತರಬೇತಿ ನೀಡಲಾಯಿತು. ಅಕ್ಟೋಬರ್‌ನಲ್ಲಿ ನಡೆದ ಮೊದಲ ಹಂತದ ಸಮಯದಲ್ಲಿ, ಅವರನ್ನು ರಾಯಲ್ ಎನ್‌ಫೀಲ್ಡ್ ಮೋಟರ್‌ಸೈಕಲ್‌ಗಳಾದ ಹಿಮಾಲಯನ್, ಇಂಟರ್‌ಸೆಪ್ಟರ್ 650, ಮತ್ತು ಕ್ಲಾಸಿಕ್ ಸಿಗ್ನಲ್ಸ್ 350 ಗೆ ಪರಿಚಯಿಸಲಾಯಿತು ಮತ್ತು ಡಿಸೆಂಬರ್ ಮತ್ತು ಜನವರಿಯಲ್ಲಿ ನಡೆದ ಎರಡನೇ ಹಂತದಲ್ಲಿ, ಬೆಂಗಳೂರು ನಗರದಲ್ಲಿ ಸಂಚಾರ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ಮೋಟರ್ ಸೈಕಲ್‌ಗಳನ್ನು ಓಡಿಸಲು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ಟೀಮ್ ರಾಯಲ್ ಎನ್‌ಫೀಲ್ಡ್ ಸಹಯೋಗದೊಂದಿಗೆ ಈ ತರಬೇತಿಯನ್ನು ನಡೆಸಲಾಯಿತು, ಅವರು ಮಹಿಳಾ ಅಧಿಕಾರಿಗಳನ್ನು ವೃತ್ತಿಪರ ಸವಾರಿ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದ್ದಾರೆ. ಇದು ಬೆಂಗಳೂರಿನ ಬೀದಿಗಳಲ್ಲಿ ಹೆಮ್ಮೆಯಿಂದ ಮತ್ತು ಧೈರ್ಯದಿಂದ ಗಸ್ತು ತಿರುಗಲು ಸಹಾಯ ಮಾಡುತ್ತದೆ.


ಹೊಸದಾಗಿ ರೂಪುಗೊಂಡ ಬ್ರಿಗೇಡ್‌ನ ನೆನಪಿಗಾಗಿ ನಂದಿ ಬೆಟ್ಟಕ್ಕೆ ಸವಾರಿ ನಡೆಸಲಾಯಿತು. ಬೆಂಗಳೂರಿನ ಸಿಟಿ ಸಶಸ್ತ್ರ ಮೀಸಲು ಪ್ರಧಾನ ಕಚೇರಿಯ ಕಚೇರಿಯಲ್ಲಿ ಬೆಂಗಳೂರು ನಗರದ ಪೋಲಿಸ್ ಆಯುಕ್ತ ಭಾಸ್ಕರ್ ರಾವ್ ಅವರು ಈ ಸವಾರಿಯನ್ನು ಉದ್ಘಾಟಿಸಿದ್ದಾರೆ ಮಾಡಿದ್ದಾರೆ.


ಇತರ ಜಂಟಿ ಆಯುಕ್ತರಾದ ಸಂದೀಪ್ ಪಾಟೀಲ್ (ಅಪರಾಧ ಶಾಖೆ) ಮತ್ತು ಡಾ. ಬಿ.ಆರ್. ರವಿಕಾಂತ ಗೌಡ (ಸಂಚಾರ) ಜೊತೆಗೆ ಡಾ. ಶರಣಪ್ಪ ಎಸ್‌ಡಿ, ಐಪಿಎಸ್, ಡಿಸಿಪಿ ಪೂರ್ವ ವಿಭಾಗ, ಡಾ. ಪಶ್ಚಿಮ ಮತ್ತು ಎಂ ಅಬ್ರಹಾಂ ಜಾರ್ಜ್, ಕೆಎಸ್ಪಿಎಸ್ ಮತ್ತು ಡಿಸಿಪಿ ಸಿಟಿ ಆರ್ಮ್ಡ್ ರಿಸರ್ವ್, ಉತ್ತರ, ಈ ಯೋಜನೆಯ ಬಗ್ಗೆ ತಮ್ಮ ಬೆಂಬಲವನ್ನು ಸೂಚಿಸಲು ಆಗಮಿಸಿದ್ದರು.


ಮೋಟಾರ್ ಸೈಕಲ್ ಉತ್ಪಾದಿಸುವ ಕಂಪನಿಗಳಲ್ಲಿ ರಾಯಲ್ ಎನ್‌ಫೀಲ್ಡ್ ಅತ್ಯಂತ ಹಳೆಯ ಮೋಟಾರ್‌ಸೈಕಲ್ ಬ್ರಾಂಡ್‌ಗಳಲ್ಲಿ ಒಂದಾಗಿದೆ ಮತ್ತು ಈ ತರಬೇತಿಯನ್ನು ನಡೆಸುವ ಮೂಲಕ ಅವರು ಬೆಂಗಳೂರು ಪೋಲಿಸರ ಮಹಿಳಾ ಅಧಿಕಾರಿಗಳಿಗೆ ಹೆಮ್ಮೆಯಿಂದ ಸವಾರಿ ಮಾಡುವ ವಿಶ್ವಾಸವನ್ನು ನೀಡಿದ್ದಾರೆ.


ರಾಯಲ್ ಎನ್‌ಫೀಲ್ಡ್ ಜಾಗತಿಕವಾಗಿ ಅನೇಕ ಮೋಟರ್ ಸೈಕ್ಲಿಂಗ್ ಈವೆಂಟ್‌ಗಳನ್ನು ಮತ್ತು ಸವಾರಿಗಳನ್ನು ಆಯೋಜಿಸುತ್ತದೆ ಮತ್ತು ಬೆಂಬಲಿಸುತ್ತದೆ, ಹೆಚ್ಚು ಮುಖ್ಯವಾಗಿ ರೈಡರ್ ಮೇನಿಯಾ - ವಿಶ್ವದಾದ್ಯಂತದ ರಾಯಲ್ ಎನ್‌ಫೀಲ್ಡ್ ಸವಾರರ ವಾರ್ಷಿಕ ಕೂಟವು ಗೋವಾದ ಸುಂದರ ಕಡಲತೀರಗಳು ಮತ್ತು ಹಿಮಾಲಯನ್ ಒಡಿಸ್ಸಿ, ಕೆಲವು ಕಠಿಣ ಮೋಟರ್ ಸೈಕಲ್ ಸವಾರಿ ಹಿಮಾಲಯದ ಕಠಿಣ ರಸ್ತೆಗಳು ಮತ್ತು ಅತಿ ಎತ್ತರದ ಪರ್ವತ ಮಾರ್ಗಗಳಲ್ಲಿ ಸವಾರಿ ಏರ್ಪಡಿಸುತ್ತದೆ. ರಾಯಲ್ ಎನ್‌ಫೀಲ್ಡ್ ಜನಪ್ರಿಯ ‘ಒನ್ ರೈಡ್’ ಅನ್ನು ಸಹ ನಡೆಸುತ್ತದೆ, ಅಲ್ಲಿ ಏಪ್ರಿಲ್ ಮೊದಲ ಭಾನುವಾರದಂದು ವಿಶ್ವದಾದ್ಯಂತ ಜನರು ತಮ್ಮ ಮೋಟರ್ ಸೈಕಲ್‌ಗಳಲ್ಲಿ ಸವಾರಿ ಮಾಡುತ್ತಾರೆ.