ಬಸ್ಸಿನೊಳಗೊಂದು ಚಿಕ್ಕಉದ್ಯಾನವನವನ್ನು ಬೆಳೆಸುತ್ತಿರುವ 59 ವರ್ಷದ ಈ ಬಸ್ ಚಾಲಕ
ಬಿ.ಎಂ.ಟಿ.ಸಿ ಬಸ್ ಚಾಲಕರಾದಂತಹ ನಾರಾಯಣಪ್ಪರು ಹದಿನಾಲ್ಕು ಸಸ್ಯಗಳನ್ನು ತಮ್ಮ ಬಸ್ಸಿನಲ್ಲಿ ಬೆಳೆಸುವುದರ ಮೂಲಕ ಹಸಿರು ಜಾಗೃತಿಗೆ ಮುಂದಾಗಿದ್ದಾರೆ. ಪ್ರಯಾಣಿಕರು ಬಯಸಿ ಇವುಗಳಿಗೆ ನೀರುಣಿಸುವುದು ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಯಾವುದಕ್ಕೆ ಪ್ರಸಿದ್ಧಿ? ಹಿಂದೆ, ಎಲ್ಲೆಲ್ಲೂ ಹಚ್ಚ ಹಸಿರು ಮತ್ತು ಸ್ವಚ್ಛ ಕೆರೆಗಳಿಂದ ಕಂಗೊಳಿಸುತ್ತಿದ್ದ ಕಾರಣಕ್ಕೆ ಇದನ್ನು ಗಾರ್ಡನ್ ಸಿಟಿ ಆಫ್ ಇಂಡಿಯಾ ಎಂದು ಕರೆಯಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಉಂಟಾಗುತ್ತಿರುವ ತ್ವರಿತ ನಗರೀಕರಣದಿಂದಾಗಿ, ಜನಸಂಖ್ಯೆಯ ಅಗತ್ಯತೆಗಳು ಹೆಚ್ಚಾಗಿ, ನಗರದ ಹಸಿರು ಹೊದಿಕೆಗಳು ಕ್ರಮೇಣ ನಾಶಗೊಳ್ಳುತ್ತಿವೆ.
ನಗರದ ಈ ಗತವೈಭವವನ್ನು ಮರುಕಳಿಸಲು, ಕೆಲವು ನಾಗರಿಕರು ಮತ್ತು ಸಾಮಾಜ ಕಲ್ಯಾಣದ ಗುಂಪುಗಳು ಸಸ್ಯಗಳನ್ನು ನೆಡುವಲ್ಲಿ ಮುಂದಾಗಿದ್ದಾರೆ. ಮತ್ತು ಕೆರೆಗಳನ್ನು ಪುನರುಜ್ಜೀವನಗೊಳಿಸಲು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಐವತ್ತೊಂಬತ್ತು ವರ್ಷದ ನಾರಾಯಣಪ್ಪ ಕೆ, ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಚಾಲಕ.
ಕಳೆದ 27 ವರ್ಷಗಳಿಂದ ಬಸ್ ಚಾಲಕರಾಗಿ ಕೆಲಸ ಮಾಡುತ್ತಿರುವ ನಾರಾಯಣಪ್ಪ, ಹಸಿರು ಮಾರ್ಗದಲ್ಲಿ ಎಲ್ಲರನ್ನೂ ಕೊಂಡೊಯ್ಯುತ್ತಾ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.
ತಮ್ಮ ಬಿಎಂಟಿಸಿ ಬಸ್ (ಕೆಎ07-ಎಫ್-838) ನಲ್ಲಿ ಚಿಕ್ಕಉದ್ಯಾನವನವನ್ನು ಬೆಳೆಸಿದ್ದಾರೆ. ಈ ಬಸ್ಸು ನಗರದ ಬೈಲಸಂದ್ರ ಮತ್ತು ಯಶವಂತಪುರ ಗಳ ನಡುವೆ ಸಂಚರಿಸುತ್ತದೆ.
ಇದೆಲ್ಲಾ ಆರಂಭವಾದದ್ದು ಎರಡು ವರ್ಷಗಳ ಹಿಂದೆ. 2017 ರಲ್ಲಿ, ನಾರಾಯಣಪ್ಪ ಈ ಗ್ರೀನ್ ಡ್ರೈವನ್ನು ಆರಂಭಿಸಲು ತಮ್ಮ ಸಂಬಳದಿಂದ ಕೆಲವು ಸಸ್ಯಗಳನ್ನು ಖರೀದಿಸಿ ಬಸ್ಸಿನೊಳಗೆ ಇರಿಸಿದರು. ಇಂದಿಗೆ ಬಸ್ಸಿನ ಮುಂಭಾಗ ಮತ್ತು ಹಿಂಭಾಗ ಸೇರಿ ಅಲ್ಲಿದ್ದ ಸುಮಾರು 14 ಸಸ್ಯಗಳಿಗೆ ಪ್ರಯಾಣಿರು ಸಾಕ್ಷಿಯಾಗಬಹುದು. ಇವುಗಳಲ್ಲಿ ಹೂವ್ವಿನ ಮತ್ತು ಬಳ್ಳಿಯ ನಾಲ್ಕು ಮಡಕೆಗಳಿವೆ. ಪ್ರಯಾಣಿಕರು ಯಥೇಚ್ಛವಾಗಿ, ತಮ್ಮ ನೀರಿನ ಬಾಟಲಿಗಳಿಂದ ಸಸ್ಯಗಳಿಗೆ ನೀರುಣಿಸಬಹುದು ಎಂದು ಮೆಟ್ರೋ ಸಾಗಾ ವರದಿ ಮಾಡಿದೆ.
ಕೆ.ಆರ್.ಪುರಂನ ನಿವಾಸಿಗಳಾಂತಹ, ನಾರಾಯಣಪ್ಪರು ತಮ್ಮ ಸಸ್ಯಗಳಿಗೆ ದಿನಕ್ಕೆ ಎರಡು ಬಾರಿ ನೀರುಣಿಸುತ್ತಾರೆ - ಬೆಳಿಗ್ಗೆ 6: 30 ಸುಮಾರಿಗೆ ಒಮ್ಮೆ, ರಾತ್ರಿಗೆ ಅವರ ಪಾಳೆ ಮುಗಿದ ಮೇಲೆ ಮತ್ತೊಮ್ಮೆ.
ಈ ವರ್ಷ ನಿವೃತ್ತರಾಗಲಿರುವ ನಾರಾಯಣಪ್ಪ, ಎನ್ಡಿಟಿವಿ ಯೊಂದಿಗೆ ಮಾತನಾಡುತ್ತಾ ಹೀಗೆ ಹೇಳಿದರು
ಮನೆಯಲ್ಲಿ, ನನ್ನ ಹೆಂಡತಿ ಮತ್ತು ಮಕ್ಕಳು ಈ ಚಿಕ್ಕ ಉದ್ಯಾನವನಕ್ಕೆ ಸದಾ ಹೊಸ ಹೊಸ ಸಸ್ಯಗಳನ್ನು ಸೇರ್ಪಡೆ ಮಾಡುತ್ತಲೇ ಇರುತ್ತಾರೆ. ಬಸ್ ಒಳಗೆ ಈ ಚಿಕ್ಕಉದ್ಯಾನ ನಿರ್ಮಿಸಲು ಅವರೇ ನನಗೆ ಸ್ಫೂರ್ತಿ. ಈ ನಡೆಯಿಂದಾಗಿ, ಪರಿಸರವನ್ನು ಸದಾ ಹಚ್ಚ ಹಸಿರಾಗಿ, ಸ್ವಚ್ಛವಾಗಿ ಕಾಪಾಡಬೇಕಾದ ನಾಗರಿಕರ ಹೊಣೆಯ ಬಗ್ಗೆ ಜಾಗೃತಿ ಮೂಡಿಸುವುದೇ ನನ್ನ ಉದ್ದೇಶ. ಈ ನನ್ನ ಸಣ್ಣ ಪ್ರಯತ್ನವು ನನ್ನ ಪ್ರಯಾಣಿಕರಿಗೆ ಸ್ಫೂರ್ತಿ ನೀಡುವಂತಾದಲ್ಲಿ, ಅದಕ್ಕಿಂತ ಹಚ್ಚಿನದೇನಿದೆ.
ನಾರಾಯಣಪ್ಪನವರ ನಡೆಯು, ಪ್ರಯಾಣಿಕರ ಮೆಚ್ಚುಗೆಗೂ ಪಾತ್ರವಾಗಿ, ಅವರು ಸದಾ ಈ ಚಿಕ್ಕಉದ್ಯಾನವನ್ನವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿಯುತ್ತಾರೆ.
ಪ್ರಯಾಣಕಿ ಪುಷ್ಪಾ ಪ್ರೇಯಾ, ಬಸ್ಸಿನೊಳಗಿನ ಈ ಚಿಕ್ಕಉದ್ಯಾನದ ಬಗ್ಗೆ ಹೀಗೆ ಹೇಳಿದ್ದಾರೆ,
ನಾನು ಬಸ್ಸಿನೊಳಗೆ ಒಂದು ಉದ್ಯಾನವನ್ನು ಹಿಂದೆಂದೂ ಊಹಿಸಿರಲಿಲ್ಲ. ಗ್ರೀನ್ ಡ್ರೈವ್ ನ ಬಗ್ಗೆ ಜಾಗೃತಿ ಮೂಡಿಸಲು ಇದೊಂದು ಸುಲಭ ವಿಧಾನವಾಗಿದೆ. ನಾರಯಣಪ್ಪನಂತವರು ಇನ್ನೂ ಈ ಜಗದಲ್ಲಿ ಅನೇಕರು ಇರಬಹುದು ಎಂದು ಎನ್.ಡಿ.ಟಿ.ವಿ ವರದಿ ಮಾಡಿದೆ.
ತಾವು ನಿವೃತ್ತಿಯಾದಮೇಲೆ ಮುಂಬರುವ ಬಸ್ ಚಾಲಕನೂ ಸಹ ಈ ಗ್ರೀನ್ ಡ್ರೈವನ್ನು ಮುಂದುವರೆಸಿ ಮತ್ತಷ್ಟು ಜನಕ್ಕೆ ಸ್ಪೂರ್ತಿಯಾಗಬಹುದು ಎಂದು ನಾರಾಯಣಪ್ಪ ಆಶಿಸಿದ್ದಾರೆ.